ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ ತಮ್ಮ ಸಿನಿಮಾಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಸಿನಿಮಾ, ವೈಯಕ್ತಿಕ ಜೀವನ ಹಾಗೂ ಕುಟುಂಬದ ವಿಚಾರಗಳು ಆಗಾಗ್ಗೆ ಸುದ್ದಿಯಾಗುತ್ತಿರುತ್ತವೆ. ಇದೀಗ ಸಲ್ಮಾನ್ ಖಾನ್ ಅವರ ಹಳೆಯ ಮಲಗುವ ಕೋಣೆಯಲ್ಲಿ ನಡೆದಿತ್ತೆನ್ನಲಾದ ವಿಚಿತ್ರ ಅನುಭವವೊಂದು ಗಮನ ಸೆಳೆದಿದೆ. ತಮ್ಮ ಕೋಣೆಯಲ್ಲಿ ಯಾರೂ ಕಾಣಿಸದಿದ್ದರೂ ಮತ್ತೊಂದು ಅಸ್ತಿತ್ವ ಇರುವಂತೆ ಭಾಸವಾಗುತ್ತಿತ್ತು ಎಂದು ಅವರು ಹೇಳಿಕೊಂಡಿದ್ದರೆನ್ನಲಾದ ವಿಚಾರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ಸ್ನಲ್ಲಿ ಸಲ್ಮಾನ್ ಖಾನ್ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ದೊಡ್ಡ ನಟನಾಗಿದ್ದರೂ ಕುಟುಂಬದೊಂದಿಗೆ ಸರಳ ಜೀವನ ನಡೆಸುವ ಸಲ್ಮಾನ್ ಅವರ ಮನೆಯ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಆಸಕ್ತಿ ಇದೆ. ಈ ನಡುವೆ ಅವರ ಬೆಡ್ ರೂಮ್ ಗೆ ಸಂಬಂಧಿಸಿದ ಅನುಭವದ ಕುರಿತು ಹಕಲವು ವಿಚಾರ ಚರ್ಚೆಯಾಗುತ್ತಿದೆ.
ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ತಮ್ಮ ಬೆಡ್ ರೂಮ್ನಲ್ಲಿನ ಘಟನೆಗಳ ಕುರಿತು ಸಲ್ಮಾನ್ ಖಾನ್ ಮಾತನಾಡಿದ್ದಾರೆ ಎನ್ನಲಾಗಿದೆ. ಕರಣ್ ಜೋಹರ್ ಅವರು ಸಲ್ಮಾನ್ ಅವರನ್ನು ಮೊದಲ ಬಾರಿಗೆ ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡಾಗ, ಅವರ ಕೋಣೆಯ ಸರಳತೆಯ ಬಗ್ಗೆಯೂ ಪ್ರಸ್ತಾಪಿಸಿದ್ದರು. ಆ ಕೋಣೆಯಲ್ಲಿ ಒಂದು ಹಾಸಿಗೆ ಮತ್ತು ಕಪಾಟು ಮಾತ್ರ ಇದ್ದವು ಎಂದು ಹೇಳಲಾಗಿದ್ದು, ಅಷ್ಟು ದೊಡ್ಡ ತಾರೆಯ ಕೋಣೆ ಇಷ್ಟು ಸರಳವಾಗಿರುವುದು ಕರಣ್ ಅವರಿಗೆ ಅಚ್ಚರಿ ಮೂಡಿಸಿತ್ತಂತೆ. ಆ ಸಮಯದಲ್ಲಿ ಸಲ್ಮಾನ್ ತಮ್ಮ ಪೋಷಕರು ಹಾಗೂ ಸಹೋದರರಾದ ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಅವರೊಂದಿಗೆ ವಾಸಿಸುತ್ತಿದ್ದರು. ಇದೇ ವೇಳೆ ತಮ್ಮ ಕೋಣೆಯಲ್ಲಿ ಎದುರಿಸಿದ ವಿಚಿತ್ರ ಅನುಭವಗಳ ಕುರಿತು ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಸಲ್ಮಾನ್ ಅವರ ಅನುಭವದ ಪ್ರಕಾರ, ಕೋಣೆಯಲ್ಲಿ ಒಬ್ಬರೇ ಇದ್ದಾಗಲೂ ತಮ್ಮೊಂದಿಗೆ ಮತ್ತೊಂದು ಅಗೋಚರ ಅಸ್ತಿತ್ವ ಇರುವಂತೆ ಅನಿಸುತ್ತಿತ್ತಂತೆ. ಅದನ್ನು ಕಣ್ಣಾರೆ ನೋಡದಿದ್ದರೂ ಅದರ ಇರುವಿಕೆಯನ್ನು ಅನುಭವಿಸುತ್ತಿದ್ದೆ. ಕೆಲವೊಮ್ಮೆ ವಿಚಿತ್ರ ಶಬ್ದಗಳೂ ಕೇಳಿಸುತ್ತಿದ್ದವು ಎಂದು ನಟ ಸಲ್ಮಾನ್ ಖಾನ್ ಆ ಘಟನೆ ಕುರಿತು ವಿವರಿಸಿದ್ದಾರೆ ಎನ್ನಲಾಗಿದೆ.
ತಾವು ಬೆಡ್ ರೂಮ್ ನಿಂದ ಹೊರಗೆ ಹೋದಾಗ ದೀಪಗಳು ತಾವಾಗಿಯೇ ಉರಿಯುತ್ತಿದ್ದವು. ಮತ್ ಕಪಾಟುಗಳು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತಿದ್ದವು ಹಾಗೂ ಮ್ಯೂಸಿಕ್ ಸಿಸ್ಟಮ್ ಕೂಡ ತನ್ನಷ್ಟಕ್ಕೆ ತಾನೇ ಚಾಲನೆಯಾಗುತ್ತಿತ್ತು ಎಂಬುದು ಈ ಅನುಭವಕ್ಕೆ ಸಂಬಂಧಿಸಿದಂತೆ ಹೇಳಲಾಗುತ್ತಿರುವ ಪ್ರಮುಖ ಸಂಗತಿ. ತಾವು ಬಾತ್ರೂಮ್ನಲ್ಲಿದ್ದಾಗ ಹೊರಗಡೆ ಯಾರೋ ಕಪಾಟುಗಳನ್ನು ತೆರೆಯುತ್ತಿರುವಂತೆ ಶಬ್ದ ಕೇಳಿಸುತ್ತಿತ್ತು ಎಂದು ಸಲ್ಮಾನ್ ಹೇಳಿಕೊಂಡಿದ್ದರೆ ಎನ್ನಲಾಗಿದೆ.