• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಪರಪ್ಪನ ಅಗ್ರಹಾರ ಜೈಲಿನ ಮೇಲೆ 150 ಕ್ಕೂ ಹೆಚ್ಚು ಪೊಲೀಸರಿಂದ ದಿಢೀರ್ ದಾಳಿ..!

ಪರಪ್ಪನ ಅಗ್ರಹಾರ ಜೈಲಿನ ಮೇಲೆ 150 ಕ್ಕೂ ಹೆಚ್ಚು ಪೊಲೀಸರಿಂದ ದಿಢೀರ್ ದಾಳಿ..!

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಬೆಳ್ಳಂಬೆಳಗ್ಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಖೈದಿಗಳು ಇನ್ನೂ ನಿದ್ರೆಯಲ್ಲಿದ್ದ ವೇಳೆಯೇ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ತಂಡ ಜೈಲಿನೊಳಗೆ ಎಂಟ್ರಿ ಕೊಟ್ಟು ಇಂಚಿಂಚೂ ಪರಿಶೀಲನೆ ನಡೆಸಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Oct 30, 2026, 06:42 PM IST|Updated: Oct 30, 2026, 06:43 PM IST
joinshare
ಪರಪ್ಪನ ಅಗ್ರಹಾರ ಜೈಲಿನ ಮೇಲೆ 150 ಕ್ಕೂ ಹೆಚ್ಚು ಪೊಲೀಸರಿಂದ ದಿಢೀರ್ ದಾಳಿ..!
Image Credit: parappana agrahara jail

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ವಿವಾಹಿತ ಧರ್ಮಗುರುವಿನ ಜೊತೆ 22 ವರ್ಷದ ಯುವತಿ ಲವ್‌! ಪೋಷಕರ ಕಣ್ಣೀರಿಗೂ ಕರಗಲಿಲ್ಲ ಮನಸು

ವಿವಾಹಿತ ಧರ್ಮಗುರುವಿನ ಜೊತೆ 22 ವರ್ಷದ ಯುವತಿ ಲವ್‌! ಪೋಷಕರ ಕಣ್ಣೀರಿಗೂ ಕರಗಲಿಲ್ಲ ಮನಸು

2

ಪರಪ್ಪನ ಅಗ್ರಹಾರ ಜೈಲಿನ ಮೇಲೆ 150 ಕ್ಕೂ ಹೆಚ್ಚು ಪೊಲೀಸರಿಂದ ದಿಢೀರ್ ದಾಳಿ..!

3

Karnataka Rajyotsava Award 2026 : ವಿವಿಧ ಕ್ಷೇತ್ರದ 71 ಸಾಧಕರಿಗೆ ಗೌರವ, ಸಂಪೂರ್ಣ ಪಟ್ಟಿ ಇಲ್ಲಿದೆ

4

ದರ್ಶನ್‌ಗೆ ಡಬಲ್‌ ಜಯ..! ಧನ್ವೀರ್ ಗೌಡ - ಪ್ರದೋಷ್ ಪ್ರತ್ಯೇಕ ಪ್ರಕರಣದಲ್ಲಿ ಕೋರ್ಟ್‌ ಮಹತ್ವದ ಆದೇಶ

5

ದೀಪಾವಳಿ ಹೊತ್ತಲ್ಲಿ ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್: ಸುಮಾರು ₹5,000 ಕುಸಿದ ಬೆಳ್ಳಿ, ಚಿನ್ನದ ಬೆಲೆಯಲ್ಲೂ ಇಳಿಕೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಪದೇ ಪದೇ ಸುದ್ದಿಯಾಗುತ್ತಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಹಾವಳಿ ತಡೆಗಟ್ಟಲು ಪೊಲೀಸರು ಬೆಳ್ಳಂಬೆಳಗ್ಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಖೈದಿಗಳು ಇನ್ನೂ ನಿದ್ರೆಯಲ್ಲಿದ್ದ ಸಮಯದಲ್ಲೇ ಜೈಲಿನ ಒಳಗೆ ಎಂಟ್ರಿ ಕೊಟ್ಟ 150ಕ್ಕೂ ಹೆಚ್ಚು ಪೊಲೀಸರ ತಂಡ ಬ್ಯಾರಕ್‌ಗಳಿಂದ ಹಿಡಿದು ಖೈದಿಗಳ ಸೆಲ್‌ಗಳವರೆಗೆ ಇಂಚಿಂಚೂ ಜಾಲಾಡಿದೆ. ನಟೋರಿಯಸ್ ರೌಡಿಗಳ ಸೆಲ್‌ಗಳೂ ಸೇರಿದಂತೆ ನಟ ದರ್ಶನ್ ಇರುವ ಬ್ಯಾರಕ್‌ನಲ್ಲೂ ತಪಾಸಣೆ ನಡೆಸಲಾಗಿದೆ. ಆದರೆ ಈ ಕಾರ್ಯಾಚರಣೆಯಲ್ಲಿ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ ಎಂದು ಕಾರಾಗೃಹಗಳ ಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೂ ಬೆಳ್ಳಂಬೆಳಗ್ಗೆ ನಡೆದ ಈ ಮೆಗಾ ಸರ್ಚ್ ಆಪರೇಷನ್ ಹೇಗಿತ್ತು, ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಹೌದು... ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅಂದರೆ ಆಗಾಗ್ಗೆ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುವ ಜೈಲು. ಜೈಲಿನೊಳಗೆ ಮೊಬೈಲ್ ಫೋನ್, ಸಿಗರೇಟ್, ತಂಬಾಕು ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾಗುತ್ತಿರುವ ಆರೋಪಗಳು ಮತ್ತು ಘಟನೆಗಳು ಕಾರಾಗೃಹ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಜೈಲಿನೊಳಗೆ ಇಂತಹ ವಸ್ತುಗಳು ಹೇಗೆ ಪ್ರವೇಶಿಸುತ್ತವೆ ಎಂಬ ಪ್ರಶ್ನೆಯೂ ಪದೇ ಪದೇ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪೊಲೀಸರು ಇಂದು ಮುಂಜಾನೆಯೇ ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

ಬೆಳಗ್ಗೆ ಸುಮಾರು 7 ಗಂಟೆಯ ಸಮಯ, ಬಹುತೇಕ ಖೈದಿಗಳು ಇನ್ನೂ ನಿದ್ರೆಯಲ್ಲಿದ್ದಾಗಲೇ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ನೇತೃತ್ವದ ಬೃಹತ್ ಪೊಲೀಸ್ ತಂಡ ಪರಪ್ಪನ ಅಗ್ರಹಾರ ಜೈಲಿನೊಳಗೆ ಪ್ರವೇಶಿಸಿದೆ. ಒಬ್ಬ ಎಸಿಪಿ, ಐವರು ಇನ್ಸ್‌ಪೆಕ್ಟರ್‌ಗಳು, 20 ಮಂದಿ ಸಬ್ ಇನ್ಸ್‌ಪೆಕ್ಟರ್‌ಗಳು, 30 ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 150ಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಜೈಲಿನೊಳಗೆ ಕಾಲಿಡುತ್ತಿದ್ದಂತೆ ಪೊಲೀಸರು ನೇರವಾಗಿ ಖೈದಿಗಳ ಬ್ಯಾರಕ್‌ಗಳು, ವಿಚಾರಣಾಧೀನ ಖೈದಿಗಳು ಹಾಗೂ ಶಿಕ್ಷೆಗೊಳಗಾದ ಬಂಧಿಗಳನ್ನು ಇರಿಸಿರುವ ಸೆಲ್‌ಗಳನ್ನು ಒಂದೊಂದಾಗಿ ಪರಿಶೀಲಿಸಿದ್ದಾರೆ. ಪ್ರತಿಯೊಂದು ಬ್ಯಾರಕ್‌ನಲ್ಲೂ ಕೂಲಂಕಷ ತಪಾಸಣೆ ನಡೆಸಿದ್ದು, ಖೈದಿಗಳ ವಸ್ತುಗಳು ಹಾಗೂ ಸೆಲ್‌ಗಳ ಮೂಲೆ ಮೂಲೆಗಳನ್ನೂ ಜಾಲಾಡಿದ್ದಾರೆ.

ಇನ್ನು ನಟ ದರ್ಶನ್ ಇರುವ ಬ್ಯಾರಕ್‌ನಲ್ಲೂ ಪೊಲೀಸರ ತಪಾಸಣೆ ನಡೆದಿದೆ. ಅಷ್ಟೇ ಅಲ್ಲ, ನಟೋರಿಯಸ್ ರೌಡಿ ಶೀಟರ್‌ಗಳು ಹಾಗೂ ಕುಖ್ಯಾತ ಆರೋಪಿಗಳನ್ನು ಇರಿಸಿರುವ ಸೆಲ್‌ಗಳ ಮೇಲೂ ವಿಶೇಷ ನಿಗಾ ವಹಿಸಿ ಪರಿಶೀಲನೆ ನಡೆಸಲಾಗಿದೆ. ಮಹಿಳಾ ಖೈದಿಗಳ ಬ್ಯಾರಕ್‌ಗಳಲ್ಲಿಯೂ ಮಹಿಳಾ ಪೊಲೀಸ್ ಸಿಬ್ಬಂದಿ ಪ್ರತ್ಯೇಕವಾಗಿ ಶೋಧ ಕಾರ್ಯ ನಡೆಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಜೈಲಿನ ಪ್ರತಿಯೊಂದು ವಿಭಾಗವನ್ನೂ ಪರಿಶೀಲಿಸಲಾಗಿದೆ. ನಿಷೇಧಿತ ವಸ್ತುಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ ಈ ದಾಳಿಯಲ್ಲಿ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ ಎಂದು ಕಾರಾಗೃಹಗಳ ಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಪರಪ್ಪನ ಅಗ್ರಹಾರ ಕಾರಾಗೃಹವನ್ನು ಸಂಪೂರ್ಣವಾಗಿ ನಿಷೇಧಿತ ವಸ್ತುಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಜೈಲಿನೊಳಗೆ ಹೊರಗಿನಿಂದಲೇ ನಿಷೇಧಿತ ವಸ್ತುಗಳನ್ನು ಎಸೆದು ಕಳುಹಿಸುವುದು ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ವಸ್ತುಗಳನ್ನು ಒಳಸಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಕಾರಾಗೃಹ ಇಲಾಖೆಗೆ ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ. ಜೈಲಿನ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವುದು ಹಾಗೂ ನಿಷೇಧಿತ ವಸ್ತುಗಳ ಒಳಸಾಗಣೆಯನ್ನು ಸಂಪೂರ್ಣವಾಗಿ ತಡೆಯುವುದು ಇಲಾಖೆಯ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಇಂತಹ ದಿಢೀರ್ ತಪಾಸಣೆ ಮತ್ತು ಶೋಧ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂಬ ಸಂದೇಶವನ್ನೂ ನೀಡಿದ್ದಾರೆ.

ಒಟ್ಟಿನಲ್ಲಿ ಪದೇ ಪದೇ ನಿಷೇಧಿತ ವಸ್ತುಗಳ ವಿಚಾರವಾಗಿ ಸುದ್ದಿಯಾಗುತ್ತಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಂದು ನಡೆದ ಈ ಬೃಹತ್ ಪೊಲೀಸ್ ಕಾರ್ಯಾಚರಣೆ ಖೈದಿಗಳಿಗೆ ಬೆಳ್ಳಂಬೆಳಗ್ಗೆಯೇ ಶಾಕ್ ನೀಡಿದೆ. ಯಾವುದೇ ವಸ್ತುಗಳು ಸಿಗದಿದ್ದರೂ, ಜೈಲಿನೊಳಗೆ ನಿಷೇಧಿತ ವಸ್ತುಗಳು ಪ್ರವೇಶಿಸದಂತೆ ತಡೆಯುವುದು ಮಾತ್ರ ಈಗಲೂ ಅಧಿಕಾರಿಗಳ ಮುಂದಿರುವ ಬಹುದೊಡ್ಡ ಸವಾಲಾಗಿದೆ.

Add Zee News as a Preferred Source
TAGS:
Kannada News