ಹಾಸನ ಡಿಸಿ ವಿರುದ್ದ ಲೋಕಾಯುಕ್ತದಲ್ಲಿ ದೂರು
ಹಣದ ಹಂಚಿಕೆ ಮತ್ತು ಹೊಂದಾಣಿಕೆಯಲ್ಲಿ DC PA ಸೇರಿದಂತೆ ಮಧ್ಯವರ್ತಿಗಳ ಮೂಲಕ ಹಣದ ವಹಿವಾಟು ನಡೆದಿರುವ ಕುರಿತು ಕೇಳಿಬಂದಿರುವ ಗಂಭೀರ ಆರೋಪದ ಕುರಿತ ಸಮಗ್ರ ತನಿಖೆಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಲೋಕಾಯುಕ್ತ ಎಡಿಜಿಪಿಗೆ ದೂರು ದಾಖಲಾಗಿದೆ.
ಹಾಸನ ಡಿಸಿಗೆ ಸಂಕಷ್ಟ ಶುರುವಾಗಿದೆ...ಹಾಸನ ಡಿಸಿ ಲತಾ ಕುಮಾರಿ ಹಾಗು ಡಿಸಿ ಕಚೇರಿ ಸಿಬ್ಬಂದಿಗೆ ಲೋಕಾಯುಕ್ತ ತನಿಖೆಗೆ ಒಳಗಾಗುವ ಆತಂಕ ಎದುರಾಗಿದೆ.ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ..ಈ ಕುರಿತು ಇಲ್ಲಿದೆ ಎಕ್ಸ್ ಕ್ಲೂಸಿವ್ ಸ್ಟೋರಿ...
ಸಾರ್ವಜನಿಕವಾಗಿ ಬಿಡುಗಡೆಯಾಗಿರುವ WhatsApp ಸಂಭಾಷಣೆಗಳಲ್ಲಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ (DC), ಉಪವಿಭಾಗಾಧಿಕಾರಿ (AC), ಅಪರ ಜಿಲ್ಲಾಧಿಕಾರಿ (ADC), ತಹಶೀಲ್ದಾರ್ ಹಾಗೂ ಇತರ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳ ಹಣಕಾಸಿನ ವ್ಯವಹಾರ ಆರೋಪ ಇದೀಗ ಗಂಭೀರ ಸ್ವರೂಪ ಪಡೆದಿದೆ. ಹಣದ ಹಂಚಿಕೆ ಮತ್ತು ಹೊಂದಾಣಿಕೆಯಲ್ಲಿ DC PA ಸೇರಿದಂತೆ ಮಧ್ಯವರ್ತಿಗಳ ಮೂಲಕ ಹಣದ ವಹಿವಾಟು ನಡೆದಿರುವ ಕುರಿತು ಕೇಳಿಬಂದಿರುವ ಗಂಭೀರ ಆರೋಪದ ಕುರಿತ ಸಮಗ್ರ ತನಿಖೆಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಲೋಕಾಯುಕ್ತ ಎಡಿಜಿಪಿಗೆ ದೂರು ದಾಖಲಾಗಿದೆ.
ಸಕಲೇಶಪುರದ ಮೂರು ಕ್ರಷರ್ ಕಡತಗಳ ಅನುಮೋದನೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಹಣದ ವ್ಯವಹಾರಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿದೆ ..ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ, 1988 ಯಡಿಯಲ್ಲಿ ಸ್ವತಂತ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ದಿನೇಶ್ ಕಲ್ಲಹಳ್ಳಿ ಲೋಕಾಯುಕ್ತಕ್ಕೆ ದೂರು ನೀಡಿದ್ದು ನಿಸ್ಪಕ್ಷಪಾತ ತನಿಖೆಗೆ ಅಗ್ರಹಿಸಿದ್ದಾರೆ..
ಸಾರ್ವಜನಿಕವಾಗಿ WhatsApp ಸಂಭಾಷಣೆಗಳ ಸ್ಟೀನ್‌ಶಾಟ್‌ಗಳಲ್ಲಿ ಭಾರೀ ಭ್ರಷ್ಟಾಚಾರದ ಉಲ್ಲೇಖವಾಗಿದ್ದು, ಪ್ರಕರದಲ್ಲಿ ಉನ್ನತ ಅಧಿಕಾರಿಗಳ ಹುದ್ದೆಗಳನ್ನು ಉಲ್ಲೇಖಿಸಿ ಲಕ್ಷಾಂತರ ರೂಪಾಯಿಗಳ ಹಣಕಾಸಿನ ವ್ಯವಹಾರ, ಹಂಚಿಕೆ, ಹೊಂದಾಣಿಕೆ ಹಾಗೂ ಸರ್ಕಾರಿ ಕಡತಗಳ ವಿಲೇವಾರಿಗೆ ನಡೆದಿರುವ ಆರೋಪವಿದೆ..
ಗಂಭೀರ ಸ್ವರೂಪದ ಸಂಭಾಷಣೆಗಳಲ್ಲಿ DC,AC, ADC,ತಹಶೀಲ್ದಾರ್ ಹಾಗೂ DC PA ಸೇರಿದಂತೆ ವಿವಿಧ ವ್ಯಕ್ತಿಗಳ ಉಲ್ಲೇಖಗಳಿದೆ.. ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಹಣದ ವ್ಯವಹಾರಗಳನ್ನು ನಡೆಸಿರುವ ಸಾಧ್ಯತೆಯ ಕುರಿತು ಸಾರ್ವಜನಿಕ ಹಿತಾಸಕ್ತಿಯಿಂದ ಸಮಗ್ರ ತನಿಖೆ ನಡೆಸುವುದು ಅತ್ಯಗತ್ಯವಾಗಿದೆ ಎಂದ ದೂರಿನಲ್ಲಿ ಉಲ್ಲೇಖಿಸಲಾಗಿದೆ ..
ಸಾರ್ವಜನಿಕವಾಗಿ ಬಿಡುಗಡೆಯಾಗಿರುವ WhatsApp ಸಂಭಾಷಣೆಗಳಲ್ಲಿ ಜಿಲ್ಲಾಧಿಕಾರಿ ಅವರಿಗೆ ಸಂಬಂಧಿಸಿದಂತೆ ₹50 ಲಕ್ಷ, ₹60 ಲಕ್ಷ ಹಾಗೂ ₹75 ಲಕ್ಷದವರೆಗಿನ ಮೊತ್ತಗಳ ಉಲ್ಲೇಖಗಳು ಕಂಡುಬಂದಿದೆ.. ವಿವಿಧ ಹಂತಗಳಲ್ಲಿ ಹಣದ ಹೊಂದಾಣಿಕೆ, ಪಾವತಿ ಮತ್ತು ಹಂಚಿಕೆ ಕುರಿತು ಚರ್ಚಿಸಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಈ ಮೊತ್ತಗಳು ಯಾವ ಉದ್ದೇಶಕ್ಕಾಗಿ ಪ್ರಸ್ತಾಪವಾಗಿವೆ, ಹಣವನ್ನು ಯಾರು ಪಾವತಿಸಿದ್ದಾರೆ. ಯಾರಿಗೆ ತಲುಪಿಸಲಾಗಿದೆ?
ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳ ಅಧಿಕೃತ ಕರ್ತವ್ಯಗಳೊಂದಿಗೆ ಈ ವ್ಯವಹಾರಗಳಿಗೆ ಸಂಬಂಧವಿದೆಯೇ ಎಂಬುದನ್ನು ತನಿಖೆಯ ಮೂಲಕ ದೃಢಪಡಿಸಬೇಕಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ.
ಇದೇ ವೇಳೆ ಸಂಭಾಷಣೆಗಳಲ್ಲಿ ಉಪವಿಭಾಗಾಧಿಕಾರಿ ಅವರಿಗೆ ಸಂಬಂಧಿಸಿದಂತೆ ಸುಮಾರು ₹13 ಲಕ್ಷ ಮತ್ತು ₹20 ಲಕ್ಷಗಳ ಮೊತ್ತಗಳ ಉಲ್ಲೇಖವಿದೆ .. ಅಪರ ಜಿಲ್ಲಾಧಿಕಾರಿ ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳ ಹೆಸರಿನಲ್ಲಿಯೂ ಹಣದ ಹಂಚಿಕೆ ಮತ್ತು ಪಾವತಿಗಳ ಕುರಿತು ಚರ್ಚಿಸಿರುವುದು ಕಂಡುಬರುತ್ತದೆ. ಈ ಹಿನ್ನಲೆ ಸಂಬಂಧಪಟ್ಟ ಮೂಲ ಮೊಬೈಲ್ ಸಾಧನಗಳು, ಮೂಲ WhatsApp ಚಾಟ್‌ಗಳು, ಲಭ್ಯವಿರುವ ಬ್ಯಾಕಪ್‌ಗಳು, ಮೆಟಾಡೇಟಾ ಮತ್ತು ಇತರ ಡಿಜಿಟಲ್ ದಾಖಲೆಗಳನ್ನು ಕಾನೂನುಬದ್ಧವಾಗಿ ಪಡೆದು ವಿಧಿವಿಜ್ಞಾನ ಪ್ರಯೋಗಾಲಯದ ಕಳಿಸಬೇಕು.
ಸಂದೇಶಗಳನ್ನು ಕಳುಹಿಸಿದವರು, ಸ್ವೀಕರಿಸಿದವರು, ದಿನಾಂಕ, ಸಮಯ, ಸಂದೇಶಗಳ ನಿರಂತರತೆ ಪತ್ತೆಹಚ್ಚಬೇಕು. ಈ ದೂರಿನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತ ಎಡಿಜಿಪಿಗೆ ದೂರಿನಲ್ಲಿ ಆಗ್ರಹಿಸಿದ್ದಾರೆ..
ಒಟ್ಟಾರೆ ಡಿಸಿ ಕಚೇರಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಕೇಂದ್ರ ಸಚಿವ ಹೆಚ್ ಡಿಕೆ ಸಾಕ್ಷಿ ಸಮೇತ ಪ್ರಕರಣ ಬಯಲು ಮಾಡಿದ ನಂತರ ಪ್ರಕರಣ ಮತ್ತಷ್ಟು ಗಂಭೀರತೆ ಪಡೆದಿದೆ..ಲೋಕಾಯುಕ್ತ ದೂರಿನ ಅನ್ವಯ ತನಿಖೆ ನಡೆದ್ರೆ ಹಾಸನ ಡಿಸಿ ಸೇರಿದಂತೆ ಅಧಿಕಾರಿಗಳು ತನಿಖೆ ಒಳಪಡಬೇಕಾಗಿದೆ ..ಇಡೀ ಪ್ರಕರಣ ಡಿಸಿ ಲತಾಕುಮಾರಿ ಅವರ ವರ್ಚಸ್ಸಿಗೆ ಪೆಟ್ಟು ಬಿದ್ದಿದ್ದು ಸರ್ಕಾರಕ್ಕೆ ತೀವ್ರ ಮುಜುಗರಕ್ಕೀಡು ಮಾಡಿದೆ..