SOCIAL MEDIA

Newsletter

PARTNER SITES
Select Language Select State

SIR ಪರಿಷ್ಕರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ: 'ಪಾಕ್' ಪ್ರಜೆ ಸೇರಿ 716 ವಿದೇಶಿಗರು ಪತ್ತೆ

ಒಂದೆಡೆ ಎಸ್‌ಐಆರ್‌ ಬಳಿಕ ರಾಜ್ಯ ಮತದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ ಆಗಿರುವ ಮಧ್ಯೆ ಇದೀಗ ರಾಜ್ಯದಲ್ಲಿ ಪಾಕ್‌ ಪ್ರಜೆಯೂ ಸೇರಿದಂತೆ 716 ಮಂದಿ ವಿದೇಶಿಗರು ವೋಟರ್‌ ಐಡಿ ಹೊಂದಿದ್ದ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.

Written By Yashaswini V
Published: Oct 28, 2026, 10:21 AM IST | Updated: Oct 28, 2026, 10:23 AM IST
Image Credit: Image Credit: AI
Join

ಬೆಂಗಳೂರಿನ ಮತದಾರರ ಅಂತಿಮ ಪಟ್ಟಿ ಪ್ರಕಟಗೊಂಡಿದ್ದು ರಾಜ್ಯ ರಾಜಧಾನಿಯಲ್ಲಿ ಲಕ್ಷಾಂತರ ಮಂದಿ ಮತದಾರರನ್ನು ಈ ಪಟ್ಟಿಯಿಂದ ಕೈಬಿಟ್ಟಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಏತನ್ಮಧ್ಯೆ, ಮತದಾರರ ಪರಿಷ್ಕರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದ್ದು ರಾಜ್ಯದಲ್ಲಿ ಪಾಕಿಸ್ತಾನದ ಪ್ರಜೆಯೂ ಸೇರಿದಂತೆ 716 ಮಂದಿ ವಿದೇಶಿಗರು ಪತ್ತೆ ಆಗಿದ್ದಾರೆ.

ಹೌದು, ಎಸ್‌ಐಆರ್‌ ಬಳಿಕ ಬೆಂಗಳೂರಿನಲ್ಲಿ ಮತದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ ಆಗಿದೆ. ಬೆಂಗಳೂರಿನಲ್ಲಿ ಎಸ್‌ಐಆರ್‌ ಮೊದಲು 1.03 ಕೋಟಿಯಷ್ಟಿದ್ದ ಮತದಾರ ಸಂಖ್ಯೆ ಎಸ್‌ಐಆರ್‌ ಬಳಿಕ 59.08 ಲಕ್ಷಕ್ಕೆ ಕುಸಿದಿದೆ. ಸರಳವಾಗಿ ಹೇಳುವುದಾದರೆ, ಬರೋಬ್ಬರಿ 43.92 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ.

ರಾಜ್ಯದಲ್ಲಿ 716 ವಿದೇಶಿ ಪ್ರಜೆಗಳ ಪತ್ತೆ:
ಅಂತಿಮ ಮತದಾರರ ಪಟ್ಟಿಯಲ್ಲಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ 1.03 ಕೋಟಿ ಮತದಾರರಲ್ಲಿ ಕೇವಲ 59,08,151 ಮತದಾರರು ಅಗತ್ಯ ಮಾಹಿತಿ ನೀಡಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಳಿಸಿಕೊಂಡಿದ್ದಾರೆ. ಆದರೆ, ಈ ಮಧ್ಯೆ, ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ವಿದೇಶಿ ಪ್ರಜೆಗಳ ಅಕ್ರಮ ಸೇರ್ಪಡೆ ಬಯಲಾಗಿದ್ದು, ರಾಜ್ಯದಲ್ಲಿ 716 ವಿದೇಶಿ ಪ್ರಜೆಗಳಿರುವ ಬಗ್ಗೆ ತಿಳಿದುಬಂದಿದೆ.

ಈ ಕುರಿತಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದ್ದು, ಬೆಂಗಳೂರು ಉತ್ತರದಲ್ಲೇ ಅತಿ ಹೆಚ್ಚು ಅಂದರೆ 545 ನೇಪಾಳಿ ಪ್ರಜೆಗಳು ವಾಸವಿದ್ದು, ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಪ್ರಜೆಗಳೂ ರಾಜ್ಯದಲ್ಲಿದ್ದಾರೆ ಎಂದು ವರದಿ ಆಗಿದೆ.

ಇವರಲ್ಲಿ 24 ಮಂದಿ ಅಮೇರಿಕಾ, 8 ಮಂದಿ ಆಸ್ಪ್ರೇಲಿಯಾ, ಇಬ್ಬರು ಕೆನಡಾ, ಯುಎಇ ಸೇರಿ ಇತರ ರಾಷ್ಟ್ರಗಳ 583 ವಿದೇಶಿ ಪ್ರಜೆಗಳು ರಾಜ್ಯದಲ್ಲಿ ಪತ್ತೆ ಆಗಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ವಿದೇಶಿ ಪ್ರಜೆಗಳು ಪತ್ತೆ ಆಗಿದ್ದರೆ ರಾಜ್ಯ ರಾಜಧಾನಿಯ ಹೊರತಾಗಿ ದಕ್ಷಿಣ ಕನ್ನಡ, ಬಾಗಲಕೋಟೆ, ಗದಗ, ಉಡುಪಿ, ಬೆಳಗಾವಿ, ಹಾಸನ, ಜಿಲ್ಲೆಗಳಲ್ಲಿ ವಿದೇಶಿ ಪ್ರಜೆಗಳಿರುವುದನ್ನು ಚುನಾವಣಾ ಆಯೋಗ ಪತ್ತೆ ಮಾಡಿದೆ.

ಎನ್ಯುಮೆರೇಷನ್‌ ಫಾರ್ಮ್‌ ಭರ್ತಿ ಮಾಡುವಾಗ ಮಾಹಿತಿ ನೀಡುವಲ್ಲಿ ವಿಫಲವಾಗಿರುವುದು ಏಕೆ? ವಿದೇಶಿಗರು ರಾಜ್ಯದ ಮತಪಟ್ಟಿಗೆಯಲ್ಲಿ ಸೇರ್ಪಡೆ ಆಗಿದ್ದಾದರೂ ಹೇಗೆ? ಎಂಬ ಬಗ್ಗೆ ತನಿಖೆ ನಡೆಸಿ ಚುನಾವಣಾ ಆಯೋಗ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ನಕಲಿ ಮತದಾರರನ್ನ ಪತ್ತೆ ಹಚ್ಚಲು ನಡೆಸಲಾದ ಎಸ್‌ಐಆರ್‌ ಪ್ರಕ್ರಿಯೆ ವೇಳೆ ರಾಜ್ಯದಲ್ಲಿ ನಕಲಿ ಮತದಾರರನ್ನ ಪತ್ತೆ ಮಾಡಿದ ಆಯೋಗ, ನಕಲಿ ಮತದಾರರಿಗೆ ಈ ರೀತಿ ಮತದಾನದ ಹಕ್ಕು ಸಿಕ್ಕಿದ್ದು ಹೇಗೆ ಎಂಬುದನ್ನೂ ಕೂಡ ಪತ್ತೆ ಹಚ್ಚಬೇಕು. ರಾಜ್ಯ ಮತದಾರರ ಪಟ್ಟಿಯಲ್ಲಿ ವಿದೇಶಿಗರ ಕರಾಮತ್ತಿನ ಬಗ್ಗೆ ತನಿಖೆ ಮಾಡಬೇಕೆಂದು ಒತ್ತಾಯಿಸಲಾಗಿದೆ.

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES