ಸಿದ್ದರಾಮಯ್ಯರಿಂದ ಅಧಿಕಾರಿ ಕಿತ್ತುಕೊಳ್ಳೊಕ್ಕೆ ಸ್ಟಿಂಗ್ ಪ್ಲಾನ್ ಮಾಡಿದ್ದೇ ಡಿಕೆಶಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿ
ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರ ಸಂಚಲನ ಸೃಷ್ಟಿಸುತ್ತಿದೆ ಇದರ ನಡುವೆ ಇದೀಗ ಈ ಕುರಿತು ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಸ್ಟಿಂಗ್ ಪಿತಾಮಹ ಎನ್ನುವ ಮೂಲಕ ನೇರವಾಗಿ ಗುಡುಗಿದ್ದಾರೆ..
ವಿಜಯನಗರ : ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್ ಅವರು, ಸಿದ್ದರಾಮಯ್ಯ ಅವರ ಬಗ್ಗೆ ಸ್ಟಿಂಗ್ ಆಪರೇಶನ್ ಮಾಡಿ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದರು. ಸ್ಟಿಂಗ್ ಆಪರೇಶನ್ ಮಾಡದಿದ್ದರೆ, ಅದನ್ನು ಹೈಕಮಾಂಡ್ ಕೊಡದಿದ್ದರೆ, ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುತ್ತಿರಲಿಲ್ಲ, ಡಿಕೆ ಶಿವಕುಮಾರ್ ಸ್ಟಿಂಗ್ ಆಪರೇಶನ್ ಪಿತಾಮಹ ಎಂದು ಕಿಡಿಕಾರಿದರು.
ಸಿದ್ದರಾಮಯ್ಯರಿಂದ ಅಧಿಕಾರಿ ಕಿತ್ತುಕೊಳ್ಳೊಕ್ಕೆ ಈ ಪ್ಲಾನ್ ಮಾಡಿದ್ದೇ ಡಿಕೆ ಶಿವಕುಮಾರ್ ಎಂದು ನೇರವಾಗಿ ವಾಗ್ದಾಳಿ ನಡೆಸಿದ ಜಗದೀಶ್ ಶೆಟ್ಟರ್, ಅಧಿಕಾರದಿಂದ ಇಳಿಸಿದ್ದರೂ ಕೂಡಾ ಸುಮ್ಮನೆ ಇರಲು ಬಿಡುತ್ತಿಲ್ಲ, ಸಿದ್ದರಾಮಯ್ಯ ಅವರ ಪರ್ಸನಲ್ ಲೈಫ್ನಲ್ಲಿ ಏನ್ ಇತ್ತು.. ಯಾರಿಗೂ ಗೊತ್ತು..? ಅವರ ಹೆಸರು ಕೆಡಿಸುವಂತ ಕೆಲಸ, ಅಪಪ್ರಚಾರ ಮಾಡುವುದು ಯಾಕೆ ಬೇಕು..? ಅದರಿಂದ ಈ ಸರ್ಕಾರ ಬಹಳ ದಿನಗಳ ಉಳಿಯಲ್ಲ, ಇದರಿಂದಲ್ಲೇ ಡಿಕೆ ಶಿವಕುಮಾರ್ ಸರ್ಕಾರ ಹಾಳಾಗ್ತಿದೆ ಎಂದರು.
ಸ್ಟಿಂಗ್ ಆಪರೇಶನ್ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚೆ ಆಗುತ್ತಿದೆ. ಸಿಬಿಐ ತನಿಖೆ ಮಾಡಿಸಿ ಅಂತಾ ನಾವು ಹೇಳ್ತಿದ್ದೀವಿ, ಆದರೆ ಅದಕ್ಕೆ ಸರ್ಕಾರ ಒಪ್ಪುತ್ತಿಲ್ಲ.. ಇಲ್ಲಾಂದ್ರೆ ಸಿಐಡಿಗೆ ಕೊಡಬೇಕು ಅಥವಾ ಎಸ್ಐಟಿ ನೇಮಕ ಮಾಡಬೇಕು, ಯಾರ್ ಮುಖಾಂತರ ಮಾಡಬೇಕು ಅಂತಾ ಚರ್ಚೆಗೆ ಬಂದಾಗ ಇಬ್ಬರು ಮಂತ್ರಿಗಳು ಮಾತನಾಡಿದ್ದು ಬಿಟ್ಟರೆ. ಉಳಿದವರು ಯಾರು ಮಾತನಾಡಿಲ್ಲ ಎಲ್ಲರೂ ಮೌನದಲ್ಲಿ ಇದ್ದರು, ಅವರಿಗೆಲ್ಲ ಎಲ್ಲಿ ಡಿಕೆ ಶಿವಕುಮಾರ್ ನಮ್ದು ಎಲ್ಲಿ ಸ್ಟಿಂಗ್ ಮಾಡಿದ್ದಾರೆ ಎಂಬ ಹೆದರಿಕೆ ಇದೆ ಎಂದರು.
ಸಿದ್ದರಾಮಯ್ಯ ಅವರಿಗೆ ನ್ಯಾಯ ಕೊಡಬೇಕ, ಈ ಪ್ರಕರಣದ ಕುರಿತು ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ಕ್ಯಾಬಿನೆಟ್ನಲ್ಲಿ ಡಿಸಿಜನ್ ತಗೊಬೇಕಾಗಿತ್ತು, ಆದರೆ ತಗೊಳ್ಳಿಲ್ಲ. ಇಲ್ಲಿವರೆಗೂ ಡಿಸಿಜನ್ ತಗೊಂಡಿಲ್ಲ ಅಂದ್ರೆ ಅದರಲ್ಲಿ ಇವರ ಪಾತ್ರ ಇದೆ ಅಂತ ಅರ್ಥ, ತನಿಖೆಯಾದ್ರೆ ಕೇಸ್ನ ಮೊದಲನೇ ಆರೋಪಿ ಡಿಕೆ ಶಿವಕುಮಾರ್ ಆಗ್ತಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಪ್ರಿಯಾಂಕ ಖರ್ಗೆ ತಮ್ಮ ತಂದೆಯ ಆಶೀರ್ವಾದ ದಿಂದ ಮಂತ್ರಿ ಆಗಿದ್ದಾನೆ, ಅವರು ಯಾವ ರೀತಿ ಮಾತಾಡಬೇಕು ಅನ್ನೋದೇ ಗೊತ್ತಿಲ್ಲದ ಅಜ್ಜಾನಿ, ಮತ್ತೇ ಅರೆಸ್ಟ್ ಆಗ್ತಿರಿ ಅಂತ ಕುಮಾರಸ್ವಾಮಿಗೆ ಹೇಳ್ತಾರೆ, ಅಮಾನವೀಯ ಮಾತು ಆಡುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಕಿಡಿಕಾರಿದರು.
ಕಬ್ಬು ಬೆಳೆಗಾರರ ಹೋರಾಟಕ್ಕೆ ನ್ಯಾಯ ಸಿಗಬೇಕು
ಕಬ್ಬು ಬೆಳೆಗಾರರ ಹೋರಾಟದ ಮೂಲಕ ನ್ಯಾಯುಯುತ ಬೇಡಿಕೆ ಇಟ್ಟಿದ್ದಾರೆ, ಕೇಂದ್ರ, ರಾಜ್ಯದ ಮಾನದಂಡ ಏನು ಅನ್ನೋದನ್ನ ಚರ್ಚೆ ಮಾಡಬೇಕು, ರೈತರಿಗೆ ನ್ಯಾಯ ಸಿಗಬೇಕು ಅನ್ನೋದ್ರಲ್ಲಿ ನಾನೂ ಒಬ್ಬ, ನಾನು ಸಕ್ಕರೆ ಮಂತ್ರಿ ಇದ್ದಾಗ ಸಭೆ ಕರೆದು FRP ದರ ನಿಗದಿ ಮಾಡಿದ್ದೆ, ಸಕ್ಕರೆ ಕಂಪನಿ ಮಾಲೀಕರನ್ನ ಕರೆದು ಮಾತಾಡಿದ್ದೆ, ದರ ನಿಗದಿ ಮಾಡುವ ಆ್ಯಕ್ಟ್ ನ್ನ ಜಾರಿ ಮಾಡಿದ್ದೆ ಎಂದರು.
ಸಕ್ಕರೆ ಮಂತ್ರಿ ರುದ್ರಪ್ಪ ನಮ್ಮ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಯಾವ ಅಧಿಕಾರವೂ ಇಲ್ಲ ಅಂತಾರೆ, ಕಾಯ್ದೆ ಸ್ವಲ್ಪ ತೆಗೆದು ನೋಡಿ, ತೂಕದಲ್ಲಿ ಲೋಪ ಆದ್ರೆ ಕ್ರಮ ಕೈಗೊಳ್ಳೋದಕ್ಕೆ ಅಧಿಕಾರ ಕೊಟ್ಟಿದ್ದಿದ್ದೇವೆ, ಈ ಎಲ್ಲ ಅಧಿಕಾರವನ್ನ ಸಿಎಂ, ಸಕ್ಕರೆ ಮಂತ್ರಿ, ಉಳಿದ ಮಂತ್ರಿಗಳು ತೆಗೆದು ನೋಡಬೇಕಲ್ಲ, ಕೇಂದ್ರ ಸರ್ಕಾರ MSP ದರ ನಿಗದಿ ಮಾಡಬೇಕಿದೆ, ರೈತರಿಗೆ ಯೋಗ್ಯ ದರ ಕೊಡಬೇಕಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದರು.