SOCIAL MEDIA

Newsletter

PARTNER SITES
Select Language Select State

ಜಪ್ತಿ ಮಾಡಿದ ವಾಹನಗಳನ್ನು ಪೊಲೀಸ್‌ ಠಾಣೆಯಿಂದ ನಗರದ ಹೊರ ವಲಯಕ್ಕೆ ಸಾಗಿಸುವ ಅಭಿಯಾನಕ್ಕೆ ಚಾಲನೆ

ಪೊಲೀಸರಿಂದ ಜಪ್ತಿ ಮಾಡಲಾದ ವಾಹನಗಳನ್ನು ಪೊಲೀಸ್‌ ಠಾಣೆಯಿಂದ ನಗರದ ಹೊರ ವಲಯಕ್ಕೆ ಸಾಗಿಸುವ ವಿನೂತನ ಅಭಿಯಾನಕ್ಕೆ ಸಚಿವ ಕೃಷ್ಣ ಬೈರೇಗೌಡ ಇಂದು ಚಾಲನೆ ನೀಡಿದರು.

Written By Yashaswini V
Published: Sep 16, 2026, 02:24 PM IST | Updated: Sep 16, 2026, 02:27 PM IST
Join

ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಪೊಲೀಸ್ ಠಾಣೆಯಿಂದ ಬೆಂಗಳೂರಿನ ಹೊರ ವಲಯಕ್ಕೆ ಸಾಗಿಸುವ ಅಭಿಯಾನಕ್ಕೆ ಸಚಿವ ಕೃಷ್ಣ ಬೈರೇಗೌಡ ಇಂದು ಚಾಲನೆ ನೀಡಿದ್ರು. ಜೊತೆಗೆ ಬೆಂಗಳೂರು ಉಸ್ತುವಾರಿವ ಸಚಿವರಾದ ನಂತರ ಮೊಟ್ಟಮೊದಲ ಕೆಡಿಪಿ ಸಭೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಮಾತಿನ ಚಾಟಿ ಏಟು ಕೊಟ್ಟರು. ಈ ಕುರಿತು ಫುಲ್ ಡಿಟೈಲ್ಸ್ ಇಲ್ಲಿದೆ.

ಸೀಜ್ ಮಾಡಿದ ಹಳೆಯ ವಾಹನಗಳನ್ನು ಹೊರವಲಯಕ್ಕೆ ಸಾಗಿಸುವ ಕಾರ್ಯಕ್ಕೆ ಚಾಲನೆ:
ಜಯನಗರ ಪೊಲೀಸ್ ಠಾಣೆ ಬಳಿ ಪೊಲೀಸರು ಸೀಜ್ ಮಾಡಿದ ಹಳೆಯ ವಾಹನಗಳನ್ನು ಹೊರವಲಯಕ್ಕೆ ಸಾಗಿಸುವ ಕಾರ್ಯಕ್ಕೆ ಇಂದು ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಉಪಸ್ಥಿತರಿದ್ದರು..

ಇದೇ ವೇಳೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಬೆಂಗಳೂರಲ್ಲಿ ಹಳೆ ಸಮಸ್ಯೆ ಗುರುತಿಸಿ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಸಹಯೋಗದೊಂದಿಗೆ ಹತ್ತಾರು ವರ್ಷಗಳಿಂದ ಜಪ್ತಿಯಾಗಿರುವ ವಾಹನಗಳನ್ನ ತೆರವು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕಂದಾಯ ಇಲಾಖೆಯ ಬಳಿ ಮನವಿ ಮಾಡಿದಕ್ಕೆ 7 ಕಡೆ 26ಎಕರೆ ಜಾಗ ನೀಡಿದ್ದಾರೆ. ಇಂದಿನಿಂದ (ಸೆ.16)  ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಪೊಲೀಸ್ ಠಾಣೆಯಿಂದ ಬೆಂಗಳೂರಿನ ಹೊರ ವಲಯಕ್ಕೆ  ಶಿಫ್ಟ್ ಮಾಡೋ ಕಾರ್ಯ ಆರಂಭಗೊಂಡಿದೆ. 11,346 ಗಾಡಿಗಳು ಪೊಲೀಸ್ ಇಲಾಖೆಯ ಸುತ್ತಾ ನಿಂತಿವೆ. ಇವುಗಳನ್ನ ಬೇರೆ ಕಡೆ ಶಿಫ್ಟ್ ಮಾಡಲಾಗುತ್ತೆ. ಜಯನಗರ 4th block ಅಲ್ಲಿ ಇದ್ದೇವೆ.. ಇಲ್ಲಿ ಈ ರೀತಿ ಗುಜರಿ ವಾತಾವರಣ ನೋಡೋಕ್ಕೆ ಅಸಹ್ಯವಾಗುತ್ತೆ, ಜೊತೆಗೆ ಇಲ್ಲೀಗಲ್ ಆ್ಯಕ್ಟಿವಿಟಿಗೂ ಇದು ಕಾರಣ ಆಗುತ್ತೆ. ಬರೋ ಒಂದು ತಿಂಗಳಲ್ಲಿ ಆದಷ್ಟು ಎಲ್ಲಾ ವಾಹನಗಳನ್ನ ನಗರದ ಹೊರವಲಯಕ್ಕೆ ಶಿಫ್ಟ್ ಮಾಡಲಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೊಂದು ಐತಹಾಸಿಕ ನಿರ್ಧಾರ ಎಂದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್:
ಇದೇ ವೇಳೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಇದೊಂದು ಐತಿಹಾಸಿಕ ನಿರ್ಧಾರ. ಇದಕ್ಕೆ ಕಾರಣರಾದ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇವೆ. ಈಗ ಸಚಿವರು ನಮಗೆ 7 ಕಡೆ ಜಾಗ ಕೊಟ್ಟಿದ್ದಾರೆ. ಒಟ್ಟು 26 ಎಕರೆ ಜಾಗ ಕೊಟ್ಟಿದ್ದಾರೆ. ಅಲ್ಲಿಗೆ ಸೀಜ್ ಮಾಡಿದ ವೆಹಿಕಲ್ ಶಿಫ್ಟ್ ಮಾಡುತ್ತೇವೆ. ಒಂದೇ ಬಾರಿಗೆ ಎಲ್ಲ ಸೀಜ್ ಆದ ವಾಹನಗಳನ್ನು ಶಿಫ್ಟ್ ಮಾಡಲು ಆಗಲ್ಲ. ಹಂತ ಹಂತವಾಗಿ ಏರಿಯಾ ಪ್ರಕಾರ ವಾಹನಗಳನ್ನು ಶಿಫ್ಟ್ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಮೊದಲ ಕೆಡಿಪಿ ಸಭೆಯಲ್ಲೇ ಅಧಿಕಾರಿಗಳಿಗೆ ಬೆವರಿಳಿಸಿದ ಕೃಷ್ಣ ಬೈರೇಗೌಡ:
ಇದೇ ವೇಳೆ ಮೊದಲ ಕೆಡಿಪಿ ಸಭೆಯಲ್ಲೇ ಅಧಿಕಾರಿಗಳಿಗೆ ಬೆವರಿಳಿಸಿ ಸಚಿವ ಕೃಷ್ಣ ಬೈರೇಗೌಡ ಕೆಲಸ ಮಾಡಿ ಇಲ್ಲ ಜಾಗ ಖಾಲಿ ಮಾಡಿ ಎಂದು ಖಡಕ್ ಎಚ್ಚರಿಕೆ ಕೊಟ್ಟರು. ನಮ್ಮಲ್ಲಿ ಅಭಿವೃದ್ಧಿಗೆ ಅಗತ್ಯವಾದ ಸಾಮರ್ಥ್ಯ, ಸಂಪನ್ಮೂಲ ಇಲ್ವ? ಅಥವಾ ಎಲ್ಲವೂ ಇದ್ದೂ ಕೇವಲ ಬಿಲ್ಲು ಮಾಡೋದಕ್ಕಷ್ಟೆ ಅಧಿಕಾರಿಗಳು ಕೆಲಸ ಮಾಡ್ತಾ ಇರೋದ? ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರ ಖಡಕ್ ಪ್ರಶ್ನೆ ಕೇಳಿದರು.

ಶಾಶ್ವತ ನಿರ್ಮಾಣ ಕಾರ್ಯಕ್ಕೆ ಗ್ರಾಮ ಪಂಚಾಯತ್‌ಗೆ ಮಂಜೂರಾದ ಹಣದ ಒಂದು ಪಾಲು ಮೀಸಲು:
ಗ್ರಾಮ ಪಂಚಾಯತ್ ಗೆ ಮಂಜೂರಾಗುವ ಹಣದ ಒಂದು ಪಾಲನ್ನು ನೀರು-ಕಸ ವಿಲೇವಾರಿ ಸೇರಿದಂತೆ ಶಾಶ್ವತ ನಿರ್ಮಾಣ ಕಾರ್ಯಕ್ಕೆ ಬಳಸಲೇಬೇಕು. ಕಸ ವಿಲೇವಾರಿ ವಿಚಾರದಲ್ಲಿ ಬೇರೆ ರಾಜ್ಯಗಳ ಅಭಿವೃದ್ಧಿ ಕೆಲಸ ನೋಡಿದರೆ ನಮಗೆ ನಾಚಿಕೆ ಆಗುತ್ತೆ. ನಮ್ಮಲ್ಲಿ ಹಣಕಾಸಿಗೆ ಕೊರತೆ ಇಲ್ಲ ಇನ್ನಾದರೂ ಕಸ ವಿಲೇವಾರಿ ಕೆಲಸವನ್ನು ವೈಜ್ಞಾನಿಕ ರೀತಿ ಮಾಡಿ ಎಂದು ಖಡಕ್ ಎಚ್ಚರಿಕೆ ಕೊಟ್ಟರು..

ನಿಯಮ ಉಲ್ಲಂಘಿಸಿ ರಸ್ತೆ ನಿರ್ಮಿಸಿದ್ರೆ ಪಿಡಿಓ ವಿರುದ್ಧ ಕಾನೂನು ಕ್ರಮ:
ಹಾಲು ಕೊಡೋ ಹಸು ಕೆಚ್ಚಲನ್ನ ಕೊಯ್ಯಲೂ ನೀವು ಹೇಸಲ್ಲ. ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವ ಪಂಚಾಯತಿಗಳಿಗೆ ನೀರಿನ ಸೌಲಭ್ಯ ಕಲ್ಪಿಸದ ಅಧಿಕಾರಿಗಳ ವರ್ತನೆ ವಿರುದ್ಧ ಅಸಮಾಧಾನ ಹೊರಹಾಕಿದರು..  ಒಂದೇ ಕೆಲಸಕ್ಕೆ ಎರಡು ಕಡೆ ಬಿಲ್ ಮಾಡಿದ್ದೀರ? ಎಂದು ಅಸಮರ್ಪಕವಾಗಿ ಕೆಲಸ ನಿರ್ವಹಿಸಿ ಉಡಾಫೆ ಉತ್ತರ ನೀಡಿದ ಅಧಿಕಾರಿಯ ವಿರುದ್ಧ ಗರಂ ಆದ ಸಚಿವ ಕೃಷ್ಣ ಬೈರೇಗೌಡ ನಿಯಮ ಉಲ್ಲಂಘಿಸಿ ರಸ್ತೆ ನಿರ್ಮಿಸಿದರೆ ಪಿಡಿಓ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಕಳಪೆ ರಸ್ತೆಗಳ ಬಗ್ಗೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಸಚಿವ ಕೃಷ್ಣ ಬೈರೇಗೌಡ, ರಸ್ತೆ ನಿರ್ಮಾಣಕ್ಕೆ ನಾವು ಬೇರೆ ರಾಜ್ಯಕ್ಕಿಂತ ಕಡಿಮೆ ಹಣ ನೀಡುತ್ತಿದ್ದೇವಾ?
ಎಲ್ಲೋ ಒಂದು ಕಡೆ ವಾಹನ ಸಾಂದ್ರತೆ ಅಧಿಕವಾಗಿ ರಸ್ತೆ ಕಿತ್ತು ಹೋಗಿರಬಹುದು. ಆದರೆ, ಆ ಒಂದೇ ಪ್ರಕರಣವನ್ನು ಇಡೀ ರಾಜ್ಯಕ್ಕೆ ಅನ್ವಯಿಸಲಾಗುತ್ತಾ? ನಮಗೆ ನಿಮ್ಮಷ್ಚು ಬುದ್ದಿ ಇಲ್ಲ ಆದರೆ, ಕಾಮನ್ ಸೆನ್ಸ್ ಇದೆ. ನಿಮ್ಮ ಬುದ್ದಿಯನ್ನ ನಮ್ಮ ಮೇಲೆ ಪ್ರಯೋಗಿಸಬೇಡಿ. ಬೇರೆ ರಾಜ್ಯಗಳಲ್ಲಿ ವಾಹನ ಸಾಂದ್ರತೆ ಇಲ್ಲ, ಟ್ರಾಫಿಕ್ ಸಮಸ್ಯೆ ಇಲ್ಲ, ಮಳೆ ಬೀಳಲ್ಲ. ಎಲ್ಲಾ ಸಮಸ್ಯೆಗಳೂ ಇರೋದು ನಮ್ಮ ರಾಜ್ಯದಲ್ಲೇ ಅಲ್ವ? ಒಂದು ಸಲ ಮಾಡಿದ ರಸ್ತೆ ಕನಿಷ್ಠ ಏಳೆಂಟು ವರ್ಷ ಬಾಳಿಕೆ ಬರಬೇಕಲ್ವ? ನೀವು ರಸ್ತೆ ಮಾಡುವಾಗಲೇ ಕಳಪೆ ಕಾಮಗಾರಿ ಮಾಡೋದು ಎರಡು ವರ್ಷಕ್ಕೆ re surface ಕೆಲಸಕ್ಕೆ ಮತ್ತೆ 50 ಕೋಟಿ ಕೇಳೋದು. ಮಾಡೋ ಕೆಲಸ ನೆಟ್ಟಗೆ ಮಾಡಿದ್ರೆ, ರಸ್ತೆ ಕನಿಷ್ಠ ಎಂಟು ವರ್ಷ ಬಾಳಿಕೆ ಬಂದ್ರೆ ಕೊಟ್ಟ ಹಣಕ್ಕೂ ಸಾರ್ಥಕ. ಎರಡೆರಡು ವರ್ಷಕ್ಕೆ ಕಿತ್ತುಹೋದ್ರೆ ಎಷ್ಟು ಹಣ ಕೊಟ್ರೂ ಸಾಲಲ್ಲ. ಅದೇ ರೋಡು ಅದೇ ಬಿಲ್ಲು..! ಎಂದು ಅಧಿಕಾರಿಗಳ ವಿರುದ್ಧ ಅಕೋಶ ಹೊರಹಾಕಿದರು.

ಒಟ್ಟಾರೆ ಚುರುಕಿನಿಂದ ಖುದ್ದು ಫೀಲ್ಡ್ ಗಿಳಿದು ಕೆಲಸ ಮಾಡುತ್ತೀರುವ ಕೃಷ್ಣ ಬೈರೇಗೌಡ ಹಳೆಯ ವಾಹನಗಳನ್ನು ಸಿಟಿಯಿಂದ ಹೊರಗಟ್ಟಿ ಕೆಲಸ ಮಾಡದ ಅಧಿಕಾರಿಗೆ ಬೆವರು ಇಳಿಸುವ ಕೆಲಸ ಮಾಡಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES