BBK 13: ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ದಿನಕ್ಕೊಂದು ಟ್ವಿಸ್ಟ್‌ಗಳು ಎದುರಾಗ್ತಿವೆ..ಒಂದೆಡೆ ಮಧ್ಯರಾತ್ರಿ ಸೈರನ್ ಸದ್ದು.. ಮತ್ತೊಂದೆಡೆ ಯಾವುದೇ ಕ್ಷಣದಲ್ಲೂ ಮನೆಯಿಂದ ಸ್ಪರ್ಧಿಗಳು ಹೊರಹೋಗಬಹುದಾದ ಎಮರ್ಜೆನ್ಸಿ ಎಕ್ಸಿಟ್ ಭೀತಿ ಶುರುವಾಗಿದೆ.
ಇದರ ನಡುವೆಯೇ ಬಿಗ್ ಬಾಸ್ ಮನೆಗೆ ಹೊಸ ವೈಲ್ಡ್‌ಕಾರ್ಡ್ ಎಂಟ್ರಿಯೊಂದು ಆಗಲಿದೆ ಎಂಬ ಗಾಸಿಪ್ ಭಾರಿ ಸದ್ದು ಮಾಡ್ತಿದೆ. ಅಷ್ಟಕ್ಕೂ ಯಾರು ಆ ಹೊಸ ಸ್ಪರ್ಧಿ? ʻಗಿಚ್ಚಿ ಗಿಲಿಗಿಲಿʼ ಖ್ಯಾತಿಯ ಪ್ರಶಾಂತ್ ಗೌಡನಾ? ಈ ಕುತೂಹಲಕಾರಿ ಬೆಳವಣಿಗೆಯ ಸಂಪೂರ್ಣ ಮಾಹಿತಿ ಇಲ್ಲಿದೆ..
ಬಿಗ್ ಬಾಸ್ ಮನೆಯಲ್ಲಿ ಹೊಸ ಟ್ವಿಸ್ಟ್
ಬಿಗ್ ಬಾಸ್ ಕನ್ನಡ ಸೀಸನ್ 13.. ಆರಂಭದಿಂದಲೂ ಒಂದಲ್ಲ ಒಂದು ಟ್ವಿಸ್ಟ್‌ಗಳ ಮೂಲಕ ವೀಕ್ಷಕರ ಕುತೂಹಲ ಹೆಚ್ಚಿಸುತ್ತಿದೆ. ಇದೀಗ ಬಿಗ್ ಬಾಸ್ ಮನೆಗೆ ಮತ್ತೊಬ್ಬ ಹೊಸ ಸ್ಪರ್ಧಿ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ.
ಬಿಗ್ ಬಾಸ್ ಮನೆಗೆ ಹೊಸ ವೈಲ್ಡ್‌ಕಾರ್ಡ್?
ಪ್ರಶಾಂತ್ ಗೌಡ ಹೆಸರು ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ವೈರಲ್ ಆಗ್ತಿದೆ. ಕ್ವಾಟ್ಲೆ ಕಿಚನ್ʼ ಹಾಗೂ ʻಗಿಚ್ಚಿ ಗಿಲಿಗಿಲಿʼ ಶೋಗಳ ಮೂಲಕ ಕಿರುತೆರೆ ಪ್ರೇಕ್ಷಕರನ್ನು ನಗಿಸಿರುವ ಹಾಸ್ಯ ಕಲಾವಿದ ಪ್ರಶಾಂತ್ ಗೌಡ ಅವರ ಹೆಸರು ಇದೀಗ ಬಿಗ್ ಬಾಸ್ ವೈಲ್ಡ್‌ಕಾರ್ಡ್ ಎಂಟ್ರಿ ವಿಚಾರದಲ್ಲಿ ಕೇಳಿಬರುತ್ತಿದೆ.ಪ್ರಶಾಂತ್ ಗೌಡ ಅವರು ಬಿಗ್ ಬಾಸ್ ಕನ್ನಡ 13ರ ಮನೆಗೆ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಕಾಲಿಡಲಿದ್ದಾರೆ ಎಂಬ ಗಾಸಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಶಾಂತ್ ಗೌಡ ಇತ್ತೀಚೆಗಷ್ಟೇ ಮದುವೆಯಾಗಿದ್ದು, ಇನ್ನು ಪ್ರಶಾಂತ್ ಗೌಡ ಅವರು ಇತ್ತೀಚೆಗಷ್ಟೇ ತಮ್ಮ ಪ್ರೀತಿಯ ಹುಡುಗಿ ಕೃತಿ ಗೌಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಿರುತೆರೆಯಲ್ಲಿ ಸಕ್ರಿಯವಾಗಿರುವ ಅವರು ʻಕ್ವಾಟ್ಲೆ ಕಿಚನ್ʼ ಮೊದಲ ಸೀಸನ್‌ನ ವಿಜೇತರಾಗಿಯೂ ಗುರುತಿಸಿಕೊಂಡಿದ್ದಾರೆ. ಇದಾದ ಬಳಿಕ ಉದ್ಯಮ ಕ್ಷೇತ್ರಕ್ಕೂ ಹೆಜ್ಜೆಯಿಟ್ಟಿರುವ ಪ್ರಶಾಂತ್,ಇತ್ತೀಚೆಗೆ ʻಸೆಲೆಬ್ರೇಟ್ ಲೈಫ್ʼ ಎಂಬ ಐಷಾರಾಮಿ ಸಲೂನ್ ಕೂಡ ಉದ್ಘಾಟಿಸಿದ್ದರು.
ಕಿರುತೆರೆ ಬಳಿಕ ಉದ್ಯಮ ಕ್ಷೇತ್ರಕ್ಕೂ ಎಂಟ್ರಿ
ವೃತ್ತಿಜೀವನದಲ್ಲಿ ಹೊಸ ಹೆಜ್ಜೆ ಇಡುತ್ತಿರುವ ಪ್ರಶಾಂತ್ ಗೌಡ ಇದೀಗ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದ್ರೂ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ.ಹೀಗಾಗಿ ಪ್ರಶಾಂತ್ ಗೌಡ ಅವರ ವೈಲ್ಡ್‌ಕಾರ್ಡ್ ಎಂಟ್ರಿ ನಿಜವೇ? ಅಥವಾ ಕೇವಲ ಗಾಸಿಪ್‌ಗಷ್ಟೇ ಸೀಮಿತವೇ? ಅನ್ನೋದು ಸದ್ಯ ಭಾರೀ ಕುತೂಹಲ ಹೆಚ್ಚಿಸಿದೆ.
ಎಮರ್ಜೆನ್ಸಿ ಎಕ್ಸಿಟ್‌ನಿಂದ ಹೆಚ್ಚಿದ ಟೆನ್ಷನ್
ಇದರ ನಡುವೆಯೇ ಬಿಗ್ ಬಾಸ್ ಬಿಡುಗಡೆ ಮಾಡಿರುವ ಹೊಸ ಪ್ರೋಮೋ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.ಮಧ್ಯರಾತ್ರಿ ಸ್ಪರ್ಧಿಗಳು ನಿದ್ರಿಸುತ್ತಿರುವಾಗ ಏಕಾಏಕಿ ಸೈರನ್ ಮೊಳಗಿದೆ.
ಈ ವಾರ ಮನೆಯಲ್ಲಿ ʻಎಮರ್ಜೆನ್ಸಿ ಎಕ್ಸಿಟ್ʼ ಇರಲಿದೆ ಎಂದು ಬಿಗ್ ಬಾಸ್ ಸೂಚಿಸಿದ್ದಾರೆ.
ಯಾರಿಗೆ ಬೀಳಲಿದೆ ಎಮರ್ಜೆನ್ಸಿ ಎಕ್ಸಿಟ್?
ಇನ್ನೂ ಶಾಕ್ ಅಂದ್ರೆ.. ಸ್ವತಹ ಕಿಚ್ಚ ಸುದೀಪ್ ಅವರೇ ಖುದ್ದಾಗಿ ಪ್ರತಿಯೊಬ್ಬ ಸ್ಪರ್ಧಿಯನ್ನೂ ನಾಮಿನೇಟ್ ಮಾಡಿದ್ದಾರೆ. ಹೀಗಾಗಿ ಯಾವುದೇ ಕ್ಷಣದಲ್ಲಾದರೂ ಮನೆಯಲ್ಲಿರುವ ಸ್ಪರ್ಧಿಗಳ ಪೈಕಿ ಯಾರಾದರೂ ಹೊರಹೋಗಬಹುದೇ ಎಂಬ ಆತಂಕ ಎದುರಾಗಿದೆ.
ಬಿಗ್‌ಬಾಸ್ ಕನ್ನಡ ಸೀಸನ್‌ನಲ್ಲಿ ದಿನದಿಂದ ದಿನಕ್ಕೆ ಆಟ ರೋಚಕವಾಗುತ್ತಿದೆ. ಸ್ಪರ್ಧಿಗಳ ನಡುವಿನ ಜಗಳ, ಟಾಸ್ಕ್, ಮೈತ್ರಿ ಹಾಗೂ ಎಲಿಮಿನೇಷನ್ ಸುತ್ತ ಸಾಕಷ್ಟು ಕುತೂಹಲ ಮೂಡಿರುವ ಬೆನ್ನಲ್ಲೇ ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ವಿಚಾರ ಮತ್ತಷ್ಟು ಸದ್ದು ಮಾಡುತ್ತಿದೆ.
ಈಗಾಗಲೇ ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ಆಟಕ್ಕೆ ಹೊಸ ತಿರುವು ನೀಡಲು ಕೆಲವು ಹೊಸ ಮುಖಗಳನ್ನು ವೈಲ್ಡ್ ಕಾರ್ಡ್ ಮೂಲಕ ಮನೆಗೆ ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೊಸ ಸ್ಪರ್ಧಿಗಳ ಪ್ರವೇಶದಿಂದ ಮನೆಯಲ್ಲಿನ ಸಮೀಕರಣಗಳು ಬದಲಾಗುವ ನಿರೀಕ್ಷೆಯಿದೆ.
ಹೊಸ ಎಂಟ್ರಿಯಿಂದ ಬದಲಾಗುತ್ತಾ ಆಟ?
ವೈಲ್ಡ್ ಕಾರ್ಡ್ ಮೂಲಕ ಬರುವ ಸ್ಪರ್ಧಿಗಳು ಈಗಾಗಲೇ ಇರುವ ಸ್ಪರ್ಧಿಗಳ ಆಟದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಹೊಸ ಸದಸ್ಯರು ಯಾರೊಂದಿಗೆ ಸ್ನೇಹ ಬೆಳೆಸುತ್ತಾರೆ? ಯಾರ ವಿರುದ್ಧ ನಿಲ್ಲುತ್ತಾರೆ? ಟಾಸ್ಕ್‌ಗಳಲ್ಲಿ ಯಾವ ರೀತಿ ಆಟ ಆಡುತ್ತಾರೆ ಎಂಬುದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ವೈಲ್ಡ್ ಕಾರ್ಡ್ ಎಂಟ್ರಿಯಾಗುವ ಸ್ಪರ್ಧಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಹೆಸರುಗಳು ಹರಿದಾಡುತ್ತಿವೆ. ಆದರೆ ಅಧಿಕೃತವಾಗಿ ಯಾರು ಮನೆಗೆ ಪ್ರವೇಶಿಸಲಿದ್ದಾರೆ ಎಂಬ ಮಾಹಿತಿ ಬಿಗ್‌ಬಾಸ್ ಕಡೆಯಿಂದ ಖಚಿತವಾಗಬೇಕಿದೆ.
ಪ್ರೇಕ್ಷಕರಲ್ಲಿ ಹೆಚ್ಚಿದ ಕುತೂಹಲ ಬಿಗ್‌ಬಾಸ್ ಮನೆಯೊಳಗೆ ಹೊಸ ಸ್ಪರ್ಧಿಗಳ ಪ್ರವೇಶವಾದರೆ ಈಗಿರುವ ಗುಂಪುಗಳ ಲೆಕ್ಕಾಚಾರ ಬದಲಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿಯ ವೈಲ್ಡ್ ಕಾರ್ಡ್ ಎಂಟ್ರಿ ಯಾರಿಗೆ ಸರ್ಪ್ರೈಸ್ ನೀಡಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಮತ್ತೊಂದೆಡೆ ಹೊಸ ವೈಲ್ಡ್‌ಕಾರ್ಡ್ ಎಂಟ್ರಿಯ ಗಾಸಿಪ್ ಹರಿದಾಡ್ತಿದೆ. ಒಂದು ವೇಳೆ ಪ್ರಶಾಂತ್ ಗೌಡ ಬಿಗ್ ಬಾಸ್ ಮನೆಗೆ ಕಾಲಿಟ್ಟರೆ, ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಆಟಕ್ಕೆ ಅವರ ಕಾಮಿಡಿ ಟೈಮಿಂಗ್ ಹೊಸ ಮೆರುಗು ನೀಡುವ ಸಾಧ್ಯತೆ ಇದೆ.ಅವರ ಹಾಸ್ಯ, ಇತರ ಸ್ಪರ್ಧಿಗಳೊಂದಿಗಿನ ಸಂಭಾಷಣೆ ಹಾಗೂ ಟಾಸ್ಕ್‌ಗಳಲ್ಲಿನ ಆಟ ಹೇಗಿರಲಿದೆ ಅನ್ನೋ ಕುತೂಹಲವೂ ವೀಕ್ಷಕರಲ್ಲಿ ಮೂಡಿದೆ.