SOCIAL MEDIA

Newsletter

PARTNER SITES
Select Language Select State

ಹಿಂದೆಂದೂ ಕಾಣದಂಥ ಸಿನಿಮಾ ಮೇಕಿಂಗ್ ಇದೀಗ ಕಿರುತೆರೆಯಲ್ಲಿ.. ಸೆ. 28 ರಿಂದ ಬರಲಿದೆ ಜಗದ್ಧಾತ್ರಿ ಧಾರಾವಾಹಿ

New jagadhatri serial: ಹಿಂದೆಂದೂ ಕಾಣದಂಥ ಸಿನಿಮಾ ಮೇಕಿಂಗ್ ಇದೀಗ ಕಿರುತೆರೆಯಲ್ಲಿ..ಇದೇ ಸೆಪ್ಟೆಂಬರ್ 28 ರಿಂದ ಜಗದ್ಧಾತ್ರಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Written By Ramya. R. Gowda
Published: Sep 27, 2026, 01:30 PM IST | Updated: Sep 27, 2026, 01:40 PM IST
Join

New jagadhatri serial: ಹಿಂದೆಂದೂ ಕಾಣದಂಥ ಸಿನಿಮಾ ಮೇಕಿಂಗ್ ಇದೀಗ ಕಿರುತೆರೆಯಲ್ಲಿ..ಇದೇ ಸೆಪ್ಟೆಂಬರ್ 28 ರಿಂದ ಜಗದ್ಧಾತ್ರಿ ಜ಼ೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. 

ಪಾರು ಖ್ಯಾತಿಯ ಮೋಕ್ಷಿತಾ ಪೈ, ವಿಜಯ್ ಲಲಿತಾ ಸೂರ್ಯ, ಕವಿತಾ ಗೌಡ ಅವರು ಕಿರುತೆರೆ ಮರಳಿದ್ದಾರೆ. 

ಒಂದಲ್ಲ ಒಂದು ವಿಭಿನ್ನ ಕಥೆಗಳನ್ನ ಹೇಳೋ ಜ಼ೀ ಕನ್ನಡ ಇದೀಗ ಮತ್ತೊಂದು ಹೊಸ ಅಲೆಯ ಕಥೆ ಹೇಳೋದಕ್ಕೆ ಸಜ್ಜಾಗಿದೆ. ಅಂಡರ್‌ಕವರ್ ಮಹಿಳಾ ಪೊಲೀಸ್ ಕಥೆಯನ್ನ ‘ಜಗದ್ಧಾತ್ರಿ’ ಮೂಲಕ ಇದೇ ಸೆಪ್ಟೆಂಬರ್ 28 ರಾತ್ರಿ 9ಕ್ಕೆ ಪ್ರಸಾರಕ್ಕೆ ಸಿದ್ಧವಾಗಿದೆ.

ಕುಟುಂಬದಲ್ಲಿದ್ದುಕೊಂಡೆ ಹೊರಜಗತ್ತಿನಲ್ಲಿ ನಡೆಯೋ ಅಪರಾಧಗಳನ್ನ ಹತ್ತಿಕ್ಕುವ ಪೊಲೀಸ್ ಅಧಿಕಾರಿಯ ರೂಪದಲ್ಲಿ  ಮೋಕ್ಷಿತಾ ಪೈ ಜಗದ್ಧಾತ್ರಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಿರಿಯ ಕಲಾವಿದರ ಜೊತೆಜೊತೆಗೆ ಕಿರಿಯರೂ ಸೇರಿ ಪ್ರತಿ ಪಾತ್ರಕ್ಕೂ ನ್ಯಾಯ ಒದಗಿಸಿದ್ದಾರೆ. ಮನೆ ಹೊರಗೆ ಪೊಲೀಸ್‌ ಅಧಿಕಾರಿಯಾಗಿ ಜಗದ್ಧಾತ್ರಿ ಕಾಣಿಸಿಕೊಳ್ಳುತ್ತಾರೆ. ಈಕೆ ಅಪ್ಪಟ್ಟ ದೇಶಭಕ್ತೆಯಾಗಿ ಅಮ್ಮನ ಮೇಲೆ ದೇಶದ್ರೋಹದ ಆರೋಪವನ್ನು ತೊಡೆದು ಹಾಕೋಕೆ ಏನೆಲ್ಲಾ ಮಾಡಬಹುದು ಅನ್ನೋದರ ಕಥೆಯಾಗಿದೆ 

 ಮನೆಯವರ ಕಟು ಮಾತುಗಳನ್ನೂ ಸಹಿಸಿ ತಾಯಿಗೆ ನ್ಯಾಯ ಒದಗಿಸುವ ಜಗದ್ಧಾತ್ರಿಯ ಪಾತ್ರ ಸುಂದರವಾಗಿ ಮೂಡಿಬರಲಿದೆ. ಹಾಗಾಗಿ ಜಗದ್ಧಾತ್ರಿ ಮನೆ ಬೆಳಗೋ ದೀಪಾನೂ ಹೌದು.. ದುಷ್ಟರ ಸುಡೋ ಜ್ವಾಲೆಯೂ ಹೌದು.. ಈ ಕಥೆ ಹೊಸ ತಲೆಮಾರಿಗೆ ಹೊಂದಿಕೊಳ್ಳುವಂತೆ ನಿರ್ಮಿಸಲಾಗಿದ್ದು, ಬೇರೆ ಕಥೆಗಳಿಗಿಂತ ವಿಭಿನ್ನ ಹಾಗೂ ವಿಶೇಷ ಆಯಾಮದಲ್ಲಿ ಜ಼ೀ ಕನ್ನಡ ಹೊರತಂದಿದೆ.

ಇತ್ತೀಚಿಗೆ ವಿಜಯ್ ಲಲಿತಾ ಸೂರ್ಯ ಜೊತೆ ಮೋಕ್ಷಿತ ಪೈ ಹೆಜ್ಜೆ ಹಾಕಿರುವ ಡ್ಯುಯೆಟ್ ಹಾಡು ಸೋಶಿಯಲ್ ಮೀಡಿಯಾಗಳಲ್ಲಿ ಜಗದ್ಧಾತ್ರಿ ಹುಕ್ ಸ್ಟೆಪ್ ಹೆಸರಿನಲ್ಲಿ ಸದ್ದು ಮಾಡಿದೆ. ಈ ಬಗ್ಗೆ ಮಾತನಾಡಿರೋ ನಟ ವಿಜಯ್ ಲಲಿತಾ ಸೂರ್ಯ, 'ಈ ಥರದ ಪಾತ್ರ ತುಂಬ ದಿನದಿಂದ ಮಾಡಿರಲಿಲ್ಲ. ಮತ್ತೆ ಪ್ರೀತಿ ಪ್ರೇಮದ ಸುತ್ತ ಕಾಣಿಸಿಕೊಳ್ಳುವ ಪಾತ್ರ ಮಾಡಲು ಖುಷಿಯಿದೆ', ಅಂತ ಹೇಳಿದ್ದಾರೆ..

ಮೋಕ್ಷಿತ ಪೈ ಹಾಗೂ ವಿಜಯ್ ಲಲಿತಾ ಸೂರ್ಯ ಜೊತೆಗೆ ಕವಿತಾ ಗೌಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಈ ಮೂವರ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಕಲಾವಿದರು ಕಿರುತೆರೆಯ ಮೇಲೆ ಮತ್ತೆ ಕಾಣಿಸಿಕೊಂಡಿರೋದು ಖುಷಿ ತಂದಿದೆ.  ಈ ಧಾರಾವಾಹಿಯಲ್ಲಿ ಮೋಕ್ಷಿತ ಪೈ, ವಿಜಯ್ ಲಲಿತಾ ಸೂರ್ಯ ಇಬ್ಬರೂ ಐಪಿಎಸ್ ಅಧಿಕಾರಿಗಳ ರೂಪದಲ್ಲಿ ಕಾಣಿಸಿಕೊಂಡಿದ್ದು ಇವರಿಬ್ಬರ ಕಾಂಬಿನೇಷನ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಇಡೀ ಧಾರಾವಾಹಿಯ ತುಂಬ ದೊಡ್ಡ ತಾರಾಗಣವೇ ಕಾಣಿಸಿಕೊಳ್ಳಲಿದ್ದು, ಗಿರಿಜಾ ಲೋಕೇಶ್, ಅರುಣಾ ಬಾಲರಾಜ್, ಲಕ್ಷ್ಮೀ ಸಿದ್ದಯ್ಯ, ಮೈಕೋ ಮಂಜು, ವಚನ್ ಹೊಸಮಠ, ರವಿ ಭಟ್, ಸೋನಿಯಾ ಪೊನ್ನಮ್ಮ ಹಾಗೂ ಮಾನಸಿ ಸುಧೀರ್ ಸೇರಿದಂತೆ ದೊಡ್ಡ ತಾರಾಗಣ ಜಗದ್ಧಾತ್ರಿ ಮೂಲಕ ಕಿರುತೆರೆಯಲ್ಲಿ ಮನರಂಜಿಸೋಕೆ ಸಜ್ಜಾಗಿದ್ದಾರೆ.

ಬೆಳ್ಳಿತೆರೆಯ ಸಿನಿಮಾ ನಿರ್ದೇಶಿಸಿ ಖ್ಯಾತಿ ಗಳಿಸಿರೋ ಬರಹಗಾರ ಮಹೇಶ್‌ರಾವ್‌ ಹಾಗೂ ಪ್ರಕಾಶ್ ಅವರ ನಿರ್ಮಾಣದಲ್ಲಿ, ಮಹೇಶ್ ಸಾರಂಗ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಜಗದ್ಧಾತ್ರಿ, ಕೀರ್ತಿ ಅಕ್ಷಯ ನೆಟ್‌ವರ್ಕ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಕೌಟುಂಬಿಕ ಕಥಾಹಂದರದ ಜೊತೆಗೆ ಭರ್ಜರಿ ಆಕ್ಶನ್ ಸೀನ್‌‌ಗಳು ಹಾಗೂ ವಿಜಯ್ ಲಲಿತಾ ಸೂರ್ಯ, ಮೋಕ್ಷಿತಾ ಪೈ ನಡುವಿನ ಪ್ರೀತಿ ಕಥೆಯೂ ಜಗದ್ಧಾತ್ರಿಯಲ್ಲಿದೆ. ಒಂದೆಡೆ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುವ ಜಗದ್ಧಾತ್ರಿ, ಮತ್ತೊಂದೆಡೆ ತನ್ನ ಕರ್ತವ್ಯವನ್ನು ನಿರ್ವಹಿಸುವ ಜಗದ್ಧಾತ್ರಿ, ಈ ಎರಡೂ ವಿಭಿನ್ನ ಶೇಡ್‌ಗಳನ್ನು ಸುಂದರವಾಗಿ ತೋರಿಸಲಾಗಿದೆ.

ಜ಼ೀ ಕನ್ನಡ ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ, “ಇಡೀ ಜಗತ್ತಿನ ಸೃಷ್ಟಿಗೆ ಹೆಣ್ಣೇ ಕಾರಣ ಅಂತಾರೆ. ಈಗಿನ ಕಾಲಘಟ್ಟದಲ್ಲೂ ಹೆಣ್ಣೊಬ್ಬಳು ಪ್ರತಿ ಮನೆಯಲ್ಲೂ ಒಂದೊಂದು ವಿಭಿನ್ನ ಥರದ ಸವಾಲುಗಳ ಮಧ್ಯೆ ಬದುಕು ನಡೆಸುತ್ತಿದ್ದಾಳೆ. ಹಾಗೇನೆ ಜಗದ್ಧಾತ್ರಿ ಮನೆಯಲ್ಲೂ ಕೂಡ ವಿಭಿನ್ನ ರೀತಿಯ ಸವಾಲಿವೆ. ಅದೆಲ್ಲವನ್ನೂ ಮೀರಿ ಜಗದ್ಧಾತ್ರಿ ಒಬ್ಬ ಸೂಪರ್ ಕಾಪ್ ಆಗಿ ಜಗತ್ತನ್ನ ಕಾಯೋ ಕೆಲಸದಲ್ಲಿದ್ದಾಳೆ. ಅವರವರ ಸವಾಲುಗಳನ್ನ ಹಲವು ರೀತಿಯ ಕಥಾಹಂದರ ಕಟ್ಟಿ ಕನ್ನಡಿಗರಿಗೆ ತಲುಪಿಸೋದು ನಮ್ಮ ಜ಼ೀ ಕನ್ನಡದ ಉದ್ದೇಶ. ಹಿಂದೆಂದೂ ಕಾಣದ ವಿಭಿನ್ನ ಕಥೆಗಳನ್ನ ಪರಿಚಯ ಮಾಡುತ್ತಲೇ ಬಂದಿದ್ದೇವೆ. ಅದೇ ರೀತಿ ಈ ಕಥೆಯೂ ನೋಡುಗರಿಗೆ ಹೊಸ ಅನುಭವದ ಜೊತೆಗೆ ಜನಮೆಚ್ಚುವ ಮನರಂಜನೆ ನೀಡುತ್ತೆ ಅನ್ನೋ ವಿಶ್ವಾಸ ನಮಗಿದೆ” ಎಂದರು..

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES