ಸೋನಿಕಾಗೆ ತಾಂಡವ್ ರಾಮ್ ಅಂದ್ರೆ ಇಷ್ಟಾನಾ? ಈ ವಿಚಾರ ಮದುವೆ ವರೆಗೂ ಬಂದಿದೆಯಾ?
ಸೋನಿಕಾ ಅವರ ಈ ಮಾತಿಗೆ ಪ್ರತಿಕ್ರಿಯಿಸಿದ ಗಗನ್ ಚಿನ್ನಪ್ಪ, “ಸೋನಿಕಾ ಮತ್ತು ತಾಂಡವ್ ಯಾಕೆ ಮದುವೆಯಾಗಬಾರದು? ಇಬ್ಬರೂ ಒಳ್ಳೆಯ ಜೋಡಿ” ಎಂದು ತಮಾಷೆಯಾಗಿ ಹೇಳಿದ್ದಾರೆ.
ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ ಮನೆಯಲ್ಲಿ ಸ್ನೇಹ, ಪ್ರೀತಿ ಹಾಗೂ ಸಂಬಂಧಗಳ ಕುರಿತಾದ ಮಾತುಕತೆಗಳು ಜೋರಾಗಿವೆ. ಇದೀಗ ಮನೆಯ ಸದಸ್ಯರ ನಡುವೆ ಮದುವೆಯ ವಿಚಾರವಾಗಿ ನಡೆದ ಚರ್ಚೆ ಪ್ರೇಕ್ಷಕರ ಗಮನ ಸೆಳೆದಿದೆ. ಗಗನ್ ಚಿನ್ನಪ್ಪ, ತಾಂಡವ್ ರಾಮ್, ಸೋನಿಕಾ ಗೌಡ ಮತ್ತು ಗಾನವಿ ನಡುವೆ ನಡೆದ ಸಂಭಾಷಣೆಯಲ್ಲಿ ಸೋನಿಕಾ ಹಾಗೂ ತಾಂಡವ್ ಮದುವೆಯ ಪ್ರಸ್ತಾಪ ಕೇಳಿಬಂದಿದೆ.
ಅಕ್ಟೋಬರ್ 30ರ ಸಂಚಿಕೆಯ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದ್ದು, ಇದರಲ್ಲಿ ಮನೆಯ ಸದಸ್ಯರು ಮದುವೆ ವಿಚಾರವಾಗಿ ತಮಾಷೆಯ ಮಾತುಕತೆ ನಡೆಸಿರುವುದು ಕಂಡುಬಂದಿದೆ.
ತಾಂಡವ್ ಮದುವೆಗೆ ಸೂಕ್ತ ವ್ಯಕ್ತಿ ಎಂದ ಸೋನಿಕಾ!
ಮಾತುಕತೆಯ ವೇಳೆ ಸೋನಿಕಾ ಗೌಡ ಅವರು ತಾಂಡವ್ ರಾಮ್ ಅವರನ್ನು ಹೊಗಳಿದ್ದಾರೆ. “ಗಂಡನಾಗಲು ತಾಂಡವ್ ಸೂಕ್ತ ವ್ಯಕ್ತಿ. ಅವರನ್ನು ಮದುವೆಯಾಗುವ ಹುಡುಗಿಗೆ ಒಳ್ಳೆಯ ಮನರಂಜನೆ ಸಿಗುತ್ತದೆ. ಬೋರ್ ಆಗಲು ಬಿಡುವುದಿಲ್ಲ” ಎಂದು ಸೋನಿಕಾ ಹೇಳಿದ್ದಾರೆ.
ಸೋನಿಕಾ ಅವರ ಈ ಮಾತಿಗೆ ಪ್ರತಿಕ್ರಿಯಿಸಿದ ಗಗನ್ ಚಿನ್ನಪ್ಪ, “ಸೋನಿಕಾ ಮತ್ತು ತಾಂಡವ್ ಯಾಕೆ ಮದುವೆಯಾಗಬಾರದು? ಇಬ್ಬರೂ ಒಳ್ಳೆಯ ಜೋಡಿ” ಎಂದು ತಮಾಷೆಯಾಗಿ ಹೇಳಿದ್ದಾರೆ.
ಗಗನ್ ಮಾತಿಗೆ ತಾಂಡವ್ ಕೊಟ್ರು ಪ್ರತಿಕ್ರಿಯೆ!
ಇನ್ನು ಗಗನ್ ಅವರ ಮಾತಿಗೆ ಪ್ರತಿಕ್ರಿಯಿಸಿದ ತಾಂಡವ್ ರಾಮ್, ಸೋನಿಕಾ ಅವರು ತಮ್ಮೊಂದಿಗೆ ಹೆಚ್ಚು ವಾಕ್ ಮಾಡಿಲ್ಲ ಎಂಬ ಅರ್ಥದಲ್ಲಿ ಗಗನ್ ಜೊತೆಗಿನ ಒಡನಾಟವನ್ನು ಪ್ರಸ್ತಾಪಿಸಿದ್ದಾರೆ. “ಸೋನಿಕಾ ಅವರು ಹೆಚ್ಚು ವಾಕ್ ಹೋಗಿರುವುದು ಗಗನ್ ಜೊತೆ. ಇವನು ಸಖತ್ ಆಗಿ ಇದ್ದಾನೆ” ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಬಿಗ್ ಬಾಸ್ ಮನೆಯೊಳಗಿನ ಈ ಮದುವೆ ಕುರಿತ ಮಾತುಕತೆ ಸದಸ್ಯರ ನಡುವೆ ನಗು ಮೂಡಿಸಿದೆ. ಸೋನಿಕಾ ಮತ್ತು ತಾಂಡವ್ ಜೋಡಿಯ ಬಗ್ಗೆ ಗಗನ್ ನೀಡಿದ ಪ್ರತಿಕ್ರಿಯೆ ಇದೀಗ ಪ್ರೋಮೋದ ಪ್ರಮುಖ ಆಕರ್ಷಣೆಯಾಗಿದೆ. ಅಕ್ಟೋಬರ್ 30ರ ಪೂರ್ಣ ಸಂಚಿಕೆಯಲ್ಲಿ ಈ ಮಾತುಕತೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ವೀಕ್ಷಕರಲ್ಲಿದೆ.