ಸರ್ಕಾರಿ ಶಾಲೆ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್ : ಇನ್ಮುಂದೆ 3ನೇ ಕ್ಲಾಸ್‌ನಿಂದಲೇ AI ಪಾಠ!
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯ ಬದಲಿಗೆ ಇನ್ಮುಂದೆ 3ನೇ ತರಗತಿಯಿಂದಲೇ AI ಮತ್ತು ಕಂಪ್ಯೂಟರ್ ಶಿಕ್ಷಣವನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಓದೋ ಬಡ ಮತ್ತು ಗ್ರಾಮೀಣ ಭಾಗದ ಮಕ್ಕಳು ಇನ್ಮುಂದೆ ಖಾಸಗಿ ಶಾಲೆ ಮಕ್ಕಳಿಗಿಂತ ಏನೂ ಕಮ್ಮಿ ಇರಲ್ಲ. ರಾಜ್ಯ ಸರ್ಕಾರ ಈಗ ಸರ್ಕಾರಿ ಶಾಲೆ ಮಕ್ಕಳಿಗಾಗಿ ಒಂದು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 3ನೇ ತರಗತಿಯಿಂದಲೇ ಮಕ್ಕಳಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI - ಕೃತಕ ಬುದ್ಧಿಮತ್ತೆ) ಪಾಠ ಶುರುವಾಗಲಿದೆ. ಸ್ವತಃ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
6ನೇ ಕ್ಲಾಸ್ ಬದಲು 3ನೇ ಕ್ಲಾಸ್‌ನಿಂದಲೇ AI ಕ್ಲಾಸ್ ಶುರು:
ಬೆಂಗಳೂರಿನಲ್ಲಿ ನಡೀತಿರೋ ಇಂಡಿಯಾ ಡಿಡಾಕ್ (India DIDAC 2026) ಶೈಕ್ಷಣಿಕ ಸಮ್ಮೇಳನದಲ್ಲಿ ಮಾತಾಡಿದ ಸಚಿವ ಮಧು ಬಂಗಾರಪ್ಪ ಅವರು ಈ ವಿಚಾರ ತಿಳಿಸಿದ್ದಾರೆ. ಮೊದಲೆಲ್ಲಾ ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದ ಕಂಪ್ಯೂಟರ್ ಮತ್ತೆ AI ಶಿಕ್ಷಣ ಕೊಡಬೇಕು ಅಂತ ಪ್ಲಾನ್ ಮಾಡಲಾಗಿತ್ತು. ಆದ್ರೆ ಈಗಿನ ಕಾಲಕ್ಕೆ ತಕ್ಕಂತೆ ಮಕ್ಕಳು ಸಣ್ಣ ವಯಸ್ಸಿನಿಂದಲೇ ಹೊಸ ಟೆಕ್ನಾಲಜಿ ಕಲಿಬೇಕು ಅನ್ನೋ ಉದ್ದೇಶದಿಂದ, 3ನೇ ತರಗತಿಯಿಂದಲೇ AI ಮತ್ತು ಕಂಪ್ಯೂಟರ್ ಪಾಠ ಕಲಿಸೋಕೆ ಸರ್ಕಾರ ನಿರ್ಧರಿಸಿದೆ ಅಂತ ಸಚಿವರು ಹೇಳಿದ್ದಾರೆ.
10ನೇ ಕ್ಲಾಸ್ ಮುಗಿಯೋ ಅಷ್ಟರಲ್ಲಿ ಕೆಲಸಕ್ಕೆ ರೆಡಿ ಆಗ್ಬೇಕು:
ಬರೀ ಪುಸ್ತಕದ ಪಾಠ ಓದಿದ್ರೆ ಸಾಲದು, ಅದರ ಜೊತೆಗೆ ಮಕ್ಕಳಿಗೆ ಕೌಶಲ್ಯ(Skill) ಕೂಡ ಕಲಿಸಬೇಕು. ನಮ್ಮ ಸರ್ಕಾರಿ ಶಾಲೆ ಮಕ್ಕಳು 10ನೇ ತರಗತಿ ಪಾಸ್ ಆಗೋ ಅಷ್ಟರಲ್ಲಿ ಕೆಲಸಕ್ಕೆ ಅರ್ಹರಾಗುವಷ್ಟು ಟ್ಯಾಲೆಂಟ್ ಬೆಳೆಸಿಕೊಳ್ಳಬೇಕು. ಮುಂದೆ ಅವರು ಕಾಲೇಜು ಮುಗಿಸಿದ ಮೇಲೆ ಒಳ್ಳೆ ಕೆಲಸ ಸಿಗೋಕೆ ಇದು ತುಂಬಾ ಹೆಲ್ಪ್ ಆಗುತ್ತೆ ಅಂತ ಮಧು ಬಂಗಾರಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.
ಟೀಚರ್ಸ್ ನೇಮಕಾತಿಗೆ ನೋಟಿಫಿಕೇಶನ್ ಔಟ್:
ಶಾಲೆಗಳಲ್ಲಿ AI ಮತ್ತೆ ಕಂಪ್ಯೂಟರ್ ಪಾಠ ಮಾಡೋಕೆ ಟೀಚರ್ಸ್ ಬೇಕಲ್ವಾ? ಅದಕ್ಕಾಗಿ ಶಿಕ್ಷಣ ಇಲಾಖೆ ಈಗಾಗಲೇ ಅತಿಥಿ ಶಿಕ್ಷಕರ ನೇಮಕಾತಿಗೆ ನೋಟಿಫಿಕೇಶನ್ ಕೂಡ ಹೊರಡಿಸಿದೆ. ಅಷ್ಟೇ ಅಲ್ಲ, ಇನ್ನು ಎರಡು ತಿಂಗಳಲ್ಲಿ ರಾಜ್ಯದಲ್ಲಿ 1,300 ಕರ್ನಾಟಕ ಪಬ್ಲಿಕ್ ಶಾಲೆಗಳನ್ನ ಶುರು ಮಾಡೋ ಗುರಿ ಇಟ್ಟುಕೊಂಡಿದ್ದೀವಿ ಅಂತ ಸಚಿವರು ಹೇಳಿದ್ದಾರೆ.
ಮ್ಯೂಸಿಕ್, ನಾಟಕಕ್ಕೂ ಇದೆ ಚಾನ್ಸ್:
ಬರೀ ಕಂಪ್ಯೂಟರ್, AI ಅಷ್ಟೇ ಅಲ್ಲದೆ ಮಕ್ಕಳಲ್ಲಿರೋ ಬೇರೆ ಪ್ರತಿಭೆಗಳನ್ನ ಹೊರತರೋಕೂ ಸರ್ಕಾರ ಪ್ಲಾನ್ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ಸಂಗೀತ, ನಾಟಕ ಮತ್ತು ಒಳ್ಳೆ ಮೌಲ್ಯಗಳನ್ನ ಕಲಿಸೋಕೆ ಕಲಾ ತರಗತಿಗಳನ್ನ ಶುರು ಮಾಡ್ತಿದ್ದು, ಅದಕ್ಕೂ ಬೇರೆ ಟೀಚರ್ಸ್ ನೇಮಕ ಮಾಡ್ಕೋತಿದ್ದೀವಿ ಅಂತ ಸಚಿವರು ತಿಳಿಸಿದ್ದಾರೆ.
ಒಟ್ಟಿನಲ್ಲಿ, ಖಾಸಗಿ ಶಾಲೆಗಳಿಗೆ ಟಕ್ಕರ್ ಕೊಡೋ ರೀತಿಯಲ್ಲಿ ಸರ್ಕಾರಿ ಶಾಲೆಗಳನ್ನ ಅಪ್‌ಡೇಟ್ ಮಾಡ್ತಿರೋ ಸರ್ಕಾರದ ಈ ನಿರ್ಧಾರಕ್ಕೆ ಪೋಷಕರಿಂದ ಫುಲ್ ಖುಷಿ ವ್ಯಕ್ತವಾಗಿದೆ.