SOCIAL MEDIA

Newsletter

PARTNER SITES
Select Language Select State

ಧನ್ವೀರ್ ವಿವಾದದ ಬೆನ್ನಲ್ಲೇ ಸ್ಪೋಟಕ ಬೆಳವಣಿಗೆ : ಜೈಲಿನಲ್ಲಿ ದರ್ಶನ್ ಭೇಟಿಯಾಗಲಿರುವ ವಿಜಯಲಕ್ಷ್ಮಿ-ಝೈದ್ ಖಾನ್

ವಿಜಯಲಕ್ಷ್ಮಿ ದರ್ಶನ್‌ ಹಾಗೂ ಯುವನಟ ಝೈದ್ ಖಾನ್ ಇಂದು ಮಧ್ಯಾಹ್ನ 3 ಗಂಟೆಗೆ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಜಂಟಿಯಾಗಿ ಭೇಟಿ ನೀಡುವ ಸಾಧ್ಯತೆಯಿದೆ. ಇತ್ತೀಚೆಗೆ ನಟ ಧನ್ವೀರ್ ಗೌಡ ಅವರ ಜೊತೆಗಿನ ವಿವಾದ ಹಾಗೂ ಆಡಿಯೋ ವೈರಲ್ ಪ್ರಕರಣಗಳು ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ ಸಂದರ್ಭದಲ್ಲಿ, ಈ ಇಬ್ಬರ ಭೇಟಿಯು ಅತ್ಯಂತ ಕುತೂಹಲ ಮೂಡಿಸಿದೆ.. ಹೆಚ್ಚಿನ ಮಾಹಿತಿ ಇಲ್ಲಿದ..

Written By Krishna NK
Published: Oct 27, 2026, 01:48 PM IST | Updated: Oct 27, 2026, 01:49 PM IST
Image Credit: Vijayalakshmi darshan
Join

ಬೆಂಗಳೂರು : ನಟ ದರ್ಶನ್ ಅವರನ್ನು ಭೇಟಿಯಾಗಲು ಇಂದು ಪತ್ನಿ ವಿಜಯಲಕ್ಷ್ಮಿ ಹಾಗೂ ಸಚಿವ ಜಮೀರ್ ಪುತ್ರ ನಟ ಝೈದ್ ಖಾನ್ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಇತ್ತೀಚೆಗೆ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ವಿವಾದಗಳ ಹಿನ್ನೆಲೆಯಲ್ಲಿ ಈ ಭೇಟಿ ಸಂಚಲನ ಸೃಷ್ಟಿಸಿದೆ..

ಹೌದು.. ನಟ ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಟ ಧನ್ವೀರ್ ಗೌಡ ಹಾಗೂ ವಿಜಯಲಕ್ಷ್ಮಿ ನಡುವೆ ಉಂಟಾಗಿರುವ ಹಣಕಾಸು ವಿವಾದ ಮತ್ತು ಮನಸ್ತಾಪಗಳು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿವೆ. ಕೋಟಿ ಗಟ್ಟಲೆ ಹಣಕಾಸು ವ್ಯವಹಾರ ಹಾಗೂ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು, ವೈರಲ್ ಆಡಿಯೋ ಸಂಭಾಷಣೆಗಳು ಈ ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ

ಇದರ ಬೆನ್ನಲ್ಲೇ ನಟ ಧನ್ವೀರ್ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿದ್ದು, ನಟ ಝೈದ್ ಖಾನ್ ಅಭಿಮಾನಿಗಳು ಧನ್ವೀರ್ ವಿರುದ್ಧ ಮುಗಿಬಿದ್ದು ಪ್ರತಿಭಟನೆ ನಡೆಸಿರುವ ಘಟನೆಯೂ ವರದಿಯಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಧನ್ವೀರ್ ಕಡೆಗೂ ಹಾಗೂ ವಿಜಯಲಕ್ಷ್ಮಿ ಬಣಕ್ಕೂ ಅಂತರ ಹೆಚ್ಚಾಗಿದ್ದು, ಇಬ್ಬರೂ ಪರಸ್ಪರ ದೂರ ಉಳಿದಿದ್ದಾರೆ.

ಪರಪ್ಪನ ಅಗ್ರಹಾರ ಭೇಟಿಯ ಅಸಲಿ ಉದ್ದೇಶವೇನು?
ಧನ್ವೀರ್ ವಿವಾದದ ಕಾವು ತಣ್ಣಗಾಗುವ ಮುನ್ನವೇ ವಿಜಯಲಕ್ಷ್ಮಿ ಅವರು ನಟ ಝೈದ್ ಖಾನ್ ಅವರೊಂದಿಗೆ ಜಂಟಿಯಾಗಿ ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿಯಾಗುತ್ತಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಬಹುಷಃ ಈ ವಿವಾದ, ಹಣಕಾಸಿನ ವ್ಯವಹಾರ ಹಾಗೂ ಮುಂದಿನ ಕಾನೂನು ಹೋರಾಟಗಳ ಬಗ್ಗೆ ದರ್ಶನ್ ಜೊತೆ ಚರ್ಚಿಸುವ ಸಾಧ್ಯತೆಯಿದೆ.

ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ಶೀತಲ ಸಮರದ ಕುರಿತು ದರ್ಶನ್ ಅವರ ಗಮನಕ್ಕೆ ತಂದು, ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆಯೂ ಇಲ್ಲಿ ಮಾತುಕತೆ ನಡೆಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಝೈದ್‌ ಖಾನ್‌ ವಿಜಯಲಕ್ಷ್ಮಿ ಜೊತೆ ತೆರಳುತ್ತಿರುವುದು ಸಂಚಲನ ಮೂಡಿಸಿದೆ..

ಭೇಟಿಯ ಬಳಿಕ ಹೊರಬೀಳುತ್ತಾ ಮಹತ್ವದ ಮಾಹಿತಿ?
ದರ್ಶನ್ ಅವರ ಕಾನೂನು ಹೋರಾಟ ಹಾಗೂ ಹೊರಗಿನ ವಿದ್ಯಮಾನಗಳ ಬಗ್ಗೆ ಅಭಿಮಾನಿಗಳಲ್ಲಿ ಈಗಾಗಲೇ ಸಾಕಷ್ಟು ಗೊಂದಲಗಳಿವೆ. ಈಗ ವಿಜಯಲಕ್ಷ್ಮಿ ಹಾಗೂ ಝೈದ್ ಖಾನ್ ಜೈಲಿನಿಂದ ಹೊರಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಯಾವುದೇ ಮಹತ್ವದ ಸ್ಪಷ್ಟನೆ ನೀಡುತ್ತಾರೆಯೇ ಅಥವಾ ಪ್ರಕರಣದ ಕುರಿತು ಪ್ರಮುಖ ಮಾಹಿತಿಯನ್ನು ಹೊರಹಾಕುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಇಂದಿನ ಈ ಭೇಟಿಯು ಸ್ಯಾಂಡಲ್‌ವುಡ್‌ನಲ್ಲಿ ಮತ್ತಷ್ಟು ರಾಜಕೀಯ ಹಾಗೂ ಸಿನಿಮಾ ಜಗತ್ತಿನ ತಿರುವುಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES