SOCIAL MEDIA

Newsletter

PARTNER SITES
Select Language Select State

ಟ್ರಂಪ್ - ಕ್ಸಿ ಜಿನ್‌ಪಿಂಗ್ ಹೈವೋಲ್ಟೇಜ್ ಸಭೆ: ಅಮೆರಿಕಾದತ್ತ ವಿಶ್ವದ ಕಣ್ಣು

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಹಲವು ವರ್ಷಗಳ ನಂತರ ಅಮೆರಿಕಾಗೆ ಭೇಟಿ ನೀಡಿದ್ದು, ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ವ್ಯಾಪಾರ ಸಮರ, ತೈವಾನ್ ವಿವಾದ, ಪಶ್ಚಿಮ ಏಷ್ಯಾ ಸಂಘರ್ಷ ಹಾಗೂ ಕೃತಕ ಬುದ್ಧಿಮತ್ತೆಯ (AI) ಸವಾಲುಗಳ ನಡುವೆ ನಡೆದ ಈ ಉನ್ನತ ಮಟ್ಟದ ಸಭೆಯ ಸಂಪೂರ್ಣ ವರದಿ ಇಲ್ಲಿದೆ.

Reported By Krishna NK Written By Krishna NK
Published: Sep 25, 2026, 08:20 PM IST | Updated: Sep 25, 2026, 08:26 PM IST
Image Credit: Donald Trump Xi Jinping
Join

Donald Trump Xi Jinping Summit : ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಅಮೆರಿಕಾಗೆ ಭೇಟಿ ನೀಡಿದ್ದಾರೆ. ಹಲವು ವರ್ಷಗಳ ನಂತರ ಶ್ವೇತಭವನಕ್ಕೆ ಆಗಮಿಸಿದ, ಚೀನಾ ಅಧ್ಯಕ್ಷರಿಗೆ ಟ್ರಂಪ್ ಭವ್ಯ ಸ್ವಾಗತ ಕೋರಿದ್ದಾರೆ.. ಉಭಯ ನಾಯಕರ ಮಧ್ಯೆ ಮಹತ್ವದ ಸಭೆ ನಡೆದಿದ್ದು, ಮೀಟಿಂಗ್‌ನಲ್ಲಿ ಏನ್‌ ಚರ್ಚೆ ಆಯ್ತು ಅನ್ನೋದರ ವರದಿ ಇಲ್ಲಿದೆ ನೋಡಿ....

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಮೆರಿಕಗೆ ಭೇಟಿ ನೀಡಿದರು... ಹಲವು ವರ್ಷಗಳ ನಂತರ ಶ್ವೇತಭವನಕ್ಕೆ ಆಗಮಿಸಿದ ಚೀನಾ ಅಧ್ಯಕ್ಷರಿಗೆ ಟ್ರಂಪ್ ಭವ್ಯ ಸ್ವಾಗತ ಕೋರಿದ್ದಾರೆ.. ಟ್ರಂಪ್, ಷಿ ಜಿನ್‌ಪಿಂಗ್ ಅವರನ್ನು ಸ್ವಾಗತಿಸುವ ವೇಳೆ ತಮ್ಮ ನಡುವಿನ ಉತ್ತಮ ಸ್ನೇಹದ ಬಗ್ಗೆ ಕೊಂಡಾಡಿದರು. 2016ರಲ್ಲಿ ತಾವು ಮೊದಲ ಬಾರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ರಿ... ಆಗಿನಿಂದಲೂ ಇಬ್ಬರ ನಡುವೆ ಪರಸ್ಪರ ಗೌರವ, ಎರಡೂ ದೇಶಗಳ ಜನರ ಹಿತಾಸಕ್ತಿ ಆಧರಿಸಿದ ಸ್ನೇಹ ಬೆಳೆದಿದೆ ಎಂದು ಟ್ರಂಪ್ ಹೇಳಿದರು.

ಶ್ವೇತಭವನದಲ್ಲಿ ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವೆ ಮಹತ್ವದ ಸಭೆ ನಡೆದಿದೆ.. AI, ವ್ಯಾಪಾರ, ತೈವಾನ್ ಮತ್ತು ಇರಾನ್‌ನಂತಹ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.. ಇದೇ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಮೆರಿಕ ಮತ್ತು ಚೀನಾ ನಡುವಿನ ಸ್ಪರ್ಧೆ ಆರೋಗ್ಯಕರವಾಗಿರಬೇಕು. AI ಸದಾ ಮಾನವರ ನಿಯಂತ್ರಣದಲ್ಲಿರಬೇಕು ಎಂದು ಒತ್ತಿ ಹೇಳಿದರು.

ಇನ್ನು ಚೀನಾ ಮತ್ತು ಅಮೆರಿಕ ನಡುವಿನ ಸ್ನೇಹದ ಸಂಕೇತವಾಗಿ ಎರಡು ದೈತ್ಯ ಪಾಂಡಾಗಳನ್ನು ಅಮೆರಿಕಕ್ಕೆ ಕಳುಹಿಸುವುದಾಗಿ ಕ್ಸಿ ಜಿನ್ ಪಿಂಗ್  ಘೋಷಿಸಿದ್ದಾರೆ. ಪಿಂಗ್ ಪಿಂಗ್ ಮತ್ತು ಫು ಶುವಾಂಗ್ ಹೆಸರಿನ ಈ ಪಾಂಡಾಗಳು ಅಟ್ಲಾಂಟಾ ಮೃಗಾಲಯದಲ್ಲಿ ಇರಲಿವೆ. ಷಿ ಜಿನ್‌ಪಿಂಗ್ ಅವರು ಈ ಪಾಂಡಾಗಳು ಎರಡೂ ದೇಶಗಳ ಜನರ ನಡುವಿನ ಸ್ನೇಹವನ್ನು ಮತ್ತಷ್ಟು ಬಲಪಡಿಸಲಿ ಎಂದು ಹೇಳಿದ್ದಾರೆ.

ಒಟ್ಟಾರೆ, ಪಶ್ಚಿಮ ಏಷ್ಯಾ ಸಂಘರ್ಷ, ತೈವಾನ್ ವಿವಾದ ಹಾಗೂ ವ್ಯಾಪಾರ ಸಮರದ ನಡುವೆಯೇ ಚೀನಾ ಅಧ್ಯಕ್ಷ ಹಾಗೂ ಟ್ರಂಪ್‌ ಭೇಟಿಯಾಗಿದೆ.. ಚರ್ಚಿಸಲು ಹಲವು ಜಟಿಲ ವಿಷಯಗಳಿದ್ದರೂ ಟ್ರಂಪ್‌ ಚೀನಾದ ಜೊತೆಗಿನ ಸ್ನೇಹವನ್ನ ಕೊಂಡಾಡಿದ್ದಾರೆ..ಇದೆಲ್ಲದರ ನಡುವೆ ಚೀನಾ ಅಧ್ಯಕ್ಷರು ಎಐ ಬಗ್ಗೆ ಎಚ್ಚರಿಕೆಯ ನುಡಿಯನ್ನೂ ಹಾಡಿದ್ದು,  ಉಭಯ ನಾಯಕರ ನಡುವಿನ ಚರ್ಚೆ ಬಗ್ಗೆ ಮತ್ತಷ್ಟು ಕುತೂಹಲ ಮೂಡಿದೆ...

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES