ಸ್ಟಿಂಗ್ ಆಪರೇಷನ್‌ಗೆ ಮತ್ತೊಂದು ಟ್ವಿಸ್ಟ್... ಆದರೆ.. ಪ್ರಕರಣದ ತನಿಖೆಗೆ ಇದೇ ದೊಡ್ಡ ತೊಡಕು..!
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದು, ಇದು ಪ್ರಕಣದ ಹಿಂದೆ ಯಾರಿದ್ದಾರೆ ಎಂದು ತಿಳಿಯಲು ಸಹಕಾರಿ ಆಗಲಿದೆ ಎನ್ನಲಾಗುತ್ತಿದೆ.
ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ʼಸ್ಟಿಂಗ್ ಆಪರೇಷನ್ʼ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಬಿಗ್ ತಿರುವು ಸಿಕ್ಕಿದ್ದು, ಇದು ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂದು ತಿಳಿಯಲು ಸಹಕಾರಿ ಆಗುವ ನಿರೀಕ್ಷೆ ಇದೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ʼಮದರ್ ಡಿವೈಸ್ʼ ಪತ್ತೆ ಆಗದಿರುವುದು ತನಿಖೆಗೆ ತೊಡಕುಂಟಾಗಲಿದೆ ಎನ್ನಲಾಗುತ್ತಿದೆ. ಈ ಕುರಿತ ವರದಿ ಇಲ್ಲಿದೆ.
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್‌ಗೆ ಮತ್ತೊಂದು ಟ್ವಿಸ್ಟ್:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರಕರಣದಲ್ಲಿ ಮಾಜಿ ಪತ್ರಕರ್ತನ ಕೈವಾಡದ ಶಂಕೆ ವ್ಯಕ್ತವಾಗಿದೆ. ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಮುಖ ಆರೋಪಿ ರಿತೇಶ್ ಪಾಂಡೆಗೆ ಮಾಜಿ ಪತ್ರಕರ್ತರೊಬ್ಬರು ನಿರ್ದೇಶನ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ
ಮಾಜಿ ಪತ್ರಕರ್ತನ ಪಾತ್ರದ ಬಗ್ಗೆ ಸಿಸಿಬಿ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ.
ಸ್ಟಿಂಗ್ ಆಪರೇಷನ್ ಪ್ರಮುಖ ಆರೋಪಿ ರಿತೇಶ್ ಪಾಂಡೆ ರಾಷ್ಟ್ರ ರಾಜಧಾನಿ ನವದೆಹಲಿ ಅಲ್ಲಿ ಸ್ಟಿಂಗ್ ಆಪರೇಷನ್ ನಡೆಸಲೆಂದೇ ಹೊಸ ಮೊಬೈಲ್ ಖರೀದಿಸಿದ್ದು, ಈ ಸಂದರ್ಭದಲ್ಲಿ ಮಾಜಿ ಪತ್ರಕರ್ತನ ಜೊತೆಗೆ ಆತ ಸಂಪರ್ಕದಲ್ಲಿ ಇದ್ದ ಎನ್ನಲಾಗುತ್ತಿದೆ. ಅಲ್ಲದೆ, ಸ್ಟಿಂಗ್ ವಿಡಿಯೋ ಅಪ್‌ಲೋಡ್ ಮಾಡುವ ಸಂದರ್ಭದಲ್ಲೂ ಕೂಡ ಆರೋಪಿ ರಿತೇಶ್ ಪಾಂಡೆ ಮಾಜಿ ಪತ್ರಕರ್ತನೊಂದಿಗೆ ಸಂಪರ್ಕ ಹೊಂದಿದ್ದ ಎಂತಲೂ ಹೇಳಲಾಗುತ್ತಿದೆ.
ಮೊಬೈಲ್ ಖರೀದಿ ವೇಳೆ ಆರೋಪಿ ರಿತೇಶ್ ಪಾಂಡೆ, ಮಾಜಿ ಪತ್ರಕರ್ತನ ಜೊತೆಗೆ ಇತರ ಕೆಲವರೂ ಕೂಡ ಇದ್ದರು ಎಂದು ಹೇಳಲಾಗುತ್ತಿದ್ದು, ಇವೆರೆಲ್ಲರೂ ದೆಹಲಿಯ ಕೋಲ್ ಬಜಾರ್ ಮಾರ್ಕೆಟ್‌ನಲ್ಲಿ ಸರಿಸುಮಾರು ಮೂರು ತಾಸುಗಳ ಕಾಲ ಒಟ್ಟಿಗಿದ್ದರು ಎಂಬ ಸುಳಿವು ಲಭ್ಯವಾಗಿದೆ.
ಮೊಬೈಲ್ ಸಿಡಿಆರ್ ಆಧರಿಸಿ ತನಿಖೆ ಮುಂದುವರಿಸಿರುವ ಸಿಸಿಬಿ, ಮಾಜಿ ಪತ್ರಕರ್ತನ ಪಾತ್ರದ ಬಗ್ಗೆ ತಾಂತ್ರಿಕ ಸಾಕ್ಷ್ಯಗಳ ಪರಿಶೀಲನೆಗೆ ಮುಂದಾಗಿದೆ. ಒಂದೊಮ್ಮೆ ಈ ಪ್ರಕರಣದಲ್ಲಿ ಮಾಜಿ ಪತ್ರಕರ್ತ ನಿರ್ದೇಶನ ನೀಡಿರುವುದು ದೃಢಪಟ್ಟರೆ ಆತನಿಗೂ ಸಹ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ.
ಇನ್ನೂ ಪತ್ತೆ ಆಗದ ʼಮದರ್ ಡಿವೈಸ್ʼ!
ಮಾಜಿ ಸಿಎಂ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದಂತೆ, ಸಂತ್ರಸ್ಥೆಯ ವಿಡಿಯೋ ಸೆರೆ ಹಿಡಿದ ಮೊಬೈಲ್ ಪತ್ತೆಗಾಗಿ ಖಾಕಿ ಹುಡುಕಾಟ ಮುಂದುವರೆಸಿದ್ದಾರೆ. ಸ್ಟಿಂಗ್ ಆಪರೇಷನ್‌ನಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪ್ರಶಾಂತ್ ಮೊಬೈಲ್‌ನಲ್ಲೇ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಸಿಗುವ ನಿರೀಕ್ಷೆ ಇದ್ದು, ಆತನ ಮೊಬೈಲ್ ವಶಕ್ಕೆ ಪಡೆಯಲು ಪೊಲೀಸರು ಕಸರತ್ತು ನಡೆಸಿದ್ದಾರೆ.
ಈಗಾಗಲೇ ನಾಲ್ಕು ಬಾರಿ ಆರೋಪಿ ಪ್ರಶಾಂತ್‌ನನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಆರೋಪಿ ಪ್ರಶಾಂತ್ ಈ ಸಂದರ್ಭದಲ್ಲಿ ತನಗೆ ಸ್ಟಿಂಗ್ ಆಪರೇಷನ್ ಬಗ್ಗೆ ಏನೂ ಗೊತ್ತಿಲ್ಲ, ನಾನು ಯಾರ ವಿರುದ್ಧವೂ ಯಾವುದೇ ಸ್ಟಿಂಗ್ ಮಾಡಿಲ್ಲ ಎನ್ನುತ್ತಿದ್ದಾನೆ ಎಂದು ತಿಳಿದುಬಂದಿದೆ.
ಮದರ್ ಡಿವೈಸ್ ಸಿಗದಿರುವುದು ತನಿಖೆಗೆ ದೊಡ್ಡ ಹಿನ್ನಡೆ..!
ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ಸ್ಟಿಂಗ್ ಆಪರೇಷನ್ ನಡೆಸಲಾಗಿದೆ ಎನ್ನಲಾಗುತ್ತಿರುವ ಪ್ರಕರಣದ ಸತ್ಯಾಸತ್ಯತೆ ಬಯಲಿಗೆಳೆಯಲು ಪೊಲೀಸರಿಂದ ತನಿಖೆ ತೀವ್ರಗೊಂಡಿದೆ. ಆದರೆ, ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ಮದರ್ ಡಿವೈಸ್ ಸಿಗದೇ ಇರುವುದು ಈ ತನಿಖೆಯಲ್ಲಿ ದೊಡ್ಡ ಹಿನ್ನಡೆ ಆದಂತಾಗಿದೆ.
ಮದರ್ ಡಿವೈಸ್ ಸಿಕ್ಕರೆ ಸಿದ್ದರಾಮಯ್ಯ ವಿರುದ್ಧದ ಈ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸುಳಿವು ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ. ಸ್ಟಿಂಗ್ ಪ್ರಕರಣದ ತನಿಖೆಯಲ್ಲಿ ಮತ್ತಷ್ಟು ಮಾಹಿತಿ ಕಲೆಹಾಕುತ್ತಿರುವ ಪೊಲೀಸರು ಈ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಲು ಪ್ರಯತ್ನಿಸುತ್ತಿದ್ದಾರೆ.