ಇನ್ಮುಂದೆ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕತ್ತರಿ : ಕ್ಯಾನ್ಸರ್ ಔಷಧಿ ಬೆಲೆ ಇಳಿಕೆಗೆ NPPA ಗ್ರೀನ್ ಸಿಗ್ನಲ್
ಕ್ಯಾನ್ಸರ್ ಔಷಧಿ ದರ ವಿಚಾರವಾಗಿ ಮಹತ್ವದ ಸೂಚನೆಯನ್ನ NPPA ನೀಡಿದ್ದು, ದರ ನಿಗದಿ ವಿಚಾರವಾಗಿ ಹೋರಾಟ ಮಾಡುತ್ತಿದ್ದ ರಾಜ್ಯ ಆರೋಗ್ಯ ಇಲಾಖೆಗೆ ಮಹತ್ವದ ಜಯ ಸಿಕ್ಕಿದೆ. ಸದ್ಯ ಕ್ಯಾನ್ಸರ್ ಔಷಧಿ ದರ ನಿಗದಿ ಕುರಿತು ಇಲಾಖೆಯ ಮುಂದಿನ ನಿಲುವೇನು ಅನ್ನೋದರ ವರದಿ ಇಲ್ಲಿದೆ ನೋಡಿ..
ಬೆಂಗಳೂರು : ಮಹಾಮಾರಿ ಕ್ಯಾನ್ಸರ್ ಹೆಸರು ಕೇಳಿದ್ರೆ ಎಷ್ಟು ಭಯ ಆಗುತ್ತೋ ಅದಕ್ಕಿಂತ ಹೆಚ್ಚಿನ ಭಯ ಆಗೋದು ಕ್ಯಾನ್ಸರ್‌ಗೆ ಚಿಕಿತ್ಸೆ ಕೊಡಿಸುವಾಗ ಕ್ಯಾನ್ಸರ್ ಚಿಕಿತ್ಸೆಯನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ಆಸ್ಪತ್ರೆ ಹಾಗೂ ಔಷಧ ಕಂಪನಿಗಳು 500-700% ಅಧಿಕ ಹಣಕ್ಕೆ ಮಾರಾಟ ಮಾಡ್ತಾ ಇದ್ವು.. ಸದ್ಯ ಈ ದರ ಏರಿಕೆಗೆ ಕಡಿವಾಣ ಹಾಕುವಂತೆ ಆರೋಗ್ಯ ಇಲಾಖೆ ಕೇಂದ್ರದ NPPAಗೆ ಪತ್ರ ಬರೆದಿತ್ತು. ದರ ಏರಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ಇದಾದ ಬೆನ್ನಲ್ಲೇ NPPA ಸಭೆ ನಡೆಸಿ ಕ್ಯಾನ್ಸರ್‌ನ ಔಷಧಿ ಮೇಲೆ ಕೇವಲ 30%ನಷ್ಟು ಎಂಆರ್‌ಪಿ ದರದ ಮೇಲೆ ಮಾರ್ಜಿನ್ ಇಟ್ಟು ಮಾರಾಟ ಮಾಡಲು ಮಾತ್ರ ಅವಕಾಶ ಎಂದು ತಿಳಿಸಿದೆ. ಇನ್ನೂ ಈ ವಿಚಾರವಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು.
ಔಷಧಿ ದರ ನಿಗದಿ ವಿಚಾರವಾಗಿ ಧ್ವನಿಯೆತ್ತಿದ ಮೊದಲ ರಾಜ್ಯವಾಗಿ ನಿಲ್ಲೋದು ಕರ್ನಾಟಕ ರಾಜ್ಯವಾಗಿದ್ದು, ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಸಚಿವ ಯು.ಟಿ.ಖಾದರ್ ಕರ್ನಾಟಕಕ್ಕೆ ರಾಜ್ಯಕ್ಕೆ ಹಾಗೂ ಆರೋಗ್ಯ ಇಲಾಖೆಗೆ ಐತಿಹಾಸಿಕ ದಿನವೆಂದು ಸಂತಸ ಪಟ್ರು. ಯಾಕಂದ್ರೆ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ರೋಗಿ ಹಾಗೂ ಕುಟುಂಬಸ್ಥರು ಔಷಧಿ ಖರೀದಿ ಮಾಡಲು ಬಹಳಷ್ಟು ಸಮಸ್ಯೆ ಅನುಭವಿಸುತ್ತಿದ್ರು.. ಇದನ್ನ ಮನಗಂಡ ಆರೋಗ್ಯ ಇಲಾಖೆ ಹಾಗೂ FDA ಅಧಿಕಾರಿಗಳು ಹಲವು ತಿಂಗಳ ಹಿಂದೆಯೇ ಕೇಂದ್ರ ಸರ್ಕಾರಕ್ಜೆ ಪತ್ರ ಬರೆದ್ರು ಏನೂ ಪ್ರಯೋಜವಾಗಿರಲಿಲ್ಲ.. ಆದ್ರೆ ಛಲ ಬಿಡದ ಆರೋಗ್ಯ ಇಲಾಖೆ 253 ಔಷಧಿಗಳ ಲ್ಯಾಂಡಿಂಗ್ ದರ ಹಾಗೂ ಮಾರಾಟ ದರದ ಕುರಿತಾಗಿ ಪಟ್ಟಿ ಸಿದ್ದಪಡಿಸಿ. NPPAಯ ಗಮನಕ್ಕೆ ತಂದಿತ್ತು.. ಇದಾದ ಬಳಿಕ ಸಭೆ ನಡೆಸಿದ NPPA ಇದೀಗಾ ಔಷಧಿ ದರ ನಿಯಂತ್ರಣಕ್ಕೆ ಮುಂದಾಗಿದೆ.. NPPA ಕೇಂದ್ರ ಆರೋಗ್ಯ ಇಲಾಖೆಗೆ ಅಕ್ಟೋಬರ್ 16ರೊಳಗೆ ಕ್ಯಾನ್ಸರ್ ಔಷಧ ದರದ ವಿಚಾರವಾಗಿ ಪಟ್ಟಿ ಸಿದ್ದಪಡಿಸಿ ನೀಡುವಂತೆ ಸೂಚಿಸಿದೆ..
ಇನ್ನೂ ಇಷ್ಟು ದಿನ ಬೇಕಾಬಿಟ್ಟಿ ದರ ನಿಗದಿ ಮಾಡಿ ಮಾರಾಟ ಮಾಡುತ್ತಿದ್ದ ಔಷಧಿ ಕಂಪನಿಗಳು ಹಾಗೂ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ.. ಇನ್ಮುಂದೆ ತಯಾರಾಗುವ ಎಲ್ಲಾ ಔಷಧಗಳ ಮೇಲೆ ಲ್ಯಾಂಡಿಂಗ್ ಕಾಸ್ಟ್ ಹಾಗೂ ವ್ಯಾಪಾರದ ದರ ಎಲ್ಲವನ್ನ ಔಷಧಿಯ ಪ್ಯಾಕೇಟ್ ಮೇಲೆ ನಮೂದಿಸಬೇಕು.. ಈ ಸೆಲ್ಲಿಂಗ್ ಪ್ರೈಸ್ ಕೇವಲ 30%ನಷ್ಟು ಮಾತ್ರ ಹೆಚ್ಚಿರಬೇಕು.. ಇದಕ್ಕಿಂತ ಹೆಚ್ಚಿದ್ರೆ ಅಂತಹ ಕಂಪನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಔಷಧ ಕಂಪನಿಗಳಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ನವೆಂಬರ್ 1ರಿಂದ ಎಲ್ಲಾ ಆಸ್ಪತ್ರೆಗಳಲ್ಲೂ ಔಷಧಿಯ ದರದ ಪಟ್ಟಿಯನ್ನ ಅಳವಡಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.. ಒಟ್ನಲ್ಲಿ.. ಔಷಧಿ ದರ ವಿಚಾರವಾಗಿ NPPA ಮಹತ್ವದ ನಿರ್ಧಾರ ತಿಳಿಸಿದೆ.. ಮತ್ತೊಂದು ಕಡೆ ಔಷಧಿ ಖರೀದಿಯ ದರದ ಬಗ್ಗೆ ಪಟ್ಟಿಯನ್ನು ರಿಲೀಸ್ ಮಾಡುವಂತೆ ಆರೋಗ್ಯ ಇಲಾಖೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.. ಒಟ್ಟಾರೆಯಾಗಿ ಹೇಳಿದಂತೆ ನ.1ರ ನಂತರ ಅದೇಷ್ಟು ಆಸ್ಪತ್ರೆಗಳು ಪಟ್ಟಿ ಬಿಡುಗಡೆ ಮಾಡುತ್ತವೆ ಅಂತ ಕಾಯ್ದು ನೋಡಬೇಕಿದೆ..