SOCIAL MEDIA

Newsletter

PARTNER SITES
Select Language Select State

ಮೊಸರು ದರ ಇಳಿಕೆ : ಮಹತ್ವದ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ.. ಕಡಿಮೆಯಾಗಿದ್ದೇಷ್ಟು ಗೊತ್ತೆ?

ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ಮೊಸರು ಬೆಲೆ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ರಾಜ್ಯ ಸರ್ಕಾರವು ಲೀಟರ್ ಮೊಸರು ಮೇಲಿನ ದರ ಇಳಿಕೆಗೆ ನಿರ್ಧರಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ ನೋಡಿ..

Written By Krishna NK
Published: Nov 03, 2026, 06:46 AM IST | Updated: Nov 03, 2026, 06:47 AM IST
Image Credit: DK Shivakumar news
Join

ಬೆಂಗಳೂರು : ನಂದಿನಿ ಹಾಲಿನ ಕಥೆ ಬಿಡಿ, ಮೊಸರಂತೂ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಹೌದು, ಹಾಲಿನ ರೇಟ್ ಜಾಸ್ತಿ ಮಾಡಿದ್ದಕ್ಕೆ ಒಂದಷ್ಟು ಜನ ಆಕ್ರೋಶ ಹಾಕಿದ್ರು. ಆದ್ರೆ ಸರ್ಕಾರ "ಅಪ್ಪಾ, ಈ 8 ರೂಪಾಯಿ ಏರಿಕೆಯಲ್ಲಿ 7 ರೂಪಾಯಿ ನೇರವಾಗಿ ಪಾಪ ನಮ್ಮ ರೈತಣ್ಣಂದಿರ ಕೈಗೆ ಹೋಗುತ್ತೆ, ಬರೀ ಒಂದು ರೂಪಾಯಿ ಮಾತ್ರ KMF ಗೆ ಅಂತೆ" ಅಂತ ಸಮರ್ಥನೆ ಕೊಟ್ಟಿತ್ತು. ಅದನ್ನೆಲ್ಲ ಹೇಗೋ ಜನ ಒಪ್ಪಿಕೊಂಡ್ರು. ಆದ್ರೆ ಅಸಲಿ ಗಲಾಟೆ ಶುರುವಾಗಿದ್ದೇ ಮೊಸರು ವಿಚಾರದಲ್ಲಿ.

ಯಸ್‌... ಯಾಕಂದ್ರೆ, ಒಮ್ಮಿಂದೊಮ್ಮೆಲೆ ಮೊಸರು ಲೀಟರ್ ಗೆ ಬರೊಬ್ಬರಿ 14 ರೂಪಾಯಿ ಜಾಸ್ತಿ ಮಾಡ್ಬಿಟ್ಟಿದ್ರು. ಇದನ್ನು ನೋಡಿ ಜನ ಶಾಕ್ ಆಗಿ "ಹಾಲಿಗೆ ರೈತರಿಗೆ ಹೋಗುತ್ತೆ ಅಂದ್ರೆ, ಮೊಸರು ರೇಟ್ ಇಷ್ಟು ಜಾಸ್ತಿ ಮಾಡಿದ್ರೆ ಆ ಹೆಚ್ಚುವರಿ ಹಣ ಯಾರ್ ಜೇಬಿಗೆ ಹೋಗ್ತಿದೆ? ಇದು ಯಾವ ನ್ಯಾಯ ಗುರು?" ಅಂತ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿ, ಸರ್ಕಾರಕ್ಕೆ ಬೈದಾಡಲಿಕ್ಕೆ ಶುರು ಮಾಡಿದ್ರು. ಜನರ ಈ ಆಕ್ರೋಶ ನೋಡಿ ಕೊನೆಗೂ ಸರ್ಕಾರಕ್ಕೆ ಎಚ್ಚೆತ್ತುಕೊಳ್ಳುವಂತಾಯಿತು.

ಜನರ ವಿರೋಧ ಜಾಸ್ತಿ ಆಗ್ತಿದ್ದಂಗೆ ಎಚ್ಚೆತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಅಧಿಕಾರಿಗಳಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಳಿಕ ಬೆಂಗಳೂರಲ್ಲಿ ಮಾಧ್ಯಮಗಳ ಜತೆ ಮಾತಾಡಿರೋ ಡಿಕೆಶಿ, "ನೋಡಿ, ಹಾಲಿನ ದರ ಏರಿಕೆ ಮಾಡಿರುವುದರಲ್ಲಿ 7 ರೂಪಾಯಿ ರೈತರಿಗೆ ಸಿಗ್ತಿದೆ. ಜನರಿಗೆ ಸ್ವಲ್ಪ ಹೊರೆಯಾಗಿದೆ ನಿಜ, ಆದ್ರೆ ರೈತರ ಕಷ್ಟ ನೋಡಬೇಕಲ್ವಾ? ಆದ್ರೆ ಮೊಸರು ವಿಚಾರದಲ್ಲಿ ಸ್ವಲ್ಪ ಜಾಸ್ತಿ ರೇಟ್ ಏರಿಕೆಯಾಗಿದೆ ಅನ್ನೋದು ನಮಗೂ ಗೊತ್ತಾಗಿದೆ. ಅದಕ್ಕೆ ಮೊಸರು ದರವನ್ನು ಇಳಿಕೆ ಮಾಡೋದಕ್ಕೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ" ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.

ಇದೇ ವೇಳೆ ಮಾಧ್ಯಮದವರ ಮುಂದೆ ಸ್ವಲ್ಪ ಗರಂ ಆಗಿಯೇ ಮಾತನಾಡಿದ ಡಿ.ಕೆ. ಶಿವಕುಮಾರ್, "ಮಾರುಕಟ್ಟೆಯಲ್ಲಿ ನೀರಿನ ಬಾಟಲಿ ರೇಟ್ ಜಾಸ್ತಿಯಾದಾಗ ಒಬ್ಬರ ಬಾಯಿಂದಲೂ ಮಾತು ಬಂದಿರಲಿಲ್ಲವಲ್ಲ ಯಾಕೆ? ಯಾಕಂದ್ರೆ ಆ ಹಣ ಕೇಂದ್ರ ಸರ್ಕಾರಕ್ಕೆ ಹೋಗುತ್ತಲ್ವಾ?" ಅಂತ ಒಂದು ಕೌಂಟರ್ ಪ್ರಶ್ನೆಯನ್ನೂ ಹಾಕಿದ್ದಾರೆ. ಒಟ್ಟಿನಲ್ಲಿ ಜನರ ಆಕ್ರೋಶಕ್ಕೆ ಮಣಿದು, ಮೊಸರು ಲೀಟರ್ ಗೆ ಹೆಚ್ಚಿಸಿದ್ದ 14 ರೂಪಾಯಿ ಪೈಕಿ 2 ರೂಪಾಯಿ ಕಡಿತ ಮಾಡಲು ತೀರ್ಮಾನಿಸಲಾಗಿದೆ. ಅಂದ್ರೆ ಇನ್ಮುಂದೆ 14 ರೂ. ಬದಲಿಗೆ 12 ರೂಪಾಯಿ ಮಾತ್ರ ಹೆಚ್ಚಳವಾಗಲಿದೆ. ಅಂದ್ರೆ ಒಟ್ಟಿನಲ್ಲಿ ಒಂದಿಷ್ಟು ಹಣ ಕಡಿಮೆ ಆಗಿರೋದು ಜನರಿಗೆ ಸಮಾಧಾನ ತಂದಿದೆ ಅಂತಾನೇ ಹೇಳಬಹುದು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES