• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಇನ್ಮುಂದೆ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕತ್ತರಿ : ಕ್ಯಾನ್ಸರ್ ಔಷಧಿ ಬೆಲೆ ಇಳಿಕೆಗೆ NPPA ಗ್ರೀನ್ ಸಿಗ್ನಲ್

ಇನ್ಮುಂದೆ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕತ್ತರಿ : ಕ್ಯಾನ್ಸರ್ ಔಷಧಿ ಬೆಲೆ ಇಳಿಕೆಗೆ NPPA ಗ್ರೀನ್ ಸಿಗ್ನಲ್

ಕ್ಯಾನ್ಸರ್ ಔಷಧಿ ದರ ವಿಚಾರವಾಗಿ ಮಹತ್ವದ ಸೂಚನೆಯನ್ನ NPPA ನೀಡಿದ್ದು, ದರ ನಿಗದಿ ವಿಚಾರವಾಗಿ ಹೋರಾಟ ಮಾಡುತ್ತಿದ್ದ ರಾಜ್ಯ ಆರೋಗ್ಯ ಇಲಾಖೆಗೆ ಮಹತ್ವದ ಜಯ ಸಿಕ್ಕಿದೆ. ಸದ್ಯ ಕ್ಯಾನ್ಸರ್ ಔಷಧಿ ದರ ನಿಗದಿ ಕುರಿತು ಇಲಾಖೆಯ ಮುಂದಿನ ನಿಲುವೇನು ಅನ್ನೋದರ ವರದಿ ಇಲ್ಲಿದೆ ನೋಡಿ..

Written ByKrishna NK
Published: Oct 10, 2026, 10:14 PM IST|Updated: Oct 10, 2026, 10:15 PM IST
joinshare
ಇನ್ಮುಂದೆ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕತ್ತರಿ : ಕ್ಯಾನ್ಸರ್ ಔಷಧಿ ಬೆಲೆ ಇಳಿಕೆಗೆ NPPA ಗ್ರೀನ್ ಸಿಗ್ನಲ್
Image Credit: UT Khader news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ನಾನಾ ಪಾಟೇಕರ್ ಸಾವಿಗೆ ಇದೇ ಅಸಲಿ ಕಾರಣ! ಮರಣೋತ್ತರ ಪರೀಕ್ಷಾ ವರದಿಯಲ್ಲಿದೆ ಬಿಗ್‌ ಸೀಕ್ರೇಟ್‌ ರಿವೀಲ್‌

ನಾನಾ ಪಾಟೇಕರ್ ಸಾವಿಗೆ ಇದೇ ಅಸಲಿ ಕಾರಣ! ಮರಣೋತ್ತರ ಪರೀಕ್ಷಾ ವರದಿಯಲ್ಲಿದೆ ಬಿಗ್‌ ಸೀಕ್ರೇಟ್‌ ರಿವೀಲ್‌

2

ಇನ್ಮುಂದೆ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕತ್ತರಿ : ಕ್ಯಾನ್ಸರ್ ಔಷಧಿ ಬೆಲೆ ಇಳಿಕೆಗೆ NPPA ಗ್ರೀನ್ ಸಿಗ್ನಲ್

3

ಪಡಿತರದಾರರಿಗೆ ಗುಡ್‌ ನ್ಯೂಸ್‌.. ಹುಟ್ಟಿದ ಊರು ಬಿಟ್ಟು ಹೋದ್ರೂ ಸಿಗುತ್ತೆ "ರೇಷನ್‌"..! ಹೇಗೆ ಗೊತ್ತೆ?

4

ಬೇಲಿಯೇ ಎದ್ದು ಹೊಲ ಮೇಯ್ದ ಕಥೆ : KPSC ಹಗರಣದ ಜಾಡು ಹಿಡಿದು ಹೊರಟ ಇಡಿ ಸಿಕ್ತು ರಹಸ್ಯ ಚಾಟ್‌

5

ಗುಟ್ಟಾಗಿ ಮದುವೆಯಾದ್ರಾ ನಟಿ ತ್ರಿಷಾ.. ಕೊರಳಲ್ಲಿದ್ದ ಸರದ ಸಂಗತಿ ಕೆದಕಿದ ನೆಟ್ಟಿಗರು..!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಮಹಾಮಾರಿ ಕ್ಯಾನ್ಸರ್ ಹೆಸರು ಕೇಳಿದ್ರೆ ಎಷ್ಟು ಭಯ ಆಗುತ್ತೋ ಅದಕ್ಕಿಂತ ಹೆಚ್ಚಿನ ಭಯ ಆಗೋದು ಕ್ಯಾನ್ಸರ್‌ಗೆ ಚಿಕಿತ್ಸೆ ಕೊಡಿಸುವಾಗ ಕ್ಯಾನ್ಸರ್ ಚಿಕಿತ್ಸೆಯನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ಆಸ್ಪತ್ರೆ ಹಾಗೂ ಔಷಧ ಕಂಪನಿಗಳು 500-700% ಅಧಿಕ ಹಣಕ್ಕೆ ಮಾರಾಟ ಮಾಡ್ತಾ ಇದ್ವು.. ‌ಸದ್ಯ ಈ ದರ ಏರಿಕೆಗೆ ಕಡಿವಾಣ ಹಾಕುವಂತೆ ಆರೋಗ್ಯ ಇಲಾಖೆ ಕೇಂದ್ರದ NPPAಗೆ ಪತ್ರ ಬರೆದಿತ್ತು. ದರ ಏರಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ಇದಾದ ಬೆನ್ನಲ್ಲೇ NPPA ಸಭೆ ನಡೆಸಿ ಕ್ಯಾನ್ಸರ್‌‌ನ ಔಷಧಿ ಮೇಲೆ ಕೇವಲ 30%ನಷ್ಟು ಎಂಆರ್‌ಪಿ ದರದ ಮೇಲೆ ಮಾರ್ಜಿನ್ ಇಟ್ಟು ಮಾರಾಟ ಮಾಡಲು ಮಾತ್ರ ಅವಕಾಶ ಎಂದು ತಿಳಿಸಿದೆ. ಇನ್ನೂ ಈ ವಿಚಾರವಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು.

ಔಷಧಿ ದರ ನಿಗದಿ ವಿಚಾರವಾಗಿ ಧ್ವನಿಯೆತ್ತಿದ ಮೊದಲ ರಾಜ್ಯವಾಗಿ ನಿಲ್ಲೋದು ಕರ್ನಾಟಕ ರಾಜ್ಯವಾಗಿದ್ದು, ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಸಚಿವ ಯು.ಟಿ.ಖಾದರ್ ಕರ್ನಾಟಕಕ್ಕೆ ರಾಜ್ಯಕ್ಕೆ ಹಾಗೂ ಆರೋಗ್ಯ ಇಲಾಖೆಗೆ ಐತಿಹಾಸಿಕ ದಿನವೆಂದು ಸಂತಸ ಪಟ್ರು. ಯಾಕಂದ್ರೆ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ರೋಗಿ ಹಾಗೂ ಕುಟುಂಬಸ್ಥರು ಔಷಧಿ ಖರೀದಿ ಮಾಡಲು ಬಹಳಷ್ಟು ಸಮಸ್ಯೆ ಅನುಭವಿಸುತ್ತಿದ್ರು‌‌.. ಇದನ್ನ ಮನಗಂಡ ಆರೋಗ್ಯ ಇಲಾಖೆ ಹಾಗೂ FDA ಅಧಿಕಾರಿಗಳು ಹಲವು ತಿಂಗಳ ಹಿಂದೆಯೇ ಕೇಂದ್ರ ಸರ್ಕಾರಕ್ಜೆ ಪತ್ರ ಬರೆದ್ರು ಏನೂ ಪ್ರಯೋಜವಾಗಿರಲಿಲ್ಲ.. ಆದ್ರೆ ಛಲ ಬಿಡದ ಆರೋಗ್ಯ ಇಲಾಖೆ 253 ಔಷಧಿಗಳ ಲ್ಯಾಂಡಿಂಗ್ ದರ ಹಾಗೂ ಮಾರಾಟ ದರದ ಕುರಿತಾಗಿ ಪಟ್ಟಿ ಸಿದ್ದಪಡಿಸಿ. NPPAಯ ಗಮನಕ್ಕೆ ತಂದಿತ್ತು.. ಇದಾದ ಬಳಿಕ ಸಭೆ ನಡೆಸಿದ NPPA ಇದೀಗಾ ಔಷಧಿ ದರ ನಿಯಂತ್ರಣಕ್ಕೆ ಮುಂದಾಗಿದೆ.. NPPA ಕೇಂದ್ರ ಆರೋಗ್ಯ ಇಲಾಖೆಗೆ ಅಕ್ಟೋಬರ್ 16ರೊಳಗೆ ಕ್ಯಾನ್ಸರ್ ಔಷಧ ದರದ ವಿಚಾರವಾಗಿ ಪಟ್ಟಿ ಸಿದ್ದಪಡಿಸಿ ನೀಡುವಂತೆ ಸೂಚಿಸಿದೆ..

ಇನ್ನೂ ಇಷ್ಟು ದಿನ ಬೇಕಾಬಿಟ್ಟಿ ದರ ನಿಗದಿ ಮಾಡಿ ಮಾರಾಟ ಮಾಡುತ್ತಿದ್ದ ಔಷಧಿ ಕಂಪನಿಗಳು ಹಾಗೂ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ.. ಇನ್ಮುಂದೆ ತಯಾರಾಗುವ ಎಲ್ಲಾ ಔಷಧಗಳ ಮೇಲೆ ಲ್ಯಾಂಡಿಂಗ್ ಕಾಸ್ಟ್ ಹಾಗೂ ವ್ಯಾಪಾರದ ದರ ಎಲ್ಲವನ್ನ ಔಷಧಿಯ ಪ್ಯಾಕೇಟ್ ಮೇಲೆ ನಮೂದಿಸಬೇಕು.. ಈ ಸೆಲ್ಲಿಂಗ್ ಪ್ರೈಸ್ ಕೇವಲ 30%ನಷ್ಟು ಮಾತ್ರ ಹೆಚ್ಚಿರಬೇಕು.. ಇದಕ್ಕಿಂತ ಹೆಚ್ಚಿದ್ರೆ ಅಂತಹ ಕಂಪನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಔಷಧ ಕಂಪನಿಗಳಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ನವೆಂಬರ್ 1ರಿಂದ ಎಲ್ಲಾ  ಆಸ್ಪತ್ರೆಗಳಲ್ಲೂ ಔಷಧಿಯ ದರದ ಪಟ್ಟಿಯನ್ನ ಅಳವಡಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.. ಒಟ್ನಲ್ಲಿ.. ಔಷಧಿ ದರ ವಿಚಾರವಾಗಿ NPPA ಮಹತ್ವದ ನಿರ್ಧಾರ ತಿಳಿಸಿದೆ.. ಮತ್ತೊಂದು ಕಡೆ ಔಷಧಿ ಖರೀದಿಯ ದರದ ಬಗ್ಗೆ ಪಟ್ಟಿಯನ್ನು ರಿಲೀಸ್‌ ಮಾಡುವಂತೆ ಆರೋಗ್ಯ ಇಲಾಖೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.. ಒಟ್ಟಾರೆಯಾಗಿ ಹೇಳಿದಂತೆ ನ.1ರ ನಂತರ ಅದೇಷ್ಟು ಆಸ್ಪತ್ರೆಗಳು ಪಟ್ಟಿ ಬಿಡುಗಡೆ ಮಾಡುತ್ತವೆ ಅಂತ ಕಾಯ್ದು ನೋಡಬೇಕಿದೆ..

Add Zee News as a Preferred Source
TAGS:
Kannada News