SOCIAL MEDIA

Newsletter

PARTNER SITES
Select Language Select State

ಗುಟ್ಟಾಗಿ ಮದುವೆಯಾದ್ರಾ ನಟಿ ತ್ರಿಷಾ.. ಕೊರಳಲ್ಲಿದ್ದ ಸರದ ಸಂಗತಿ ಕೆದಕಿದ ನೆಟ್ಟಿಗರು..!

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಸೆಲ್ಫಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಜೊತೆಗಿನ ಫೋಟೋದಲ್ಲಿ ತಮ್ಮ ಲಾಕೆಟ್ ಅನ್ನು ಹಾರ್ಟ್ ಎಮೋಜಿಯಿಂದ ಮುಚ್ಚಿಕೊಂಡಿರುವುದು ನೆಟ್ಟಿಗರಲ್ಲಿ ಅನುಮಾನ ಮೂಡಿಸಿದೆ..

Written By Krishna NK
Published: Oct 10, 2026, 08:35 PM IST | Updated: Oct 10, 2026, 08:38 PM IST
Image Credit: trisha krishnan photo goes viral
Join

Trisha Krishnan marriage : ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ಅವರೊಂದಿಗೆ ತೆಗೆಸಿಕೊಂಡ ಸೆಲ್ಫಿಯೊಂದನ್ನು ತ್ರಿಷಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಆ ಫೋಟೋದಲ್ಲಿ ತಮ್ಮ ಕುತ್ತಿಗೆಯಲ್ಲಿದ್ದ ಲಾಕೆಟ್ ಅನ್ನು ಹಾರ್ಟ್ ಎಮೋಜಿಯಿಂದ ಮುಚ್ಚಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ..  

ಲಾಕೆಟ್ ಹೈಡ್ ಮಾಡಲು ಕಾರಣವೇನು?
ರಾಧಿಕಾ ಜೊತೆಗಿನ ಸೆಲ್ಫಿಯಲ್ಲಿ ತ್ರಿಷಾ ಧರಿಸಿದ್ದ ಸರದ ಲಾಕೆಟ್ ಕಾಣದಂತೆ ಹಾರ್ಟ್ ಎಮೋಜಿ ಹಾಕಲಾಗಿದೆ. ಇದು ನೆಟ್ಟಿಗರ ಕಣ್ಣಿಗೆ ಬಿದ್ದು, ನಾನಾ ರೀತಿಯ ವದಂತಿಗೆ ದಾರಿ ಮಾಡಿಕೊಟ್ಟಿದೆ. ತಮಿಳುನಾಡು ರಾಜಕಾರಣ ಹಾಗೂ ಕಾಲಿವುಡ್‌ನಲ್ಲಿ ನಟ ವಿಜಯ್ ಅವರೊಂದಿಗೆ ತ್ರಿಷಾ ಹೆಸರು ತಳುಕುಹಾಕಿಕೊಂಡಿರುವ ಹಿನ್ನೆಲೆಯಲ್ಲಿ, ಈ ಲಾಕೆಟ್ ವಿಜಯ್‌ಗೆ ಸಂಬಂಧಿಸಿದ್ದಿರಬಹುದು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಾದಿಸುತ್ತಿದ್ದಾರೆ. ಇನ್ನು ಕೆಲವು ನೆಟ್ಟಿಗರು ಆ ಲಾಕೆಟ್ ಕೇರಳದ ಕ್ರೈಸ್ತ ಸಂಪ್ರದಾಯದ ಮದುವೆಯಲ್ಲಿ ಧರಿಸುವ 'ಮಿನ್ನು' ಮಾದರಿಯಲ್ಲಿದೆ ಎಂದು ಕಾಮೆಂಟ್ ಮಾಡುತ್ತಿದ್ದು, ತ್ರಿಷಾ ರಹಸ್ಯವಾಗಿ ಮದುವೆಯಾಗಿದ್ದಾರಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ.

ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ
ಫೋಟೋದಲ್ಲಿ ಲಾಕೆಟ್ ಮುಚ್ಚಿರುವುದನ್ನೇ ಆಧಾರವಾಗಿಟ್ಟುಕೊಂಡು ತ್ರಿಷಾ ಅವರ ವೈಯಕ್ತಿಕ ಜೀವನದ ಬಗ್ಗೆ ಹಬ್ಬುತ್ತಿರುವ ವಾದಗಳಿಗೆ ಯಾವುದೇ ಅಧಿಕೃತ ಪುರಾವೆಗಳಿಲ್ಲ. ಇದು ಕೇವಲ ಅಭಿಮಾನಿಗಳು ಮತ್ತು ನೆಟ್ಟಿಗರ ಊಹಾಪೋಹ ಮಾತ್ರವಾಗಿದೆ.

ಈ ಕುರಿತು ಸ್ವತಃ ತ್ರಿಷಾ ಕೃಷ್ಣನ್ ಅವರಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬರುವವರೆಗೆ ಈ ಸುದ್ದಿಯನ್ನು ಗಾಸಿಪ್ ಎಂದೇ ಪರಿಗಣಿಸಬೇಕಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಈ ಲಾಕೆಟ್ ರಹಸ್ಯ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES