ಆಹಾರದಲ್ಲಿನ ಉಪ್ಪಿನ ಸೇವನೆಯನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಆಹಾರ ಪದ್ಧತಿಗಳನ್ನು ಉತ್ತೇಜಿಸಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕದಲ್ಲಿ ಸಾರ್ವಜನಿಕರು, ಉಪ್ಪು ತಯಾರಕರು, ಆಹಾರ ಉದ್ಯಮ ನಿರ್ವಾಹಕರು ಮತ್ತು ಇತರ ಸಂಬಂಧಿತ ಪಾಲುದಾರರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ 22 ಸೆಪ್ಟೆಂಬರ್ 2026 ರಂದು ವಿಧಾನಸೌಧದಲ್ಲಿ ನಡೆದ 'ಆಹಾರ ಸಂಬಂಧಿತ ಅಪಾಯಗಳ ಕಡಿತ ಮತ್ತು ಉಪ್ಪು ಸೇವನೆ ಕಡಿತದ ಉಪಕ್ರಮ' ಕುರಿತ ತಾಂತ್ರಿಕ ಸಲಹಾ ಸಮೂಹದ (TAG) ಸಭೆಯ ನಡವಳಿಗಳು/ಶಿಫಾರಸುಗಳನ್ನು ಪರಿಗಣಿಸಿ ಉಪ್ಪು ಸೇವನೆ ಕಡಿತಕ್ಕಾಗಿ ಕರ್ನಾಟಕ ರಾಜ್ಯದ ಬಹು-ವಲಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ.
ಅಧಿಕ ಉಪ್ಪು ಸೇವನೆಯ ಅಡ್ಡಪರಿಣಾಮಗಳು:
ಆಹಾರದಲ್ಲಿ ಅತಿಯಾದ ಉಪ್ಪಿನ ಸೇವನೆಯು ಅಧಿಕ ರಕ್ತದೊತ್ತಡ ಹಾಗೂ ಹೃದಯರಕ್ತನಾಳದ ಕಾಯಿಲೆಗಳು ಮತ್ತು ಇತರ ಸಾಂಕ್ರಾಮಿಕವಲ್ಲದ ರೋಗಗಳ ಅಪಾಯ ಹೆಚ್ಚಳಕ್ಕೆ ಸಂಬಂಧಿಸಿದ, ಬದಲಾಯಿಸಬಹುದಾದ ಪ್ರಮುಖ ಆಹಾರ-ಸಂಬಂಧಿತ ಅಪಾಯಕಾರಿ ಅಂಶವಾಗಿದೆ.
ಉಪ್ಪು ಸೇವನೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆ ಏನು?
ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವ್ಯಕ್ತಿಗೆ ದಿನಕ್ಕೆ 5 ಗ್ರಾಂಗಳಿಗಿಂತ ಕಡಿಮೆ ಉಪ್ಪಿನ ಸೇವನೆಯನ್ನು (ಇದು ದಿನಕ್ಕೆ ಸುಮಾರು 2,000 ಮಿ.ಗ್ರಾಂ ಸೋಡಿಯಂಗೆ ಸಮಾನವಾಗಿರುತ್ತದೆ) ಮಿತಿಗೊಳಿಸಲು ಶಿಫಾರಸು ಮಾಡುತ್ತದೆ.
ಆಹಾರದಲ್ಲಿನ ಉಪ್ಪಿನ ಪ್ರಮುಖ ಮೂಲಗಳೆಂದರೆ ಮನೆಯಲ್ಲಿ ಅಡುಗೆ ಮಾಡುವಾಗ ಮತ್ತು ಊಟದ ಸಮಯದಲ್ಲಿ ಸೇರಿಸುವ ಉಪ್ಪು, ರೆಸ್ಟೋರೆಂಟ್ ಹಾಗೂ ಬೀದಿಬದಿಯ ಆಹಾರ ಸೇರಿದಂತೆ ಮನೆಯ ಹೊರಗೆ ಸೇವಿಸುವ ಆಹಾರ, ಮತ್ತು ಸಂಸ್ಕರಿಸಿದ ಹಾಗೂ ಪ್ಯಾಕ್ ಮಾಡಿದ ಆಹಾರಗಳು.
ಕರ್ನಾಟಕ ಸರ್ಕಾರವು ಉಪ್ಪು ಸೇವನೆ ಕಡಿತಕ್ಕಾಗಿ ಬಹು-ವಲಯದ ವಿಧಾನವನ್ನು ಅಳವಡಿಸಿಕೊಂಡಿದ್ದು, ಆಹಾರದ ಮೂಲಕ ಉಪ್ಪನ್ನು ಸೇವಿಸುವ ಈ ಮೂರೂ ಪ್ರಮುಖ ಮೂಲಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ. ರಾಜ್ಯ ಕ್ರಿಯಾ ಯೋಜನೆಯು ವರ್ತನೆಯ ಬದಲಾವಣೆ, ಆರೋಗ್ಯಕರ ಆಹಾರ ಪರಿಸರ, ಆಹಾರ ಸಂಸ್ಥೆಗಳು ಮತ್ತು ಆಹಾರ ತಯಾರಕರೊಂದಿಗಿನ ಸಹಭಾಗಿತ್ವ ಹಾಗೂ ಸೂಕ್ತ ನಿಯಂತ್ರಕ ಮತ್ತು ಕಾರ್ಯಕ್ರಮ-ಮಟ್ಟದ ಕ್ರಮಗಳ ಮೂಲಕ 2030ರ ವೇಳೆಗೆ ಜನಸಂಖ್ಯೆಯ ಮಟ್ಟದಲ್ಲಿ ಉಪ್ಪಿನ ಸೇವನೆಯನ್ನು ಶೇ. 30 ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಉಪ್ಪು ಸೇವನೆ ಕುರಿತಂತೆ ಸಾರ್ವಜನಿಕರು, ಉಪ್ಪು ತಯಾರಕರು, ಆಹಾರ ಉದ್ಯಮಿಗಳು, ಹೋಟೆಲ್, ರೆಸ್ಟೋರೆಂಟ್, ಸ್ಟ್ರೀಟ್ ಫುಡ್ ತಯಾರಕರು, ಶಾಲಾ-ಕಾಲೇಜುಗಳಿಗೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಏನಿದೆ? ಇಲ್ಲಿದೆ. ಮಹತ್ವದ ಮಾಹಿತಿ..
ಉಪ್ಪು ಸೇವನೆ ಸಾಮಾನ್ಯ ಜನರಿಗೆ ಏನು ಮಾರ್ಗಸೂಚಿ:
1. ದಿನಕ್ಕೆ 5 ಗ್ರಾಂ ಗಿಂತ ಕಡಿಮೆ ಉಪ್ಪು ಸೇವಿಸಿ.
2. ಅಡುಗೆ ಮಾಡುವಾಗ ಉಪ್ಪನ್ನು ಕಡಿಮೆ ಹಾಕಿ. ಉಪ್ಪಿನಕಾಯಿ, ಚಟ್ನಿ, ಸ್ನ್ಯಾಕ್ಸ್ ಮಾಡುವಾಗ ಉಪ್ಪು ಕಡಿಮೆ ಬಳಸಿ.
3. ಊಟ ಮಾಡುವ ಮೊದಲು ರುಚಿ ನೋಡದೆ ಸುಮ್ಮನೆ ಉಪ್ಪು ಹಾಕಬೇಡಿ.
4. ಸಂಸ್ಕರಿಸಿದ, ಪ್ಯಾಕ್ ಮಾಡಿದ, ಇನ್ ಸ್ಟಂಟ್ ಮತ್ತು ರೆಡಿ-ಟು-ಈಟ್ ಆಹಾರಗಳನ್ನು ಕಡಿಮೆ ತಿನ್ನಿ.
5. ಪ್ಯಾಕ್ ಮಾಡಿದ ಆಹಾರ ಕೊಳ್ಳುವಾಗ ಅದರ ಲೇಬಲ್ ನಲ್ಲಿ ಉಪ್ಪು / ಸೋಡಿಯಂ ಅಂಶ ನೋಡಿ ಹೋಲಿಕೆ ಮಾಡಿ ಕೊಳ್ಳಿ.
6. ತಾಜಾ ಮತ್ತು ಕಡಿಮೆ ಸಂಸ್ಕರಿಸಿದ ಆಹಾರ, ಹಣ್ಣು-ತರಕಾರಿ ಹೆಚ್ಚು ಸೇವಿಸಿ.
7. ಪೋಷಕರು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕಡಿಮೆ ಉಪ್ಪಿನ ಅಭ್ಯಾಸ ಬೆಳೆಸಿ.
8. BP ಅಥವಾ ಇತರ ಕಾಯಿಲೆ ಇರುವವರು ಉಪ್ಪು ಕಡಿಮೆ ಮಾಡುವ ಬಗ್ಗೆ ವೈದ್ಯರ ಸಲಹೆ ಪಡೆಯಿರಿ.
9. Low-sodium ಉಪ್ಪಿನ ಬದಲಿ ಬಳಸುವಾಗ ಆಹಾರ ಸುರಕ್ಷತೆ ಮತ್ತು ವೈದ್ಯಕೀಯ ಸಲಹೆ ಪಾಲಿಸಿ, ವಿಶೇಷವಾಗಿ ಕಿಡ್ನಿ ಕಾಯಿಲೆ ಇರುವವರು.
ಉಪ್ಪು ತಯಾರಿಕಾ ಘಟಕಗಳಿಗೆ ಏನು ಮಾರ್ಗಸೂಚಿ:-
1. ಸರ್ಕಾರದ ಉಪ್ಪು ಕಡಿತ ಪ್ರಯತ್ನಕ್ಕೆ ಬೆಂಬಲ ನೀಡಿ.
2. Low-sodium ಅಥವಾ iodised low-sodium ಉಪ್ಪಿನ ಬದಲಿ ತಯಾರಿಸಲು ಪ್ರಯತ್ನಿಸಿ.
3. Low-sodium ಉಪ್ಪು ಎಲ್ಲಾ ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸಬೇಕು.
4. ಉತ್ಪನ್ನದ ಸಂಯೋಜನೆ, ಬಳಕೆ ಮತ್ತು ಮುನ್ನೆಚ್ಚರಿಕೆಗಳನ್ನು ಲೇಬಲ್ ನಲ್ಲಿ ಸ್ಪಷ್ಟವಾಗಿ ನಮೂದಿಸಿ.
5. ಗುಣಮಟ್ಟ ನಿಯಂತ್ರಣ ಕ್ರಮ ಕೈಗೊಳ್ಳಿ.
6. ಆರೋಗ್ಯ ಇಲಾಖೆ ಮತ್ತು FSSAI ಜೊತೆ ಸಹಕರಿಸಿ.
ಆಹಾರ ಮತ್ತು ಪ್ಯಾಕೇಜ್ಡ್ ಫುಡ್ ತಯಾರಕರಿಗೆ ಸಲಹೆ:
1. ತಮ್ಮ ಉತ್ಪನ್ನಗಳಲ್ಲಿ ಉಪ್ಪು / ಸೋಡಿಯಂ ಅಂಶವನ್ನು ಹಂತ ಹಂತವಾಗಿ ಕಡಿಮೆ ಮಾಡಿ.
2. ಆಹಾರ ಸುರಕ್ಷತೆ, ಗುಣಮಟ್ಟಕ್ಕೆ ಧಕ್ಕೆ ಬಾರದೆ ಉಪ್ಪು ಕಡಿಮೆ ಮಾಡಬಹುದಾದ ಉತ್ಪನ್ನಗಳನ್ನು ಗುರುತಿಸಿ.
3. ಸೋಡಿಯಂ ಬದಲಿಗೆ ತಾಂತ್ರಿಕವಾಗಿ ಸಾಧ್ಯವಿರುವ ಪರ್ಯಾಯಗಳನ್ನು ಬಳಸಿ.
4. ಲೇಬಲ್ ನಲ್ಲಿ ಪೌಷ್ಟಿಕಾಂಶದ ಮಾಹಿತಿಯನ್ನು ಸ್ಪಷ್ಟವಾಗಿ ನೀಡಿ.
5. FSSAI ಮಾನದಂಡಗಳನ್ನು ಪಾಲಿಸಿ.
ಹೋಟೆಲ್, ರೆಸ್ಟೋರೆಂಟ್ ಗಳಿಗೆ ಸಲಹೆ:
1. ಅಡುಗೆಯಲ್ಲಿ ಉಪ್ಪನ್ನು ಹಂತ ಹಂತವಾಗಿ ಕಡಿಮೆ ಮಾಡುವ ಪ್ರಮಾಣಿತ ಪದ್ಧತಿ ಅಳವಡಿಸಿ.
2. ಅಡುಗೆಯವರಿಗೆ ಕಡಿಮೆ ಉಪ್ಪಿನ ಅಡುಗೆ ಬಗ್ಗೆ ತರಬೇತಿ ನೀಡಿ.
3. ಅನಗತ್ಯವಾಗಿ ಉಪ್ಪು ಹಾಕುವುದನ್ನು ತಪ್ಪಿಸಿ.
4. ಊಟದ ಮೇಜಿನ ಮೇಲೆ ಉಪ್ಪಿನ ಡಬ್ಬಿ ಇಡುವುದನ್ನು ನಿರುತ್ಸಾಹಗೊಳಿಸಿ.
5. ಆರೋಗ್ಯಕರ ಮತ್ತು ಕಡಿಮೆ ಉಪ್ಪಿನ ಆಯ್ಕೆಗಳನ್ನು ನೀಡಿ.
6. "ಉಪ್ಪು ಕಡಿಮೆ ಮಾಡಿ" ಎಂಬ ಸಂದೇಶಗಳನ್ನು ಪ್ರದರ್ಶಿಸಿ.
ಸ್ಟ್ರೀಟ್ ಫುಡ್ ಮಾರಾಟಗಾರರಿಗೆ ಸಲಹೆ:
1. ಉಪ್ಪು ಕಡಿತದ ಬಗ್ಗೆ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ.
2. ತಯಾರಿಕೆ ಮತ್ತು ಬಡಿಸುವಾಗ ಅನಗತ್ಯ ಉಪ್ಪು ಹಾಕಬೇಡಿ.
3. ಸಾಧ್ಯವಾದಷ್ಟು ಕಡಿಮೆ ಉಪ್ಪಿನ ಅಡುಗೆ ಪದ್ಧತಿ ಅಳವಡಿಸಿ.
ಶಾಲಾ-ಕಾಲೇಜುಗಳಿಗೆ ಸಲಹೆ:
1. ಮಕ್ಕಳು ಮತ್ತು ಹದಿಹರೆಯದವರಲ್ಲಿ ಆರೋಗ್ಯಕರ ಆಹಾರ ಮತ್ತು ಉಪ್ಪು ಕಡಿತದ ಬಗ್ಗೆ ಶಿಕ್ಷಣ ನೀಡಿ.
2. ಶಾಲೆಯಲ್ಲಿ ನೀಡುವ ಊಟ ಮತ್ತು ಸ್ನ್ಯಾಕ್ಸ್ ನಲ್ಲಿ ಉಪ್ಪು ಕಡಿಮೆ ಮಾಡಿ.
3. ಶಾಲಾ ಆರೋಗ್ಯ ಕಾರ್ಯಕ್ರಮಗಳಲ್ಲಿ ಉಪ್ಪು ಕಡಿತ ಸಂದೇಶ ಸೇರಿಸಿ.
4. ಪೋಷಕರಿಗೆ ಮನೆಯಲ್ಲಿ ಆರೋಗ್ಯಕರ ಅಭ್ಯಾಸ ಬೆಳೆಸಲು ಪ್ರೇರೇಪಿಸಿ.
5. ಅಡುಗೆಯವರು ಮತ್ತು ಆಹಾರ ಸಿಬ್ಬಂದಿಗೆ ಉಪ್ಪಿನ ಸರಿಯಾದ ಬಳಕೆ ಬಗ್ಗೆ ತರಬೇತಿ ನೀಡಿ.
ಉಪ್ಪು ಸೇವನೆ ಶಾಲಾ-ಕಾಲೇಜುಗಳಿಗೆ ಏನು ಮಾರ್ಗಸೂಚಿ?
1. ಮಕ್ಕಳು ಮತ್ತು ಹದಿಹರೆಯದವರಲ್ಲಿ ಆರೋಗ್ಯಕರ ಆಹಾರ ಮತ್ತು ಉಪ್ಪು ಕಡಿತದ ಬಗ್ಗೆ ಶಿಕ್ಷಣ ನೀಡಿ.
2. ಶಾಲೆಯಲ್ಲಿ ನೀಡುವ ಊಟ ಮತ್ತು ಸ್ನ್ಯಾಕ್ಸ್ ನಲ್ಲಿ ಉಪ್ಪು ಕಡಿಮೆ ಮಾಡಿ.
3. ಶಾಲಾ ಆರೋಗ್ಯ ಕಾರ್ಯಕ್ರಮಗಳಲ್ಲಿ ಉಪ್ಪು ಕಡಿತ ಸಂದೇಶ ಸೇರಿಸಿ.
4. ಪೋಷಕರಿಗೆ ಮನೆಯಲ್ಲಿ ಆರೋಗ್ಯಕರ ಅಭ್ಯಾಸ ಬೆಳೆಸಲು ಪ್ರೇರೇಪಿಸಿ.
5. ಅಡುಗೆಯವರು ಮತ್ತು ಆಹಾರ ಸಿಬ್ಬಂದಿಗೆ ಉಪ್ಪಿನ ಸರಿಯಾದ ಬಳಕೆ ಬಗ್ಗೆ ತರಬೇತಿ ನೀಡಿ.
ಹೋಟೆಲ್, ರೆಸ್ಟೋರೆಂಟ್ ಗಳಿಗೆ ಏನು ಮಾರ್ಗಸೂಚಿ:
1. ಅಡುಗೆಯಲ್ಲಿ ಉಪ್ಪನ್ನು ಹಂತ ಹಂತವಾಗಿ ಕಡಿಮೆ ಮಾಡುವ ಪ್ರಮಾಣಿತ ಪದ್ಧತಿ ಅಳವಡಿಸಿ.
2. ಅಡುಗೆಯವರಿಗೆ ಕಡಿಮೆ ಉಪ್ಪಿನ ಅಡುಗೆ ಬಗ್ಗೆ ತರಬೇತಿ ನೀಡಿ.
3. ಅನಗತ್ಯವಾಗಿ ಉಪ್ಪು ಹಾಕುವುದನ್ನು ತಪ್ಪಿಸಿ.
4. ಊಟದ ಮೇಜಿನ ಮೇಲೆ ಉಪ್ಪಿನ ಡಬ್ಬಿ ಇಡುವುದನ್ನು ನಿರುತ್ಸಾಹಗೊಳಿಸಿ.
5. ಆರೋಗ್ಯಕರ ಮತ್ತು ಕಡಿಮೆ ಉಪ್ಪಿನ ಆಯ್ಕೆಗಳನ್ನು ನೀಡಿ.
6. "ಉಪ್ಪು ಕಡಿಮೆ ಮಾಡಿ" ಎಂಬ ಸಂದೇಶಗಳನ್ನು ಪ್ರದರ್ಶಿಸಿ.
ಸ್ಟ್ರೀಟ್ ಫುಡ್ ಮಾರಾಟಗಾರರಿಗೆ ಏನು ಮಾರ್ಗಸೂಚಿ:
1. ಉಪ್ಪು ಕಡಿತದ ಬಗ್ಗೆ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ.
2. ತಯಾರಿಕೆ ಮತ್ತು ಬಡಿಸುವಾಗ ಅನಗತ್ಯ ಉಪ್ಪು ಹಾಕಬೇಡಿ.
3. ಸಾಧ್ಯವಾದಷ್ಟು ಕಡಿಮೆ ಉಪ್ಪಿನ ಅಡುಗೆ ಪದ್ಧತಿ ಅಳವಡಿಸಿ.