SOCIAL MEDIA

Newsletter

PARTNER SITES
Select Language Select State

ಪತ್ನಿ ಜೊತೆಗೆ ಅಕ್ರಮ‌ ಸಂಬಂಧ, ಪ್ರಿಯಕರನ ಕೊ*ಲೆಗೈದ ಮಾಜಿ ಪತಿ

36ರ ಆಂಟಿ ಹಿಂದೆ ಬಿದ್ದ 26ರ ಯುವಕನಿಗೆ 45 ವರ್ಷದ ಮಾಜಿ ಗಂಡನಿಂದಲೇ ಮುಹೂರ್ತ... ಪತ್ನಿಯನ್ನ ಮದುವೆಗೆ ಕರೆದೊಯ್ದಿದ್ದ ಪ್ರಿಯಕರನ ಬರ್ಬರ ಹ*ತ್ಯೆ.

Written By Yashaswini V
Published: Sep 24, 2026, 03:43 PM IST | Updated: Sep 24, 2026, 03:45 PM IST
Join

ಅಕ್ರಮ ಸಂಬಂಧಕ್ಕೆ ನಡೆದ ಕೊ**ಲೆ ತಡವಾಗಿ ಬೆಳಕಿಗೆ ತಡವಾಗಿ ಬೆಳಕಿಗೆ ಬಂದಿದೆ.. ಆಂಟಿಯೊಬ್ಬಳ ಮಾಜಿ ಗಂಡನೇ ಪ್ರಿಯಕರನನ್ನು ಬರ್ಬರವಾಗಿ ಹ*ತ್ಯೆ ಮಾಡಿರುವ ಘಟನೆ ತುಮಕೂರು ನಗರದ ದಿಬ್ಬೂರು ಬಳಿಯ ಜನತಾ ಕಾಲೋನಿಯಲ್ಲಿ ನಡೆದಿದೆ. ಈ ಕುರಿತ ವರದಿ ಇಲ್ಲಿದೆ.

​ತುಮಕೂರು ನಗರದ ದಿಬ್ಬೂರು ಬಳಿಯ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿರುವ ಈ ದುರ್ಘಟನೆಯಲ್ಲಿ ಕೊ*ಲೆಯಾದ ಪ್ರಿಯಕರನ್ನು 26 ವರ್ಷದ ದಸ್ತಗೀರ್ ಎಂದು ಹೇಳಲಾಗಿದೆ.

ಏನಿದು ಘಟನೆ?
36ರ ಆಂಟಿ ಹಿಂದೆ ಬಿದ್ದಿದ್ದ 26ರ ಯುವಕನಿಗೆ ಆಂಟಿಯ ಮಾಜಿ ಪತಿಯೇ ಚಟ್ಟ ಕಟ್ಟಿದ್ದಾನೆ. ಹ*ತ್ಯೆಗೈದ ವ್ಯಕ್ತಿಯನ್ನು  45 ವರ್ಷದ ಗೌಸ್ ಎನ್ನಲಾಗಿದೆ. ಗೌಸ್ ಎಂಬಾತ ತನ್ನ ಇಬ್ಬರು ಮಕ್ಕಳನ್ನು ಮತ್ತು ಹೆಂಡತಿಯನ್ನು ಬಿಟ್ಟಿದ್ದ. ಆತನ ಮಾಜಿ ಪತ್ನಿ ಜೊತೆ ಮೃತ ದಸ್ತಗೀರ್ ಅಕ್ರಮ ಸಂಬಂಧ ಇಟ್ಕೊಂಡಿದ್ದ ಎಂದು ಆರೋಪಿಸಲಾಗಿದೆ.

ದಸ್ತಗೀರ್ ಯಾರು?
​ಸುಮಾರು ಎರಡು ವರ್ಷದ ಹಿಂದೆ ಗೌಸ್ ಜೊತೆ ದಸ್ತಗೀರ್ ಕೆಲಸ ಮಾಡುತ್ತಿದ್ದನು. ಈ ವೇಳೆ ಗೌಸ್ ನ 36 ವರ್ಷದ ಪತ್ನಿಯ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿತ್ತು, ಸ್ನೇಹದಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದ ಆಂಟಿ ಈ ಸಂದರ್ಭದಲ್ಲಿ ತನಗೆ ಕುಟುಂಬದಲ್ಲಿ ಪತಿಯಿಂದಲೇ ಅನುಭವಿಸುತ್ತಿದ್ದ ಕಿರುಕುಳದ ಬಗ್ಗೆ ದಸ್ತಗೀರ್ ಬಳಿ ಹೇಳಿಕೊಂಡಿದ್ದಳು. ಈ ಸಮಯದಲ್ಲಿ ದಸ್ತಗೀರ್‌ ಮತ್ತು ಮಹಿಳೆ ನಡುವೆ ಸಲಿಗೆ ಹೆಚ್ಚಾಯಿತು. ಇದುವೇ ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಲು ಕಾರಣವಾಗಿತ್ತು.

ಸುಮಾರು ಒಂದೂವರೆ ವರ್ಷಗಳ ಹಿಂದೆ ಆಂಟಿ ಪತಿ ಗೌಸ್‌ ಹಾಗೂ ಆತನ ಇಬ್ಬರೂ ಮಕ್ಕಳನ್ನು ಬಿಟ್ಟು ಪ್ರಿಯಕರ ದಸ್ತಗೀರ್‌ ಜೊತೆಗೆ ಪರಾರಿ ಆಗಿದ್ದಳು. ಬಳಿಕ ಮಾಜಿ ಗಂಡ ಗೌಸ್ ನಿಂದ ಮೂರು ಬಾರಿ ತಲಾಖ್ ಪಡೆದು, ದಸ್ತಗೀರ್ ಜೊತೆ ಪ್ರತ್ಯೇಕವಾಗಿ ವಾಸವಿದ್ದಳು. ಆದರೆ ಇತ್ತೀಚೆಗೆ ಮಹಿಳೆ ತನ್ನ ಮಕ್ಕಳನ್ನು ತನ್ನ ಜೊತೆ ಕರೆದೊಯ್ಯಲು ಪ್ಲಾನ್ ಮಾಡಿದ್ದೇ ಈ ದುರಂತಕ್ಕೆ ಅಸಲಿ ಕಾರಣವಾಗಿದೆ ಎಂದು ತಿಳಿದು ಬಂದಿದೆ.

​ಮಕ್ಕಳನ್ನು ತನ್ನಿಂದ ದೂರ ಮಾಡುತ್ತಿದ್ದಾಳೆ ಎಂದು ಆಕ್ರೋಶಗೊಂಡಿದ್ದ ಮಾಜಿ ಗಂಡ ಗೌಸ್, ಈ ತಿಂಗಳ 16ರಂದು ಮಾಜಿ ಪತ್ನಿಯ ಪ್ರಿಯಕರ ದಸ್ತಗೀರ್‌ ಕೊ*ಲೆಗೆ ಸ್ಕೆಚ್ ಹಾಕಿದ್ದ. ಇದರಂತೆ ದಿಬ್ಬೂರು ಜನತಾ ಕಾಲೋನಿಯ ಮನೆಗೆ ನುಗ್ಗಿದ ಗೌಸ್, ಮೊದಲು ಹೆಂಡತಿ ಮೇಲೆ ಚಾಕುವಿನಿಂದ ದಾಳಿ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಅವಳನ್ನು ರಕ್ಷಿಸಲು ಅಡ್ಡಬಂದ ಪ್ರಿಯಕರ ದಸ್ತಗೀರ್ ಮೇಲೆ ಮನಬಂದಂತೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ದಸ್ತಗೀರ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ  ಆತ ಸಾವನ್ನಪ್ಪಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ತುಮಕೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಕೊ*ಲೆ ಆರೋಪಿ ಗೌಸ್‌ನನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.‌

​ಒಟ್ಟಾರೆಯಾಗಿ, ವಯಸ್ಸಿನ ಅಂತರವನ್ನು ಲೆಕ್ಕಿಸದೆ ಅಕ್ರಮ ಸಂಬಂಧದ ಹಿಂದೆ ಬಿದ್ದ ಯುವಕನ ದುಸ್ಸಾಹಸ ಮತ್ತು ಹೆಂಡತಿ, ಮಕ್ಕಳನ್ನು ಕಳೆದುಕೊಂಡ ಗಂಡನ ಆಕ್ರೋಶ ಅಂತಿಮವಾಗಿ ಒಂದು ಕೊ*ಲೆಯಲ್ಲಿ ಅಂತ್ಯವಾಗಿದೆ.

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES