SOCIAL MEDIA

Newsletter

PARTNER SITES
Select Language Select State

ʻಅವನ ಜೊತೆ 8 ವರ್ಷ ಸಂಬಂಧ ಇತ್ತಲ್ವಾʼ : ಕಿತ್ತಾಟದ ಮಧ್ಯೆ ಗಾನವಿ ಲವ್ ಸ್ಟೋರಿ ರೀವಿಲ್ ಮಾಡಿದ ಸೌಂದರ್ಯಾ

Soundarya Shetty Ganavi Gowda fight: ಗಾನವಿ ಗೌಡ ಮತ್ತು ಸೌಂದರ್ಯಾ ಶೆಟ್ಟಿ ನಡುವೆ ನಡೆದ ಮಾತಿನ ಚಕಮಕಿ ಹೊಸ ಪ್ರಶ್ನೆ ಹುಟ್ಟು ಹಾಕಿದೆ.

Written By Chetana Devarmani
Published: Nov 18, 2026, 15:50 IST | Updated: Nov 18, 2026, 15:52 IST
Join

Soundarya Shetty talks about Ganavi Gowda relationship in bbk13 : ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ದಿನದಿಂದ ದಿನಕ್ಕೆ ಜಗಳ, ವಾಗ್ವಾದ ಹಾಗೂ ವೈಯಕ್ತಿಕ ಟೀಕೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಈ ವಾರ ಯುವರಾಣಿಯರ ನಡುವಿನ ಪೈಪೋಟಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೀಗ ಗಾನವಿ ಗೌಡ ಮತ್ತು ಸೌಂದರ್ಯಾ ಶೆಟ್ಟಿ ನಡುವೆ ನಡೆದ ಮಾತಿನ ಚಕಮಕಿ ಮನೆಯ ವಾತಾವರಣವನ್ನೇ ಕಾವೇರಿಸಿದೆ.

ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ನಾಮಿನೇಷನ್ ಪ್ರಕ್ರಿಯೆಯೇ ಈ ಜಗಳಕ್ಕೆ ಪ್ರಮುಖ ಕಾರಣವಾಗಿದೆ. ಆಸಿಯಾ ಫಿರ್ದೋಸ್ ಮತ್ತು ಗಾನವಿ ಒಟ್ಟಾಗಿ ಆಟವಾಡಿ ಸೌಂದರ್ಯಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಸೌಂದರ್ಯಾ ಮತ್ತು ಗಾನವಿ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಆರಂಭದಲ್ಲಿ ಆಟದ ತಂತ್ರಗಾರಿಕೆ ಹಾಗೂ ನಾಮಿನೇಷನ್ ವಿಚಾರಕ್ಕೆ ಸೀಮಿತವಾಗಿದ್ದ ಜಗಳ ನಂತರ ವೈಯಕ್ತಿಕ ಮಟ್ಟಕ್ಕೆ ತಲುಪಿದೆ.

ವಾದದ ನಡುವೆ ಗಾನವಿ, ಸೌಂದರ್ಯಾ ಅವರ ಕನ್ನಡ ಮಾತನಾಡುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಮೊದಲು ಸರಿಯಾಗಿ ಕನ್ನಡ ಮಾತನಾಡುವುದನ್ನು ಕಲಿತುಕೋ ಎಂದು ಗಾನವಿ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲದೆ, ‘ಮೊದಲು ನೆಟ್ಟಗೆ ಕನ್ನಡ ಮಾತಾಡು, ದುಬೈಗೆ ಕಳಿಸಿಬಿಡ್ತೀನಿ’ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಗಾನವಿ ಅವರ ಈ ಮಾತು ಸೌಂದರ್ಯಾ ಅವರನ್ನು ಮತ್ತಷ್ಟು ಕೆರಳಿಸಿದೆ.

8 ವರ್ಷಗಳ ರಿಲೇಶನ್‌ಶಿಪ್ ವಿಚಾರ ಪ್ರಸ್ತಾಪಿಸಿದ ಸೌಂದರ್ಯಾ!

ಗಾನವಿ ಮಾತಿಗೆ ಸುಮ್ಮನಿರದ ಸೌಂದರ್ಯಾ ಕೂಡ ಖಡಕ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ಗಾನವಿ ಅವರ ವೈಯಕ್ತಿಕ ಜೀವನದ ವಿಚಾರವನ್ನು ಪ್ರಸ್ತಾಪಿಸಿ, ಎಂಟು ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿದ್ದುಕೊಂಡು ಬಿಗ್ ಬಾಸ್ ಮನೆಯಲ್ಲಿ ಇಂತಹ ವರ್ತನೆ ತೋರುತ್ತಿದ್ದೀಯಾ ಎಂಬರ್ಥದಲ್ಲಿ ಪ್ರಶ್ನಿಸಿದ್ದಾರೆ. ‘8 ವರ್ಷಗಳ ರಿಲೇಶನ್‌ಶಿಪ್ ಇಟ್ಟುಕೊಂಡು ಇಲ್ಲಿ ಬಂದು ಗುಳುಗುಳು ಮಾಡ್ತೀಯಾ?’ ಎಂಬ ಸೌಂದರ್ಯಾ ಅವರ ಮಾತು ಇದೀಗ ಚರ್ಚೆಗೆ ಕಾರಣವಾಗಿದೆ. ಇಬ್ಬರ ನಡುವಿನ ಜಗಳ ಕೇವಲ ನಾಮಿನೇಷನ್‌ಗೆ ಸಂಬಂಧಿಸಿದ ವಾಗ್ವಾದವಾಗಿ ಉಳಿಯದೆ, ಪರಸ್ಪರರ ವೈಯಕ್ತಿಕ ಬದುಕಿನ ವಿಚಾರಗಳವರೆಗೂ ತಲುಪಿದೆ. ಈ ಬೆಳವಣಿಗೆಯಿಂದ ಬಿಗ್ ಬಾಸ್ ಮನೆಯೊಳಗಿನ ವಾತಾವರಣ ಮತ್ತಷ್ಟು ಉದ್ವಿಗ್ನಗೊಂಡಿದೆ.

ಬಿಗ್ ಬಾಸ್ ಮನೆಯಲ್ಲಿ ಆಟದ ತಂತ್ರಗಾರಿಕೆ, ನಾಮಿನೇಷನ್ ಮತ್ತು ಮೈತ್ರಿಗಳ ವಿಚಾರವಾಗಿ ಸ್ಪರ್ಧಿಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡುವುದು ಸಾಮಾನ್ಯ. ಆದರೆ ಈ ಬಾರಿ ಭಾಷೆಯ ವಿಚಾರದಿಂದ ಆರಂಭವಾದ ಜಗಳ ವೈಯಕ್ತಿಕ ಸಂಬಂಧದ ಚರ್ಚೆಯವರೆಗೂ ತಲುಪಿರುವುದು ಗಮನ ಸೆಳೆದಿದೆ. ಒಂದೆಡೆ ಗಾನವಿ ಅವರ ಮಾತುಗಳಿಗೆ ವಿರೋಧ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಸೌಂದರ್ಯಾ ವೈಯಕ್ತಿಕ ಜೀವನವನ್ನು ಜಗಳಕ್ಕೆ ಎಳೆದು ತಂದಿರುವುದು ಸರಿಯೇ ಎಂಬ ಚರ್ಚೆಯೂ ನಡೆಯುತ್ತಿದೆ. ಈ ಜಗಳಕ್ಕೆ ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದಾರೆ? ಇಬ್ಬರಿಗೂ ಕ್ಲಾಸ್ ತೆಗೆದುಕೊಳ್ಳುತ್ತಾರಾ ಎಂಬ ಕುತೂಹಲ ಬಿಗ್ ಬಾಸ್ ವೀಕ್ಷಕರಲ್ಲಿದೆ.
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ZEENEWS TRENDING STORIES