SOCIAL MEDIA

Newsletter

PARTNER SITES
Select Language Select State

ʻಐಶಿರ್ʼ ಜೋಡಿಯ ನಿಶ್ಚಿತಾರ್ಥ ಸಂಭ್ರಮ: ಉಂಗುರ ಬದಲಾಯಿಸಿಕೊಂಡ ಶಿಶಿರ್ ಶಾಸ್ತ್ರಿ - ಐಶ್ವರ್ಯಾ

ಕಳೆದ ಹಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳು ಮತ್ತು ಊಹಾಪೋಹಗಳಿಗೆ ಕೊನೆಗೂ ಅಧಿಕೃತ ತೆರೆ ಬಿದ್ದಿದೆ. ʻಬಿಗ್ ಬಾಸ್ ಕನ್ನಡ ಸೀಸನ್ 11ʼರ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯಾ ಶಿಂಧೋಗಿ ಇಂದು ಬೆಂಗಳೂರಿನಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಕಿರುತೆರೆ ಸ್ನೇಹಿತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ.

Written By Krishna NK
Published: Nov 22, 2026, 17:57 IST | Updated: Nov 22, 2026, 17:58 IST
Image Credit: aishwarya shindogi
Join

ಬೆಂಗಳೂರು : ಕಳೆದ ಹಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳು ಮತ್ತು ಊಹಾಪೋಹಗಳಿಗೆ ಕೊನೆಗೂ ಅಧಿಕೃತ ತೆರೆ ಬಿದ್ದಿದೆ. ʻಬಿಗ್ ಬಾಸ್ ಕನ್ನಡ ಸೀಸನ್ 11ʼರ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯಾ ಶಿಂಧೋಗಿ ಇಂದು ಬೆಂಗಳೂರಿನಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಕಿರುತೆರೆ ಸ್ನೇಹಿತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ.  

ಬಿಗ್ ಬಾಸ್ ಮನೆಯಿಂದ ದಾಂಪತ್ಯದ ಹೊಸ್ತಿಲಿಗೆ   
ʻಬಿಗ್ ಬಾಸ್ ಕನ್ನಡ ಸೀಸನ್ 11ʼರ ಕಾರ್ಯಕ್ರಮದ ಒಳಗೆ ಚಿಗುರೊಡೆದ ಶಿಶಿರ್ ಮತ್ತು ಐಶ್ವರ್ಯಾ ನಡುವಿನ ಸ್ನೇಹ, ದೊಡ್ಮನೆಯಿಂದ ಹೊರಬಂದ ನಂತರವೂ ಮುಂದುವರಿದಿತ್ತು. ಕಾರ್ಯಕ್ರಮ ಮುಗಿದ ಬಳಿಕವೂ ಈ ಜೋಡಿ ವಿವಿಧ ಸಮಾರಂಭಗಳು ಮತ್ತು ಪ್ರವಾಸಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದುದರಿಂದ, ಇವರ ನಡುವಿನ ಒಡನಾಟದ ಬಗ್ಗೆ ಅಭಿಮಾನಿಗಳು ಹಾಗೂ ನೆಟ್ಟಿಗರಲ್ಲಿ ತೀವ್ರ ಕುತೂಹಲ ಮೂಡಿತ್ತು. ಕಳೆದ ಕೆಲವು ತಿಂಗಳುಗಳಿಂದ ಇವರಿಬ್ಬರ ಸಂಬಂಧದ ಕುರಿತು ನಾನಾ ಚರ್ಚೆಗಳು ನಡೆಯುತ್ತಿದ್ದರೂ, ಈ ಜೋಡಿ ಎಲ್ಲಿಯೂ ತಮ್ಮ ಪ್ರೀತಿಯ ವಿಷಯವನ್ನು ಅಧಿಕೃತವಾಗಿ ಖಚಿತಪಡಿಸಿರಲಿಲ್ಲ. ಇದೀಗ ನವೆಂಬರ್ 22ರಂದು ಬೆಂಗಳೂರಿನಲ್ಲಿ ಸಂಭ್ರಮದಿಂದ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ತಮ್ಮ ಪ್ರೀತಿಯ ಬದುಕಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.  

ಟ್ರೋಲ್‌ಗಳಿಗೆ ಖಡಕ್ ಹಾಗೂ ತಮಾಷೆಯ ತಿರುಗೇಟು
ನಿಶ್ಚಿತಾರ್ಥದ ಸುದ್ದಿಯನ್ನು ಅಧಿಕೃತವಾಗಿ ಘೋಷಿಸುವ ಕೆಲವೇ ದಿನಗಳ ಮುನ್ನ ಶಿಶಿರ್ ಮತ್ತು ಐಶ್ವರ್ಯಾ ವಿಶೇಷ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಗಾಸಿಪ್‌ಗಳಿಗೆ ಸ್ಪಷ್ಟನೆ ನೀಡಿದ್ದರು. ಅಭಿಮಾನಿಗಳ ಪಾಲಿನ ನೆಚ್ಚಿನ ʻಐಶಿರ್ʼ ಜೋಡಿ, ತಮ್ಮ ಬಗ್ಗೆ ಬರುತ್ತಿದ್ದ ನೆಗೆಟಿವ್ ಕಾಮೆಂಟ್‌ಗಳು ಮತ್ತು ಟ್ರೋಲ್‌ಗಳಿಗೆ ಅದೇ ವಿಡಿಯೋದಲ್ಲಿ ಹಾಸ್ಯಮಯವಾಗಿಯೇ ಉತ್ತರ ನೀಡಿತ್ತು.

“ಕೆಲವರು ನಮ್ಮ ಲೈಫ್ ಸ್ಕ್ರಿಪ್ಟ್ ಅನ್ನು ಕಾಮೆಂಟ್ ಸೆಕ್ಷನ್‌ನಲ್ಲೇ ಬರೆದುಬಿಟ್ಟಿದ್ದರು. ಇವರಿಬ್ಬರದ್ದು ಕೇವಲ ಕಂಟೆಂಟ್‌ಗಾಗಿ ಮಾಡುವ ಶೋಕಿಯಷ್ಟೇ, ಕೆಲವೇ ದಿನಗಳಲ್ಲಿ ಬ್ರೇಕಪ್ ಆಗುತ್ತೆ ಎಂದು ಟ್ರ್ಯಾಜೆಡಿ ಎಂಡಿಂಗ್ ಕೊಡುತ್ತಿದ್ದರು.”

ಹೀಗೆ ನಗುತ್ತಲೇ ಟ್ರೋಲಿಗರ ಮಾತುಗಳಿಗೆ ತಿರುಗೇಟು ನೀಡಿದ ಜೋಡಿ, ತಮ್ಮ ಸಂಬಂಧದ ಕುರಿತು ಮೂಡಿದ್ದ ಗೊಂದಲಗಳನ್ನೂ ನಿವಾರಿಸಿತು. “ಜನರು ನಮ್ಮನ್ನ ಅಣ್ಣ-ತಂಗಿ, ಬೆಸ್ಟ್ ಫ್ರೆಂಡ್ಸ್ ಅಥವಾ ಸಿಚುಯೇಷನ್‌ಶಿಪ್‌ನಲ್ಲಿದ್ದಾರೆ ಎಂದು ಅಂದುಕೊಂಡಿದ್ದರು. ಆದರೆ, ನಾವು ಅಂತಹ ಯಾವುದೇ ಶಿಪ್‌ನಲ್ಲಿ ಇಲ್ಲ, ಬದಲಾಗಿ ಜೀವನ ಎಂಬ ಸುಂದರ ಹಡಗನ್ನ ಒಟ್ಟಿಗೆ ಏರುತ್ತಿದ್ದೇವೆ. ಇನ್ಮುಂದೆ ʻAISHIRʼ ಬರೀ ಹ್ಯಾಶ್‌ಟ್ಯಾಗ್ ಆಗಿ ಉಳಿಯುವುದಿಲ್ಲ” ಎಂದು ಸ್ಪಷ್ಟಪಡಿಸುವ ಮೂಲಕ ಅಭಿಮಾನಿಗಳ ಹರ್ಷಕ್ಕೆ ಕಾರಣವಾಗಿತ್ತು.

ವೈರಲ್ ಆದ ನಿಶ್ಚಿತಾರ್ಥದ ದೃಶ್ಯಗಳು
ಬೆಂಗಳೂರಿನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಶಿಶಿರ್ ಮತ್ತು ಐಶ್ವರ್ಯಾ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಸಮಾರಂಭದ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ. ಹೊಸ ಬಾಳಿಗೆ ಕಾಲಿಡುತ್ತಿರುವ ಈ ತಾರಾ ಜೋಡಿಗೆ ʻಬಿಗ್ ಬಾಸ್ʼ ಸಹಸ್ಪರ್ಧಿಗಳು, ಕಿರುತೆರೆ ಹಾಗೂ ಚಂದನವನದ ಗಣ್ಯರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದು, ಮದುವೆಯ ದಿನಾಂಕದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES