SOCIAL MEDIA

Newsletter

PARTNER SITES
Select Language Select State

ವಿಜಯ ದಶಮಿಗೆ ಕೆಂಪೇಗೌಡರ ಹೊಸ ನೋಟ ಬಿಡುಗಡೆ

ಸಿನಿಮಾ ಕೆಂಪೇಗೌಡ ರ ಕುರಿತಾಗಿ ಇರುವ ಕಥೆ, ಪ್ರತೀತಿಗಳನ್ನು ಹೊಂದಿದ್ದು ಮುಖ್ಯವಾಗಿ ಅವರ ಪರಿಸರ ಕಾಳಜಿ ಯ ದೂರದೃಷ್ಟಿ ಮತ್ತು ಪ್ರಜಾಜನರ ಬಗೆಗೆ ಅವರಿಗಿದ್ದ ಕರುಣಾಪೂರಿತ ಭಾವುಕತೆಯನ್ನು ಬಿಂಬಿಸುತ್ತದೆ.

Reported By Manjunath Naragund Written By Manjunath Naragund
Published: Oct 21, 2026, 01:52 PM IST | Updated: Oct 21, 2026, 02:02 PM IST
Image Credit: Prem
Join

ಪ್ರಸಿದ್ಧ ಉದ್ಯಮಿಗಳೂ, ಸಾಂಸ್ಕೃತಿಕ ಪರಿಚಾರಕರೂ ಆದ ಪದ್ಮಶ್ರೀ ಪುರಸ್ಕೃತ ಪ್ರಶಾಂತ್ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ , ಪ್ರಶಾಂತ್ ಪ್ರಕಾಶ್ ಫೌಂಡೇಶನ್ ಆಶ್ರಯದಲ್ಲಿ, ಹೊಂಬಾಳೆ ಸಂಸ್ಥೆ ಪ್ರಸ್ತುತಿಯಲ್ಲಿ ಮೂಡಿಬರಲಿರುವ ಐತಿಹಾಸಿಕ ಸಿನಿಮಾ ಕೆಂಪಾಂಬುಧಿ, ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು  ಯಥಾ ಶೀಘ್ರ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.ಪ್ರಸಿದ್ಧ ಬರಹಗಾರ, ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಇವರ ಕಾದಂಬರಿಯನ್ನು ಆಧರಿಸಿದ ಈ ಚಿತ್ರವನ್ನು ಮಲೆನಾಡ ರಂಗಕರ್ಮಿ ರಮೇಶ್ ಬೇಗಾರ್ ರಚಿಸಿ ನಿರ್ದೇಶಿಸಿದ್ದಾರೆ.

ಸಿನಿಮಾ ಕೆಂಪೇಗೌಡ ರ ಕುರಿತಾಗಿ ಇರುವ ಕಥೆ, ಪ್ರತೀತಿಗಳನ್ನು ಹೊಂದಿದ್ದು ಮುಖ್ಯವಾಗಿ ಅವರ ಪರಿಸರ ಕಾಳಜಿ ಯ ದೂರದೃಷ್ಟಿ ಮತ್ತು ಪ್ರಜಾಜನರ ಬಗೆಗೆ ಅವರಿಗಿದ್ದ ಕರುಣಾಪೂರಿತ ಭಾವುಕತೆಯನ್ನು ಬಿಂಬಿಸುತ್ತದೆ.

ನೆನಪಿರಲಿ ಪ್ರೇಮ್ ಅವರು ಕೆಂಪೇಗೌಡರಾಗಿ ಕಾಣಿಸಿಕೊಳ್ಳಲಿದ್ದು, ಮೇಘನಾ ಗಾಂವ್ಕರ್ ಜೋಡಿಯಾಗಿದ್ದಾರೆ.ಕನ್ನಡ ದ ಮತ್ತೋರ್ವ ವಿಶಿಷ್ಟ ಪ್ರತಿಭೆ  ಸಂಯುಕ್ತ ಹೊರನಾಡು ಅತೀ ವಿಶೇಷವಾದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಕುತೂಹಲವಾಗಿದೆ.ಸುಧಾ ಬೆಳವಾಡಿ, ರಾಜೇಶ್ ನಟರಂಗ, ರಮೇಶ್ ಪಂಡಿತ್, ರಾಜೇಂದ್ರ ಕಾರಂತ್, ಸಿಟಿ ಲೈಟ್ಸ್ ಖ್ಯಾತಿಯ ವಸಂತ ಕೃಷ್ಣಮೂರ್ತಿ, ಕಾರ್ತಿಕ್ ಎ, ರವಿಕುಮಾರ್, ನಾಗಶ್ರೀ ಬೇಗಾರ್, ಚಿರಂಜೀವಿ (ಅಣ್ಣಯ್ಯ ಪರಶು ಖ್ಯಾತಿಯ )  ರಜನೀಶ್ (ಆದಿ ಲಕ್ಷ್ಮಿ ಪುರಾಣ ನಾಯಕ), ನಿಖಿಲ್ ಮಾರ್ತಾಂಡ ಸೇರಿದಂತೆ ಅದ್ದೂರಿ ತಾರಾಗಣವನ್ನು ಚಿತ್ರ ಹೊಂದಿದೆ.

2023 ರ ಯಶಸ್ವಿ ಚಿತ್ರವಾದ ಜಲಪಾತ ಸಿನಿಮಾ ದ ತಾಂತ್ರಿಕವರ್ಗ ವೇಇಲ್ಲಿ ಮುಂದುವರಿದಿದ್ದು ಶಶೀರ, ಅವಿನಾಶ್, ಅಭಿಷೇಕ್ ಜೊತೆಗೆ ಸಂಗೀತದಲ್ಲಿ ಈ ಬಾರಿ ವೀರ್ ಸಮರ್ಥ್ ವಿಶೇಷ ಆಕರ್ಷಣೆಯಾಗಿದ್ದಾರೆ.ಒಂದು ಸಂಗೀತಮಯ ಐತಿಹಾಸಿಕ - ಕೌಟುಂಬಿಕ ಚಿತ್ರವಾಗಿ ಕೆಂಪಾಂಬುಧಿ ಮೂಡಿಬರಲಿದೆ.

ಇದೀಗ ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಭಿತ್ತಿಪತ್ರ ದಲ್ಲಿ ಕಲ್ಲಿನ ಕೆತ್ತನೆ ಮಾದರಿಯಲ್ಲಿ, ಗಾಂಭಿರ್ಯ ಭಾವದಲ್ಲಿ  ನಿಂತಿರುವ  ಲವ್ಲಿ ಸ್ಟಾರ್ ಪ್ರೇಮ್ ಅವರ ಕೆಂಪೇಗೌಡರ ನೋಟ ಅಮೋಘವಾಗಿದೆ.ಶಿಲ್ಪಕಲೆ ಮಾದರಿಯಲ್ಲಿ ಪೋಸ್ಟರ್ ರಚಿಸಿರುವುದರಿಂದ ವಿಜಯದಶಮಿ ಗೆ ಇರುವ ಐತಿಹಾಸಿಕ ನಂಟು ಮತ್ತು ಚಲನಚಿತ್ರಕ್ಕೆ ಇರುವ ಪರಂಪರೆಯ ಸೊಗಡನ್ನು ಏಕ ಕಾಲದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸುತ್ತಿದೆ ಮಾತ್ರವಲ್ಲ ಚಿತ್ರದ ಕುರಿತಾಗಿ ಅಪರಿಮಿತ ಕುತೂಹಲವನ್ನೂ ಪಡಿಮೂಡಿಸಿದೆ.

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES