• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ರಾಜಧಾನಿ 7 ಜನರ ಸರಣಿ ಹ*ತ್ಯೆ : ಮೈಜುಮ್ಮೆನ್ನಿಸುವಂತಿದೆ ಸೈಕೋ ಇಂದುಶೇಖರ್‌ ಮಾಸ್ಟರ್‌ ಪ್ಲಾನ್

ರಾಜಧಾನಿ 7 ಜನರ ಸರಣಿ ಹ*ತ್ಯೆ : ಮೈಜುಮ್ಮೆನ್ನಿಸುವಂತಿದೆ ಸೈಕೋ ಇಂದುಶೇಖರ್‌ ಮಾಸ್ಟರ್‌ ಪ್ಲಾನ್

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ 7 ಜನರ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬೆಚ್ಚಿಬೀಳಿಸುವ ಕರಾಳ ಮುಖ ಮತ್ತು ಕೃತ್ಯದ ಸಂಚು ಒಂದೊಂದಾಗಿ ಬಯಲಾಗುತ್ತಿದೆ. ಕೊಲೆ ಬಳಿಕ ಸಾಕ್ಷಿ ನಾಶ ಮಾಡಲು ಶವಗಳನ್ನು ಬೆಡ್‌ಶೀಟ್ ಮತ್ತು ಚೀಲಗಳಲ್ಲಿ ಕಟ್ಟಿ, ರಾಸಾಯನಿಕ ದ್ರಾವಕ ಬಳಸಿ ಘಾಟ್ ಪ್ರದೇಶದಲ್ಲಿ ಎಸೆದಿದ್ದ ಭಯಾನಕ ವಿವರಗಳು ತನಿಖೆಯಿಂದ ಹೊರಬಂದಿವೆ.. ಹೆಚ್ಚಿನ ವಿವರಗಳು ಇಲ್ಲಿವೆ..

Written ByKrishna NK
Published: Nov 11, 2026, 14:54 IST|Updated: Nov 11, 2026, 14:55 IST
joinshare
ರಾಜಧಾನಿ 7 ಜನರ ಸರಣಿ ಹ*ತ್ಯೆ : ಮೈಜುಮ್ಮೆನ್ನಿಸುವಂತಿದೆ ಸೈಕೋ ಇಂದುಶೇಖರ್‌ ಮಾಸ್ಟರ್‌ ಪ್ಲಾನ್
Image Credit: Crime news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರಾಜಾಜಿನಗರ ನರಮೇದ ಹತ್ಯೆ ಪ್ರಕರಣಲ್ಲಿ ಆರೋಪಿಯ ಕರಾಳ ಮುಖ ಬಯಲಾಗಿದೆ.‌ ಕೊಲೆಯ ಬಳಿಕ ಮೃತದೇಹಗಳನ್ನ ಸಾಗಿಸಿ, ಸಾಕ್ಷಿ ನಾಶ ಮಾಡೋದಕ್ಕೆ ಮಾಡಿದ್ದ ಪ್ಲಾನ್ ಬಾಯ್ಬಿಟ್ಟಿದ್ದಾನೆ. ರಸ್ತೆ ಬದಿಯಲ್ಲಿ ಬೆಡ್ ಶೀಟ್ ಖರೀದಿ ಮಾಡಿದ್ದು ಮೂಟೆ ಕಟ್ಟಿ ಬಿಸಾಡಿದ್ದ ಅನ್ನೋದು ಗೊತ್ತಾಗಿದೆ. ಪರಮಪಾಪಿಯ ಕರಾಳ ಮುಖದ ಬಗ್ಗೆ ಮತ್ತಷ್ಟು ಹೇಳ್ತಿನಿ ನೋಡಿ.

ಕಳೆದ ವಾರ ರಾಜಾಜಿನಗರದಲ್ಲಿ ನಡೆದಿದ್ದ ಏಳು ಜನರ ನರಮೇದ ಹತ್ಯೆ ‌ಕೇಸ್ ನಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಕೊಲೆ ಮಾಡಲು ಮೊದಲೇ ಪ್ಲಾನ್ ಮಾಡಿದ್ದ. ಆದಾದ ನಂತರ ಡೆಡ್ ಬಾಡಿಗಳನ್ನ ಸಾಗಿಸಲು ಸೆಲ್ಲೋ‌ ಟೇಪ್, ಚೀಲ, ಹಗ್ಗ, ಕವರ್, ಹಾಕಿದ್ದ ಇದರ ಜೊತೆಗೆ ಮತ್ತೊಂದು ಪ್ಲಾನ್ ಮಾಡಿದ್ದ ಪತ್ನಿ ಸುನೀತಾ, ಅತ್ತೆ ರೂಪಾವತಿ ಕೊಲೆ ಬಳಿಕ ರೋಡ್ ಸೈಡ್ ನಲ್ಲಿ ನಾರ್ಥ್ ಇಂಡಿಯನ್ಸ್ ಮಾರಾಟ ಮಾಡುವವರ ಬಳಿ ಒಂದು ಬಂಡಲ್ ಬೆಡ್ ಶೀಟ್ ಖರೀದಿ ಮಾಡಿದ್ದ. ಇದರಲ್ಲಿ ಮೂರು ಬೆಡ್ ಶೀಟ್ ನಲ್ಲಿ ಮೃತದೇಹವನ್ನು ಕವರ್ ಮಾಡಿದ್ದ ವೇಸ್ಟ್ ಬಟ್ಟೆಗಳನ್ನು ಸುತ್ತಿದ್ದ. ಒಂದೊಂದು ಮೃತದೇಹವನ್ನು ಮೂಟೆ ರೀತಿಯಲ್ಲಿ ಕಟ್ಟಿ ಕಾರಿನ ಡಿಕ್ಕಿಯಲ್ಲಿ ಹಾಕಿದ್ದ.

ಶಿವಕುಮಾರ್ ಮತ್ತು ಶಂಕರ್‌ನ ಹತ್ಯೆ ಮಾಡಿದ ನಂತರ ಅವರ ಬಟ್ಟೆಗಳನ್ನು ಬಿಚ್ಚಿ ಅದರಿಂದಲೇ ಅವರ ಮೊಣಕಾಲು ಮತ್ತು ಕೈಗೆ ಲಗಾಮು ಹಾಕೋ ರೀತಿ ಕುಳಿತಿರುವಂತೆ ಮೂಟೆ ಕಟ್ಟಿದ್ದ ಮತ್ತು ನಳಿನಿ, ದಿವ್ಯಾ ರೂಪಾವತಿ, ಸುನಿತಾ ಅವರ ಸೀರೆಯನ್ನು ಕೂಡ ಎಳೆದು ಕಟ್ಟಿದ್ದ. ಮೃತದೇಹಗಳ ಮೇಲೆ ರಾಸಾಯನಿಕ ದ್ರಾವಕ ಹಾಕಿದ್ದ. ಆದಷ್ಟು ಬೇಗ ಬಾಡಿಗಳು ಡಿ‌ ಕಂಪೋಸ್ ಆಗಲಿ ಎಂದು ಪ್ಲಾನ್ ಮಾಡಿದ್ದ. ಇನ್ನೂ ಮೃತದೇಹಗಳನ್ನ ಘಾಟ್‌ನ ಭಾಗದಲ್ಲಿಯೇ ಎಸೆದು ಬಂದಿದ್ದ. ಏಳು ಬಾಡಿಗಳಲ್ಲಿ ಮೂರು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಈಗಾಗಲೇ ಏಳು ಜನರ ಅಂತ್ಯಕ್ರಿಯೆ ನೆರವೇರಿಸಿರೋ ಕುಟುಂಬಸ್ಥರು ಶ್ರೀರಂಗಪಟ್ಟಣದಲ್ಲಿ ಅಸ್ತಿ ವಿಸರ್ಜನೆ ಮಾಡಿ ಕಾರ್ಯ ಮುಗಿಸಿದ್ದಾರೆ.

ಮತ್ತೊಂದು ಕಡೇ ಸರಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಮಹತ್ವದ ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ಏಳು ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಕೊಲೆಗೆ ಪ್ರಮುಖ ಕಾರಣವೇನು ಎಂಬುದರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ವೈಯಕ್ತಿಕ ಹಾಗೂ ಆಸ್ತಿ ವಿಚಾರವೇ ಕೊಲೆಗೆ ಕಾರಣವಾಗಿರುವ ಶಂಕೆಯಿದೆ. ಪ್ರಕರಣದ ತನಿಖೆಗೆ ಡಿಸಿಪಿಯನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ತ್ವರಿತಗತಿಯಲ್ಲಿ ತನಿಖೆ ನಡೆಯುತ್ತಿದೆ. ಪ್ರಕರಣದ ವಿಚಾರಣೆಗಾಗಿ ಫಾಸ್ಟ್‌ಟ್ರ್ಯಾಕ್ ಕೋರ್ಟ್ ಸ್ಥಾಪನೆ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರ ನೇಮಕದ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ.

ಇನ್ನೂ ಏಳು ಮೃತದೇಹಗಳ ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದ ನಂತರ ಯಾವ ರೀತಿ ಹತ್ಯೆ ಮಾಡಿದ್ದಾನೆ ಅನ್ನೋದು ಗೊತ್ತಾಗಲಿದೆ. ಅದೆನೇ ಹೇಳಿ.. ನರರೂಪದ ರಾಕ್ಷಸನ ಒಂದೊಂದೆ ಕೃತ್ಯಗಳು ಬಯಲಾಗುತ್ತಿರೋದು ನೋಡಿದ್ರೆ ಇವನ ಮನಸ್ಥಿತಿ ಎಂತಹದ್ದು ಎಂಬ ಪ್ರಶ್ನೆ ಮೂಡುವುದಂತು ಸುಳ್ಳಲ್ಲ.

Add Zee News as a Preferred Source
TAGS:
Crime