SOCIAL MEDIA

Newsletter

PARTNER SITES
Select Language Select State

ಅ.30 ರಿಂದ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ವಿವಿಯಿಂದ ನಾಲ್ಕು‌ ದಿನಗಳ ಬೃಹತ್ 'ಕೃಷಿ ಮೇಳ'

'ಬರ ನಿರ್ವಹಣೆಗೆ ನಾವೀನ್ಯತಾ ಕೃಷಿ' ಎಂಬ ಘೋಷವಾಕ್ಯದಡಿ ನಡೆಯುವ ಕೃಷಿ ಮೇಳದಲ್ಲಿ ಆಧುನಿಕ ಕೃಷಿ ತಂತ್ರಜ್ಞಾನಗಳು ಮತ್ತು ನಾವೀನ್ಯತಾ ವಿಧಾನಗಳ ಪ್ರದರ್ಶನ ಇರಲಿದೆ.

Reported By Manjunath Naragund Written By Manjunath Naragund
Published: Oct 28, 2026, 11:08 PM IST | Updated: Oct 28, 2026, 11:18 PM IST
Image Credit: Krishi Mela
Join

ಶಿವಮೊಗ್ಗ ಅ.28: ಶಿವಮೊಗ್ಗದ ನವಿಲೆಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಇದೇ ಅ.30 ರಿಂದ ನವೆಂಬರ್ 2 ರವರೆಗೆ 'ಕೃಷಿ ಮತ್ತು ತೋಟಗಾರಿಕೆ ಮೇಳ-2026' ನಡೆಯಲಿದೆ.

'ಬರ ನಿರ್ವಹಣೆಗೆ ನಾವೀನ್ಯತಾ ಕೃಷಿ' ಎಂಬ ಘೋಷವಾಕ್ಯದಡಿ ನಡೆಯುವ ಕೃಷಿ ಮೇಳದಲ್ಲಿ ಆಧುನಿಕ ಕೃಷಿ ತಂತ್ರಜ್ಞಾನಗಳು ಮತ್ತು ನಾವೀನ್ಯತಾ ವಿಧಾನಗಳ ಪ್ರದರ್ಶನ ಇರಲಿದೆ.ಆಧುನಿಕ ಬೇಸಾಯ ಪದ್ಧತಿ, ನೀರು ನಿರ್ವಹಣೆ, ಸುಧಾರಿತ ತಳಿಗಳು, ಕೀಟ ಮತ್ತು ರೋಗ ನಿರ್ವಹಣೆ ಕುರಿತು ಪ್ರಾಯೋಗಿಕ ಮಾಹಿತಿಯೂ ಮೇಳದಲ್ಲಿ ಸಿಗಲಿದೆ.ಅಕ್ಟೋಬರ್ 31ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೃಷಿ‌ ಮತ್ತು‌ ತೋಟಗಾರಿಕಾ‌ ಮೇಳವನ್ನು ಉದ್ಘಾಟಿಸಲಿದ್ದಾರೆ.

ಪುಸ್ತಕ/ ತಾಂತ್ರಿಕ ಕೈಪಿಡಿಗಳನ್ನು ಶಾಲಾ‌ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದ ಎಸ್.ಮಧು ಬಂಗಾರಪ್ಪ ಬಿಡುಗಡೆ ಮಾಡುವರು. ವಸ್ತು ಪ್ರದರ್ಶನವನ್ನು ಕೃಷಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ಉದ್ಘಾಟಿಸಲಿದ್ದಾರೆ.‌ತಂತ್ರಜ್ಞಾನ ಉದ್ಯಾನವನವನ್ನು ತೋಟಗಾರಿಕಾ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರು ಉದ್ಘಾಟಿಸುವರು.  ಶಾಸಕರಾದ ಬಿ.ಕೆ.ಸಂಗಮೇಶ್ವರ, ಗೋಪಾಲಕೃಷ್ಣ ಬೇಳೂರು, ಶಾರದಾ ಪೂರ್ಯಾನಾಯ್ಕ್ ಭಾಗವಹಿಸಲಿದ್ದಾರೆ.

​'ಕೃಷಿ ಮೇಳದಲ್ಲಿ  ಕೃಷಿ ಪರಿಕರಗಳು:

ಹೊಸ ತಳಿಗಳು, ಬಿತ್ತನೆ ಬೀಜ, ರಸಗೊಬ್ಬರ, ಆಧುನಿಕ ಯಂತ್ರೋಪಕರಣಗಳು, ನರ್ಸರಿ ಗಿಡಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.ಕೃಷಿ ವಿಶ್ವವಿದ್ಯಾಲಯಕ್ಕೆ ಪೇಟೆಂಟ್ ಲಭಿಸಿರುವ 'ಬಹುಪಯೋಗಿ ಕೃಷಿ ಉಪಕರಣ' ಮತ್ತು 'ಸೋಲಾರ್ ಮಲ್ಟಿಗ್ರೇನ್ ಕ್ಲೀನರ್' ಅನ್ನು ಪ್ರದರ್ಶನದಲ್ಲಿ ಇರಿಸಲಾಗುವುದು

ಹೊಸ ಭತ್ತದ ತಳಿಯಾದ 'ಸಹ್ಯಾದ್ರಿ ಅನ್ನಪೂರ್ಣ', ಆಕ್ರೋಮೆಟ್ AI ವಾಟ್ಸಪ್ ಬಾಟ್ ಹಾಗೂ ಸಹ್ಯಾದ್ರಿ AI ಸಮಾಲೋಚನಾ ತಂತ್ರಾಂಶವನ್ನು ಕೃಷಿ ಮೇಳದಲ್ಲಿ ಬಿಡುಗಡೆ ಮಾಡಲಾಗುವುದು.ಸ್ಮಾರ್ಟ್ ಕೃಷಿ, ಜಾನುವಾರು ಮತ್ತು ಸಾಕುಪ್ರಾಣಿಗಳ ಪ್ರದರ್ಶನವೂ ಮೇಳದಲ್ಲಿ ಇರಲಿದೆ.ಜೊತೆಗೆ ಇನ್ನಷ್ಟು ಕೃಷಿ ಪ್ರಗತಿಗಾಗಿ 7 ಪ್ರಮುಖ ಸಂಸ್ಥೆಗಳೊಂದಿಗೆ ಒಡಂಬಡಿಕೆಯನ್ನೂ ಮಾಡಿಕೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES