ಬಿಗ್‌ಬಾಸ್ ಮನೆಗೆ ಮಾಡರ್ನ್ ಮಹಾಕವಿ ಮಂಜು ರೀ ಎಂಟ್ರಿ.. ತೊಡೆತಟ್ಟಿ Bigg boss ಮನೆಗೆ ಬಂದ Manja
Modern Mahakavi Manju re-enter: ತಮ್ಮ ಅತಿರೇಕದ ವರ್ತನೆಯಿಂದ ಬಿಗ್‌ಬಾಸ್ ಮನೆಯಿಂದ ಹೊರಹೋಗಿದ್ದ ಮಾಡರ್ನ್ ಮಹಾಕವಿ ಮಂಜುನಾಥ್ ದೀಪಾವಳಿ ಹಬ್ಬದ ದಿನದಂದೆ ಮತ್ತೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ತಮ್ಮ ಅತಿರೇಕದ ವರ್ತನೆಯಿಂದ ಬಿಗ್‌ಬಾಸ್ ಮನೆಯಿಂದ ಹೊರಹೋಗಿದ್ದ ಮಾಡರ್ನ್ ಮಹಾಕವಿ ಮಂಜುನಾಥ್ ದೀಪಾವಳಿ ಹಬ್ಬದ ದಿನದಂದೆ ಮತ್ತೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮಾಡಿದ ತಪ್ಪನ್ನು ಒಪ್ಪಿಕೊಂಡಿರುವ ಮಂಜು, ಈ ಬಾರಿ ಮನೆಯೊಳಗೆ ಪಟಾಕಿ ಸಿಡಿಸೋ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಸೀಸನ್ 13ರ ಕಪ್ ಗೆಲ್ಲೋದೇ ನನ್ನ ಗುರಿ ಅಂತ ಗುಡುಗಿದ್ದಾರೆ. ಹಾಗಾದ್ರೆ ಮಂಜು ರೀ ಎಂಟ್ರಿಯಿಂದ ದೊಡ್ಮನೆಯಲ್ಲಿ ಮತ್ತೆ ಕಿಚ್ಚು ಹೊತ್ತಿಕೊಳ್ಳುತ್ತಾ? ನೋಡೋಣ ಈ ಸ್ಟೋರಿ.
ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮಾಡರ್ನ್ ಮಹಾಕವಿ ಮಂಜುನಾಥ್ ಮತ್ತೆ ಸದ್ದು ಮಾಡೋಕೆ ಸಜ್ಜಾಗಿದ್ದಾರೆ. ತಮ್ಮ ಅತಿರೇಕದ ವರ್ತನೆಯಿಂದ ದೊಡ್ಮನೆಯಿಂದ ಹೊರಬಿದ್ದಿದ್ದ ಮಂಜುನಾಥ್‌ಗೆ ಇದೀಗ ಮತ್ತೊಂದು ಅವಕಾಶ ಸಿಕ್ಕಿದೆ. ಕಿಚ್ಚ ಸುದೀಪ್ ವೇದಿಕೆ ಮೇಲೆ ಮಂಜು ಅವರನ್ನು ಕರೆಸಿ ಮತ್ತೆ ಬಿಗ್‌ಬಾಸ್ ಮನೆಗೆ ಕಳುಹಿಸಿದ್ದಾರೆ.
ಮತ್ತೆ ದೊಡ್ಮನೆಗೆ ಹೋಗುವ ಖುಷಿಯಲ್ಲಿದ್ದ ಮಂಜು, ವೇದಿಕೆ ಮೇಲೆಯೇ ತಮ್ಮ ಮುಂದಿನ ಆಟದ ಸುಳಿವು ನೀಡಿದ್ದಾರೆ. ನಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳುತ್ತೇನೆ. ಆದರೆ ನನ್ನ ಕಣ್ಣು ಮಾತ್ರ ಸೀಸನ್ 13ರ ಕಪ್ ಮೇಲಿದೆ ಎಂದು ಹೇಳಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ನನ್ನನ್ನು ಮನೆಯೊಳಗೆ ಕಳುಹಿಸುತ್ತಿದ್ದೀರಿ. ಪಟಾಕಿ ಎಲ್ಲಾ ರೆಡಿ ಮಾಡಿಟ್ಟುಕೊಂಡಿದ್ದಾರೆ. ಒಳಗೆ ಹೋಗುತ್ತಿದ್ದಂತೆ ಪಟಾಕಿ ಹಚ್ಚುತ್ತೇನೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.ಇಷ್ಟಕ್ಕೆ ಸುಮ್ಮನಾಗದ ಮಾಡರ್ನ್ ಮಹಾಕವಿ, ಸುರಸುರ ಬತ್ತಿ ಆಡಿಸುವವರಿಗೆಲ್ಲ ಸರಪಟಾಕಿ ಹಚ್ಚುತ್ತೇನೆ. ಮುಂದೆ ಬರೋದೆಲ್ಲ ಸ್ಕೈಶಾಟ್ ರಾಕೆಟ್ ಪಟಾಕಿ ಎಂದು ತಮ್ಮದೇ ಸ್ಟೈಲ್‌ನಲ್ಲಿ ಡೈಲಾಗ್ ಹೊಡೆದಿದ್ದಾರೆ. ಮಂಜು ಮಾತು ಕೇಳಿ ನಿರೂಪಕ ಕಿಚ್ಚ ಸುದೀಪ್ ಕೂಡ ನಗುತ್ತಾ, ನನಗೇನು ಗೊತ್ತಿಲ್ಲಪ್ಪಾ ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ಮಂಜು ರೀ ಎಂಟ್ರಿಯ ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಮಂಜು ಮನೆಯಿಂದ ಹೊರಹೋದಾಗ ಸಂಭ್ರಮಿಸಿದ್ದ ಸ್ಪರ್ಧಿಗಳಿಗೆ ಇದೀಗ ಶಾಕ್ ಕಾದಿದೆ ಎಂದು ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. ಅದರಲ್ಲೂ ಮಂಜು ಹೊರಹೋದ ಖುಷಿಯಲ್ಲಿ ಸಿಹಿ ಹಂಚಿಕೊಂಡಿದ್ದ ಯಶಸ್ ಕೃಷ್ಣಗೆ ಇದು ಬಿಗ್ ಶಾಕ್ ಎನ್ನಲಾಗುತ್ತಿದೆ. ಕಿರಣ್ ಶಾಸ್ತ್ರಿಗೂ ಮಂಜು ರೀ ಎಂಟ್ರಿ ಬಿಸಿ ತಟ್ಟಲಿದೆ ಅಂತ ನೆಟ್ಟಿಗರು ಚರ್ಚಿಸುತ್ತಿದ್ದಾರೆ.
ಹತ್ತು ವರ್ಷದ ಕನಸು ನಾನೇ ಹಾಳು ಮಾಡಿಕೊಂಡೆ ಎಂದಿದ ಮಾರ್ಡನ್ ಮಹಾಕವಿ ಮತ್ತೆ ಅವಕಾಶ
ಬಿಗ್‌ಬಾಸ್ ಮನೆಯಲ್ಲಿ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಮಾರ್ಡನ್ ಮಹಾಕವಿ ಮಂಜನನ್ನು ಬಿಗ್‌ಬಾಸ್ ಎಲಿಮಿನೇಟ್ ಮಾಡಿದ್ದರು. ಆದರೆ, ಎಲಿಮಿನೇಷನ್ ಬಳಿಕ ಕಿಚ್ಚ ಸುದೀಪ್ ಎದುರು ಮಂಜ ಕಣ್ಣೀರು ಹಾಕಿದ್ದಾನೆ. ತನ್ನ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿ, ಹತ್ತು ವರ್ಷದ ಕನಸನ್ನು ನಾನೇ ಹಾಳು ಮಾಡಿಕೊಂಡೆ ಎಂದು ಭಾವುಕನಾಗಿದ್ದರು.
ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಬಿಗ್‌ಬಾಸ್‌ನಿಂದ ನೇರ ಎಲಿಮಿನೇಷನ್ ಶಿಕ್ಷೆ!ಇದರಿಂದ ಕಂಗೆಟ್ಟ ಮಾರ್ಡನ್ ಮಹಾಕವಿ ಮಂಜ, ಕಿಚ್ಚ ಸುದೀಪ್ ಎದುರು ಬಂದು ಕಣ್ಣೀರು ಹಾಕಿದ್ದರು.
ತನ್ನ ತಪ್ಪನ್ನು ಒಪ್ಪಿಕೊಂಡ ಮಂಜ, ಹತ್ತು ವರ್ಷಗಳಿಂದ ಕಂಡಿದ್ದ ಕನಸನ್ನು ನಾನೇ ಹಾಳು ಮಾಡಿಕೊಂಡೆ ಎಂದು ಪಶ್ಚಾತ್ತಾಪ ಪಟ್ಟಿದ್ದರು. "ನಾನು ತಪ್ಪು ಮಾಡಿದ್ದೇನೆ. ನನ್ನ ಹತ್ತು ವರ್ಷದ ಕನಸನ್ನು ನಾನೇ ಹಾಳು ಮಾಡಿಕೊಂಡಿದ್ದೇನೆ. ನಿಮ್ಮನ್ನ ನೋಡುವುದೇ ಒಂದು ಕನಸಾಗಿತ್ತು. ಆದರೆ, ನನ್ನ ತಪ್ಪಿನಿಂದ ನನ್ನ ಕನಸಿನ ಕಣ್ಣಲ್ಲೂ ನೀರು ತರಿಸಿದ್ದೇನೆ."
ಕಿಚ್ಚನನ್ನು ನೋಡುವ ಹತ್ತು ವರ್ಷದ ಕನಸು ನನಸಾಗಿದ್ದರೂ, ತನ್ನ ತಪ್ಪಿನಿಂದಲೇ ಆ ಕನಸಿಗೆ ನೋವುಂಟು ಮಾಡಿದ್ದೇನೆ ಎಂಬ ಬೇಸರ ಮಂಜನ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು. ಕಣ್ಣೀರಿಡುತ್ತಲೇ ಕ್ಷಮೆಯಾಚಿಸಿ ಬಿಗ್‌ಬಾಸ್ ಮನೆಗೆ ವಿದಾಯ ಹೇಳಿ ಹೋಗಿದ್ದರು.. ಈಗ ದೀಪಾವಳಿ ಹಬ್ಬದಂದೇ ಮಾರ್ಡನ್ ಮಹಾಕವಿ ಮಂಜು ಮತ್ತೆ ರೀ ಎಂಟ್ರೀ ನೀಡಿದ್ದರು. ಬಹಳ ಸಂತಸದಿಂದ ಸುದೀಪ್ ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿಕೊಟ್ಟಿದ್ದರು..
ಸದ್ಯ ಮಂಜು ಇನ್ನಾದರೂ ಮಾಡಿದ್ದ ತಪ್ಪನ್ನು ಮರೆತ್ತು, ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಬಿಗ್‌ಬಾಸ್ ಮನೆಯೊಳಗೆ ಆಟಕ್ಕೆ ಹೊಸ ಹುರುಪು ತರುತ್ತಾರೋ ಇಲ್ಲವೋ ಎಂಬ ಕುತೂಹಲ ಹೆಚ್ಚಾಗಿದೆ. ಒಟ್ನಲ್ಲಿ ಮಾಡರ್ನ್ ಮಹಾಕವಿ ಮಂಜುನಾಥ್ ಮತ್ತೆ ದೊಡ್ಮನೆಗೆ ಬಂದಿದ್ದಾರೆ. ಈ ಬಾರಿ ಮಾತಿನ ಪಟಾಕಿ ಮಾತ್ರವಲ್ಲ, ಆಟದಲ್ಲೂ ಅಬ್ಬರಿಸ್ತಾರಾ? ಮಂಜು ರೀ ಎಂಟ್ರಿಯಿಂದ ಬಿಗ್‌ಬಾಸ್ ಮನೆಯ ಆಟ ಯಾವ ತಿರುವು ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕು.