ರೇಣುಕಾಸ್ವಾಮಿ ಕೊ*ಲೆ ಕೇಸ್ ಇದೀಗ ಮಹತ್ವದ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದ A14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಲು ರೆಡಿ ಇದ್ದು ನಾಳೆ (ಸೆ. 22) ಸಮ್ಮನ್ಸ್ ದಿನಾಂಕ ನಿಗದಿಯಾಗಲಿದೆ. ಈ ಕುರಿತಂತ ಫುಲ್ ಡಿಟೈಲ್ಸ್ ಇಲ್ಲಿದೆ...
ಹೌದು, ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಕೇಸ್ ನಲ್ಲಿ ನಟ ದರ್ಶನ್ ಆ್ಯಂಡ್ ಟೀಮ್ ಜೈಲು ಸೇರಿದೆ. ಪ್ರಕರಣದಲ್ಲಿ ಮಹತ್ವದ ಬೆಳವಣಿ ನಡೆಯುತ್ತಿದ್ದು, ಕೇಸ್ ಬಗ್ಗೆ ಮಾಫಿ ಸಾಕ್ಷಿ ನುಡಿಯಲು ಪ್ರಕರಣದ A14 ಆರೋಪಿ ಪ್ರದೋಷ್ ಮುಂದೆ ಬಂದಿದ್ದಾರೆ. ದರ್ಶನ್ ಗೆ ಮಾಫಿ ಸಾಕ್ಷಿ ದೊಡ್ಡ ಸಂಕಷ್ಟ ತಂದೊಡ್ಡಿದ್ದು ಇಂದು ಮಾಫಿ ಸಾಕ್ಷಿಗೆ ದಿನಾಂಕ ನಿಗದಿ ಮಾಡುವ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ.
ಮಾಫಿ ಸಾಕ್ಷಿಗೆ ಜಡ್ಜ್ ಕೇಳಿದ್ದು ಇದೊಂದೇ ಪ್ರಶ್ನೆ..!
ಮಾಫಿ ಸಾಕ್ಷಿಗೆ ರೆಡಿಯಾಗಿರುವ ರೇಣುಕಾಸ್ವಾಮಿ ಕೊ*ಲೆ ಕೇಸ್‌ನ A14 ಆರೋಪಿ ಪ್ರದೋಷ್ ಪರಪ್ಪನ ಅಗ್ರಹಾರದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಆರೋಪಿ ಪ್ರದೋಷ್ ಗೆ ಜಡ್ಜ್ ಪ್ರಶ್ನೆ ಮಾಡಿದ್ದು. ಈ ವೇಳೆ ನ್ಯಾಯಧೀಶರು, ಮಾಫಿ ಸಾಕ್ಷಿ ಆದೇಶ ಪ್ರತಿ ತಲುಪಿದೆಯೇ, ಎಲ್ಲಾ ಷರತ್ತುಗಳಿಗೆ ಒಪ್ಪಿಗೆ ಇದ್ಯಾ ಎಂದು ಪ್ರದೂಷ್ ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರದೋಷ್, ಆದೇಶ ತಲುಪಿದೆ, ನನಗೆ ಒಪ್ಪಿಗೆ ಇದೆ ಎಂದಿದ್ದಾರೆ.
ಇದೇ ವೇಳೆ ಸೆಪ್ಟೆಂಬರ್ 23ರಂದು ಪ್ರದೋಷ್ ಸಾಕ್ಷ್ಯ ವಿಚಾರಣೆಗೆ ಸಮನ್ಸ್ ನೀಡಲು ಎಸ್ ಪಿಪಿ ಮನವಿ ಮಾಡಿದ್ರು. ಅಲ್ಲದೇ ಮಾಫಿ ಸಾಕ್ಷಿ ದಿನಾಂಕ ಮುಂದೂಡಿಕೆಗೆ ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ. ಮಾಫಿ ಸಾಕ್ಷಿ ಆದೇಶ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಬೇಕಿದೆ. ಹೀಗಾಗಿ ಪ್ರದೊಷ್ ಮಾಫಿ ಸಾಕ್ಷಿ ದಿನಾಂಕ ನಿಗದಿ ಮುಂದೂಡಿಕೆಗೆ ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ. ವಿಚಾರಣೆ ನಂತರ ನಾಳೆ (ಸೆ.22 ಮಂಗಳವಾರ) ಸಮನ್ಸ್ ದಿನಾಂಕ ನಿಗದಿ ಮಾಡಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ರೇಣುಕಾಸ್ವಾಮಿ ಹ*ತ್ಯೆ ಪ್ರಕರಣದಲ್ಲಿ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಗ್ರೀನ್ ಸಿಗ್ನಲ್ ಪಡೆದಿರುವ ಹಿನ್ನೆಲೆಯಲ್ಲಿ, ಕಾನೂನಿನ ಪ್ರಕಾರ ಆತ ಪಾಲಿಸಬೇಕಾದ ಕಡ್ಡಾಯ ಷರತ್ತುಗಳು ಇದ್ದು ಮುಂದಿನ ದಿನಗಳಲ್ಲಿ ಮಾಫಿ ಸಾಕ್ಷಿ ಏನೆಲ್ಲಾ ಸತ್ಯ ಹೇಳಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಮಾಫಿ ಸಾಕ್ಷಿ ಕೋರ್ಟ್‌ನಲ್ಲಿ ಸುಳ್ಳು ಹೇಳಿದ್ರೆ ಏನಾಗುತ್ತೆ?
ಇನ್ನು ಮಾಫಿ ಸಾಕ್ಷಿ ನ್ಯಾಯಾಲಯದ ಮುಂದೆ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದರೆ ಅಥವಾ ಪ್ರಮುಖ ಸತ್ಯವನ್ನು ಮರೆಮಾಚಿದರೆ, ಆತನಿಗೆ ನೀಡಲಾದ ಕ್ಷಮಾದಾನವು ರದ್ದಾಗುತ್ತದೆ ಮತ್ತು ಆತನ ಮೂಲ ಅಪರಾಧ ಹಾಗೂ ಸುಳ್ಳು ಸಾಕ್ಷ್ಯ ನೀಡಿದ ಅಪರಾಧ ಎರಡಕ್ಕೂ ಕಠಿಣ ಶಿಕ್ಷೆಯಾಗುತ್ತದೆ.