• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಸಿದ್ದರಾಮಯ್ಯ ಪದಚ್ಯುತಿಗೆ ಆ ನೀಲಿಕಣ್ಣಿನ ಮಂತ್ರಿಯೇ ಕಾರಣ, ಆತ ಬಲಿತ ದಲಿತ : ಹೆಚ್‌ಡಿಕೆ ಆರೋಪ

ಸಿದ್ದರಾಮಯ್ಯ ಪದಚ್ಯುತಿಗೆ ಆ ನೀಲಿಕಣ್ಣಿನ ಮಂತ್ರಿಯೇ ಕಾರಣ, ಆತ ಬಲಿತ ದಲಿತ : ಹೆಚ್‌ಡಿಕೆ ಆರೋಪ

ಸಿಂಗ್‌ ಆಪರೇಷನ್‌ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ, ಕೇಂದ್ರ ಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದು, ನೀಲಿಕಣ್ಣಿನ ಮಂತ್ರಿ ಅಂತ ಕಿಡಿಕಾರಿದ್ದಾರೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ...

Written ByKrishna NK
Published: Oct 15, 2026, 04:10 PM IST|Updated: Oct 15, 2026, 04:16 PM IST
joinshare
ಸಿದ್ದರಾಮಯ್ಯ ಪದಚ್ಯುತಿಗೆ ಆ ನೀಲಿಕಣ್ಣಿನ ಮಂತ್ರಿಯೇ ಕಾರಣ, ಆತ ಬಲಿತ ದಲಿತ : ಹೆಚ್‌ಡಿಕೆ ಆರೋಪ
Image Credit: HDK news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ವಿರೋಧದ ನಡುವೆಯೂ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ... ಮಂಡ್ಯ ರೈತರ ತೀವ್ರ ವಿರೋಧ

ವಿರೋಧದ ನಡುವೆಯೂ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ... ಮಂಡ್ಯ ರೈತರ ತೀವ್ರ ವಿರೋಧ

2

‘ನಾನು ಮದುವೆಯಾಗಿಲ್ಲ ಅಂದಿದ್ರೆ ಕಾವ್ಯ ನನ್ನ ಪತಿಯನ್ನೇ ಮದುವೆಯಾಗ್ತಿದ್ರಂತೆ’: ನಟಿ ಸಂಗೀತಾ ಭಟ್

3

ಮುಖ್ಯಮಂತ್ರಿ ಡಿಕೆಶಿ, ಒಬ್ಬ ಕೆಟ್ಟ ಪತ್ರಕರ್ತ ಹೂಡಿದ ಸಂಚಿಗೆ ಸಿದ್ದರಾಮಯ್ಯ ಬಲಿ : ಹೆಚ್‌ಡಿಕೆ ಆರೋಪ

4

ಸೋತ ಕ್ಷೇತ್ರದಲ್ಲಿ ಗೆದ್ದು ಇತಿಹಾಸ ಸೃಷ್ಟಿಸಬೇಕು, ಗೆದ್ದ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು: ಬಿ.ಕೆ. ಹರಿಪ್ರಸಾದ್ ಕರೆ

5

ರೂಲ್ಸ್ ಬ್ರೇಕ್ ಮಾಡಿದ ಆಸಿಯಾ.. ಒಪ್ಪಿಕೊಳ್ಳದೇ ಬಿಗ್‌ ಬಾಸ್‌ ಮೇಲೆಯೇ ತಪ್ಪು ಹೊರೆಸಿದ ನಟಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್‌ ಆಪರೇಷನ್‌ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಮತ್ತು ಗೃಹ ಸಚಿವ ಪ್ರಿಯಾಂಕ ಖರ್ಗೆ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿರುವ ಹೆಚ್.ಡಿ. ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ನೀಲಿಕಣ್ಣಿನ ಮಂತ್ರಿ ಪ್ರಿಯಾಂಕ ಖರ್ಗೆ ಕಾರಣರಾಗಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನಟ್ಟುತ್ತಿರುವ ಪ್ರಿಯಾಂಕ ಖರ್ಗೆ ಗೃಹಮಂತ್ರಿ ಹುದ್ದೆಗೆ ನಾಲಾಯಕ್ ಎಂದು ಟೀಕಿಸಿದ್ದಾರೆ.

ದಲಿತರ ಹೆಸರಿನಲ್ಲಿ ಲೂಟಿ ಮಾಡುತ್ತಿರುವ 'ಬಲಿತ ದಲಿತ' ಎಂದು ಹರಿಹಾಯ್ದಿರುವ ಅವರು, ಧಮ್ ಇದ್ದರೆ ತಮ್ಮ ಮೀಸಲು ಕ್ಷೇತ್ರವನ್ನು ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು ಸಾಮಾನ್ಯ ಕ್ಷೇತ್ರದಿಂದ ಗೆದ್ದುಬರಲಿ ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, ಕೆಪಿಎಸ್ಸಿ ಮತ್ತು ಸ್ಟಿಂಗ್ ವಿಷಯ ಪ್ರಸ್ತಾಪಿಸಿದ ಕೂಡಲೇ ಎಷ್ಟು ಕಡೆ ಓಡಾಟ ನಡೆಸಿದ್ದೀರಿ ಎಂಬುದು ತಮಗೆ ತಿಳಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ಕಾರಣನಾದ ನೀಲಿಕಣ್ಣಿನ ಮಂತ್ರಿ @PriyankKharge, ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿದ ನೀವು ಗೃಹಮಂತ್ರಿ ಹುದ್ದೆಗೆ ನಾಲಾಯಕ್. ಸಿದ್ದಾರ್ಥ, ಡಾ.ಅಂಬೇಡ್ಕರ್ ಹೆಸರಿನಲ್ಲಿ ಲೂಟಿ ಮೇಲೆ ಲೂಟಿ ಮಾಡಿದ 'ಬಲಿತ ದಲಿತ'ನೇ, ನಿಮ್ಮ ಮೀಸಲು ಕ್ಷೇತ್ರವನ್ನು ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬನ್ನಿ. ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಇನ್ನೆಷ್ಟು ವರ್ಷ ದಲಿತರ ಹೆಸರಿನಲ್ಲಿ ಅಧಿಕಾರ? ಅಸಲಿ ದಲಿತರಿಗೆ ಅಧಿಕಾರ ಕೊಡಿ. ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತು. ಓಡುವುದು ನನ್ನ ಜಾಯಮಾನವಲ್ಲ. ನಾನು ಕೆಪಿಎಸ್ಸಿ, ಸ್ಟಿಂಗ್ ವಿಷಯ ಪ್ರಸ್ತಾಪಿಸಿದ ಕೂಡಲೇ ಎಷ್ಟು ಕಡೆ ರನ್ನಿಂಗ್ ರೇಸ್ ಮಾಡಿದ್ದೀರಿ ಎಂದು ನನಗೆ ಗೊತ್ತಿದೆ. ಅಂಗಲಾಚುವವನಲ್ಲ ಈ ಕುಮಾರಸ್ವಾಮಿ. ನಿಮ್ಮ ಪೊಲೀಸ್ ಕಮಿಷನರ್ ಬಳಿ ಏನು ಹೇಳಿದ್ದೇನೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಪಕ್ಷದ ಹಿರಿಯ ನಾಯಕನನ್ನು ಸ್ಟಿಂಗ್ ಮಾಡಿದ ನಟೋರಿಯಸ್ ಸ್ಟಿಂಗ್'ಪಿನ್ ನನ್ನೇ ಬಂಧಿಸಲು ಯೋಗ್ಯತೆ ಇಲ್ಲ ನಿಮಗೆ. ಅವನು ಬಂದು ನಿಮ್ಮ ಡಿಸಿಪಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾನೆ, ನಿಮ್ಮ ಇಲಾಖೆಯ ನಿವೃತ್ತ IPS ಅಧಿಕಾರಿಗೆ ಕೊಲೆ ಬೆದರಿಕೆ ಹಾಕ್ತಾನೆ, ನಿಮ್ಮ ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಮಾಡಿ ಹಫ್ತಾ ವಸೂಲಿ ಮಾಡ್ತಾನೆ. ಅವನನ್ನು ಹಿಡಿದು ಸೆದೆಬಡಿಯುವುದು ಬಿಟ್ಟು ಪುಂಗಿ ಬಿಡ್ತಾ ಇದ್ದೀರಿ. ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್ ನಲ್ಲಿ ನೀವು ಒಂದು ಭಾಗ ಎಂಬುದು ನನಗೆ ಗ್ಯಾರಂಟಿ ಆಗಿದೆ. #KarnatakaStingSamrat #KarnatakaStingpin @JanataDal_S

— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) October 15, 2026

ಸ್ಟಿಂಗ್ ಪಿನ್ ಬಂಧಿಸಲು ಯೋಗ್ಯತೆ ಇಲ್ಲ
ತಮ್ಮ ಪಕ್ಷದ ನಾಯಕನನ್ನು ಸ್ಟಿಂಗ್ ಮಾಡಿದ ನಟೋರಿಯಸ್ ಸ್ಟಿಂಗ್ ಪಿನ್ ಅನ್ನು ಬಂಧಿಸಲು ಗೃಹ ಇಲಾಖೆಗೆ ಯೋಗ್ಯತೆ ಇಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿ ಬಂದು ಡಿಸಿಪಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾನೆ, ನಿವೃತ್ತ ಐಪಿಎಸ್ ಅಧಿಕಾರಿಗೆ ಕೊಲೆ ಬೆದರಿಕೆ ಹಾಕುತ್ತಾನೆ ಮತ್ತು ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಮಾಡಿ ಹಫ್ತಾ ವಸೂಲಿ ಮಾಡುತ್ತಾನೆ ಎಂದು ಆರೋಪಿಸಿದ್ದಾರೆ.

ಅಂಥವನನ್ನು ಹಿಡಿದು ಸೆದೆಬಡಿಯುವುದನ್ನು ಬಿಟ್ಟು ಪುಂಗಿ ಬಿಡುತ್ತಿದ್ದಾರೆ ಎಂದು ಟೀಕಿಸಿರುವ ಅವರು, ಈ ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್‌ನಲ್ಲಿ ಗೃಹ ಸಚಿವರೂ ಒಬ್ಬರು ಎಂಬುದು ತಮಗೆ ಗ್ಯಾರೆಂಟಿ ಆಗಿದೆ ಎಂದಿದ್ದಾರೆ. ಈ ನಡುವೆ, ಡಿ.ಕೆ. ಶಿವಕುಮಾರ್ ಅವರನ್ನು ಕರ್ನಾಟಕದ "ಸ್ಟಿಂಗ್ ಸಾಮ್ರಾಟ" ಎಂದು ಕರೆದಿರುವ ಹೆಚ್.ಡಿ. ಕುಮಾರಸ್ವಾಮಿ, ರಾಕೇಶ್ ಶೆಟ್ಟಿ ಅವರನ್ನು ಕರ್ನಾಟಕದ "ಸ್ಟಿಂಗ್ ಪಿನ್" ಎಂದು ಬಣ್ಣಿಸಿದ್ದಾರೆ.

Add Zee News as a Preferred Source
TAGS:
Karnataka Politics