• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ದೀಪಾವಳಿ ಹಿನ್ನೆಲೆ ಪಟಾಕಿ ಗಾಯಾಳುಗಳಿಗೆ ಮಿಂಟೋ ಆಸ್ಪತ್ರೆಯಲ್ಲಿ 24x7 ಉಚಿತ ತುರ್ತು ಚಿಕಿತ್ಸೆ!

ದೀಪಾವಳಿ ಹಿನ್ನೆಲೆ ಪಟಾಕಿ ಗಾಯಾಳುಗಳಿಗೆ ಮಿಂಟೋ ಆಸ್ಪತ್ರೆಯಲ್ಲಿ 24x7 ಉಚಿತ ತುರ್ತು ಚಿಕಿತ್ಸೆ!

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿಯಿಂದ ಕಣ್ಣಿಗೆ ಗಾಯವಾಗುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ಪ್ರತಿಷ್ಠಿತ ಮಿಂಟೋ ಆಸ್ಪತ್ರೆಯು ಸಾರ್ವಜನಿಕರ ಸುರಕ್ಷತೆಗಾಗಿ ಮಹತ್ವದ ಮುನ್ನೆಚ್ಚರಿಕೆಗಳನ್ನು ಪ್ರಕಟಿಸಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Nov 03, 2026, 04:24 PM IST|Updated: Nov 03, 2026, 04:26 PM IST
joinshare
ದೀಪಾವಳಿ ಹಿನ್ನೆಲೆ ಪಟಾಕಿ ಗಾಯಾಳುಗಳಿಗೆ ಮಿಂಟೋ ಆಸ್ಪತ್ರೆಯಲ್ಲಿ 24x7 ಉಚಿತ ತುರ್ತು ಚಿಕಿತ್ಸೆ!
Image Credit: minto hospital

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಕೆಂಪು ಅಕ್ಕಿಯಲ್ಲಿದೆ ಆರೋಗ್ಯದ ಗುಟ್ಟು.. ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿಯೇ ಬೆಸ್ಟ್ ಯಾಕೆ?

ಕೆಂಪು ಅಕ್ಕಿಯಲ್ಲಿದೆ ಆರೋಗ್ಯದ ಗುಟ್ಟು.. ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿಯೇ ಬೆಸ್ಟ್ ಯಾಕೆ?

2

ಜಿಬಿಎನಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲು

3

ಬಾಕ್ಸ್‌ ಆಫೀಸ್‌ನಲ್ಲಿ ‘ರಾಮಾಯಣ’ ಅಬ್ಬರ ಶುರು : ಮುಂಗಡ ಬುಕಿಂಗ್‌ನಲ್ಲೇ 73 ಕೋಟಿ ಗಳಿಕೆ

4

ಒಟಿಟಿಯಲ್ಲಿ 'ಅಯ್ಯನ ಮನೆ 2' ಅಬ್ಬರ: ಜೀ5ನಲ್ಲಿ ಹೊಸ ದಾಖಲೆ

5

ನೋಡೋಕೆ ಅಮಾಯಕರು.. ಆದ್ರೆ ಕಿರಾತಕರು..! ಹಣ ಡಬ್ಲಿಂಗ್‌ ಆಸೆ ತೋರಿಸಿ ಜೀವ ತೆಗೆದ ಕೀಚಕರು

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ದೀಪಾವಳಿ ಅಂದ್ರೆ ಬೆಳಕಿನ ಹಬ್ಬ.. ಆದ್ರೆ ಇದೇ ಹಬ್ಬದ ಸಂಭ್ರಮದಲ್ಲಿ ಪಟಾಕಿ ದುರಂತಗಳು ಹೆಚ್ಚಾಗ್ತಿವೆ.. ವರ್ಷದಿಂದ ವರ್ಷಕ್ಕೆ ಪಟಾಕಿಯಿಂದ ಕಣ್ಣಿಗೆ ಗಾಯವಾಗುವ ಪ್ರಕರಣಗಳು ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ ಮಿಂಟೋ ಆಸ್ಪತ್ರೆ ನಿರ್ದೇಶಕ ಡಾ. ಸುರೇಶ್ ಬಾಬು ಅವರು ಇಂದು ಮಹತ್ವದ ಸುದ್ದಿಗೋಷ್ಠಿ ನಡೆಸಿ, ಆಸ್ಪತ್ರೆಯ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ್ದಾರೆ.. ಜೊತೆಗೆ ಪಟಾಕಿ ಸಿಡಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಖಡಕ್ ಸಂದೇಶ ರವಾನಿಸಿದ್ದಾರೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ ನೋಡಿ...

ದೀಪಾವಳಿ ನಾವೆಲ್ಲ ಅದ್ಧೂರಿಯಾಗಿ ಆಚರಣೆ ಮಾಡ್ತೀವಿ.. 24 ಗಂಟೆ ಸೇವೆ ಮಾಡುವ ಮೂಲಕ ಹಬ್ಬ ಮಾಡ್ತೀವಿ.. ಆದ್ರೆ ಪ್ರತಿ ವರ್ಷ ಪಟಾಕಿ ದುರಂತಗಳು ಬರುತ್ತವೆ.. ವರ್ಷದಿಂದ ವರ್ಷಕ್ಕೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ ಎನ್ನುವ ಆತಂಕಕಾರಿ ವಿಚಾರವನ್ನು ಮಿಂಟೋ ಆಸ್ಪತ್ರೆ ನಿರ್ದೇಶಕ ಸುರೇಶ್ ಬಾಬು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.. ಸುರಕ್ಷತೆಯಿಂದ ಹಬ್ಬ ಆಚರಣೆ ಮಾಡಿ.. ಏನಾದ್ರು ಅನಾಹುತ ಆದರೆ ಯಾವಾಗಾದ್ರು ಬನ್ನಿ.. ದಿನದ 24 ಗಂಟೆಯೂ ನಮ್ಮ ಆಸ್ಪತ್ರೆ ಓಪನ್ ಇರುತ್ತೆ.. ನಮ್ಮಲ್ಲಿ ಶುಲ್ಕ ರಹಿತ ವೈದ್ಯಕೀಯ ಚಿಕಿತ್ಸೆ ನೀಡ್ತೀವಿ.. ಒಂದು ರೂಪಾಯಿ ಶುಲ್ಕ ತೆಗೆದುಕೊಳ್ಳದೆ ಚಿಕಿತ್ಸೆ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ..

ಪ್ರತಿ ವರ್ಷ ನಾವು ಸುದ್ದಿಗೋಷ್ಠಿ ಮಾಡಿ ಈ ರೀತಿ ಮಾಹಿತಿ ನೀಡ್ತಿದ್ದೇವೆ.. ಕೆಲ ವರ್ಷಗಳ ಕಾಲ ಕೇಸ್‌ಗಳು ಕಡಿಮೆ ಆಗಿದ್ದವು.. ಆದ್ರೆ ಕಳೆದ ವರ್ಷವೂ ಸಹ ಕೇಸ್‌ಗಳು ಕಮ್ಮಿ ಆಗಿದ್ದವು ಎಂದ ಸುರೇಶ್ ಬಾಬು, ನಮ್ಮ ದೇಶದಲ್ಲಿ ಪಟಾಕಿ ಹೊಡಿಯೋಕೆ ಕೆಲ ರೂಲ್ಸ್ ತರಬೇಕು.. ಇದರಿಂದ ಪಟಾಕಿ ದುರಂತ ಕಮ್ಮಿ ಮಾಡಬಹುದು.. ಇದಕ್ಕಾಗಿ ನಾವೆಲ್ಲ ಸೇರಿ ಅಭಿಯಾನ ಮಾಡಿಸಬೇಕು ಎಂದು ಹೇಳಿದ್ದಾರೆ..

ಪಟಾಕಿ ಸಿಡಿಸುವ ವೇಳೆ ಪಟಾಕಿ ಪ್ರೂಫ್ ಗ್ಲಾಸ್ ಹಾಕೋಬೇಕು.. ಪ್ರೊಟೆಕ್ಟಿವ್ ಗ್ಲಾಸ್ ಹಾಕೊಂಡು ಪಟಾಕಿ ಹೊಡಿಬೇಕು.. ಪಟಾಕಿ ಅಂಗಡಿ ಮಾಲೀಕರು ಸಹ ಪ್ರೊಟೆಕ್ಟಿವ್ ಗ್ಲಾಸ್ ನೀಡಬೇಕು.. ಚಿಕ್ಕಮಕ್ಕಳು ಪಟಾಕಿ ಹೊಡಿಯೋದಕ್ಕೆ ಬಿಡಬಾರದು.. ಪಟಾಕಿ ಹೊಡೆದು ಅಭ್ಯಾಸ ಇರುವವರು ಮಾತ್ರ ಪಟಾಕಿ ಸಿಡಿಸಬೇಕು.. ಪೋಷಕರು ಮಕ್ಕಳ ಕೈಯಲ್ಲಿ ಪಟಾಕಿ ಕೊಡಬಾರದು.. ಪೋಷಕರು ಹೀಗೆ ಮಾಡಿದ್ರೆ ಮಕ್ಕಳ ಜೀವನ ಉಳಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ..

ಜೊತೆಗೆ ಸರ್ಕಾರ ಪಟಾಕಿ ಹೊಡಿಯೋದಕ್ಕೆ ಗ್ರೌಂಡ್‌ನಲ್ಲಿ ಅವಕಾಶ ಕೊಡಬೇಕು.. ಅವಕಾಶ ಕೊಟ್ಟರೆ ಮಾತ್ರ ದುರಂತಗಳನ್ನ ಕಮ್ಮಿ ಮಾಡಬಹುದು.. ಈ ಬಗ್ಗೆ ನಾವು ಸಂಬಂಧಪಟ್ಟ ಸಚಿವರ ಜೊತೆ ಮನವಿ ಮಾಡ್ತೀವಿ ಎಂದು ಹೇಳಿದ್ದಾರೆ.. ಚಿಕಿತ್ಸೆಗೆ ವಾರ್ಡ್‌ಗಳ ವ್ಯವಸ್ಥೆ ಬಗ್ಗೆ ಮಾತನಾಡಿ, ರೋಗಿಗಳಿಗೆ ಬೆಡ್ ವ್ಯವಸ್ಥೆ ಮಾಡಿದ್ದೇವೆ.. ಮಹಿಳೆಯರ ವಾರ್ಡ್ ಬೇರೆ, ಪುರುಷರ ವಾರ್ಡ್ ಬೇರೆ ಮಾಡಿದ್ದೀವಿ.. ಪುರುಷರ ವಾರ್ಡ್‌ಗೆ 15 ಬೆಡ್‌ಗಳ ವ್ಯವಸ್ಥೆ ಮಾಡಿದ್ದೇವೆ.. ಮಹಿಳೆಯರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಿದ್ದೇವೆ.. ಪಟಾಕಿಯಿಂದ ಕಣ್ಣಿಗೆ ಸಮಸ್ಯೆಯಾದರೆ ಆಸ್ಪತ್ರೆ ಸದಾ ತೆರೆದಿರುತ್ತೆ.. ಎಮರ್ಜೆನ್ಸಿ ಕೇಸ್‌ಗಳನ್ನು ನೋಡೋದಕ್ಕೆ ಎಲ್ಲ ವೈದ್ಯರು 24 ಗಂಟೆ ಆಸ್ಪತ್ರೆಯಲ್ಲಿ ಇರಲಿದ್ದಾರೆ ಎಂದು ಭರವಸೆ ನೀಡಿದ್ದಾರೆ..

ಅಷ್ಟೇ ಅಲ್ಲದೆ, ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಆಚರಿಸಿ.. ಏನಾದರೂ ತುರ್ತು ಆದರೆ ತಕ್ಷಣ ಮಿಂಟೋ ಆಸ್ಪತ್ರೆಯ ಎಮರ್ಜೆನ್ಸಿ ನಂಬರ್ 9481740137 ಗೆ ಕರೆ ಮಾಡಿ.. ಒಟ್ಟಾರೆಯಾಗಿ.. ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸುವ ಭರದಲ್ಲಿ ಮಕ್ಕಳ ಮತ್ತು ಸಾರ್ವಜನಿಕರ ಆರೋಗ್ಯದ ಕಡೆಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಪಟಾಕಿ ಸಿಡಿಸುವಾಗ ಪೋಷಕರು ಜಾಗರೂಕರಾಗಿದ್ದರೆ ಮಾತ್ರ ಇಂತಹ ಅನಾಹುತಗಳನ್ನು ತಡೆಯಬಹುದು. ತುರ್ತು ಸಂದರ್ಭಗಳಲ್ಲಿ ತಕ್ಷಣವೇ ವೈದ್ಯಕೀಯ ನೆರವು ಪಡೆಯಲು ಮಿಂಟೋ ಆಸ್ಪತ್ರೆಯು ಸಂಪೂರ್ಣ ಸಜ್ಜಾಗಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸುರಕ್ಷಿತ ಹಾಗೂ ಸಂತೋಷದ ದೀಪಾವಳಿಯನ್ನು ಆಚರಿಸಬೇಕು.

Add Zee News as a Preferred Source
TAGS:
Kannada News