ಹಳೆ ನೆನಪುಗಳಿಗೆ ಹೊಸ ರೂಪ, ಪ್ರೇಕ್ಷಕರಿಗೆ ಭರ್ಜರಿ ಮನರಂಜನಾ ರಸದೌತಣ : ಜೀ ಹೊಸ ರಿಯಾಲಿಟಿ ಶೋಗಳ ಧಮಾಕ
ದೇಶದ ಮನರಂಜನಾ ಲೋಕದ ದೈತ್ಯ ಸಂಸ್ಥೆ 'ಜೀ ಎಂಟರ್‌ಟೈನ್‌ಮೆಂಟ್', ತನ್ನ ವೀಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡಲು ವಿವಿಧ ಭಾಷೆಗಳಲ್ಲಿ ಹೊಸ ರಿಯಾಲಿಟಿ ಶೋಗಳು, ಅಡುಗೆ ಕಾರ್ಯಕ್ರಮಗಳು ಮತ್ತು ಜನಪ್ರಿಯ ಹಳೆಯ ಶೋಗಳ ಹೊಸ ಸೀಸನ್‌ಗಳನ್ನು ಪರಿಚಯಿಸುವ ಮೂಲಕ ತನ್ನ ನಾನ್-ಫಿಕ್ಕ್ಷನ್ ಪಟ್ಟಿಯನ್ನು ವಿಸ್ತರಿಸಲು ಸಿದ್ಧವಾಗಿದೆ. ಈ ಎಲ್ಲಾ ಕಾರ್ಯಕ್ರಮಗಳು ಟಿವಿ ಜೊತೆಗೆ 'ಜೀ5' ಒಟಿಟಿ ವೇದಿಕೆಯಲ್ಲೂ ಪ್ರಸಾರವಾಗಲಿವೆ.. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..
ಮುಂಬೈ: ದೇಶದ ಪ್ರಮುಖ ಕಂಟೆಂಟ್ ಮತ್ತು ತಂತ್ರಜ್ಞಾನ ದೈತ್ಯ ಸಂಸ್ಥೆಯಾದ 'ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್' (Zee Entertainment), ವೀಕ್ಷಕರಿಗೆ ವಿಭಿನ್ನ ಮತ್ತು ಕುಟುಂಬ ಸಮೇತ ಆನಂದಿಸಬಹುದಾದ ಮನರಂಜನೆಯನ್ನು ನೀಡುವ ಸಲುವಾಗಿ ತನ್ನ ನಾನ್-ಫಿಕ್ಕ್ಷನ್ (Non-fiction) ಕಾರ್ಯಕ್ರಮಗಳ ಪಟ್ಟಿಯನ್ನು ಮತ್ತಷ್ಟು ವಿಸ್ತರಿಸಿದೆ. ವಿವಿಧ ಭಾಷೆಗಳಲ್ಲಿ ಹೊಸ ಶೈಲಿಯ ರಿಯಾಲಿಟಿ ಶೋಗಳು, ಮನರಂಜನಾ ಕಾರ್ಯಕ್ರಮಗಳು ಮತ್ತು ಹಳೆಯ ಜನಪ್ರಿಯ ಶೋಗಳ ಹೊಸ ಸೀಸನ್‌ಗಳನ್ನು ತರಲು ಕಂಪನಿ ಸಜ್ಜಾಗಿದೆ.
ಭಾರತೀಯರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಕಥೆಗಳು ಮತ್ತು ರಿಯಾಲಿಟಿ ಶೋಗಳ ಮೂಲಕ ಜೀ ಸಂಸ್ಥೆಯು ದಶಕಗಳಿಂದ ಮನರಂಜನಾ ಲೋಕದಲ್ಲಿ ಮುಂಚೂಣಿಯಲ್ಲಿದೆ. 'ಡಾನ್ಸ್ ಇಂಡಿಯಾ ಡಾನ್ಸ್' (Dance India Dance) ಮತ್ತು 'ಸರಿಗಮಪ' (Sa Re Ga Ma Pa) ದಂತಹ ಕಾರ್ಯಕ್ರಮಗಳು ಈಗಾಗಲೇ ದೇಶಾದ್ಯಂತ ದೊಡ್ಡ ಯಶಸ್ಸು ಕಂಡಿವೆ. ಈಗ ವೀಕ್ಷಕರ ಅಭಿರುಚಿಗೆ ತಕ್ಕಂತೆ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸಲು ಜೀ ಮುಂದಾಗಿದೆ.
ಹೊಸ ಕಾರ್ಯಕ್ರಮಗಳ ಪ್ರಮುಖ ಹೈಲೈಟ್ಸ್
ಅಡುಗೆ ಕಾರ್ಯಕ್ರಮಗಳು (Cookery Shows): ಅಡುಗೆ ಪ್ರಿಯರಿಗಾಗಿ ಹಾಗೂ ಹೊಸ ರುಚಿಗಳನ್ನು ಸವಿಯಲು ಇಷ್ಟಪಡುವವರಿಗಾಗಿ ವಿವಿಧ ಭಾಷೆಗಳಲ್ಲಿ ಹೊಸ ಶೋಗಳು ಮೂಡಿಬರಲಿವೆ. ಕನ್ನಡದಲ್ಲಿ ಜನಪ್ರಿಯವಾಗಿರುವ 'ಒಗ್ಗರಣೆ ಡಬ್ಬಿ' (Oogarane Dabbi) ಸೇರಿದಂತೆ ತೆಲುಗಿನಲ್ಲಿ 'ವಾರೆವಾ' (Varewa), ತಮಿಳಿನಲ್ಲಿ 'ಸಮೈಯಲ್ ಎಕ್ಸ್‌ಪ್ರೆಸ್' (Samaiyal Express) ಮತ್ತು ಮರಾಠಿಯಲ್ಲಿ 'ಕಿಚನ್ ಕಲಾಕರ್' (Kitchen Kalakar) ಪ್ರಸಾರವಾಗಲಿವೆ.
ಸೆಲೆಬ್ರಿಟಿ ಟಾಕ್ ಶೋಗಳು: ಜನಪ್ರಿಯ ನಟ ಆರ್. ಮಾಧವನ್ ನಿರೂಪಣೆಯಲ್ಲಿ ಜನಮೆಚ್ಚಿದ 'ಜೀನಾ ಇಸಿ ಕಾ ನಾಮ್ ಹೈ 2.0' (Jeena Isi Ka Naam Hai 2.0) ಶೋ ಮರಳಿ ಬರಲಿದೆ. ಇದು ವಿವಿಧ ಕ್ಷೇತ್ರಗಳ ದಿಗ್ಗಜರ ಜೀವನದ ಕಥೆಗಳನ್ನು ವೀಕ್ಷಕರ ಮುಂದಿಡಲಿದೆ. ಇದರೊಂದಿಗೆ ತೆಲುಗಿನಲ್ಲಿ 'ದಿ ಮೆಗಾ ಮಲ್ಟಿಪ್ಲೆಕ್ಸ್' ಮತ್ತು ತಮಿಳಿನಲ್ಲಿ 'ಲೆಜೆಂಡ್ಸ್' ಶೋಗಳು ಮನರಂಜನೆ ನೀಡಲಿವೆ.
ಗೇಮ್ ಶೋಗಳು ಮತ್ತು ಹಾಸ್ಯ ಕಾರ್ಯಕ್ರಮಗಳು: ಜೀ ಅನ್ಮೋಲ್‌ನಲ್ಲಿ 'ಲಕ್ಷ್ಪತಿ ದಿದಿಯಾ' ಮತ್ತು ಜೀ ಕೇರಳಂನಲ್ಲಿ 'ಜೋಡಿ ನಂ. 1' ಗೇಮ್ ಶೋಗಳು ಪ್ರಸಾರವಾಗಲಿವೆ. ಹಾಗೆಯೇ, ಬಂಗಾಳದಲ್ಲಿ 'ಮಿರಾಕೆಲ್' ಹಾಗೂ ಮರಾಠಿಯಲ್ಲಿ 'ಚಲಾ ಹಾವಾ ಯೇಉ ದ್ಯಾ' ಹೊಸ ಸೀಸನ್‌ನೊಂದಿಗೆ ಪ್ರೇಕ್ಷಕರನ್ನು ನಗಿಸಲು ಸಿದ್ಧವಾಗಿವೆ.
ಈ ಹೊಸ ಕಾರ್ಯಕ್ರಮಗಳ ಕುರಿತು ಮಾತನಾಡಿರುವ ಜೀ ಎಂಟರ್‌ಟೈನ್‌ಮೆಂಟ್‌ನ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಅವರು, ಭಾರತೀಯರ ಮನೆಗಳಲ್ಲಿ ನಮ್ಮ ಧಾರಾವಾಹಿಗಳು ಒಂದು ಅಭ್ಯಾಸವಾಗಿ ಬದಲಾಗಿದ್ದರೆ, ಕಾರ್ಯಕ್ರಮಗಳು ವೀಕ್ಷಕರನ್ನು ಹೆಚ್ಚು ಸೆಳೆಯುತ್ತಿವೆ.. ವೀಕ್ಷಕರು ಹೆಚ್ಚು ಇಷ್ಟಪಟ್ಟಿದ್ದ ಹಳೆಯ ಜನಪ್ರಿಯ ಕಾರ್ಯಕ್ರಮಗಳನ್ನು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಹೊಸ ರೂಪದಲ್ಲಿ ಮರಳಿ ತರಲಾಗುತ್ತಿದೆ. ನಮ್ಮ ಹೊಸ ಕಾರ್ಯಕ್ರಮಗಳು ಟೆಲಿವಿಷನ್ ಹಾಗೂ 'ಜೀ5' (Zee5) ಒಟಿಟಿ ಪ್ಲಾಟ್‌ಫಾರ್ಮ್ ಎರಡರಲ್ಲೂ ಲಭ್ಯವಿರಲಿದ್ದು, ಡಿಜಿಟಲ್ ವೀಕ್ಷಕರಿಗೆ ಹೆಚ್ಚಿನ ಮನರಂಜನೆ ಸಿಗಲಿದೆ.
ಅಷ್ಟೇ ಅಲ್ಲದೆ, ಸಂಗೀತ, ಹಾಸ್ಯ, ರಸಪ್ರಶ್ನೆ ಹಾಗೂ ಟ್ಯಾಲೆಂಟ್ ಶೋಗಳ ಮೂಲಕ ಕಳೆದ ಮೂರು ದಶಕಗಳಿಂದ ಭಾರತೀಯರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿರುವ ಜೀ ಸಂಸ್ಥೆ, ಮುಂದಿನ ದಿನಗಳಲ್ಲಿ ಇಡೀ ಜಗತ್ತಿಗೆ ಭಾರತೀಯ ಮನರಂಜನೆಯ ಹೊಸ ರೂಪವನ್ನು ಪರಿಚಯ ಮಾಡಿಕೊಡಲಿದೆ ಎಂದು ವಿವರಿಸಿದರು.
ಒಟ್ಟಾರೆಯಾಗಿ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮಗಳೆರಡರಲ್ಲೂ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಜೀ ಸಂಸ್ಥೆಯು ಅತ್ಯಾಕರ್ಷಕ ಕಾರ್ಯಕ್ರಮಗಳ ದೊಡ್ಡ ಪಟ್ಟಿಯನ್ನೇ ತರುತ್ತಿದ್ದು, ಇದು ಭಾರತೀಯ ಮನರಂಜನಾ ಲೋಕದಲ್ಲಿ ಹೊಸ ಸಂಚಲನ ಮೂಡಿಸುವುದು ಖಂಡಿತ.