SOCIAL MEDIA

Newsletter

PARTNER SITES
Select Language Select State

FDA ದಾಳಿಯಲ್ಲಿ ಖಾಸಗಿ ಆಸ್ಪತ್ರೆ, ಮೆಡಿಕಲ್ ಸ್ಟೋರ್‌ಗಳ ಕರ್ಮಕಾಂಡ ಬಯಲು.. ರೋಗಿಗಳೇ ಹುಷಾರ್!‌

ಎಫ್‌ಡಿಎ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಖಾಸಗಿ ಆಸ್ಪತ್ರೆಗಳು ಹಾಗೂ ಮೆಡಿಕಲ್‌ ಸ್ಟೋರ್‌ಗಳ ಅಕ್ರಮ ಲೂಟಿ ಬಯಲಾಗಿದ್ದು ರೋಗಿಗಳಿಗೆ ದುಪ್ಪಟ್ಟು ದರದಲ್ಲಿ ಔಷಧಿಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

Written By Yashaswini V
Published: Oct 13, 2026, 11:28 AM IST | Updated: Oct 13, 2026, 11:35 AM IST
Image Credit: AI (ಸಾಂದರ್ಭಿಕ ಚಿತ್ರ)
Join

ಖಾಸಗಿ ಆಸ್ಪತ್ರೆಗಳು ಹಾಗೂ ಮೆಡಿಕಲ್‌ ಸ್ಟೋರ್‌ಗಳ ಮೇಲೆ ಎಫ್‌ಡಿಎ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಮೆಡಿಕಲ್‌ ಸ್ಟೋರ್‌ ಮಾಲೀಕರು ಖಾಸಗಿ ಆಸ್ಪತ್ರೆಗಳೊಂದಿಗೆ ಕೈ ಜೋಡಿಸಿ ವೈದ್ಯಕೀಯ ಉಪಕರಣಗಳು ಹಾಗೂ ಹೈ-ರಿಸ್ಕ್‌ ಔಷಧಿಗಳ ಮೇಲೆ ನಡೆಸಲಾಗುತ್ತಿರುವ ಹಗಲು ದರೋಡೆಯನ್ನು ಬಯಲು ಮಾಡಿದ್ದಾರೆ.

ಕ್ಯಾನ್ಸರ್ ಆಯ್ತು ಈಗ ಹೈ ರಿಸ್ಕ್ ಖಾಯಿಲೆಗಳ ಔಷಧಿಗಳೂ ಕೂಡ ದುಪ್ಪಟ್ಟು ಬೆಲೆಗೆ ಮಾರಾಟ:
ಹೌದು, ಖಾಸಗಿ ಆಸ್ಪತ್ರೆ, ಮೆಡಿಕಲ್ ಸ್ಟೋರ್‌ಗಳ ಅಕ್ರಮ ಬಯಲು ಮಾಡಿರುವ ಎಫ್‌ಡಿಎ ಅಧಿಕಾರಿಗಳು, ಕ್ಯಾನ್ಸರ್ ಬಳಿಕ ಇದೀಗ ಹೈ ರಿಸ್ಕ್ ಖಾಯಿಲೆಗಳ ಔಷಧಿಗಳನ್ನು ಕೂಡ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ಹೃದಯ, ಕಿಡ್ನಿ, ಲಿವರ್, ಬಿಪಿ, ನ್ಯುಮೋನಿಯಾ ರೀತಿಯ ಗಂಭೀರ ಖಾಯಿಲೆಗಳ ಔಷಧಿಗಳನ್ನು ಆಸ್ಪತ್ರೆಗಳು ಹಾಗೂ ಮೆಡಿಕಲ್‌ ಸ್ಟೋರ್‌ಗಳು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಎಫ್‌ಡಿಎ ಕಮೀಷನರ್ ಶ್ರೀನಿವಾಸ್ ನೇತೃತ್ವದ ತಂಡ ಖಾಸಗಿ ಆಸ್ಪತ್ರೆಗಳು ಹಾಗೂ ಮೆಡಿಕಲ್‌ ಸ್ಟೋರ್‌ಗಳ ಮೇಲೆ ನಡೆಸಿದ ದಾಳಿಯಲ್ಲಿ ಹೈ-ರಿಸ್ಕ್ ಖಾಯಿಲೆಗಳು ಮತ್ತು ವೈದ್ಯಕೀಯ ಸಾಮಗ್ರಿಗಳಿಗೆ ಬಳಸುವ ಔಷಧಿ ದುಪ್ಪಟು ದರಕ್ಕೆ ಮಾರಾಟ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ಅಕ್ರಮ ಬಯಲಿಗೆ ಬಂದಿದೆ.

ದುಬಾರಿ ಎಂಅರ್‌ಪಿ ನಿಗದಿ ಪಡಿಸಿ ರೋಗಿಗಳಿಂದ ಲೂಟಿ!
ಐಸಿಯು ರೋಗಿಯ ಗ್ಲೌಸ್, ಮಾಸ್ಕ್ , ಯೂರಿನ್ ಬ್ಯಾಗ್, ಐವಿ ಡ್ರಿಪ್ ಕೂಡ ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದ್ದು ಎಲ್ಲಾ ವೈದ್ಯಕೀಯ ಉಪಕರಣಗಳು ಹಾಗೂ ಹೈ-ರಿಸ್ಕ್‌ ಔಷಧಗಳನ್ನು ಲ್ಯಾಂಡಿಂಗ್ ವೆಚ್ಚಕ್ಕಿಂತ ದುಬಾರಿ ಎಂಆರ್‌ಪಿ ನಿಗದಿ ಪಡಿಸಿ ರೋಗಿಗಳ ಕಡೆಯವರಿಗೆ ಹಣ ವಸೂಲಿ ಮಾಡಲಾಗುತ್ತಿದೆ.

ಶೇ.60 ರಿಂದ 90 ಪಟ್ಟು ಹೆಚ್ಚಿನ ಬೆಲೆಯಲ್ಲಿ ಔಷಧಿ ಮಾರಾಟ:
ಹೈ-ರಿಸ್ಕ್ ಖಾಯಿಲೆಯ 600 ಔಷಧಿಗಳನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದ್ದು, ಶೇ.60 ರಿಂದ 90 ಪಟ್ಟು ಹೆಚ್ಚು ದರ ನಿಗದಿ ಪಡಿಸಿ ರೋಗಿಗಳಿಂದ ಭಾರೀ ಸುಲಿಗೆ ಮಾಡಲಾಗುತ್ತಿದೆ. 180 ದುಬಾರಿ ಔಷಧಿಗಳು, 780 ವೈದ್ಯಕೀಯ ಸಾಮಾಗ್ರಿಗಳ ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಎಫ್‌ಡಿಎ ಅಧಿಕಾರಿಗಳ ತನಿಖೆಯಲ್ಲಿ ತಿಳಿದುಬಂದಿದೆ.

ಔಷಧಿಗಳ ಮೂಲ ಬೆಲೆ ತಿಳಿದರೆ ಆಗ್ತೀರಾ ಶಾಕ್!‌
ಖಾಸಗಿ ಆಸ್ಪತ್ರೆ, ಮೆಡಿಕಲ್ ಸ್ಟೋರ್‌ಗಳ ಕರ್ಮಕಾಂಡ ಬಯಲು ಮಾಡಿದ FDA ಅಧಿಕಾರಿಗಳು ಆಸ್ಪತ್ರೆಯಲ್ಲಿ ರೋಗಿಗೆ ಬಳಸುವ ವೈದ್ಯಕೀಯ ಉಪಕರಣಗಳ ಬೆಲೆ ಕೂಡ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿರುವುದನ್ನು ಬಯಲು ಮಾಡಿದ್ದಾರೆ.

ಐಸಿಯು ರೋಗಿಗೆ ನೀಡುವ ಮಾಸ್ಕ್, ಗ್ಲೌಸ್, ಸಿರಿಂಜ್, ಸ್ಟಿಚಿಂಗ್‌ ಥ್ರೆಡ್‌, ಐವಿ ಸೆಟ್ ಗಳನ್ನು ಕೂಡ ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಮೂಲ ಬೆಲೆ ಮಾರಾಟದ ಬೆಲೆ ತಿಳಿದರೆ ನೀವು ನಿಜಕ್ಕೂ ಶಾಕ್ ಆಗ್ತೀರಾ.

1. ಹ್ಯಾಂಡ್ ಗ್ಲೌಸ್ 
ಲ್ಯಾಂಡಿಂಗ್ ಕಾಸ್ಟ್ - 2 ರೂ. (ಮೂಲ ಬೆಲೆ)
MRP - 151 ರೂ. (ಮಾರಾಟದ ಬೆಲೆ)
71% ಲಾಭ

2. ಆಕ್ಸಿಜನ್ ಮಾಸ್ಕ್ 
ಲ್ಯಾಂಡಿಂಗ್ ‌ಕಾಸ್ಟ್ - 20 ರೂ‌. (ಮೂಲ ಬೆಲೆ)
MRP - 300 ರಿಂದ 400 ರೂ.

3. ಹೊಲಿಗೆ ದಾರ/ಸ್ಟಿಚಿಂಗ್‌ ಥ್ರೆಡ್
ಲ್ಯಾಂಡಿಂಗ್ ‌ಕಾಸ್ಟ್ - 491ರೂ‌. (ಮೂಲ ಬೆಲೆ)
MRP - 7800 ರೂ. (ಮಾರಾಟದ ಬೆಲೆ)
15 ಪಟ್ಟು ಹೆಚ್ಚಳ

4. ಐವಿ ಗ್ಲುಕೋಸ್ ಡ್ರಿಪ್ 
ಲ್ಯಾಂಡಿಂಗ್ ‌ಕಾಸ್ಟ್ - 8 ರೂ‌.‌ (ಮೂಲ ಬೆಲೆ)
MRP - 480 ರೂ. (ಮಾರಾಟದ ಬೆಲೆ)
59% ಪಟ್ಟು ಹೆಚ್ಚಳ

5. ನೆಬ್ಲೆಸರ್ ಮಾಸ್ಕ್ 
ಲ್ಯಾಂಡಿಂಗ್ ‌ಕಾಸ್ಟ್ - 32 ರೂ‌. (ಮೂಲ ಬೆಲೆ)
MRP - 642 ರೂ. (ಮಾರಾಟದ ಬೆಲೆ)

6. ಐವಿ ಕ್ಯಾನ್ಯಲ್ ಕಿಟ್ 
ಲ್ಯಾಂಡಿಂಗ್ ‌ಕಾಸ್ಟ್ - 713 ರೂ‌. (ಮೂಲ ಬೆಲೆ)
MRP - 1404 ರೂ. (ಮಾರಾಟದ ಬೆಲೆ)

7. ಯೂರಿನ್ ಬ್ಯಾಗ್ 
ಲ್ಯಾಂಡಿಂಗ್ ‌ಕಾಸ್ಟ್ - 30 ರೂ.‌ (ಮೂಲ ಬೆಲೆ)
MRP - 400 ರೂ. (ಮಾರಾಟದ ಬೆಲೆ)
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES