SOCIAL MEDIA

Newsletter

PARTNER SITES
Select Language Select State

ಕಳ್ಳತನಕ್ಕೂ ಒಂದು ಮಿತಿ ಇಲ್ವಾ..? ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಕರ ಜೀವ ಉಳಿಸುವ ಕನ್ನಡಿಗಳೇ ಮಾಯ!

charmadi ghatti theft: ಕಳ್ಳತನ ಮಾಡೋದಕ್ಕೂ ಒಂದು ಮಿತಿ ಬೇಡ್ವಾ..? ದುಡಿಯೋಕೆ ಸೋಮಾರಿತನ, ಕದಿಯೋಕೆ ಮಾತ್ರ ಎಲ್ಲಿಲ್ಲದ ಆಸಕ್ತಿ..! ಪ್ರಯಾಣಿಕರ ಜೀವ ಉಳಿಸಲಿ ಅಂತ ರಸ್ತೆ ಬದಿಯಲ್ಲಿ ಅಳವಡಿಸಿದ್ದ ಕನ್ನಡಿಗಳನ್ನೇ ಕದಿಯುವ ಹೀನ ಕೃತ್ಯಕ್ಕೆ ಕಿಡಿಗೇಡಿಗಳು ಕೈ ಹಾಕಿದ್ದಾರೆ. ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಹಾಕಿದ್ದ ಕನ್ನಡಿಗಳನ್ನೇ ಕಿತ್ತುಕೊಂಡು ಹೋಗಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಬೇರೆಲ್ಲೂ ಅಲ್ಲ, ಅಪಾಯಕಾರಿ ತಿರುವುಗಳಿಗೆ ಹೆಸರಾದ ಚಾರ್ಮಾಡಿ ಘಾಟಿಯಲ್ಲಿ..!

Written By Ramya. R. Gowda
Published: Nov 01, 2026, 11:53 AM IST | Updated: Nov 01, 2026, 12:01 PM IST
Join

ಕಳ್ಳತನ ಮಾಡೋದಕ್ಕೂ ಒಂದು ಮಿತಿ ಬೇಡ್ವಾ..? ದುಡಿಯೋಕೆ ಸೋಮಾರಿತನ, ಕದಿಯೋಕೆ ಮಾತ್ರ ಎಲ್ಲಿಲ್ಲದ ಆಸಕ್ತಿ..! ಪ್ರಯಾಣಿಕರ ಜೀವ ಉಳಿಸಲಿ ಅಂತ ರಸ್ತೆ ಬದಿಯಲ್ಲಿ ಅಳವಡಿಸಿದ್ದ ಕನ್ನಡಿಗಳನ್ನೇ ಕದಿಯುವ ಹೀನ ಕೃತ್ಯಕ್ಕೆ ಕಿಡಿಗೇಡಿಗಳು ಕೈ ಹಾಕಿದ್ದಾರೆ. ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಹಾಕಿದ್ದ ಕನ್ನಡಿಗಳನ್ನೇ ಕಿತ್ತುಕೊಂಡು ಹೋಗಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಬೇರೆಲ್ಲೂ ಅಲ್ಲ, ಅಪಾಯಕಾರಿ ತಿರುವುಗಳಿಗೆ ಹೆಸರಾದ ಚಾರ್ಮಾಡಿ ಘಾಟಿಯಲ್ಲಿ..!

ಒಂದಲ್ಲ, ಎರಡಲ್ಲ ಬರೋಬ್ಬರಿ 11 ಅಪಾಯಕಾರಿ ತಿರುವುಗಳು ಈ ಘಾಟಿಯಲ್ಲಿವೆ. ಈ ತಿರುವುಗಳಲ್ಲಿ ಎದುರಿನಿಂದ ಬರುವ ವಾಹನಗಳು ಕಾಣಿಸದೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿತ್ತು. ಹೀಗಾಗಿ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಧರ್ಮಸ್ಥಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯವರು 11 ತಿರುವುಗಳಲ್ಲೂ ರಸ್ತೆ ಸುರಕ್ಷತಾ ಕನ್ನಡಿಗಳನ್ನು ಅಳವಡಿಸಿದ್ದರು.ಈ ಕನ್ನಡಿಗಳಿಂದ ವಾಹನ ಸವಾರರಿಗೆ ಸಾಕಷ್ಟು ಅನುಕೂಲವಾಗಿತ್ತು. 

ತಿರುವುಗಳಲ್ಲಿ ಎದುರಿನಿಂದ ಬರುವ ವಾಹನಗಳನ್ನು ಮೊದಲೇ ಗುರುತಿಸಲು ಸಾಧ್ಯವಾಗುತ್ತಿತ್ತು. ಹೀಗಾಗಿ ಅಪಘಾತಗಳ ಅಪಾಯವೂ ಕಡಿಮೆಯಾಗಿತ್ತು. ಆದ್ರೆ ಈಗ ಕಿಡಿಗೇಡಿಗಳ ಕಣ್ಣು ಈ ಕನ್ನಡಿಗಳ ಮೇಲೆಯೇ ಬಿದ್ದಿದೆ.ಹೌದು..! ಪ್ರಯಾಣಿಕರ ಜೀವ ಉಳಿಸಬೇಕಿದ್ದ ಕನ್ನಡಿಗಳನ್ನೇ ಕಳ್ಳರು ಕದ್ದು ಸಾಗಿಸುತ್ತಿದ್ದಾರೆ. ಅಪಾಯಕಾರಿ ತಿರುವುಗಳಲ್ಲಿ ಅಳವಡಿಸಿದ್ದ ಕನ್ನಡಿಗಳನ್ನು ಕಿತ್ತುಕೊಂಡು ಹೋಗುವ ಮೂಲಕ ವಾಹನ ಸವಾರರ ಸುರಕ್ಷತೆಗೆ ಕಂಟಕವಾಗಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ನೂರಾರು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಇದೀಗ ಕನ್ನಡಿಗಳು ಕಳವಾಗಿರುವುದರಿಂದ ಮತ್ತೆ ಅಪಘಾತದ ಆತಂಕ ಎದುರಾಗಿದೆ. ಹೀಗಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕಳವಾಗಿರುವ ಕನ್ನಡಿಗಳ ಜಾಗದಲ್ಲಿ ಹೊಸ ಕನ್ನಡಿಗಳನ್ನು ಅಳವಡಿಸಬೇಕು ಅನ್ನೋದು ಸ್ಥಳೀಯರ ಒತ್ತಾಯ.ಅಪಘಾತ ತಡೆಯಲು ಅಳವಡಿಸಿರುವ ಕನ್ನಡಿಗಳು ಯಾರೋ ಒಬ್ಬರ ಸ್ವತ್ತಲ್ಲ. ಅದು ಸಾವಿರಾರು ವಾಹನ ಸವಾರರ ಜೀವ ಉಳಿಸುವ ಸುರಕ್ಷತಾ ಸಾಧನ. ದಯವಿಟ್ಟು ಇಂತಹ ಕನ್ನಡಿಗಳನ್ನು ಕದಿಯಬೇಡಿ, ಸಾರ್ವಜನಿಕರ ಜೀವಕ್ಕೆ ಕುತ್ತು ತರಬೇಡಿ ಅನ್ನೋದು ಸ್ಥಳೀಯರ ಮನವಿ.

ಒಟ್ಟಿನಲ್ಲಿ, ರಸ್ತೆ ಸುರಕ್ಷತೆಗಾಗಿ ಅಳವಡಿಸಿದ್ದ ಕನ್ನಡಿಗಳನ್ನೇ ಕಳ್ಳರು ಕದ್ದೊಯ್ದಿರುವುದು ನಿಜಕ್ಕೂ ದುರಂತ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕನ್ನಡಿಗಳನ್ನು ಮರುಸ್ಥಾಪಿಸಬೇಕಿದೆ.

 

ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ – ಪಲ್ಟಿಯಾದ KSRTC ಬಸ್‌!
 

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಸವನಹೊಳೆ ಡ್ಯಾಂ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ಪಕ್ಕದ ಕಟ್ಟೆಗೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್‌ ಪಲ್ಟಿಯಾಗಿದ್ದು, ಬಸ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ 42 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಜಾನೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ.

ಬೆಂಗಳೂರಿನಿಂದ ಸಾಗರದ ಕಡೆಗೆ ಪ್ರಯಾಣ ಬೆಳೆಸಿದ್ದ ಕೆಎಸ್‌ಆರ್‌ಟಿಸಿ ಬಸ್‌.. ಇನ್ನೇನು ಸಾಗರ ತಲುಪಬೇಕು ಅನ್ನುವಷ್ಟರಲ್ಲಿ ಅಪಘಾತಕ್ಕೀಡಾಗಿದೆ. ಸಾಗರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಬಸವನಹೊಳೆ ಡ್ಯಾಂ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ರಸ್ತೆ ಪಕ್ಕದ ಕಟ್ಟೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.ಅಪಘಾತದ ರಭಸಕ್ಕೆ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾಗಿದ್ದಾರೆ. ಬಸ್‌ನಲ್ಲಿ ಚಾಲಕ ಸೇರಿದಂತೆ ಒಟ್ಟು 42 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಚಾಲಕ ಸೇರಿದಂತೆ ಎಲ್ಲ 42 ಮಂದಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


ಘಟನೆ ತಿಳಿಯುತ್ತಿದ್ದಂತೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

 

 


 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES