• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೊಸರು ದರ ಇಳಿಕೆ : ಮಹತ್ವದ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ.. ಕಡಿಮೆಯಾಗಿದ್ದೇಷ್ಟು ಗೊತ್ತೆ?

ಮೊಸರು ದರ ಇಳಿಕೆ : ಮಹತ್ವದ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ.. ಕಡಿಮೆಯಾಗಿದ್ದೇಷ್ಟು ಗೊತ್ತೆ?

ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ಮೊಸರು ಬೆಲೆ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ರಾಜ್ಯ ಸರ್ಕಾರವು ಲೀಟರ್ ಮೊಸರು ಮೇಲಿನ ದರ ಇಳಿಕೆಗೆ ನಿರ್ಧರಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ ನೋಡಿ..

Written ByKrishna NK
Published: Nov 03, 2026, 06:46 AM IST|Updated: Nov 03, 2026, 01:17 PM IST
joinshare
ಮೊಸರು ದರ ಇಳಿಕೆ : ಮಹತ್ವದ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ.. ಕಡಿಮೆಯಾಗಿದ್ದೇಷ್ಟು ಗೊತ್ತೆ?
Image Credit: DK Shivakumar news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
20 ವರ್ಷಗಳ ಹಿಂದೆಯೇ ‘ರಾಮಾಯಣ’ ಸಿನಿಮಾ ಮಾಡಲು ಮುಂದಾಗಿದ್ದ ಸಲ್ಮಾನ್ ಖಾನ್; ಕೊನೆ ಕ್ಷಣದಲ್ಲಿ ಯೋಜನೆ ಕೈಬಿಟ್ಟಿದ್ದೇಕೆ?

20 ವರ್ಷಗಳ ಹಿಂದೆಯೇ ‘ರಾಮಾಯಣ’ ಸಿನಿಮಾ ಮಾಡಲು ಮುಂದಾಗಿದ್ದ ಸಲ್ಮಾನ್ ಖಾನ್; ಕೊನೆ ಕ್ಷಣದಲ್ಲಿ ಯೋಜನೆ ಕೈಬಿಟ್ಟಿದ್ದೇಕೆ?

2

ಪೆಟ್ರೋಲ್‌ನಲ್ಲಿ ಎಥೆನಾಲ್ ಹೇಗೆ ಮಿಶ್ರಣ ಮಾಡ್ತಾರೆ? ಟ್ಯಾಂಕರ್‌ನಿಂದ ಪೆಟ್ರೋಲ್ ಬಂಕ್‌ವರೆಗೆ E20 ಇಂಧನ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆ ಇಲ್ಲಿದೆ

3

ಹೃದಯಾಘಾತದ ನಾಟಕವಾಡಿ ಗಂಡನನ್ನೇ ಕೊಂದ ಕಿಲಾಡಿ ಪತ್ನಿ! ಪ್ರಿಯಕರನ ಜೊತೆ ಸೇರಿ ಮರ್ಡರ್‌ ಸ್ಕೆಚ್‌

4

ಬೆಂಗಳೂರಿನಲ್ಲಿ ಕಾಮನ್‌ವೆಲ್ತ್ ಮಹಿಳಾ ಸಂಸದರ ರಾಷ್ಟ್ರೀಯ ಸಮ್ಮೇಳನ; ನ.14ರಂದು ಕರ್ಟನ್ ರೈಸರ್ ಕಾರ್ಯಕ್ರಮ

5

ನಿಜ ಜೀವನದಲ್ಲಿ ರೈತ ಹುಡುಗ ಸಿಕ್ರೆ ಮದುವೆ ಆಗ್ತೀರಾ ರಮಿಕಾ..? ನಟಿ ಉತ್ತರಕ್ಕೆ ಫ್ಯಾನ್ಸ್‌ ಫಿದಾ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ನಂದಿನಿ ಹಾಲಿನ ಕಥೆ ಬಿಡಿ, ಮೊಸರಂತೂ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಹೌದು, ಹಾಲಿನ ರೇಟ್ ಜಾಸ್ತಿ ಮಾಡಿದ್ದಕ್ಕೆ ಒಂದಷ್ಟು ಜನ ಆಕ್ರೋಶ ಹಾಕಿದ್ರು. ಆದ್ರೆ ಸರ್ಕಾರ "ಅಪ್ಪಾ, ಈ 8 ರೂಪಾಯಿ ಏರಿಕೆಯಲ್ಲಿ 7 ರೂಪಾಯಿ ನೇರವಾಗಿ ಪಾಪ ನಮ್ಮ ರೈತಣ್ಣಂದಿರ ಕೈಗೆ ಹೋಗುತ್ತೆ, ಬರೀ ಒಂದು ರೂಪಾಯಿ ಮಾತ್ರ KMF ಗೆ ಅಂತೆ" ಅಂತ ಸಮರ್ಥನೆ ಕೊಟ್ಟಿತ್ತು. ಅದನ್ನೆಲ್ಲ ಹೇಗೋ ಜನ ಒಪ್ಪಿಕೊಂಡ್ರು. ಆದ್ರೆ ಅಸಲಿ ಗಲಾಟೆ ಶುರುವಾಗಿದ್ದೇ ಮೊಸರು ವಿಚಾರದಲ್ಲಿ.

ಯಸ್‌... ಯಾಕಂದ್ರೆ, ಒಮ್ಮಿಂದೊಮ್ಮೆಲೆ ಮೊಸರು ಲೀಟರ್ ಗೆ ಬರೊಬ್ಬರಿ 14 ರೂಪಾಯಿ ಜಾಸ್ತಿ ಮಾಡ್ಬಿಟ್ಟಿದ್ರು. ಇದನ್ನು ನೋಡಿ ಜನ ಶಾಕ್ ಆಗಿ "ಹಾಲಿಗೆ ರೈತರಿಗೆ ಹೋಗುತ್ತೆ ಅಂದ್ರೆ, ಮೊಸರು ರೇಟ್ ಇಷ್ಟು ಜಾಸ್ತಿ ಮಾಡಿದ್ರೆ ಆ ಹೆಚ್ಚುವರಿ ಹಣ ಯಾರ್ ಜೇಬಿಗೆ ಹೋಗ್ತಿದೆ? ಇದು ಯಾವ ನ್ಯಾಯ ಗುರು?" ಅಂತ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿ, ಸರ್ಕಾರಕ್ಕೆ ಬೈದಾಡಲಿಕ್ಕೆ ಶುರು ಮಾಡಿದ್ರು. ಜನರ ಈ ಆಕ್ರೋಶ ನೋಡಿ ಕೊನೆಗೂ ಸರ್ಕಾರಕ್ಕೆ ಎಚ್ಚೆತ್ತುಕೊಳ್ಳುವಂತಾಯಿತು.

ಜನರ ವಿರೋಧ ಜಾಸ್ತಿ ಆಗ್ತಿದ್ದಂಗೆ ಎಚ್ಚೆತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಅಧಿಕಾರಿಗಳಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಳಿಕ ಬೆಂಗಳೂರಲ್ಲಿ ಮಾಧ್ಯಮಗಳ ಜತೆ ಮಾತಾಡಿರೋ ಡಿಕೆಶಿ, "ನೋಡಿ, ಹಾಲಿನ ದರ ಏರಿಕೆ ಮಾಡಿರುವುದರಲ್ಲಿ 7 ರೂಪಾಯಿ ರೈತರಿಗೆ ಸಿಗ್ತಿದೆ. ಜನರಿಗೆ ಸ್ವಲ್ಪ ಹೊರೆಯಾಗಿದೆ ನಿಜ, ಆದ್ರೆ ರೈತರ ಕಷ್ಟ ನೋಡಬೇಕಲ್ವಾ? ಆದ್ರೆ ಮೊಸರು ವಿಚಾರದಲ್ಲಿ ಸ್ವಲ್ಪ ಜಾಸ್ತಿ ರೇಟ್ ಏರಿಕೆಯಾಗಿದೆ ಅನ್ನೋದು ನಮಗೂ ಗೊತ್ತಾಗಿದೆ. ಅದಕ್ಕೆ ಮೊಸರು ದರವನ್ನು ಇಳಿಕೆ ಮಾಡೋದಕ್ಕೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ" ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.

ಇದೇ ವೇಳೆ ಮಾಧ್ಯಮದವರ ಮುಂದೆ ಸ್ವಲ್ಪ ಗರಂ ಆಗಿಯೇ ಮಾತನಾಡಿದ ಡಿ.ಕೆ. ಶಿವಕುಮಾರ್, "ಮಾರುಕಟ್ಟೆಯಲ್ಲಿ ನೀರಿನ ಬಾಟಲಿ ರೇಟ್ ಜಾಸ್ತಿಯಾದಾಗ ಒಬ್ಬರ ಬಾಯಿಂದಲೂ ಮಾತು ಬಂದಿರಲಿಲ್ಲವಲ್ಲ ಯಾಕೆ? ಯಾಕಂದ್ರೆ ಆ ಹಣ ಕೇಂದ್ರ ಸರ್ಕಾರಕ್ಕೆ ಹೋಗುತ್ತಲ್ವಾ?" ಅಂತ ಒಂದು ಕೌಂಟರ್ ಪ್ರಶ್ನೆಯನ್ನೂ ಹಾಕಿದ್ದಾರೆ. ಒಟ್ಟಿನಲ್ಲಿ ಜನರ ಆಕ್ರೋಶಕ್ಕೆ ಮಣಿದು, ಮೊಸರು ಲೀಟರ್ ಗೆ ಹೆಚ್ಚಿಸಿದ್ದ 14 ರೂಪಾಯಿ ಪೈಕಿ 2 ರೂಪಾಯಿ ಕಡಿತ ಮಾಡಲು ತೀರ್ಮಾನಿಸಲಾಗಿದೆ. ಅಂದ್ರೆ ಇನ್ಮುಂದೆ 14 ರೂ. ಬದಲಿಗೆ 12 ರೂಪಾಯಿ ಮಾತ್ರ ಹೆಚ್ಚಳವಾಗಲಿದೆ. ಅಂದ್ರೆ ಒಟ್ಟಿನಲ್ಲಿ ಒಂದಿಷ್ಟು ಹಣ ಕಡಿಮೆ ಆಗಿರೋದು ಜನರಿಗೆ ಸಮಾಧಾನ ತಂದಿದೆ ಅಂತಾನೇ ಹೇಳಬಹುದು.

ರಾಜ್ಯಾದ್ಯಂತ ಆಕ್ರೋಶ...ಕೊನೆಗೂ ಮಣಿದ ಸರ್ಕಾರ

ಹಾಲಿನ ದರ ಏಕಾಏಕಿ ಏರಿಕೆ ಮಾಡಿರುವ ಕಾರಣ ವ್ಯಾಪಕ ಕೂಗುಗಳು ಕೇಳಿ ಬರ್ತಿದೆ.. ಇವತ್ತು ರೈತರ ಹೆಸರಿನಲ್ಲಿ ಗ್ರಾಹಕರನ್ನು ಲೂಟಿ ಮಾಡುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿ ಬಿಜಿಪಿ ಮಹಿಳಾ ಘಟಕ  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಕೈಗೊಂಡು,ಸರ್ಕಾರ ವಿರುದ್ದ ಕಿಡಿಕಾರಿದ್ದಾರೆ

ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ದರ ಏರಿಕೆ ಮಾಡಿರುವ ಕಾಂಗ್ರೆಸ್‌‍ ಸರ್ಕಾರದ ಕ್ರಮವನ್ನು ಖಂಡಿಸಿ, ಇಂದು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ನಗರದ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.. ಪ್ರತಿಭಟನೆಯಲ್ಲಿ ಬಹುತೇಕ ಮಹಿಳೆಯರು ಭಾಗಿಯಾಗಿ ಸರ್ಕಾರದ ವಿರುದ್ದ ಆಕ್ರೊಶ ಹೊರಹಾಕಿ, ಮಹಿಳಾ ಕಾರ್ಯಕರ್ತೆಯರು ಕೈಯಲ್ಲಿ ಹಾಲಿನ ಪ್ಯಾಕೆಟ್‌ಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಾಲಿನ ದರ ಏರಿಸಿರುವ ಕಾಂಗ್ರೆಸ್‌‍ ಸರ್ಕಾರಕ್ಕೆ ಧಿಕ್ಕಾರ, ಕಾಂಗ್ರೆಸ್‌‍ನ ಬೆಲೆ ಏರಿಕೆ ನಿಲ್ಲಲಿ, ನಾಡಿನಿಂದ ಸರ್ಕಾರ ತೊಲಗಲಿ ಎಂಬ ಘೋಷಣೆಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಹಾಗೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯದ ಜನರಿಗೆ ಸರ್ಕಾರ ನೀಡಿದ ಕೊಡುಗೆ ಏನು? ಪ್ರತಿಯೊಂದು ವಸ್ತುವಿನ ಬೆಲೆಯನ್ನೂ ಹೆಚ್ಚಿಸಿರುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ನೀರಿಗೆ ದುಡ್ಡು ಕೊಡುತ್ತೇವೆ, ಹಾಲಿಗೆ ದುಡ್ಡು ಕೊಡುವುದಿಲ್ಲವೇ ಎಂದು ಸಚಿವ ಕೃಷ್ಣ ಬೈರೇಗೌಡರು ಪ್ರಶ್ನಿಸಿದ್ದಾರೆ. ಹಾಗಾದರೆ ಯಾವುದರ ಬೆಲೆಯನ್ನು ಏರಿಸುವುದನ್ನು ಬಿಟ್ಟಿದ್ದೀರಿ, ಕಾಂಗ್ರೆಸ್‌‍ ಸರ್ಕಾರ ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕು ಬಾರಿ ಹಾಲಿನ ದರ ಏರಿಕೆ ಮಾಡಿದೆ. ಹಾಲಿನ ಜೊತೆಗೆ ಮೊಸರಿನ ದರವನ್ನೂ ಹೆಚ್ಚಿಸಲಾಗಿದೆ. ಜನಸಾಮಾನ್ಯರು ಬದುಕುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ಸರ್ಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ಇನ್ನು ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಸದ್ಯ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದಾರೆ. ಹಾಲಿನ ದರ ಏರಿಕೆ ಹಿಂಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಅಗತ್ಯ ಬಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಸದ್ಯ ಸರ್ಕಾರ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ರೈತರಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ಸರ್ಕಾರದ ಖಜಾನೆಯಲ್ಲಿರುವ ಹಣವನ್ನು ರೈತರಿಗೆ ನೀಡಬೇಕು. ರೈತರನ್ನು ಕಾಪಾಡುವುದು ನಮೆಲ್ಲ ಧರ್ಮ. ಆದರೆ ಸರ್ಕಾರ ಮಾಡುತ್ತಿಲ್ಲ, ಹೀಗಾಗಿ ಸರ್ಕಾರ ಬಿಟ್ಟು ಕೊಡಿಯಂತ ಕಿಡಿಕಾರುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Add Zee News as a Preferred Source
TAGS:
Price Hike