SOCIAL MEDIA

Newsletter

PARTNER SITES
Select Language Select State

ಕಲ್ಲಿನಿಂದ ಜಜ್ಜಿ, ಬಾಯಿಗೆ ವೇಲ್ ತುರುಕಿ ಹೆಂಡತಿ ಹ*ತ್ಯೆ : ರಾಜಕಾಲುವೆ ರಹಸ್ಯ ಬಯಲು.. ಗಂಡ ಅರೆಸ್ಟ್

ಅವತ್ತು ರಾಜಕಾಲುವೆಯೊಂದ್ರಲ್ಲಿ ಮಹಿಳೆಯ ಹೆಣ ತೇಲಿ ಬಂದಿತ್ತು. ಆ ಏರಿಯಾದ ಜನ ಡೆಡ್ ಬಾಡಿ ನೋಡಿ ಅವಕ್ಕಾಗಿದ್ರೂ. ಪೊಲೀಸರು ಯಾರ್ದಾಪ್ಪ ಈ ಬಾಡಿ, ಎಲ್ಲಿಂದ ಬಂತು ಅಂತಾ ತಲೆ ಕೆಡಿಸಿಕೊಂಡು ತನಿಖೆ ನಡೆಸಿದ್ರು. ಈಗ ಕೊಲೆಗಡುಕ ಅಂದರ್ ಆಗಿದ್ದು, ತನಿಖೆ ವೇಳೆ ಕೊಲೆಯ ಅಸಲಿ ಸತ್ಯವನ್ನು ಕಕ್ಕಿದ್ದಾನೆ. ಹಾಗಾದ್ರೆ ಅಂದು ನಡೆದಿದ್ದೇನೂ..? ರೋಚಕ ಕಥೆ ಇಲ್ಲಿದೆ..

Written By Krishna NK
Published: Oct 22, 2026, 03:33 PM IST | Updated: Oct 22, 2026, 03:35 PM IST
Image Credit: Bengaluru Crime News
Join

ಬೆಂಗಳೂರು : ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಬಳಿ ಅಕ್ಟೋಬರ್ 13ರಂದು ಮಹಿಳೆಯ ಶವ ಪತ್ತೆಯಾಗಿತ್ತು. ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ರಾಜಕಾಲುವೆಗೆ ಎಸೆಯಲಾಗಿದ್ದ ಶವವನ್ನು ಕಂಡು ಸ್ಥಳೀಯರು ಶಾಕ್ ಆಗಿದ್ರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಆರಂಭದಲ್ಲಿ ಮೃತ ಮಹಿಳೆಯ ಗುರುತು ಕೂಡ ಪತ್ತೆಯಾಗಿರಲಿಲ್ಲ. ಹೀಗಾಗಿ ಮಾಗಡಿ ರಸ್ತೆ ಪೊಲೀಸರು ಹತ್ತುಕ್ಕೂ ಹೆಚ್ಚು ತಂಡಗಳನ್ನು ರಚಿಸಿ, ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದರು. ಕಾಣೆಯಾಗಿರುವ ಮಹಿಳೆಯರ ಕುರಿತು ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೂ ಮುಂದಾಗಿದ್ದರು. ಈಗ  ಕೊಲೆ ಮಾಡಿ ಗಂಡನೇ ಬಾಡಿ ರಾಜಕಾಲುವೆಗೆ ಎಸೆದಿದ್ದ ಎಂಬುದು ಗೊತ್ತಾಗಿದೆ.

ತನಿಖೆ ವೇಳೆ ಮೃತ ಮಹಿಳೆ ರುಕ್ಸಾನಾ ಎಂದು ಗುರುತು ಪತ್ತೆಯಾಗಿತ್ತು. 25 ವರ್ಷದ ರುಕ್ಸಾನಾ ಹಾಗೂ 22 ವರ್ಷದ ಮೊಹಮ್ಮದ್ ಇಫ್ಜಾರ್ ಇಬ್ಬರೂ ಬಿಹಾರ ಮೂಲದವರು. ಸುಮಾರು ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಈ ದಂಪತಿ, ಆರು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಗಾರ್ಮೆಂಟ್ಸ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಆಗಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದುದನ್ನು ಕಂಡು ಆಕೆಗೆ ಅಕ್ರಮ ಸಂಬಂಧವಿದೆ ಎಂದು ಇಫ್ಜಾರ್ ಅನುಮಾನಪಡುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಇದೇ ವಿಷಯಕ್ಕೆ ಅಕ್ಟೋಬರ್ 10ರಂದು ದಂಪತಿ ನಡುವೆ ಜಗಳ ತಾರಕಕ್ಕೇರಿತ್ತು. ಈ ವೇಳೆ ರೊಚ್ಚಿಗೆದ್ದ ಇಪ್ಜಾರ್ ಪತ್ನಿಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಬಾಯಿಗೆ ವೇಲ್ ತುರುಕಿ, ಅಪರಿಚಿತ ವ್ಯಕ್ತಿಯ ಬೈಕ್‌ ಹ್ಯಾಂಡ್‌ಲಾಕ್ ಮುರಿದು ಶವ ಸಾಗಿಸಲು ಬಳಸಿದ್ದಾನೆ. ಶವವನ್ನು ಚೀಲದಲ್ಲಿ ಇಟ್ಟುಕೊಂಡು ಬೈಕ್ ತಳ್ಳಿಕೊಂಡು ಹೋಗಿ ಗೋಪಾಲಪುರ ಬಳಿ ಇರುವ ರಾಜಕಾಲುವೆಗೆ ಎಸೆದು ಅಲ್ಲಿಂದ ಪರಾರಿಯಾಗಿದ್ದ.

ಇತ್ತ ಮಹಿಳೆ ಕಾಣೆಯಾಗಿರುವ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು, ಪತಿ ಇಫ್ಜಾರ್ ನನ್ನು ವಿಚಾರಣೆಗೊಳಪಡಿಸಿದ್ದರು. ಪತ್ನಿ ಬಿಹಾರಕ್ಕೆ ಹೋಗಿದ್ದಾಳೆ. ಆಕರ ಮೊಬೈಲ್ ಬಳಸುತ್ತಿಲ್ಲ ಎಂದು ಆತ ನಾಟಕವಾಡಿದ್ದ. ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ಪೊಲೀಸರು ತಮ್ಮದೇ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ನಾನೇ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸದ್ಯ ಇಫ್ಜಾರ್ ನನ್ನು ಬಂಧಿಸಿರುವ ಮಾಗಡಿ ರಸ್ತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅದೆನೇ ಹೇಳಿ.. ಅನುಮಾನ ಎಂಬ ಭೂತ ಏನ್ ಬೇಕಾದರೂ ಮಾಡಿಸುತ್ತೆ ಎಂಬುದಕ್ಕೆ ಈ ಪ್ರಕಣರ ಸ್ಪಷ್ಟ ನಿರ್ದಶನವಾಗಿದೆ‌.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES