• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಬಿಗ್‌ಬಾಸ್‌ ಟೀಂ ಆ ರೀತಿ ಮಾಡುವಂತೆ ಒತ್ತಾಯಿಸಿತ್ತು..! ಸಂಚಲನಕಾರಿ ಹೇಳಿಕೆ ನೀಡಿದ ಕುಮಾರಿ

ಬಿಗ್‌ಬಾಸ್‌ ಟೀಂ ಆ ರೀತಿ ಮಾಡುವಂತೆ ಒತ್ತಾಯಿಸಿತ್ತು..! ಸಂಚಲನಕಾರಿ ಹೇಳಿಕೆ ನೀಡಿದ ಕುಮಾರಿ

ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡುವಾಗ ಧರಿಸಿದ್ದ ಬಟ್ಟೆಯ ವಿಚಾರವಾಗಿ ಭಾರೀ ವಿವಾದ ಹಾಗೂ ಟ್ರೋಲ್‌ಗೆ ಗುರಿಯಾಗಿದ್ದ ಸ್ಪರ್ಧಿ ಕುಮಾರಿ, ಕೊನೆಗೂ ಮೌನ ಮುರಿದ್ದಾರೆ. ತಾನು ಯಾವುದೇ ಸಿಂಪತಿ ಗಿಟ್ಟಿಸಿಕೊಳ್ಳಲು ಹಳೆಯ ಬಟ್ಟೆ ಧರಿಸಿ ಹೋಗಿರಲಿಲ್ಲ ಅಂದು ಬಿಗ್‌ ಬಾಸ್‌ ತಂಡದವರೇ ಆ ಬಟ್ಟೆಯನ್ನು ಹಾಕುವಂತೆ ಸೂಚಿಸಿದ್ದಾಗಿ ಹೇಳಿಕೊಂಡು ಸಂಚಲನ ಮೂಡಿಸಿದ್ದಾರೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Nov 15, 2026, 15:31 IST|Updated: Nov 15, 2026, 15:34 IST
joinshare
ಬಿಗ್‌ಬಾಸ್‌ ಟೀಂ ಆ ರೀತಿ ಮಾಡುವಂತೆ ಒತ್ತಾಯಿಸಿತ್ತು..! ಸಂಚಲನಕಾರಿ ಹೇಳಿಕೆ ನೀಡಿದ ಕುಮಾರಿ
Image Credit: Bigg Boss Kannada 13

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Kumari on Bigg Boss : ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋ (Bigg Boss Kannada 13) ಆರಂಭವಾದಾಗಿನಿಂದಲೂ ಒಂದಲ್ಲ ಒಂದು ವಿವಾದಗಳು, ಚರ್ಚೆಗಳು ಹಾಗೂ ಟ್ರೋಲ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಅದರಲ್ಲೂ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದ ಕುಮಾರಿ (Kumari) ಅವರು ಧರಿಸಿದ್ದ ಬಟ್ಟೆಯ ವಿಚಾರ ಭಾರೀ ಟೀಕೆಗೆ ಗುರಿಯಾಗಿತ್ತು. ಸಿಂಪತಿ ಗಿಟ್ಟಿಸಿಕೊಳ್ಳಲು ಹಳೆಯ ಬಟ್ಟೆ ಧರಿಸಿ ಹೋಗಿದ್ದಾರೆ ಎಂದು ನೆಟ್ಟಿಗರು ಅವರನ್ನು ತೀವ್ರವಾಗಿ ಟ್ರೋಲ್ ಮಾಡಿದ್ದರು. ಈ ಕುರಿತು ಅಂತಿಮವಾಗಿ ಮೌನ ಮುರಿದಿರುವ ಕುಮಾರಿ, ಸ್ಪಷ್ಟನೆ ನೀಡುವ ಮೂಲಕ ತಮ್ಮ ಮೇಲಿನ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ತಮ್ಮ ಮೇಲಿನ ಆರೋಪಗಳಿಗೆ ವಿವರವಾದ ಸ್ಪಷ್ಟನೆ ನೀಡಿದ್ದಾರೆ. "ನಮಸ್ಕಾರ ಎಲ್ಲರಿಗೂ, ನಾನು ನಿಮ್ಮ ಪ್ರೀತಿಯ ಕುಮಾರಿ. ಇಂದು ಒಂದು ಮುಖ್ಯವಾದ ವಿಷಯದ ಬಗ್ಗೆ ಮಾತನಾಡಲು ಈ ವೀಡಿಯೋ ಮಾಡಿದ್ದೇನೆ. ಇಷ್ಟು ದಿನ ಇದರ ಬಗ್ಗೆ ಮಾತನಾಡಲು ಸಾಧ್ಯವಾಗಿರಲಿಲ್ಲ; ಏಕೆಂದರೆ ನನ್ನ ಪರೀಕ್ಷೆಗಳಿದ್ದವು, ಓದಿಕೊಳ್ಳಬೇಕಿತ್ತು ಮತ್ತು ಕೆಲಸವಿತ್ತು. ಇದರ ಮಧ್ಯೆ ಬಿಡುವು ಮಾಡಿಕೊಳ್ಳಲು ಸಮಯ ಸಿಕ್ಕಿರಲಿಲ್ಲ" ಎಂದು ವಿಡಿಯೋದ ಆರಂಭದಲ್ಲಿ ತಿಳಿಸಿದ್ದಾರೆ.

ಬಟ್ಟೆಯ ವಿಚಾರವಾಗಿ ಮಾತನಾಡುತ್ತಾ, "ನನ್ನ ಬಟ್ಟೆಯ ಬಗ್ಗೆ ತುಂಬಾ ಜನರು ನಾನಾ ರೀತಿಯಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅದೇ ಬಟ್ಟೆ ಹಾಕಿಕೊಂಡು ಹೋಗಿ ನಾಟಕ ಮಾಡಿದರು, ಸಿಂಪತಿ ಗಿಟ್ಟಿಸಿಕೊಂಡರು ಎಂದೆಲ್ಲಾ ಮಾತನಾಡುತ್ತಿದ್ದಾರೆ. ಖಂಡಿತವಾಗಿಯೂ ಜನರನ್ನು ನಂಬಿಸಿ, ಮೋಸ ಮಾಡಿ, ನಾಟಕ ಮಾಡಿ ಸಂಪಾದನೆ ಮಾಡಿ ಬದುಕಬೇಕು ಎನ್ನುವ ಉದ್ದೇಶ ನನ್ನ ಮನಸ್ಸಿನಲ್ಲಿ ಇಲ್ಲವೇ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ತಾವು ಅಂದು ಬಿಗ್‌ ಬಾಸ್‌ ವೇದಿಕೆಗೆ ಹೋಗಲು ಹೇಗೆ ಸಿದ್ಧರಾಗಿದ್ದೆ ಎಂಬುದನ್ನು ವಿವರಿಸಿರುವ ಅವರು, "ಅವತ್ತು ಸ್ಟೇಜ್ ಮೇಲೆ ಹೋಗುವಾಗ ಧರಿಸಬೇಕು ಎಂದು ನಾನು ಒಂದು ಬಟ್ಟೆಯನ್ನು ಪ್ರಿಪೇರ್ ಮಾಡಿ ಇಟ್ಟುಕೊಂಡಿದ್ದೆ. ಅದು ಬೇರೆ ಯಾರದೋ ಅಲ್ಲ, ನನ್ನ ಸ್ವಂತ ತಾಯಿಯ ಸೀರೆ. ಸುದೀಪ್‌ ಅಣ್ಣನ ಮುಂದೆ ಆ ಸೀರೆಯುಟ್ಟುಕೊಂಡೇ ಹೋಗಬೇಕು ಎಂದುಕೊಂಡಿದ್ದೆ. ನನ್ನ ಹತ್ರ ಬಳೆಗಳು, ಸರ ಸೇರಿದಂತೆ ಎಲ್ಲವೂ ತುಂಬಾನೇ ಇವೆ, ಇಲ್ಲ ಅಂತೇನಿಲ್ಲ. ಆ ತಾಯಿಯ ಸೀರೆ ಹುಟ್ಟಿಕೊಂಡು, ಒಳ್ಳೆಯ ಬಳೆಗಳನ್ನು ಧರಿಸಿ, ಜುಮ್ಕಿ, ಓಲೆ ಮತ್ತು ಸರ ಹಾಕಿಕೊಂಡು ಅಷ್ಟು ದೊಡ್ಡ ಸ್ಟೇಜ್ ಮೇಲೆ ನಿಲ್ಲಬೇಕು ಎಂಬ ಆಸೆ ನನಗಿತ್ತು" ಎಂದು ಭಾವುಕರಾಗಿದ್ದಾರೆ.

ಮುಂದುವರಿದು ಮಾತನಾಡುತ್ತಾ, "ಟಿವಿಯಲ್ಲಿ ಸಾವಿರಾರು ಜನರು ನೋಡುತ್ತಿರುತ್ತಾರೆ, ಅವರ ಕಣ್ಣಿಗೆ ನಾನು ಚೆನ್ನಾಗಿ ರೆಡಿಯಾಗಿ ಕಾಣಿಸಿಕೊಳ್ಳಬೇಕು, ಒಳ್ಳೆಯ ಒಡವೆಗಳನ್ನು ಧರಿಸಬೇಕು ಎಂಬ ಆಸೆ ಯಾರಿಗಾದರೂ ಇರುವುದಿಲ್ಲ ಹೇಳಿ? ನನಗೂ ಹಾಗೆ ಆಸೆ ಇತ್ತು. ಆದರೆ, ಆ ದಿನ ಅಲ್ಲಿ ನಡೆದಿದ್ದೇ ಬೇರೆ. ಅವರು (ಬಿಗ್ ಬಾಸ್ ತಂಡದವರು) ಕೊಟ್ಟ ಬಟ್ಟೆಯನ್ನೇ ಹಾಕಿಕೊಳ್ಳುವಂತೆ ಸೂಚಿಸಿದರು. ಕೊನೆಯ ಕ್ಷಣದಲ್ಲಿ ಅದೇ ಬಟ್ಟೆಯನ್ನು ಹಾಕಬೇಕು ಎಂದು ಅವರು ಹೇಳಿದ ಕಾರಣದಿಂದಾಗಿ, ನನಗೆ ಬೇರೆ ದಾರಿ ಇಲ್ಲದೆ ಅಂದಿನ ಬಟ್ಟೆಯನ್ನು ಧರಿಸಿಕೊಂಡು ಹೋಗಬೇಕಾಯಿತು" ಎಂದು ಸ್ಪಷ್ಟನೆ ನೀಡಿದ್ದಾರೆ.

ಯಾವುದೇ ಸಿಂಪತಿ ಕಾರ್ಡ್‌ ಬಳಸಿ ಜನರನ್ನು ಮೋಸ ಮಾಡಿ ಬಿಗ್‌ ಬಾಸ್‌ ಮನೆಯೊಳಗೆ ಗೆಲ್ಲಬಹುದು ಎಂಬ ದುರುದ್ದೇಶದಿಂದ ತಾನು ಆ ಬಟ್ಟೆ ಧರಿಸಿರಲಿಲ್ಲ ಎಂದು ಸ್ಪಷ್ಟಪಡಿಸಿರುವ ಕುಮಾರಿ, ಕೊನೆಯಲ್ಲಿ "ಬಿಗ್‌ ಬಾಸ್ ತಂಡದವರು ಯಾರಿದ್ದೀರಿ, ಈ ವಿಷಯವನ್ನು ಹೇಳಲೇಬೇಕಿತ್ತು ಏಕೆಂದರೆ ಮನಸ್ಸಿನಲ್ಲಿ ಇದನ್ನು ತಡೆದುಕೊಳ್ಳಲು ಆಗುತ್ತಿರಲಿಲ್ಲ. ದಯವಿಟ್ಟು ಸಾಧ್ಯವಾದರೆ ನನ್ನನ್ನು ಕ್ಷಮಿಸಿ, ಈ ಸ್ಪಷ್ಟನೆಯನ್ನು ನಾನು ನೀಡಲೇಬೇಕಿತ್ತು" ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಕುಮಾರಿಯವರ ಈ ಸ್ಪಷ್ಟನೆ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ.

Add Zee News as a Preferred Source
TAGS:
Bigg Boss Kannada Season 13