• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಬಿಗ್‌ ಬಾಸ್‌ ಮನೆಯಲ್ಲೇ ಇದ್ದಾರಾ ತಾಂಡವ್‌ ರಾಮ್‌! ಹಾಗಾದ್ರೆ ಎಮರ್ಜೆನ್ಸಿ ಎಕ್ಸಿಟ್‌ನಲ್ಲಿ ಹೊರ ಬಂದವರು ಯಾರು?

ಬಿಗ್‌ ಬಾಸ್‌ ಮನೆಯಲ್ಲೇ ಇದ್ದಾರಾ ತಾಂಡವ್‌ ರಾಮ್‌! ಹಾಗಾದ್ರೆ ಎಮರ್ಜೆನ್ಸಿ ಎಕ್ಸಿಟ್‌ನಲ್ಲಿ ಹೊರ ಬಂದವರು ಯಾರು?

ಬಿಗ್ ಬಾಸ್ ಮನೆಯಿಂದ ತಾಂಡವ್‌ ರಾಮ್‌ ಹೊರ ಬಂದಿದ್ದಾರಾ? ಅಥವಾ ಇದು ಬಿಗ್ ಬಾಸ್‌ನ ಮತ್ತೊಂದು ಸೀಕ್ರೆಟ್ ಟ್ವಿಸ್ಟ್ ಆಗಿರಬಹುದಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ.

Written ByChetana Devarmani
Published: Sep 26, 2026, 02:47 PM IST|Updated: Sep 26, 2026, 02:50 PM IST
joinshare
ಬಿಗ್‌ ಬಾಸ್‌ ಮನೆಯಲ್ಲೇ ಇದ್ದಾರಾ ತಾಂಡವ್‌ ರಾಮ್‌! ಹಾಗಾದ್ರೆ ಎಮರ್ಜೆನ್ಸಿ ಎಕ್ಸಿಟ್‌ನಲ್ಲಿ ಹೊರ ಬಂದವರು ಯಾರು?

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ಎಮರ್ಜೆನ್ಸಿ ಎಕ್ಸಿಟ್ ವಿಚಾರ ಸಖತ್ ಕುತೂಹಲ ಮೂಡಿಸಿದೆ. ತಾಂಡವ್ ರಾಮ್ ಮನೆಯಿಂದ ಹೊರಬಂದಿದ್ದಾರೆ. ಎಮರ್ಜೆನ್ಸಿ ಎಕ್ಸಿಟ್‌ನಲ್ಲಿ ಮಿಡ್‌ ವೀಕ್‌ ಎಲಿಮಿನೇಷನ್‌ನಿಂದ ಹೊರಬಂದ ಮೊದಲ ಸ್ಪರ್ಧಿಯೇ ತಾಂಡವ್ ರಾಮ್ ಆಗಿದ್ದರು. ಆದರೆ ನಿಜವಾಗಿಯೂ ಬಿಗ್ ಬಾಸ್ ಮನೆಯಿಂದ ತಾಂಡವ್‌ ರಾಮ್‌ ಹೊರ ಬಂದಿದ್ದಾರಾ? ಅಥವಾ ಇದು ಬಿಗ್ ಬಾಸ್‌ನ ಮತ್ತೊಂದು ಸೀಕ್ರೆಟ್ ಟ್ವಿಸ್ಟ್ ಆಗಿರಬಹುದಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. ತಾಂಡವ್ ರಾಮ್ ಅವರ ಎಲಿಮಿನೇಷನ್ ಸುದ್ದಿ ಹೊರಬಿದ್ದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ತಾಂಡವ್ ರಾಮ್ ಅವರನ್ನು ನೇರವಾಗಿ ಮನೆಯಿಂದ ಹೊರಗೆ ಕಳುಹಿಸದೆ, ಸೀಕ್ರೇಟ್ ರೂಮ್‌ಗೆ ಕಳುಹಿಸಿರಬಹುದು ಎಂಬ ಚರ್ಚೆ ಈಗ ಕುತೂಹಲ ಕೆರಳಿಸಿದೆ.

ಬಿಗ್ ಬಾಸ್‌ನಲ್ಲಿ ಈ ರೀತಿಯ ಸೀಕ್ರೆಟ್ ರೂಮ್ ಟ್ವಿಸ್ಟ್ ಹೊಸದೇನಲ್ಲ. ಕೆಲವೊಮ್ಮೆ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಿದಂತೆ ತೋರಿಸಿ, ಮನೆಯೊಳಗೆ ಅಥವಾ ಪ್ರತ್ಯೇಕ ಸೀಕ್ರೆಟ್ ರೂಮ್‌ನಲ್ಲಿ ಇರಿಸಿ, ನಂತರ ಸೂಕ್ತ ಸಮಯದಲ್ಲಿ ಮತ್ತೆ ಆಟಕ್ಕೆ ಕರೆತರುವ ಸಾಧ್ಯತೆ ಇರುತ್ತದೆ. ಹೀಗಾಗಿ ತಾಂಡವ್ ರಾಮ್ ವಿಚಾರದಲ್ಲೂ ಇದೇ ರೀತಿಯ ಟ್ವಿಸ್ಟ್ ಇರಬಹುದೇ ಎಂಬ ಪ್ರಶ್ನೆ ಎದ್ದಿದೆ. ಸಾಮಾನ್ಯ ಎಲಿಮಿನೇಷನ್‌ಗಿಂತ ವಿಭಿನ್ನವಾಗಿ ಸ್ಪರ್ಧಿಯ ನಿರ್ಗಮನ ನಡೆದಿದ್ದರೆ, ಅದರ ಹಿಂದೆ ಬಿಗ್ ಬಾಸ್ ದೊಡ್ಡ ಟ್ವಿಸ್ಟ್ ಇಟ್ಟಿರಬಹುದೇ ಎಂಬ ಚರ್ಚೆ ಸಹಜವಾಗಿಯೇ ಶುರುವಾಗಿದೆ.

ತಾಂಡವ್ ರಾಮ್ ಅವರನ್ನು ನಿಜವಾಗಿಯೂ ಹೊರಗೆ ಕಳುಹಿಸಲಾಗಿದೆಯೇ ಅಥವಾ ಸೀಕ್ರೇಟ್ ರೂಮ್‌ನಲ್ಲಿ ಇರಿಸಿ ಅವರ ಮುಂದಿನ ಆಟವನ್ನು ರೂಪಿಸಲಾಗುತ್ತಿದೆಯೇ ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ. ಆದರೆ ಅವರು ಮತ್ತೆ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟರೆ, ಮನೆಯ ಇತರ ಸ್ಪರ್ಧಿಗಳಿಗೆ ಮಾತ್ರವಲ್ಲದೆ ವೀಕ್ಷಕರಿಗೂ ಅದು ದೊಡ್ಡ ಶಾಕ್ ಆಗಲಿದೆ.

ಇನ್ನೊಂದು ಕುತೂಹಲಕಾರಿ ಪ್ರಶ್ನೆ ಎಂದರೆ, ತಾಂಡವ್ ರಾಮ್ ಸೀಕ್ರೇಟ್ ರೂಮ್‌ನಲ್ಲಿ ಇದ್ದರೆ ಅವರು ಅಲ್ಲಿ ಕುಳಿತು ಮನೆಯೊಳಗಿನ ಸ್ಪರ್ಧಿಗಳ ಆಟವನ್ನು ವೀಕ್ಷಿಸುತ್ತಿದ್ದಾರಾ? ಯಾರು ತಮ್ಮ ಪರವಾಗಿ ಆಡುತ್ತಿದ್ದಾರೆ, ಯಾರು ವಿರುದ್ಧವಾಗಿದ್ದಾರೆ ಎಂಬುದನ್ನು ಗಮನಿಸುತ್ತಿದ್ದಾರಾ? ಮತ್ತೆ ಮನೆಗೆ ಪ್ರವೇಶಿಸಿದರೆ ಈ ಮಾಹಿತಿಯನ್ನೇ ತಮ್ಮ ಆಟಕ್ಕೆ ಬಳಸಿಕೊಳ್ಳುತ್ತಾರಾ ಎಂಬುದು.

ಈ ನಡುವೆ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಹೊರಬಂದವರು ಯಾರು ಎಂಬ ವಿಚಾರವೂ ವೀಕ್ಷಕರಲ್ಲಿ ಗೊಂದಲ ಮೂಡಿಸಿದೆ. ತಾಂಡವ್ ರಾಮ್ ಅವರ ಎಲಿಮಿನೇಷನ್ ನಿಜವೇ ಅಥವಾ ಇದು ಬಿಗ್ ಬಾಸ್ ನೀಡಿರುವ ಸಸ್ಪೆನ್ಸ್‌ನ ಒಂದು ಭಾಗವೇ ಎಂಬುದು ಅಧಿಕೃತವಾಗಿ ಸ್ಪಷ್ಟವಾಗಬೇಕಿದೆ.

ಹೀಗಾಗಿ ಸದ್ಯಕ್ಕೆ ತಾಂಡವ್ ರಾಮ್ ಸೀಕ್ರೇಟ್ ರೂಮ್‌ನಲ್ಲಿ ಇದ್ದಾರೆ ಎನ್ನುವುದು ಕೇವಲ ಒಂದು ಸಾಧ್ಯತೆ ಅಥವಾ ವೀಕ್ಷಕರ ಊಹೆ ಮಾತ್ರ. ಬಿಗ್ ಬಾಸ್‌ನಿಂದ ಅಧಿಕೃತವಾಗಿ ಮಾಹಿತಿ ಹೊರಬರುವವರೆಗೆ ಇದನ್ನು ಖಚಿತ ಸುದ್ದಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನಿಜವಾಗಿಯೂ ತಾಂಡವ್ ರಾಮ್ ಸೀಕ್ರೇಟ್ ರೂಮ್‌ನಲ್ಲಿದ್ದರೆ, ಮುಂದಿನ ದಿನಗಳಲ್ಲಿ ಬಿಗ್ ಬಾಸ್ ಮನೆಯ ಆಟವೇ ಸಂಪೂರ್ಣ ಬದಲಾಗುವ ಸಾಧ್ಯತೆ ಇದೆ ಎಂಬ ಕುತೂಹಲ ಮಾತ್ರ ಹೆಚ್ಚಾಗಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಬಿಗ್‌ ಬಾಸ್‌ ಪ್ರೋಮೋದಲ್ಲಿ ಕೂಡ ಈ ಬಗ್ಗೆ ಸುಳಿವು ನೀಡಲಾಗಿದೆ. ಸುದೀಪ್‌ ಅವರು ಕಿಚ್ಚನ ಪಂಚಾಯ್ತಿಯ ಪ್ರೋಮೋದ ಕೊನೆಯಲ್ಲಿ ಟೈಮ್‌ ಪೀಸ್‌ ಉದಾಹರಣೆ ಕೊಡುತ್ತ ನಿಂತೊದ ಟೈಮ್‌ ಪೀಸ್‌ ಮತ್ತೆ ಜೀವ ಬರುತ್ತಾ? ಅಥವಾ ಗೋಡೆ ಮೇಲಿನಿಂದ ಪರ್ಮನೆಂಟ್‌ ಆಗಿ ಕೆಳಗಿಳಿಸುವ ಸಮಯ ಬಂದಿದೆಯಾ ಎಂದು ಸುದೀಪ್‌ ಹೇಳಿದ್ದಾರೆ. ಇದರಿಂದ ಬಿಗ್‌ ಬಾಸ್‌ ಮನೆಗೆ ತಾಂಡವ್‌ ರಾಮ್‌ ಮರಳಿ ಬರ್ತಾರಾ ಎಂಬ ಕುತೂಹ ಕಾಡುತ್ತಿದೆ.  

 

 

Add Zee News as a Preferred Source
TAGS:
Bigg Boss Kannada Season 13