SOCIAL MEDIA

Newsletter

PARTNER SITES
Select Language Select State

ಬಿಗ್ ಬಾಸ್ ಇತಿಹಾಸದಲ್ಲೇ ಇದೆ ಮೊದಲು : ದಿನಕ್ಕೆ 7.5 ಲಕ್ಷ ಸಂಭಾವನೆ.. ಹೊಸ ದಾಖಲೆ ಬರೆದ ಕಾಮನ್‌ ಮ್ಯಾನ್‌

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಯಾರೂ ಊಹಿಸದ ಅಚ್ಚರಿಯೊಂದನ್ನು ಸ್ಪರ್ಧಿಯೊಬ್ಬರು ಸೃಷ್ಟಿಸಿದ್ದಾರೆ. ದಿನಕ್ಕೆ ₹7.5 ಲಕ್ಷ ಗಳಿಸಿ ಬಿಗ್ ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.. ಈ ಕುರಿತ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

Reported By Krishna NK Written By Krishna NK
Published: Sep 27, 2026, 10:08 PM IST | Updated: Sep 27, 2026, 10:10 PM IST
Image Credit: Bigg Boss Mithilesh Reddy
Join

Bigg Boss Mithilesh Reddy : ಜನಪ್ರಿಯ ರಿಯಾಲಿಟಿ ಶೋ 'ತೆಲುಗು ಬಿಗ್ ಬಾಸ್' ಸೀಸನ್ 10ರಲ್ಲಿ ಯಾರೂ ಊಹಿಸದ ಅಪರೂಪದ ಇತಿಹಾಸವೊಂದು ಸೃಷ್ಟಿಯಾಗಿದೆ. ಇತ್ತೀಚೆಗಷ್ಟೇ 'ಬಿಗ್ ಬಾಸ್ ಅಗ್ನಿಪರೀಕ್ಷೆ ಸೀಸನ್ 2' ಮೂಲಕ ಗಮನ ಸೆಳೆದು, ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟಿದ್ದ ಫಿಟ್ನೆಸ್ ಮಾಡೆಲ್ ಮಿಥಿಲೇಶ್ ರೆಡ್ಡಿ ಕೇವಲ ಎರಡೇ ದಿನಗಳಲ್ಲಿ ಶೋನಿಂದ ಹೊರಬಿದ್ದಿದ್ದಾರೆ. ಆದರೆ, ಅವರು ಪಡೆದ ಸಂಭಾವನೆ ಮಾತ್ರ ಈಗ ಬಿಗ್ ಬಾಸ್ ಇತಿಹಾಸದಲ್ಲೇ ಹೊಸ ಸಂಚಲನ ಸೃಷ್ಟಿಸಿದೆ!

ದಿನಕ್ಕೆ ₹7.5 ಲಕ್ಷದಂತೆ ಲೆಕ್ಕ ಹಾಕಿದರೆ, ಕೇವಲ 48 ಗಂಟೆಗಳಲ್ಲಿ ₹15 ಲಕ್ಷ ಗಳಿಸುವ ಮೂಲಕ ಬಿಗ್ ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಮಿಥಿಲೇಶ್ ಪಾತ್ರರಾಗಿದ್ದಾರೆ. ಹೌದು.. ಸೀಸನ್ ಆರಂಭದಿಂದಲೇ ತೀವ್ರ ಪೈಪೋಟಿ ಮತ್ತು ಜಗಳಗಳಿಂದ ಕಳೆಗಟ್ಟಿದ್ದ ಬಿಗ್ ಬಾಸ್ ಮನೆಗೆ ಇತ್ತೀಚೆಗೆ ಅಪೂರ್ವ ಮತ್ತು ಮಿಥಿಲೇಶ್ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದರು. ವಾರಾಂತ್ಯದ ಸಂಚಿಕೆಯಲ್ಲಿ ಹೋಸ್ಟ್ ಅಕ್ಕಿನೇನಿ ನಾಗಾರ್ಜುನ ಅವರು ಹೊಸ ಸ್ಪರ್ಧಿಗಳಿಗೆ ಒಂದು ರೋಚಕ ಆಫರ್ ಮುಂದಿಟ್ಟರು.

ಆರಂಭದಲ್ಲಿ ₹5 ಲಕ್ಷ ಹಣದ ಸೂಟ್‌ಕೇಸ್ ಆಫರ್ ನೀಡಿದಾಗ ಮಿಥಿಲೇಶ್ ಅದನ್ನು ನಿರಾಕರಿಸಿದರು. ಬಳಿಕ ಆಫರ್ ಮೊತ್ತವನ್ನು ₹10 ಲಕ್ಷಕ್ಕೆ, ಕೊನೆಯದಾಗಿ ಭರ್ಜರಿ ₹15 ಲಕ್ಷಕ್ಕೆ ಏರಿಸಲಾಯಿತು. ಈ ಬಂಪರ್ ಆಫರ್‌ಗೆ ಒಪ್ಪಿದ ಮಿಥಿಲೇಶ್, ₹15 ಲಕ್ಷದ ಸೂಟ್‌ಕೇಸ್ ಹಿಡಿದು ಮನೆಯಿಂದ ಹೊರನಡೆಯಲು ನಿರ್ಧರಿಸಿದರು.

ವಿನ್ನರ್ ಪ್ರೈಸ್ ಮನಿಗೆ ಕಟ್!
ಮಿಥಿಲೇಶ್ ಹಣ ಪಡೆಯಲು ಒಪ್ಪಿಕೊಳ್ಳುತ್ತಿದ್ದಂತೆ ನಾಗಾರ್ಜುನ ಮನೆಮಂದಿಗೆ ಮತ್ತೊಂದು ಶಾಕ್ ನೀಡಿದರು. ಮಿಥಿಲೇಶ್ ಪಡೆದ ಈ ₹15 ಲಕ್ಷ ರೂಪಾಯಿಯನ್ನು ಬಿಗ್ ಬಾಸ್ ಸೀಸನ್‌ನ ಅಂತಿಮ ವಿಜೇತರಿಗೆ ಸಿಗುವ ಒಟ್ಟು ಬಹುಮಾನದ ಮೊತ್ತದಿಂದ (Prize Money) ಕಡಿತಗೊಳಿಸಲಾಗುವುದು ಎಂದು ತಿಳಿಸಿದರು.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ವಾರಗಟ್ಟಲೆ ಮನೆಯಲ್ಲಿದ್ದು ಕಷ್ಟಪಟ್ಟು ಗಳಿಸುವ ಮೊತ್ತವನ್ನು, ಈ 'ಕಾಮನ್ ಮ್ಯಾನ್' ಕೇವಲ ಎರಡೇ ದಿನಗಳಲ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಮಿಥಿಲೇಶ್ ಅವರ ಈ ಬುದ್ಧಿವಂತಿಕೆಯ ನಿರ್ಧಾರಕ್ಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಕಿರುತೆರೆ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES