ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ ಚಿತ್ರಕ್ಕೆ ವಸಿಷ್ಠ ಸಿಂಹ ಹಿನ್ನೆಲೆ ಧ್ವನಿ
ಸ್ಯಾಂಡಲ್‌ವುಡ್‌ನ ಖ್ಯಾತ ನಟ, ಗಂಭೀರ ಕಂಠದ ಒಡೆಯ ವಸಿಷ್ಠ ಸಿಂಹ ಈ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲ, ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರತಂಡ ಅವರಿಗೊಂದು ವಿಶೇಷ ಉಡುಗೊರೆಯನ್ನು ನೀಡಿ ಗೌರವಿಸಿದೆ. ಈ ಕುರಿತ ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ...
ವಿಭಿನ್ನ ಶೀರ್ಷಿಕೆಯ ಮೂಲಕ ಈಗಾಗಲೇ ಗಾಂಧಿನಗರದಲ್ಲಿ ಭಾರಿ ಕುತೂಹಲ ಹುಟ್ಟುಹಾಕಿರುವ ಸಿನಿಮಾ 'ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ - ಇದು ದೇವರ ತಾಣ'. ಜ್ಯೋತಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ವಿಕಾಸ್ ಎಸ್. ಶೆಟ್ಟಿ ಅವರ ನಿರ್ಮಾಣ ಹಾಗೂ ಸಂದೇಶ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಬಗ್ಗೆ ಇದೀಗ ಮತ್ತೊಂದು ರೋಮಾಂಚಕ ಸುದ್ದಿ ಹೊರಬಿದ್ದಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಟ, ಗಂಭೀರ ಕಂಠದ ಒಡೆಯ ವಸಿಷ್ಠ ಸಿಂಹ ಈ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲ, ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರತಂಡ ಅವರಿಗೊಂದು ವಿಶೇಷ ಉಡುಗೊರೆಯನ್ನು ನೀಡಿ ಗೌರವಿಸಿದೆ. ಈ ಕುರಿತ ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ...
ಸ್ಯಾಂಡಲ್‌ವುಡ್‌ನಲ್ಲಿ ಸದಾ ವಿಭಿನ್ನ ಪ್ರಯೋಗಗಳಿಗೆ ಹೆಸರಾಗಿರುವ ನಿರ್ದೇಶಕ ಸಂದೇಶ್ ಶೆಟ್ಟಿ ನಟ ವಸಿಷ್ಠ ಸಿಂಹ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ದೊಡ್ಡ ಸರ್ಪ್ರೈಸ್ ಒಂದನ್ನು ನೀಡಿದೆ. ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿ ಸಾಥ್ ಕೊಟ್ಟಿರುವ ವಸಿಷ್ಠ ಸಿಂಹ ಅವರಿಗೆ, ಚಿತ್ರತಂಡ ನೆನಪಿನ ಕಾಣಿಕೆಯಾಗಿ 'ಯುನಿವರ್ಸಲ್ ಸ್ಟಾರ್ ಪಚ್ಚಿ ಗಣಪ'ನ ಮೂರ್ತಿಯನ್ನು ನೀಡಿ ಶುಭಕೋರಿದೆ.
ವಿಶೇಷವೆಂದರೆ, ನವರಾತ್ರಿ ಹಬ್ಬದ ಶುಭ ದಿನದಂದೇ ಮನೆಗೆ ಗಣಪತಿ ಬಂದಿರುವ ಸಂಭ್ರಮವನ್ನು ನಟ ವಸಿಷ್ಠ ಸಿಂಹ ಅವರು ಚಿತ್ರತಂಡದೊಂದಿಗೆ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಟೈಟಲ್‌ನಿಂದ ಹಿಡಿದು ಪ್ರತಿಯೊಂದು ಹಂತದಲ್ಲೂ ಒಂದಿಲ್ಲೊಂದು ಹೊಸತನವನ್ನು ಹೊತ್ತು ಬರುತ್ತಿರುವ ನಿರ್ದೇಶಕ ಸಂದೇಶ್ ಶೆಟ್ಟಿ, ಈಗಾಗಲೇ ಮೋಷನ್ ಪೋಸ್ಟರ್ ಮೂಲಕ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಇದೀಗ ವಸಿಷ್ಠ ಸಿಂಹ ಅವರ ಖಡಕ್ ವಾಯ್ಸ್ ಚಿತ್ರಕ್ಕೆ ಇನ್ನಷ್ಟು ತೂಕ ತಂದುಕೊಟ್ಟಿದೆ.
ಇನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಸಿನಿಮಾದ ಅಧಿಕೃತ ಟೀಸರ್ ಇದೇ ತಿಂಗಳು 29ರಂದು ಬಿಡುಗಡೆಯಾಗಲಿದೆ. ಮೋಷನ್ ಪೋಸ್ಟರ್ ಮೂಲಕ ವಿಭಿನ್ನ ಕಥೆಯ ಎಳೆಯ ಮುನ್ಸೂಚನೆ ಕೊಟ್ಟಿರುವ ಚಿತ್ರತಂಡ, ಅಕ್ಟೋಬರ್ 29ರಂದು ಬರಲಿರುವ ಟೀಸರ್‌ನಲ್ಲಿ ಇನ್ನಾವ ಮಟ್ಟದ ಕೌತುಕವನ್ನು ಕಟ್ಟಿಕೊಡಲಿದೆ ಎಂಬುದನ್ನು ಕಾದುನೋಡಬೇಕಿದೆ.