‘ಎಮರ್ಜೆನ್ಸಿ ಎಕ್ಸಿಟ್’ ಆದ ತಾಂಡವ್ ರೀ-ಎಂಟ್ರಿ : ವಾರದ ಕತೆಯಲ್ಲಿ ರಿವೀಲ್ ಆಯ್ತು ಬಿಗ್ ಬಾಸ್ ಸಿಕ್ರೇಟ್
Bigg Boss Thandav Ram : ತಾಂಡವ್ ಎಕ್ಸಿಟ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿತ್ತು, ಅಭಿಮಾನಿಗಳೂ ಇದು ಸರಿಯಾದ ನಿರ್ಧಾರವಲ್ಲ ಅಂತ ಆಕ್ರೋಶ ಹೊರ ಹಾಕಿದ್ದರು.. ಇದರ ನಡುವೆ ತಾಂಡವ್ ಜರ್ನಿ ಇನ್ನೂ ಮುಗಿದಿಲ್ಲ.. ಅಂತ ಪ್ರೇಕ್ಷಕರಿಗೆ ಬಿಗ್ ಬಾಸ್ ಬಿಗ್ ಟ್ವಿಸ್ಟ್ ನೀಡಿ, ತಲೆಗೆ ಹುಳ ಬಿಟ್ಟಿದೆ..
Thandav Ram Bigg Boss : ಬಿಗ್ ಬಾಸ್ ಕನ್ನಡ ಸೀಸನ್ 13 ಪ್ರೇಕ್ಷಕರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ತಲೆ ತಿರುಗುವಂತೆ ಮಾಡುತ್ತಿದೆ. ನಿನ್ನೆಯವರೆಗೂ "ಎಮರ್ಜೆನ್ಸಿ ಎಕ್ಸಿಟ್" ಮೂಲಕ ಮನೆಯಿಂದ ಹೊರ ಬಂದಿದ್ದ ತಾಂಡವ್ ಇದೀಗ ಬಿಗ್ ಹೌಸ್‌ಗೆ ರೀ-ಎಂಟ್ರಿ ನೀಡಲಿದ್ದಾರೆ. ಈ ಕುರಿತ ಹಿಂಟ್ ಇತ್ತೀಚಿಗೆ ಪ್ರಸಾರವಾದ ಪ್ರಮೋದಲ್ಲಿ ನೀಡಲಾಗಿದೆ.
ಹೌದು.. ಟಾಸ್ಕ್‌ನಲ್ಲಿ ಸೋತು ಮನೆ ಮಂದಿಯಿಂದ ನಾಮಿನೇಟ್ ಆಗಿ, ಎಮರ್ಜೆನ್ಸಿ ಎಕ್ಸಿಟ್ ಆಗಿದ್ದ ತಾಂಡವ್ ಮತ್ತೆ ದೊಡ್ಮನೆಗೆ ರೀ ಎಂಟ್ರಿ ಕೊಡಲಿದ್ದಾರೆ. ಈ ವಿಚಾರ ಇತ್ತೀಚಿಗೆ ಪ್ರಸಾರವಾದ ಪ್ರಮೋದ ಮೂಲಕ ಬಹಿರಂಗವಾಗಿದೆ. ಸ್ವತಃ ನಿರೂಪಕ ಕಿಚ್ಚ ಸುದೀಪ್ ತಾಂಡವ್ ಜರ್ನಿ ಇನ್ನೂ ಕಂಪ್ಲೀಟ್ ಆಗಿಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ...
ವಾರದ ಕತೆ ಕಿಚ್ಚನ ಜೊತೆ ಪ್ರೋಮೋದಲ್ಲಿ ಮೊದಲಿಗೆ ತಾಂಡವ್ ಅವರನ್ನು ವೇದಿಕೆಗೆ ಕರೆಯುವ ಸುದೀಪ್... "ಹೊರಗಡೆ ಬಂದಿರುವ ತಾಂಡವ್ ಅವರನ್ನು ಈಗ ಮಾತನಾಡಿಸೋ ಟೈಮ್".. ಅಂತ ವೆಲ್ ಕಮ್ ಮಾಡ್ತಾರೆ. ಅಷ್ಟೇ ಅಲ್ಲದೆ, "ಅಷ್ಟು ಕಾನ್ಫಿಡೆಂಟ್ ಆಗಿ ಒಳಗೆ ಹೋದ್ರಿ, ಏನಾಯ್ತು ಯಡವಟ್ಟು.." ಅಂತ ಪ್ರಶ್ನೆ ಮಾಡ್ತಾರೆ.. ಕಿಚ್ಚನ ಈ ಮಾತಿಗೆ ತಾಂಡವ್ ತಲೆ ತಗ್ಗಿಸಿ ನಿಲ್ತಾರೆ. ಅಲ್ಲದೆ, ಕಿವಿ ಹಿಂಡಿ ಮಾಡಿದ ತಪ್ಪನ್ನು ನೆನಪು ಮಾಡ್ತಾರೆ.
ನಂತರ, ಪರದೆ ಮೇಲೆ ತಾಂಡವ್ ಅವರ ಜರ್ನಿ ವಿಡಿಯೋವನ್ನು ಪ್ರಸಾರ ಮಾಡುವಂತೆ ಸುದೀಪ್ ಹೇಳ್ತಾರೆ.. ಕ್ಲಿಪ್ ಪ್ಲೇ ಆಗುತ್ತಿದ್ದಂತೆ ತಕ್ಷಣ ಬಂದ್ ಆಗುತ್ತದೆ.. ಈ ತಾಂಡವ್ ಬಿಗ್ ಬಾಸ್ ದಯವಿಟ್ಟು ವಿಟಿ ಹಾಕಿ ಅಂತ ಕೇಳಿ ಕೊಳ್ಳುತ್ತಾರೆ. ಆಗ ಕಿಚ್ಚ ಸುದೀಪ್, ತಾಂಡವ್ ಇದರ ಅರ್ಥ ನಿಮ್ಗೆ ಇನ್ನೂ ಗೊತ್ತಾಗ್ಲಿಲ್ವಾ..? ನಿಮ್ಮ ಜರ್ನಿ ಕಂಪ್ಲೀಟ್ ಆಗಿಲ್ಲ ಅಂತ ಅರ್ಥ.. ಎಂದು ಹೇಳುವ ಮೂಲಕ ತಾಂಡವ್ ರೀ ಎಂಟ್ರಿ ಕನ್ಫರ್ಮ್ ಮಾಡ್ತಾರೆ.. ಇನ್ನು ಈ ವಿಚಾರ ಬಹಿರಂಗವಾಗುತ್ತಿದ್ದಂತೆ ತಾಂಡವ್ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಒಟ್ಟಾರೆಯಾಗಿ.. ಪ್ರಸ್ತುತ ಕಿರಣ್ ಶಾಸ್ತ್ರಿ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ. ಇತ್ತ ಗಗನ್ ಉತ್ತಮ ಪಟ್ಟ ಪಡೆದು ಖುಷಿಯಿಂದ ಮಿಂಚುತ್ತಿದ್ದಾರೆ. ಇದರ ನಡುವೆ ತಾಂಡವ್ ಮರು ಪ್ರವೇಶ ಆಟಕ್ಕೆ ಮತ್ತು ಸ್ಪರ್ಧಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ..