• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಕನಿಷ್ಠ ಬೆಂಬಲ‌ ಬೆಲೆ ನಿಗದಿಗೆ ಸಮಿತಿ: ಕೇಂದ್ರದ ಸಮಯ ಮುಂದೂಡುವ ಪ್ರವೃತ್ತಿ- ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ

ಕನಿಷ್ಠ ಬೆಂಬಲ‌ ಬೆಲೆ ನಿಗದಿಗೆ ಸಮಿತಿ: ಕೇಂದ್ರದ ಸಮಯ ಮುಂದೂಡುವ ಪ್ರವೃತ್ತಿ- ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ

ಯಾವುದೇ ರಾಜಕೀಯ ಸ್ಥಾನಮಾನಕ್ಕಾಗಿ ರೈತಪರ ವಿಚಾರಗಳನ್ನು ಮರೆಯುವ ಜಾಯಮಾನ ತನ್ನದಲ್ಲ ಎಂದ ಸ್ಪಷ್ಟಪಡಿಸಿದ ಅವರು, ನಾನು ಸಚಿವನಾಗಿದ್ದರೂ ಜನರ ಪ್ರತಿನಿಧಿಯಷ್ಟೇ ಎಂದರು.

Reported ByManjunath NaragundEdited ByManjunath Naragund
Published: Oct 28, 2026, 10:56 PM IST|Updated: Oct 28, 2026, 11:01 PM IST
joinshare
ಕನಿಷ್ಠ ಬೆಂಬಲ‌ ಬೆಲೆ ನಿಗದಿಗೆ ಸಮಿತಿ: ಕೇಂದ್ರದ ಸಮಯ ಮುಂದೂಡುವ ಪ್ರವೃತ್ತಿ-  ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ
Image Credit: PM Narendraswamy

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಅ.30 ರಿಂದ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ವಿವಿಯಿಂದ ನಾಲ್ಕು‌ ದಿನಗಳ ಬೃಹತ್ 'ಕೃಷಿ ಮೇಳ'

ಅ.30 ರಿಂದ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ವಿವಿಯಿಂದ ನಾಲ್ಕು‌ ದಿನಗಳ ಬೃಹತ್ 'ಕೃಷಿ ಮೇಳ'

2

ಕನಿಷ್ಠ ಬೆಂಬಲ‌ ಬೆಲೆ ನಿಗದಿಗೆ ಸಮಿತಿ: ಕೇಂದ್ರದ ಸಮಯ ಮುಂದೂಡುವ ಪ್ರವೃತ್ತಿ- ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ

3

New FASTag Rules: ಟೋಲ್ ಪ್ಲಾಜಾಗಳಲ್ಲಿ ನವೆಂಬರ್ 1 ರಿಂದ ಹೊಸ ನಿಯಮ!

4

ರಾತ್ರಿ ಮಲಗಿದಾಗ ಜೊಲ್ಲು ಸುರಿಯುತ್ತಿದೆಯೇ? ಕಾರಣಗಳೇನು, ತಡೆಯಲು ಏನು ಮಾಡಬೇಕು?

5

MAIMATA ಹಾಡಿನ ಬಗ್ಗೆ ಚಂದನ್ ಶೆಟ್ಟಿ ಸ್ಪಷ್ಟನೆ.. ಹಾಡು ಹಾಡಾಗಿಯೇ ಇರಲಿ, ಪರ್ಸನಲ್ ಲೈಫ್‌ಗೆ ಲಿಂಕ್ ಬೇಡ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು ಅ.28: ಕೇಂದ್ರ ಸರ್ಕಾರವು ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ), ಕಬ್ಬಿನ ಬೆಲೆ ಮತ್ತು ಸಾಲಮನ್ನಾ ವಿಚಾರದಲ್ಲಿ ಸಮಿತಿ ರಚನೆ ಮಾಡಿ ವೃಥಾ ಕಾಲಹರಣ ಮಾಡುತ್ತಿದೆ ಎಂದು ಕೃಷಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ದೂರಿದರು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಸ್ವೀಕರಿಸಿ‌ ಮಾತನಾಡಿದರು.

ಕರ್ನಾಟಕ ಮಾತ್ರವಲ್ಲದೇ ದೇಶದ ಹಲವು ರಾಜ್ಯಗಳಲ್ಲಿ ಬರ ಪರಿಸ್ಥಿತಿಯಿಂದ ರೈತರ ಬದುಕು ನಿಕೃಷ್ಟವಾಗಿದೆ.  ಒಬ್ಬ ರೈತನ ಮಗನಾಗಿ ರೈತರ ಸಂಕಷ್ಟ ಅರಿತಿದ್ದೇನೆ. ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ನಡೆದ ವಿವಿಧ ರಾಜ್ಯಗಳ ಕೃಷಿ ಹಾಗೂ ಸಕ್ಕರೆ ಸಚಿವರ ಉನ್ನತ ಮಟ್ಟದ ಸಭೆಯಲ್ಲಿ ಕಬ್ಬಿನ ಬೆಲೆ ಮತ್ತು ಎಂಎಸ್‌ಪಿ ಕುರಿತು ಚರ್ಚೆ ನಡೆದರೂ ಕೇಂದ್ರ ಸರ್ಕಾರವು ತಕ್ಷಣವೇ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.

ಸಮಿತಿ ರಚಿಸಿ, ಅದರ ವರದಿಗಾಗಿ ಕಾಯುವುದು ಕೇವಲ‌ ಸಮಯ ಮುಂದೂಡುವ ಪ್ರವೃತ್ತಿ‌‌ ಎಂದು ಸಚಿವರು ಕಿಡಿಕಾರಿದರು.

ಸ್ಥಾನಮಾನಕ್ಕಾಗಿ ರೈತ ಪರ ವಿಚಾರ ಮರೆಯಲ್ಲ

ಯಾವುದೇ ರಾಜಕೀಯ ಸ್ಥಾನಮಾನಕ್ಕಾಗಿ ರೈತಪರ ವಿಚಾರಗಳನ್ನು ಮರೆಯುವ ಜಾಯಮಾನ ತನ್ನದಲ್ಲ ಎಂದ ಸ್ಪಷ್ಟಪಡಿಸಿದ ಅವರು, ನಾನು ಸಚಿವನಾಗಿದ್ದರೂ ಜನರ ಪ್ರತಿನಿಧಿಯಷ್ಟೇ ಎಂದರು.

ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಬಗೆಹರಿಸುವುದಾಗಿ‌ ನಾವು ಸುಳ್ಳು ಭರವಸೆ ನೀಡುವುದಿಲ್ಲ. ಆದಾಗ್ಯೂ, ರೈತರ ನೆರವಿಗೆ ಧಾವಿಸಲು ಸರ್ಕಾರ ಬದ್ಧವಾಗಿದೆ. ರೈತನನ್ನು ಉಳಿಸಿದರೆ ಮಾತ್ರ ದೇಶ ಉಳಿಯುತ್ತದೆ ಎಂಬ ಅಚಲ ನಂಬಿಕೆ ಸರ್ಕಾರದ್ದು ಎಂದು ಸಚಿವ ನರೇಂದ್ರ ಸ್ವಾಮಿ ಹೇಳಿದರು.

ಬರ ಮತ್ತು ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ಸಣ್ಣ ರೈತರ ಸಹಾಯಕ್ಕಾಗಿ ರಾಜ್ಯ ಸರ್ಕಾರವು ನವೆಂಬರ್ ತಿಂಗಳಲ್ಲಿ 'ನೇಗಿಲ ಯೋಗಿ' ಎಂಬ ಹೊಸ ಯೋಜನೆ ಜಾರಿಗೆ ತರಲು ತೀರ್ಮಾನಿಸಿದೆ.ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೆರವು ನೀಡುವ ನಿಟ್ಟಿನಲ್ಲಿ  ಕೃಷಿ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಮುಂದಿನ 10-15 ದಿನಗಳಲ್ಲಿ ಯೋಜನೆಯ ರೂಪುರೇಷ ಸಿದ್ಧಪಡಿಸಿ, ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

ನಾಳೆ (ಅ.29) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸಕ್ತ ಸಾಲಿನ ಬರ ಪರಿಸ್ಥಿತಿ ಮತ್ತು ರೈತರ ಸಂಕಷ್ಟಗಳ ಕುರಿತು  ಚರ್ಚೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ಬರದ ಹಿನ್ನೆಲೆ ರೈತರಿಂದ ಯಾವುದೇ ಸಾಲ‌ ವಸೂಲಾತಿ ನಡೆಸದಂತೆ ಬ್ಯಾಂಕರ್ ಗಳಿಗೆ ಸೂಚಿಸಲಾಗಿದೆ.ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ ಸಭೆಯಲ್ಲಿ ಮುಂದಿನ ಒಂದು ವರ್ಷದವರೆಗೆ ರೈತರ ಸಾಲ ವಸೂಲಾತಿ ಮಾಡುವುದಿಲ್ಲ‌ ಎಂದು ಬ್ಯಾಂಕ್‌ಗಳ ಮುಖ್ಯಸ್ಥರು ಮಾತುಕೊಟ್ಟಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.

ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಚಾರದಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರವು ಅವಲೋಕನ ಮಾಡುತ್ತಿದೆ ಎಂದ ಸಚಿವರು‌ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Add Zee News as a Preferred Source
TAGS:
Kannada News