ಮಂಡ್ಯ : ಆಕೆ ರೀಲ್ಸ್ ಸುಂದರಿ. ಅವರದು ಒಂದು ಸುಂದರ ಕುಟುಂಬ, ಆಕೆ ನೋಡಲು ಅಂದ, ಚಂದಗಾತಿಯಾಗಿದ್ದಳು. ತನ್ನ ಗಂಡ ಮಕ್ಕಳ ಜೊತೆ ಖುಷಿಯಾಗಿ ಬದುಕುಕಟ್ಟಿಕೊಂಡು ಸಂಸಾರ ನಡೆಸ್ತಿದ್ಳು. ಮದುವೆಯಾಗಿದ್ರು ಮತ್ತೊರ್ವ ಯುಕನ ಜೊತೆ ಈಕೆಗೆ ಪ್ರೀತಿ ಮೂಡಿತ್ತು. ಆದ್ರೆ ಅದೆನಾಯ್ತೋ ಏನೋ ಗೊತ್ತಿಲ್ಲ, ಇಂದು ಈ ಇಬ್ಬರು ಪ್ರೇಮಿಗಳ ಮೃತ ದೇಹ ಮಂಡ್ಯದ ರೈಲ್ವೆ ಅಳಿಗಳ ಮೇಲೆ ಪತ್ತೆಯಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಪ್ರೀತಿಯ ಹೆಸರಿನಲ್ಲಿ ದುರಂತ ಅಂತ್ಯ ಕಂಡ ಇಬ್ಬರು ಜೀವಗಳು. ರೈಲ್ವೆ ಹಳಿಯಲ್ಲಿ ಛಿದ್ರಗೊಂಡ ಬದುಕು. ಹೌದು.! ಮಂಡ್ಯದಲ್ಲಿ ರೈಲ್ವೆ ಹಳಿ ಮೇಲೆ ಪ್ರೇಮಿಗಳಿಬ್ಬರ ಮೃತದೇಹ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಪರಿಚಯವಾಗಿದ್ದ ಇಬ್ಬರು ಇದೀಗ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮದುವೆಯಾಗಿದ್ರು ಪ್ರೀತಿ ಪ್ರೇಮ ಅಂತ ಮತ್ತೊರ್ವ ಯುವಕನ ಸಹವಾಸ ಮಾಡಿದ ಗೃಹಿಣಿ ದಾರುಣವಾಗಿ ಸಾವನ್ನಪ್ಪಿದ್ದಾಳೆ.
ಅಂದಾಗೆ ಈ ರೀಲ್ಸ್ ನಲ್ಲಿ ಅಭಿನಯ ಮಾಡ್ತಿರೋ ಈಕೆಯ ಹೆಸ್ರು ಸಹನ ಅಂತ. ನೋಡೋಕ್ ಚೆನ್ನಾಗೆ ಇದ್ಲು. ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಪತಿ ಮತ್ತು ಇಬ್ಬರು ಮಕ್ಕಳ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ಲು. ಆದ್ರೆ ಈ ನಡುವೆ ಮೇಲಿನ ಮನೆಯ ಯುವಕ ರಾಹುಲ್ ಜೊತೆ ಪ್ರೀತಿ ಶುರುವಾಗಿತ್ತು. ಇಬ್ಬರ ಪ್ರೀತಿ ಎರಡೂ ಕುಟುಂಬಕ್ಕೆ ಗೊತ್ತಾಗ್ತಿದ್ದಂತೆ ಸಹನಾಳ ಮನೆ ಕಾಲಿ ಕೂಡ ಮಾಡಿಸಿದ್ದರು. ಆದ್ರೆ ಮನೆ ಬದಲಾದ್ರೂ, ಇವ್ರ ಮನಸ್ಸು ಮಾತ್ರ ಬದಲಾಗಿರ್ಲಿಲ್ಲ.
ಬೆಂಗಳೂರು ಮೂಲದ ಸಹನಾ (25) ಹಾಗೂ ರಾಹುಲ್ (30) ಮೃತರಾಗಿದ್ದು. ಇಬ್ಬರೂ ಬೆಂಗಳೂರಿನಲ್ಲಿ ಪರಿಚಯವಾಗಿದ್ದರು. ರಾಹುಲ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸಹನಾಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ರು. ಸಹನಾ ಮಂಡ್ಯದ ಗುನ್ನನಾಯಕನಹಳ್ಳಿಯಲ್ಲಿರುವ ಅಜ್ಜಿ ಮನೆಗೆ ಬಂದಿದ್ದಳು. ತನ್ನ ಮತ್ತು ರಾಹುಲ್ ನಡುವಿನ ಸಂಬಂಧದ ವಿಚಾರವನ್ನು ಅಜ್ಜಿಯ ಬಳಿಯೂ ಸಹನಾ ಹೇಳಿಕೊಂಡಿದ್ದಳು. ಕುಟುಂಬದ ಹಿರಿಯರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದರು ಜೊತೆಗೆ ಗಂಡನ ಮನೆಗೆ ಕಳುಹಿಸಲು ತೀರ್ಮಾನಿಸಿದ್ರು. ಅಷ್ಟರಲ್ಲಿ ಈ ದುರಂತ ನಡೆದಿದೆ.
ಇನ್ನು ರಾಹುಲ್ ಜೊತೆ ಪ್ರೀತಿಗೆ ಬಿದ್ದ ಸಹನ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡ್ತಾ ಪ್ರೇಮಲೋಕದಲ್ಲಿ ತೇಲಾಡ್ತಿದ್ಲು. ಹೀಗಿರುವಾಗ್ಲೆ ಕೆಲ ದಿನಗಳ ಹಿಂದೆ ಪತಿ ಜೊತೆ ಮುನಿಸಿಕೊಂಡಿದ್ದ ಸಹನ, ಮಂಡ್ಯದ ಗುನ್ನಾಯಕನಹಳ್ಳಿಯ ತಾಯಿ ಮನೆ ಸೇರಿಕೊಂಡಿದ್ಲು. ಆದ್ರೆ ಅದೇನಾಯ್ತೋ ಏನೋ ಗೊತ್ತಿಲ್ಲ ಇಂದು ಸಹನ ಮತ್ತೆ ರಾಹುಲ್ ಮೃತ ದೇಹ ಮಂಡ್ಯದ ಹೊರವಲಯದ ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿದೆ.
ಇನ್ನು ಮತ್ತೊಂದು ಕಡೆ ಸಾವಿನ ಸುದ್ದಿ ತಿಳಿದ ಇಬ್ಬರು ಕುಟುಂಬಸ್ಥರು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಆಗಮಿಸಿ ಕಣ್ಣೀರು ಹಾಕಿದ್ರು. ಸದ್ಯ ಪ್ರಕರಣ ಕುರಿತು ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಂಡ್ಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ಇಬ್ಬರ ಸಾವಿನ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪೊಲೀಸ್ ತನಿಖೆಯಿಂದಷ್ಟೇ ಸಾವಿನ ಹಿಂದಿನ ಸಂಪೂರ್ಣ ಸತ್ಯ ಹೊರಬರಬೇಕಿದೆ.