• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚನ ಎಮೋಷನಲ್ ಮೊಮೆಂಟ್!.. Kicchaನ 30 ವರ್ಷದ ಸಿನಿ ಪಯಣಕ್ಕೆ ಸೆಲೆಬ್ರಿಟಿಗಳ ಸಲ್ಯೂಟ್

ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚನ ಎಮೋಷನಲ್ ಮೊಮೆಂಟ್!.. Kicchaನ 30 ವರ್ಷದ ಸಿನಿ ಪಯಣಕ್ಕೆ ಸೆಲೆಬ್ರಿಟಿಗಳ ಸಲ್ಯೂಟ್

BBK: ಬಿಗ್ ಬಾಸ್ ಕನ್ನಡ ಸೀಸನ್ 13 ವೇದಿಕೆಯಲ್ಲಿ ಕಿಚ್ಚಸುದೀಪ್‌ ಭಾವಕರಾಗಿದ್ದಾರೆ.

Written ByRamya. R. Gowda
Published: Sep 27, 2026, 10:14 AM IST|Updated: Sep 27, 2026, 10:36 AM IST
joinshare
ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚನ ಎಮೋಷನಲ್ ಮೊಮೆಂಟ್!.. Kicchaನ 30 ವರ್ಷದ ಸಿನಿ ಪಯಣಕ್ಕೆ ಸೆಲೆಬ್ರಿಟಿಗಳ ಸಲ್ಯೂಟ್

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಕಿಚ್ಚ ಸುದೀಪ್‌... ಕನ್ನಡ ಚಿತ್ರರಂಗದಲ್ಲಿ 30 ವರ್ಷಗಳ ಸುದೀರ್ಘ ಪಯಣ ಪೂರೈಸಿದ್ದಾರೆ.ಸುದೀಪ್‌ ಅವರ ಈ ಸಿನಿ ಜರ್ನಿಗೆ ಬಿಗ್ ಬಾಸ್ ಕನ್ನಡ ಸೀಸನ್ 13 ವೇದಿಕೆಯಲ್ಲಿ ವಿಶೇಷ ಗೌರವ ಸಿಕ್ಕಿದೆ.ಸೌರವ್ ಗಂಗೂಲಿ, ಮೋಹನ್‌ಲಾಲ್, ಸಲ್ಮಾನ್ ಖಾನ್ ಸೇರಿದಂತೆ ಗಣ್ಯರು ಸುದೀಪ್‌ಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.ಆದ್ರೆ, ಈ ಸಂಭ್ರಮದ ನಡುವೆ ಅಪ್ಪನ ಮಾತು ಕೇಳಿ ಕಿಚ್ಚನ ಕಣ್ಣಲ್ಲಿ ನೀರು ತುಂಬಿಕೊಂಡಿದೆ.ಅಪ್ಪನ ಆಡಿಯೋ ಕೇಳಿಸಿಕೊಂಡ ಸುದೀಪ್‌... ‘ಐ ಲವ್ ಯೂ ಅಪ್ಪ’ ಎಂದು ಭಾವುಕರಾಗಿದ್ದಾರೆ.

 

 

 

 

 

View this post on Instagram

 

 

 

 

 

 

 

 

 

 

 

A post shared by Colors Kannada Official (@colorskannadaofficial)

 ಕಿಚ್ಚ ಸುದೀಪ್‌... ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳ ಪಯಣ ಪೂರ್ಣಗೊಳಿಸಿದ್ದಾರೆ.ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಿರೂಪಕನಾಗಿ ತಮ್ಮದೇ ಛಾಪು ಮೂಡಿಸಿರುವ ಕಿಚ್ಚನ 30 ವರ್ಷಗಳ ಜರ್ನಿಗೆ ಇದೀಗ ವಿಶೇಷ ಗೌರವ ಸಿಕ್ಕಿದೆ.ಬಿಗ್ ಬಾಸ್ ಕನ್ನಡ ಸೀಸನ್ 13 ವೇದಿಕೆಯಲ್ಲಿ ಸುದೀಪ್‌ಗಾಗಿ ವಿಶೇಷ ಸರ್ಪ್ರೈಸ್ ಸಿದ್ಧವಾಗಿತ್ತು. ಭಾರತೀಯ ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್, ಬಾಲಿವುಡ್ ನಟ ಸಲ್ಮಾನ್ ಖಾನ್ ಸೇರಿದಂತೆ ಗಣ್ಯರು ಸುದೀಪ್ ಅವರ 30 ವರ್ಷಗಳ ಸಿನಿ ಪಯಣಕ್ಕೆ ಶುಭಾಶಯ ತಿಳಿಸಿದ್ದಾರೆ.

 

 

 

ಕಿಚ್ಚನ 30 ವರ್ಷಗಳ ಸಿನಿ ಜರ್ನಿ
ಸೌರವ್ ಗಂಗೂಲಿ – ಮೋಹನ್‌ಲಾಲ್ – ಸಲ್ಮಾನ್ ಖಾನ್ ವಿಶ್ ಮಾಡಿದ್ದಾರೆ.ತಮ್ಮ ನೆಚ್ಚಿನ ನಟರು ಹಾಗೂ ಗಣ್ಯರಿಂದ ಬಂದ ಈ ಸರ್ಪ್ರೈಸ್ ಕಂಡು ಸುದೀಪ್ ಫುಲ್ ಖುಷಿಯಾಗಿದ್ದಾರೆ.ಆದ್ರೆ, ಈ ಸಂಭ್ರಮದ ಕ್ಷಣಕ್ಕೆ ಮತ್ತೊಂದು ಭಾವನಾತ್ಮಕ ತಿರುವು ಸಿಕ್ಕಿದೆ.ಸುದೀಪ್ ತಂದೆ ಸಂಜೀವ್ ಅವರ ಧ್ವನಿಯ ಆಡಿಯೋ ಕ್ಲಿಪ್‌ನ್ನು ವೇದಿಕೆಯಲ್ಲಿ ಪ್ಲೇ ಮಾಡಲಾಗಿದೆ. ಅಪ್ಪನ ಧ್ವನಿ ಕೇಳುತ್ತಿದ್ದಂತೆ ಸುದೀಪ್ ಭಾವುಕರಾಗಿದ್ದಾರೆ.ಕಣ್ಣಲ್ಲಿ ನೀರು ತುಂಬಿಕೊಂಡ ಕಿಚ್ಚ... ಅಪ್ಪನ ಮಾತುಗಳನ್ನು ಕೇಳುತ್ತಲೇ ಭಾವನೆಗಳನ್ನು ತಡೆಯಲು ಸಾಧ್ಯವಾಗದೆ ಕಣ್ಣೀರು ಸುರಿಸಿದ್ದಾರೆ.

ಆ ಕ್ಷಣದಲ್ಲಿ ಸುದೀಪ್ ಹೇಳಿದ ಒಂದೇ ಒಂದು ಮಾತು ಎಲ್ಲರನ್ನೂ ಭಾವುಕರನ್ನಾಗಿಸಿದೆ. ‘ಐ ಲವ್ ಯೂ ಅಪ್ಪ’ ಎಂದು ಕಿಚ್ಚ ಭಾವುಕರಾಗಿ ಹೇಳಿದ್ದಾರೆ. 30 ವರ್ಷಗಳ ಸಿನಿ ಪಯಣದ ಸಂಭ್ರಮ ಗಣ್ಯರ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅದರ ನಡುವೆ ಅಪ್ಪನ ಧ್ವನಿ ಕೇಳಿ ಕಿಚ್ಚ ಸುದೀಪ್ ಕಣ್ಣೀರಿಟ್ಟಿದ್ದಾರೆ. ಬಿಗ್ ಬಾಸ್ ವೇದಿಕೆಯಲ್ಲಿ ಮೂಡಿಬಂದ ಈ ವಿಶೇಷ ಹಾಗೂ ಭಾವನಾತ್ಮಕ ಕ್ಷಣ ಸೆಪ್ಟೆಂಬರ್ 27ರ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.

 

ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಮತ್ತು ನಿರೂಪಕನಾಗಿ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಕಿಚ್ಚ ಸುದೀಪ್ ಅವರ ಸಿನಿ ಪಯಣ 1997ರಲ್ಲಿ ಆರಂಭವಾಯಿತು.

ಆರಂಭದ ದಿನಗಳು
1997 – ತಾಯವ್ವ: ಸುದೀಪ್‌ ಅವರ ಮೊದಲ ಸಿನಿಮಾ.
1999 – ಪ್ರತ್ಯರ್ಥ: ಪೋಷಕ ಪಾತ್ರದ ಮೂಲಕ ಮುಂದುವರಿದ ಪಯಣ.
2000 – ಸ್ಪರ್ಶ: ನಾಯಕನಾಗಿ ಗಮನ ಸೆಳೆದ ಪ್ರಮುಖ ಸಿನಿಮಾ.
‘ಹುಚ್ಚ’ ಕೊಟ್ಟ ದೊಡ್ಡ ತಿರುವು

2001ರ ‘ಹುಚ್ಚ’ ಸುದೀಪ್‌ ಅವರ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿತು. ಈ ಸಿನಿಮಾದಲ್ಲಿನ ಪಾತ್ರದಿಂದಲೇ ಅಭಿಮಾನಿಗಳಿಂದ ‘ಕಿಚ್ಚ’ ಎಂಬ ಹೆಸರು ಜನಪ್ರಿಯವಾಯಿತು.

ಅದಾದ ಬಳಿಕ ನಂದಿ (2002), ಕಿಚ್ಚ (2003), ಸ್ವಾತಿಮುತ್ತು (2003) ಸಿನಿಮಾಗಳು ಅವರ ನಟನಾ ಸಾಮರ್ಥ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದವು.

ಸತತ ಮೂರು ವರ್ಷ ಫಿಲ್ಮ್‌ಫೇರ್

‘ಹುಚ್ಚ’, ‘ನಂದಿ’ ಮತ್ತು ‘ಸ್ವಾತಿಮುತ್ತು’ ಸಿನಿಮಾಗಳಿಗಾಗಿ ಸುದೀಪ್‌ ಸತತ ಮೂರು ವರ್ಷ Filmfare Best Actor – Kannada ಪ್ರಶಸ್ತಿ ಪಡೆದಿದ್ದಾರೆ.

ನಟನಿಂದ ನಿರ್ದೇಶಕನತ್ತ
ಸುದೀಪ್‌ ಕೇವಲ ನಟನಾಗಿ ಉಳಿಯದೆ ನಿರ್ದೇಶನದಲ್ಲೂ ಹೆಜ್ಜೆ ಇಟ್ಟರು. ಮೈ ಆಟೋ ಗ್ರಾಫ್‌, ವೀರ ಮದಕರಿ, ಜಸ್ಟ್‌ ಮಾತ್‌ ಮಾತಲ್ಲಿ, ಕೆಂಪೇಗೌಡ ಮತ್ತು ಮಾಣಿಕ್ಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

ಆ್ಯಕ್ಷನ್‌ ಹೀರೋ ಇಮೇಜ್
ವೀರ ಮದಕರಿ (2009), ಕೆಂಪೇಗೌಡ  (2011), ವಿಷ್ಣವರ್ಧನ2011) ಮುಂತಾದ ಸಿನಿಮಾಗಳು ಸುದೀಪ್‌ ಅವರ ಆ್ಯಕ್ಷನ್‌ ಹೀರೋ ಇಮೇಜ್‌ಗೆ ಮತ್ತಷ್ಟು ಬಲ ನೀಡಿದವು.

ಸ್ಯಾಂಡಲ್‌ವುಡ್‌ನಿಂದ ಪ್ಯಾನ್‌-ಇಂಡಿಯಾ
ಈಗ (2012) ಮೂಲಕ ತೆಲುಗು ಚಿತ್ರರಂಗದಲ್ಲೂ ಸುದೀಪ್‌ ಅವರ ಅಭಿನಯ ಗಮನ ಸೆಳೆಯಿತು. ನಂತರ ರಕ್ತ ಚರಿತ, ಬಾಹುಬಲಿ,  ಪೈಲ್ವನ್, Sye Raa Narasimha Reddy ಮತ್ತು Dabangg 3 ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಕಾಣಿಸಿಕೊಂಡರು.

‘ಅಭಿನಯ ಚಕ್ರವರ್ತಿ’ಯಿಂದ ‘ಬಿಗ್‌ಬಾಸ್‌’ ಕಿಚ್ಚ
2013ರಿಂದ Bigg Boss Kannada ಕಾರ್ಯಕ್ರಮದ ನಿರೂಪಕರಾಗಿ ಸುದೀಪ್‌ ಮತ್ತೊಂದು ದೊಡ್ಡ ಜನಪ್ರಿಯತೆ ಗಳಿಸಿದರು. ಸಿನಿಮಾ ಜೊತೆಗೆ ಕಿರುತೆರೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದರು.

ಇತ್ತೀಚಿನ ಹಂತ
Vikrant Rona (2022) ನಂತರ Max (2024) ಸೇರಿದಂತೆ ಸಿನಿಮಾಗಳ ಮೂಲಕ ಸುದೀಪ್‌ ತಮ್ಮ ಆ್ಯಕ್ಷನ್‌ ಸ್ಟಾರ್‌ ಇಮೇಜ್‌ ಮುಂದುವರಿಸಿದ್ದಾರೆ. ಅವರ ಚಿತ್ರಪಯಣದಲ್ಲಿ ನಟನೆಯ ಜೊತೆಗೆ ನಿರ್ದೇಶನ, ನಿರ್ಮಾಣ, ಬರವಣಿಗೆ ಮತ್ತು ನಿರೂಪಣೆಯೂ ಪ್ರಮುಖ ಭಾಗವಾಗಿದೆ.

ಒಟ್ಟಿನಲ್ಲಿ ತಾಯವ್ವ , ಸ್ಪರ್ಶ , ಹುಚ್ಚ , ನಂದಿ , ನಸ್ವಾತಿಮುತ್ತು  ಮೈ ಆಟೋಗ್ರಾಫ್ ,ವೀರ ಮದಕರಿ , ಕೆಂಪೇಗೌಡ , Eega ,ಪೈಲ್ವಾನ್ , ವಿಕ್ರಾಂತ್ ರೋಣ,  ಮ್ಯಾಕ್ಸ್ ಹೀಗೆ ಹಲವು ಹಂತಗಳನ್ನು ದಾಟಿ ಕಿಚ್ಚ ಸುದೀಪ್‌ ಕನ್ನಡ ಚಿತ್ರರಂಗದ ಪ್ರಮುಖ ಬಹುಮುಖ ಕಲಾವಿದರಾಗಿ ಬೆಳೆದಿದ್ದಾರೆ.
 

 

 

Add Zee News as a Preferred Source
TAGS:
Bigg Boss Kannada Season 13