• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /‘ಬಾಹುಬಲಿ 2’ ದಾಖಲೆಯೂ ಉಡೀಸ್: No1 ಆಗೋಕೆ ಕೇವಲ ಎರಡೇ ಎರಡು ಹೆಜ್ಜೆ ಬಾಕಿ

‘ಬಾಹುಬಲಿ 2’ ದಾಖಲೆಯೂ ಉಡೀಸ್: No1 ಆಗೋಕೆ ಕೇವಲ ಎರಡೇ ಎರಡು ಹೆಜ್ಜೆ ಬಾಕಿ

‘ರಾಮಾಯಣ’ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ಸಿನಿಮಾ ಬಿಡುಗಡೆಯಾಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಹಲವು ವರ್ಷಗಳ ಹಳೆಯ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಅದರಲ್ಲೂ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಸಿನಿಮಾದ ಜೀವಮಾನದ ಗಳಿಕೆಯ ದಾಖಲೆಯನ್ನು ಹಿಂದಿಕ್ಕಿರುವುದು ದೊಡ್ಡ ಸುದ್ದಿಯಾಗಿದೆ. ಇದರೊಂದಿಗೆ ಅಭಿಮಾನಿಗಳ ಕನಸಿನ 2000 ಕೋಟಿ ರೂಪಾಯಿ ಕ್ಲಬ್ ಸೇರುವ ಹಾದಿಯಲ್ಲಿ ಸಿನಿಮಾ ಇನ್ನಷ್ಟು ಹತ್ತಿರ ಬಂದಿದೆ.

Written ByKrishna NK
Published: Nov 28, 2026, 20:31 IST|Updated: Nov 28, 2026, 20:33 IST
joinshare
‘ಬಾಹುಬಲಿ 2’ ದಾಖಲೆಯೂ ಉಡೀಸ್: No1 ಆಗೋಕೆ ಕೇವಲ ಎರಡೇ ಎರಡು ಹೆಜ್ಜೆ ಬಾಕಿ
Image Credit: Ramayana Movie

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಈ ಸ್ಟಾರ್‌ ನಟಿ ಅಂದು ಟಾಯ್ಲೆಟ್ ಕ್ಲೀನರ್‌.. ಇಂದು 170 ಕೋಟಿ ರೂಪಾಯಿ ಒಡತಿ!  ಒಂದೇ ಸಿನಿಮಾದಿಂದ ಬದುಕೇ ಚೇಂಜ್‌

ಈ ಸ್ಟಾರ್‌ ನಟಿ ಅಂದು ಟಾಯ್ಲೆಟ್ ಕ್ಲೀನರ್‌.. ಇಂದು 170 ಕೋಟಿ ರೂಪಾಯಿ ಒಡತಿ! ಒಂದೇ ಸಿನಿಮಾದಿಂದ ಬದುಕೇ ಚೇಂಜ್‌

2

ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ತಡೆಯಲು ಏನೆಲ್ಲಾ ಕ್ರಮ ಕೈಗೊಳ್ಳಬಹುದು? ಪ್ಲಾಟ್‌ಫಾರಂ ಡೋರ್ ಹೊರತುಪಡಿಸಿ ಇರುವ ಪರ್ಯಾಯಗಳೇನು?

3

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ ಅಳವಡಿಕೆಗೆ ತೇಜಸ್ವಿ ಸೂರ್ಯ ಆಗ್ರಹ!

4

ವಿಜಯ್ ಸೇತುಪತಿ ಕಾಲರ್ ಹಿಡಿದ ರಾಜ್ ಬಿ ಶೆಟ್ಟಿ

5

ಇಂದಿನಿಂದ ನಂದಿನಿ ಮೊಸರು ದರ ಇಳಿಕೆ; ಹೊಸ ಬೆಲೆ ಎಷ್ಟು ಗೊತ್ತಾ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಸಿನಿಮಾ ತೆರೆಕಂಡು ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಹಲವು ವರ್ಷಗಳ ಹಳೆಯ ದಾಖಲೆಗಳನ್ನು ಹಿಂದಿಕ್ಕಿ ಹೊಸ ಮೈಲಿಗಲ್ಲು ಸಾಧಿಸಿದೆ. ಅದರಲ್ಲೂ ಎಸ್.ಎಸ್. ರಾಜಮೌಳಿ ಅವರ ‘ಬಾಹುಬಲಿ 2’ ಸಿನಿಮಾದ ಜೀವಮಾನದ ಗಳಿಕೆಯ ದಾಖಲೆಯನ್ನು ಮುರಿದು ಹಾಕಿರುವುದು ದೊಡ್ಡ ಸುದ್ದಿಯಾಗಿದೆ. ಇದರೊಂದಿಗೆ ಅಭಿಮಾನಿಗಳ ನಿರೀಕ್ಷೆಯ 2000 ಕೋಟಿ ರೂಪಾಯಿ ಕ್ಲಬ್ ಸೇರುವ ಹಾದಿಯಲ್ಲಿ ಸಿನಿಮಾ ಇನ್ನಷ್ಟು ಹತ್ತಿರ ಬಂದಿದೆ.

ಮೊದಲ ದಿನ ಈ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಕಲೆಕ್ಷನ್ ಬಂದಿರಲಿಲ್ಲ. ಆದರೆ ಆ ನಂತರ ದಿನಕಳೆದಂತೆ ಸಿನಿಮಾದ ಗಳಿಕೆ ಜೋರಾಯಿತು. ಆರಂಭದ ಸತತ ಏಳು ದಿನಗಳ ಕಾಲ ವಿಶ್ವಾದ್ಯಂತ ಪ್ರತಿದಿನ 100 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಇದು ಬಾಚಿಕೊಂಡಿತು. ಎರಡನೇ ವಾರದಲ್ಲಿ ಸ್ವಲ್ಪ ಮಟ್ಟಿಗೆ ಕಲೆಕ್ಷನ್ ಕಡಿಮೆಯಾಗಿ ದಿನವೊಂದಕ್ಕೆ 30 ಕೋಟಿಗಿಂತ ಕಡಿಮೆ ಗಳಿಕೆ ಕಂಡಿತ್ತು. ಆದರೂ ಮೂರನೇ ವಾರದಲ್ಲಿ ಸಿನಿಮಾ ಮತ್ತೆ ಪುಟಿದೆದ್ದು, ಹಿಂದಿನ ವೇಗವನ್ನು ಕಾಯ್ದುಕೊಂಡಿತು.

ಶನಿವಾರದ ಕಲೆಕ್ಷನ್ ಲೆಕ್ಕಾಚಾರದ ಪ್ರಕಾರ, ‘ರಾಮಾಯಣ’ ಬಿಡುಗಡೆಯಾದ 23ನೇ ದಿನಕ್ಕೆ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 1790.10 ಕೋಟಿ ರೂಪಾಯಿ ಸಂಗ್ರಹಿಸಿದೆ. 2017ರಲ್ಲಿ ಬಂದಿದ್ದ ‘ಬಾಹುಬಲಿ 2’ ಚಿತ್ರ ವಿಶ್ವದಾದ್ಯಂತ 1788 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿತ್ತು. ಈಗ ಆ ದಾಖಲೆಯನ್ನು ‘ರಾಮಾಯಣ’ ಹಿಂದಿಕ್ಕಿದ್ದು, ‘ಬಾಹುಬಲಿ 2’ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ‘ರಾಮಾಯಣ’ ಈಗ ಮೂರನೇ ಸ್ಥಾನಕ್ಕೇರಿದೆ. ಅಲ್ಲದೆ, ‘ಧುರಂಧರ್ 2’ ಚಿತ್ರದ ನಂತರ ಭಾರತದಲ್ಲಿ 1000 ಕೋಟಿ ರೂಪಾಯಿ ದಾಟಿದ ಎರಡನೇ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಯೂ ಇದಕ್ಕಿದೆ.

ಇದಕ್ಕೂ ಮುನ್ನ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರದ 1742 ಕೋಟಿ ರೂಪಾಯಿ ಗಳಿಕೆಯ ದಾಖಲೆಯನ್ನು ‘ರಾಮಾಯಣ’ ಮುರಿದಿತ್ತು. ಈಗ ‘ಬಾಹುಬಲಿ 2’ ಸರದಿ ಮುಗಿದಿದ್ದು, ಮುಂದಿರುವುದು ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾದ ದಾಖಲೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 1850 ಕೋಟಿ ರೂಪಾಯಿ ಗಳಿಸಿದೆ. ‘ರಾಮಾಯಣ’ ಸಿನಿಮಾದ ಗಳಿಕೆ ಇದೇ ರೀತಿ ಮುಂದುವರಿದರೆ, ಇನ್ನೊಂದು ವಾರದೊಳಗೆ ಈ ದಾಖಲೆಯನ್ನೂ ಮುರಿಯುವ ಸಾಧ್ಯತೆ ಇದೆ.

ಅದಾದ ಮೇಲೆ ಉಳಿಯುವುದು ಕೇವಲ ‘ದಂಗಲ್’ ಸಿನಿಮಾ ಮಾತ್ರ. 2016ರಲ್ಲಿ ತೆರೆಕಂಡಿದ್ದ ‘ದಂಗಲ್’ ವಿಶ್ವಾದ್ಯಂತ 2070 ಕೋಟಿ ರೂಪಾಯಿ ಗಳಿಸಿತ್ತು. ಆ ದಾಖಲೆಯನ್ನು ಮುರಿದು ಸಾರ್ವಕಾಲಿಕ ಮೊದಲ ಸ್ಥಾನಕ್ಕೇರುವ ಗುರಿಯನ್ನು ಚಿತ್ರತಂಡ ಇಟ್ಟುಕೊಂಡಿದೆ.

ವಿದೇಶದಲ್ಲೂ ‘ರಾಮಾಯಣ’ ಸಿನಿಮಾದ ಓಟ ಜೋರಾಗಿಯೇ ಇದೆ. ಅಮೆರಿಕದ ಜೊತೆಗೆ ಥೈಲ್ಯಾಂಡ್, ವಿಯೆಟ್ನಾಂ ಮತ್ತು ನೇಪಾಳದಂತಹ ಮಾರುಕಟ್ಟೆಗಳಲ್ಲಿ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಕೆಲವು ದಿನಗಳ ಕಾಲ ದಿನಕ್ಕೆ 1 ಮಿಲಿಯನ್ ಡಾಲರ್‌ಗಿಂತ ಕಡಿಮೆ ಗಳಿಕೆ ಕಂಡಿದ್ದರೂ, ಮೂರನೇ ವಾರಾಂತ್ಯದಲ್ಲಿ ಚೇತರಿಸಿಕೊಂಡು 5 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಹಣ ತಂದಿದೆ. ಬಿಡುಗಡೆಯಾದ 23ನೇ ದಿನ ವಿದೇಶದಲ್ಲಿ 5 ಕೋಟಿ ರೂಪಾಯಿ ಸಂಗ್ರಹಿಸಿದ್ದು, ಒಟ್ಟು ವಿದೇಶಿ ಗಳಿಕೆ 595 ಕೋಟಿ ರೂಪಾಯಿಗೆ ತಲುಪಿದೆ.

ನಿತಿಶ್ ತಿವಾರಿ ನಿರ್ದೇಶನದ ಈ ಸಿನಿಮಾ ಈಗ 27 ದೇಶಗಳಲ್ಲಿ ಸಾರ್ವಕಾಲಿಕ ನಂಬರ್ 1 ಭಾರತೀಯ ಚಿತ್ರ ಎನಿಸಿಕೊಂಡಿದೆ. ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ಇಂಡೋನೇಷ್ಯಾ, ಥೈಲ್ಯಾಂಡ್, ವಿಯೆಟ್ನಾಂ, ಕಾಂಬೋಡಿಯಾ ಸೇರಿದಂತೆ ಹಲವು ಯುರೋಪಿಯನ್ ದೇಶಗಳಲ್ಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಮುನ್ನುಗ್ಗುತ್ತಿದೆ.

Add Zee News as a Preferred Source
TAGS:
Cinema