Bengaluru 7 murder case : ಒಂದೇ ಕುಟುಂಬದ ಏಳು ಜನರನ್ನು ಕೊಂದ ಸೈಕೋ ಇಂದುಶೇಖರ್ ರಾಜಾಜಿನಗರ ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿಯನ್ನ ಪೊಲೀಸರು ವಿಚಾರಣೆ ಮಾಡ್ತಿದ್ದು, ಪೊಲೀಸರೇ ಶಾಕ್ ಆಗುವಂತ ಸತ್ಯವನ್ನು ಹೊರ ಹಾಕಿದ್ದಾನೆ. ಹಾಗಾದ್ರೆ ಈತ ಏಳು ಜನರನ್ನು ಕೊಲ್ಲಲು ಮಾಡಿದ್ದ ಪ್ಲಾನ್ ಏನು ಎಲ್ಲವನ್ನು ಎಳೆ ಎಳೆಯಾಗಿ ಹೇಳ್ತೀವಿ ನೋಡಿ.
ಯೆಸ್, ರಾಜಾಜಿನಗರ ಪೊಲೀಸರು ಹತ್ಯಾಕಾಂಡ ನಡೆಸಿದ್ದ ಆರೋಪಿ ಇಂದು ಶೇಖರ್ ವಿಚಾರಣೆ ನಡೆಸಿದ್ದು, ಹಿನ್ನೆಲೆ ಕಲೆ ಹಾಕಿದ್ದಾರೆ. ಈ ವೇಳೆ ಭಯಾನಕ ಸತ್ಯವೇ ಬಯಲಾಗಿದೆ. ಊಟಕ್ಕೇ ಅಂತಾ ಒಬ್ಬೊಬ್ಬರನ್ನೇ ಕರೆಸಿ ಏಳು ಜನರ ಹತ್ಯೆ ಮಾಡಿದ್ದ ಹಂತಕ, ಬಳಿಕ ಅವರ ಮೈಮೇಲೆ ಇದ್ದ ಚಿನ್ನಾಭರಣವನ್ನು ಕಳ್ಳತನ ಮಾಡ್ತಿದ್ದ.. ಅದನ್ನ ತೊಳೆದು ಚಿನ್ನವನ್ನು ಮಾರಾಟ ಮಾಡಿದ್ದನಂತೆ.
ಇನ್ನೂ ಕೊಲೆ ಬಳಿಕ ಆಸಾಮಿಯು, ಚೀಲದಲ್ಲಿ ಮೃತದೇಹ ತುಂಬಿ ಅದಕ್ಕೆ ಹತ್ತು ಲೇಯರ್‌ನ ಡಬಲ್ ಸೈಡ್ ಟೇಪ್ ಜೊತೆಗೆ ಸೆಲ್ಲೋ ಟೇಪ್ ಕೂಡ ಸುತ್ತಿ ಪ್ಯಾಕ್ ಮಾಡಿ, ವಾಸನೆ ಬರದಂತೆ ಮೃತದೇಹವನ್ನು ಶೇಖರ್ ಸಾಗಾಟ ಮಾಡಿದ್ದ. ಕೃತ್ಯ ನಡೆದ ಮನೆಯ ಕೆಳಗೆ ಅಂಗಡಿಗಳು ಕೂಡ ಇದ್ದು, ರಾತ್ರಿಯಾದ ಮೇಲೆ ಯಾರು ಮನೆ ಬಳಿ ಸುಳಿಯುತ್ತಿರಲಿಲ್ಲ. ಹಾಗಾಗಿ ಆರೋಪಿ ಇಂದು ಶೇಖರ್ ಮನೆ ಮೇಲೆ ಇರೋದ್ರಿಂದ ಯಾರಿಗೂ ಅನುಮಾನ ಬಂದಿರಲಿಲ್ಲ.. ರಾತ್ರಿ ಒಬ್ಬೊಬ್ಬರನ್ನೇ ಕೊಂದು ಬೆಳಗಿನ ಜಾವ ಆರೋಪಿ ಮೃತ ದೇಹಗಳನ್ನು ತನ್ನ ಇಟಿಯೋಸ್ ಕಾರಿನಲ್ಲಿ ಸಾಗಾಟ ಮಾಡಿದ್ದಾಗಿ ತನಿಖೆ ವೇಳೆ ಗೊತ್ತಾಗಿದೆ.
ಇನ್ನೂ ತನ್ನ ಇಟಿಯೋಸ್ ಕಾತಿನಲ್ಲಿ ಮೃತದೇಹ ಸಾಗಾಟ ಮಾಡಿದ್ದ ಆರೋಪಿ ಇಂದು ಶೇಖರ್ ತನ್ನ ಕಾರಿನ ಮುಂಭಾಗ ಹಾಗೂ ಹಿಂಭಾಗ ಪ್ರೆಸ್ ಎಂಬ ಸ್ಟಿಕ್ಕರ್ ಹಾಕಿಕೊಂಡಿದ್ದ. ಹೀಗಿದ್ರೆ ಸಾಮಾನ್ಯವಾಗಿ ಪೊಲೀಸರು ಪರಿಶೀಲನೆ ಮಾಡಿದಿಲ್ಲ ಅನ್ನು ಪ್ಲಾನ್ ಆತನದ್ದಾಗಿತ್ತು.. ಅಲ್ಲದೇ ತನ್ನ ಮಗಳನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದ. ಹೀಗಿದ್ರೆ ಸಾಮಾನ್ಯವಾಗಿ ಪೊಲೀಸರಿಗೆ ಅನುಮಾನ ಬರೋದಿಲ್ಲ ಅನ್ನೋ ಉಪಾಯ ಕೊಲೆಗಾರನ್ನದ್ದಾಗಿತ್ತು.
ಹೌದು.. ಪೊಲೀಸರ ವಿಚಾರಣೆ ವೇಳೆ.. ಆರೋಪಿ ಇಂದು ಶೇಖರ್ ಗೆ ಕ್ರಿಮಿನಲ್ ಹಿಸ್ಟರಿ ಇದೇ ಅನ್ನೋದು ಗೊತ್ತಾಗಿದೆ. ಕಾರ್ ಪಾರ್ಕಿಂಗ್ ವಿಚಾರವಾಗಿ ನೆರೆಹೊರೆಯವ್ರ ಜೊತೆಗೆ ಜಗಳಕ್ಕೆ ಇಳಿತಿದ್ದ ಕ್ರಿಮಿ ಇಂದು ಶೇಖರ್ ಯಾರಾದ್ರು ಜಾಸ್ತಿ ಮಾತನಾಡಿದ್ರೆ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದೀರಾ ಅಂತಾ ಪೋಕ್ಸೊ ಕೇಸ್ ದಾಖಲಿಸೊದಾಗಿ ಹೆದರಿಸ್ತಿದ್ದ. ಅಲ್ಲದೇ ಒಮ್ಮೆ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದೆ ಕಾರ್ ಅಡ್ಡ ಹಾಕಿದ್ದರಿಂದ ಹೋಗೋಕೆ ಆಗಿಲ್ಲ ಅಂತಾ ವ್ಯಕ್ತಿಯಿಂದ 10 ಸಾವಿರ ಹಣ ಕೂಡ ಪೀಕಿದ್ದ ಅನ್ನೋದು ಬಹಿರಂಗವಾಗಿದೆ..
ಇನ್ನೂ ಆರೋಪಿ ಇಂದು ಶೇಖರ್ ತಾನು ಠಾಣಾ ವರದಿಯ ಮಾಸ ಪತ್ರಿಕೆ ಹಾಗೂ ಯೂಟ್ಯೂಬ್ ಚಾನಲ್ ಚೀಫ್ ಎಡಿಟರ್ ಎಂದು ಜನರನ್ನು ಸಂಪರ್ಕ ಮಾಡ್ತಿದ್ದ. ಸಹಾಯ ಕೇಳೋಕೆ ಅಂತಾ ಬಂದವ್ರ ಬಳಿಯೇ ಅನೇಕ ಕಾರಣ ನೀಡಿ ಹಣ ಸುಲಿಗೆ ಮಾಡ್ತಿದ್ದ. ನಿನ್ನೆ ನಂದಿ ಬೆಟ್ಟದಲ್ಲಿ ಪತ್ತೆಯಾದ ಬಾಲಕ ಪುನೀತ್ ಮೃತದೇಹ ಅಂತ್ಯಕ್ರಿಯೆ ಬೆಂಗಳೂಲ್ಲಿ ಕುಟುಂಬಸ್ಥರು ನೆರವೇರಿಸಲಾಗಿದೆ. ಮತ್ತೊಂದೆಡೆ ಆರೋಪಿ ಬಂಧಿಸಿ ಬೇರೆ ಬೇರೆ ಕಡೆಗೆ ಎಸೆಯಲಾದ ಮೃತದೇಹಗಳ ಹುಡುಕಾಟವನ್ನು ಪೊಲೀಸರು ನಡೆಸ್ತಿದ್ದಾರೆ.
ಕೊಲೆ ಬಳಿಕ ಮೃತದೇಹ ಸಾಗಿಸಿದ್ದ KA 02 AF 1488 ನಂಬರ್ ನ ಇಟಿಯೋಸ್ ಕಾರ್ ಅನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಇಲ್ಲಿವರೆಗಿನ ವಿಚಾರಣೆ ವೇಳೆ ಹಲವು ಸಂಗತಿ ಬಯಲಾಗಿದ್ದು, ಮತ್ತೆಷ್ಟು ಸ್ಫೋಟಕ ಸಂಗತಿ ಬಯಲಾಗುತ್ತೋ ಅನ್ನೋ ಕುತೂಹಲ ಹೆಚ್ಚಾಗಿದೆ.