• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಈ ನಾಲ್ಕು ಜನರಿಂದ ಇನ್ಮುಂದೆ ಕಾಮನರ್ಸ್‌ಗೆ ಅವಕಾಶ ಇಲ್ಲ!.. ನೆಕ್ಟ್‌ ಟೈಮ್‌ ಅಗ್ನಿಪರೀಕ್ಷೆ ಬೇಡವೇ ಬೇಡ ಎಂದಿದ್ಯಾಕೆ ಕಿಚ್ಚ?

ಈ ನಾಲ್ಕು ಜನರಿಂದ ಇನ್ಮುಂದೆ ಕಾಮನರ್ಸ್‌ಗೆ ಅವಕಾಶ ಇಲ್ಲ!.. ನೆಕ್ಟ್‌ ಟೈಮ್‌ ಅಗ್ನಿಪರೀಕ್ಷೆ ಬೇಡವೇ ಬೇಡ ಎಂದಿದ್ಯಾಕೆ ಕಿಚ್ಚ?

Bigg boss kannada : ಈ ನಾಲ್ಕು ಜನರಿಂದ ಇನ್ಮುಂದೆ ಕಾಮನರ್ಸ್‌ಗೆ ಅವಕಾಶ ಇಲ್ಲ ನೆಕ್ಟ್‌ ಟೈಮ್‌ ಅಗ್ನಿಪರೀಕ್ಷೆ ನಡೆಸಲೇಬೇಡಿ ಎಂದು ಕಿಚ್ಚ ಸುದೀಪ್‌ ಎಂದಿದ್ದಾರೆ..

Written ByRamya. R. Gowda
Published: Sep 20, 2026, 02:57 PM IST|Updated: Sep 20, 2026, 03:10 PM IST
joinshare
ಈ ನಾಲ್ಕು ಜನರಿಂದ ಇನ್ಮುಂದೆ ಕಾಮನರ್ಸ್‌ಗೆ ಅವಕಾಶ ಇಲ್ಲ!.. ನೆಕ್ಟ್‌ ಟೈಮ್‌ ಅಗ್ನಿಪರೀಕ್ಷೆ ಬೇಡವೇ ಬೇಡ ಎಂದಿದ್ಯಾಕೆ ಕಿಚ್ಚ?

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬಿಗ್ ಬಾಸ್ ಕನ್ನಡದ ಮನೆಯಲ್ಲಿ ಕಾಮನರ್ಸ್‌ ಎಂಟ್ರಿ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಸಾಮಾನ್ಯ ಸ್ಪರ್ಧಿಗಳಿಗೆ ಅವಕಾಶ ನೀಡುವ ವಿಚಾರದಲ್ಲಿ ಕಿಚ್ಚ ಸುದೀಪ್‌ ಮಾಡಿರುವ ಮಾತುಗಳು ಇದೀಗ ಗಮನ ಸೆಳೆಯುತ್ತಿವೆ. ಹಾಗಾದ್ರೆ ಈ ನಾಲ್ಕು ಜನರಿಂದ ಇನ್ಮುಂದೆ ಕಾಮನರ್ಸ್‌ಗೆ ಅವಕಾಶವೇ ಇಲ್ಲ ಎನ್ನುವ ಮಾತು ಯಾಕೆ ಕೇಳಿಬಂದಿದೆ? ನೆಕ್ಟ್‌ ಟೈಮ್‌ ಅಗ್ನಿಪರೀಕ್ಷೆ ಬೇಡ ಎಂದು ಕಿಚ್ಚ ಹೇಳಿದ್ದೇಕೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.

ಬಿಗ್‌ ಬಾಸ್‌ ಶೋನಲ್ಲಿ ಸಾಮಾನ್ಯ ಜನರಿಗೂ ಅವಕಾಶ ಕೊಡಬೇಕು ಅನ್ನೋ ಕೂಗು ಪ್ರತಿ ಸೀಸನ್‌ನಲ್ಲೂ ಕೇಳಿ ಬರುತ್ತೆ. ಆದ್ರೆ, ಈ ಬಾರಿ ಕಾಮನರ್ಸ್‌ಗೆ ಕೊಟ್ಟ ಅವಕಾಶವೇ ಮುಳುವಾಯ್ತಾ? ಅನ್ನೋ ಪ್ರಶ್ನೆ ಹುಟ್ಟಿದೆ.
ಬಿಗ್‌ ಬಾಸ್‌ ಕನ್ನಡ ಸೀಸನ್‌-13ರ ಅಗ್ನಿಪರೀಕ್ಷೆ ಸ್ಪರ್ಧಿಗಳ ವರ್ತನೆ ಬಗ್ಗೆ ಸ್ವತಃ ವೀಕ್ಷಕರಿಂದಲೇ ಅಸಮಾಧಾನ ವ್ಯಕ್ತವಾಗ್ತಿದೆ.ಇದರ ಬೆನ್ನಲ್ಲೇ, ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಕೂಡ ಸ್ಪರ್ಧಿಗಳ ವರ್ತನೆಗೆ ಗರಂ ಆಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸೆಲೆಬ್ರಿಟಿಗಳ ಜೊತೆ ಸಾಮಾನ್ಯ ಸ್ಪರ್ಧಿಗಳಿಗೂ ಅವಕಾಶ ನೀಡುವುದು ಹಲವು ಸೀಸನ್‌ಗಳಿಂದ ನಡೆದುಕೊಂಡು ಬಂದಿದೆ. ಕಾಮನರ್ಸ್‌ ಆಗಿ ಎಂಟ್ರಿ ಕೊಟ್ಟು ತಮ್ಮದೇ ಆದ ಗುರುತು ಮೂಡಿಸಿಕೊಂಡ ಸ್ಪರ್ಧಿಗಳೂ ಇದ್ದಾರೆ. ಆದರೆ ಇತ್ತೀಚಿನ ಬೆಳವಣಿಗೆಗಳ ನಡುವೆ ಕಾಮನರ್ಸ್‌ ಆಯ್ಕೆ ಪ್ರಕ್ರಿಯೆ ಬಗ್ಗೆ ಪ್ರಶ್ನೆಗಳು ಮೂಡಿವೆ. 

ಇದೇ ವಿಚಾರವಾಗಿ ಕಿಚ್ಚ ಸುದೀಪ್‌ ಕೂಡ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ವಿಶೇಷವಾಗಿ ಈ ನಾಲ್ಕು ಜನರ ವಿಚಾರದಲ್ಲಿ ಮುಂದಿನ ಬಾರಿ ಇದೇ ರೀತಿಯ ಆಯ್ಕೆ ಪ್ರಕ್ರಿಯೆ ಬೇಡ ಎಂಬ ರೀತಿಯಲ್ಲಿ ಕಿಚ್ಚ ಮಾತನಾಡಿರುವುದು ಚರ್ಚೆಗೆ ಕಾರಣವಾಗಿದೆ. ಕಾಮನರ್ಸ್‌ ಆಯ್ಕೆ ಸುಲಭದ ಪ್ರಕ್ರಿಯೆಯಲ್ಲ. ಸಾಕಷ್ಟು ಜನರ ಪೈಕಿ ಕೆಲವರನ್ನು ಆಯ್ಕೆ ಮಾಡಬೇಕಾಗುತ್ತದೆ. ಆದರೆ ಆಯ್ಕೆಯಾದ ಸ್ಪರ್ಧಿಗಳು ಮನೆಯೊಳಗೆ ಹೇಗೆ ಆಡುತ್ತಾರೆ, ಟಾಸ್ಕ್‌ಗಳಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಮತ್ತು ಪ್ರೇಕ್ಷಕರ ಜೊತೆ ಹೇಗೆ ಕನೆಕ್ಟ್ ಆಗುತ್ತಾರೆ ಅನ್ನೋದು ಕೂಡ ಮುಖ್ಯವಾಗುತ್ತದೆ.

ಹೀಗಾಗಿ ನೆಕ್ಟ್‌ ಟೈಮ್‌ನಿಂದ ಬಿಗ್‌ಬಾಸ್‌ಗಾಗಿ ಅಗ್ನಿಪರೀಕ್ಷೆ ನಡೆಸಲೇ ಬೇಡಿ ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.. ಕಾಮನರ್ಸ್‌ ಆಯ್ಕೆ ವಿಚಾರದಲ್ಲಿ ಮತ್ತೆ ಅಗ್ನಿಪರೀಕ್ಷೆ ಎದುರಾಗಬಾರದು ಎಂಬ ಸಂದೇಶ ಕಿಚ್ಚನ ಮಾತಿನಲ್ಲಿ ವ್ಯಕ್ತವಾಗಿದೆ. ಈ ನಾಲ್ಕು ಜನರ ಎಂಟ್ರಿ ಹಾಗೂ ಅವರ ಆಟದ ಬಗ್ಗೆ ಬಿಗ್ ಬಾಸ್ ಅಭಿಮಾನಿಗಳಲ್ಲೂ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಬಿಗ್‌ ಬಾಸ್‌ ಶೋನಲ್ಲಿ ಸಾಮಾನ್ಯ ಜನರಿಗೂ ಅವಕಾಶ ಕೊಡಬೇಕು ಅನ್ನೋ ಕೂಗು ಪ್ರತಿ ಸೀಸನ್‌ನಲ್ಲೂ ಕೇಳಿ ಬರುತ್ತೆ. ಆದ್ರೆ, ಈ ಬಾರಿ ಕಾಮನರ್ಸ್‌ಗೆ ಕೊಟ್ಟ ಅವಕಾಶವೇ ಮುಳುವಾಯ್ತಾ? ಅನ್ನೋ ಪ್ರಶ್ನೆ ಹುಟ್ಟಿದೆ.
ಬಿಗ್‌ ಬಾಸ್‌ ಕನ್ನಡ ಸೀಸನ್‌-13ರ ಅಗ್ನಿಪರೀಕ್ಷೆ ಸ್ಪರ್ಧಿಗಳ ವರ್ತನೆ ಬಗ್ಗೆ ಸ್ವತಃ ವೀಕ್ಷಕರಿಂದಲೇ ಅಸಮಾಧಾನ ವ್ಯಕ್ತವಾಗ್ತಿದೆ.ಇದರ ಬೆನ್ನಲ್ಲೇ, ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಕೂಡ ಸ್ಪರ್ಧಿಗಳ ವರ್ತನೆಗೆ ಗರಂ ಆಗಿದ್ದಾರೆ.

ವಿಶೇಷವಾಗಿ ಮಂಜನ ಮಾತು ಮತ್ತು ವರ್ತನೆಗೆ ಫುಲ್ ಕ್ಲಾಸ್ ತೆಗೆದುಕೊಂಡಿರುವ ಕಿಚ್ಚ,
“ನಿಮ್ಮ ಬೆಲೆ ಎಷ್ಟು ಮಂಜು?” ಎಂದು ಪ್ರಶ್ನಿಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.


ಬಿಗ್‌ ಬಾಸ್‌ ಮನೆಯಲ್ಲಿ ಮಾತಿನ ಸಮರಕ್ಕೆ ಹೊಸ ತಿರುವು...ಸಹ ಸ್ಪರ್ಧಿಗಳನ್ನು ಪದೇ ಪದೇ ಅವಮಾನಿಸುವುದು,ತಮ್ಮ ಮಾತೇ ಅಂತಿಮ ಎಂಬಂತೆ ವರ್ತಿಸುವುದು, ಇದರಿಂದ ಮನೆಯೊಳಗೆ ದಿನದಿಂದ ದಿನಕ್ಕೆ ಕಿರಿಕ್ ಹೆಚ್ಚಾಗ್ತಿದೆ.  ಇದೆಲ್ಲವೂ ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ ಅವರ ಗಮನಕ್ಕೂ ಬಂದಿದೆ. ವಿಶೇಷವಾಗಿ ಮಂಜನ ವರ್ತನೆಗೆ ಸುದೀಪ್‌ ಗರಂ ಆಗಿದ್ದಾರೆ.

“ಬಡಿದು ಬಾಯಿಗೆ ಹಾಕ್ಕೊಂಡು ಬಿಡ್ತೀನಿ... ನಿಮಗೆಲ್ಲ ಬೆಲೆ ಇಲ್ಲ” ಎಂಬ ರೀತಿಯ ಮಾತುಗಳಿಂದ ಸಹ ಸ್ಪರ್ಧಿಗಳನ್ನು ಹೀಯಾಳಿಸಿದ್ದ ಮಂಜನ ವರ್ತನೆಗೆ ಕಿಚ್ಚ ಸುದೀಪ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾತಿನ ಶೈಲಿ, ಇತರರನ್ನು ನಡೆಸಿಕೊಳ್ಳುವ ರೀತಿ ಮತ್ತು ತನ್ನ ವರ್ತನೆಯ ಬಗ್ಗೆ ಮಂಜನಿಗೆ ಕಿಚ್ಚ ಒಂದೊಂದೇ ವಿಚಾರವನ್ನು ಎತ್ತಿಕೊಂಡು ಪ್ರಶ್ನಿಸಿದ್ದಾರೆ.

ಕಿಚ್ಚ ಸುದೀಪ್ ಖಡಕ್‌ ವಾರ್ನಿಂಗ್‌
“ನಿಮ್ಮ ಬೆಲೆ ಎಷ್ಟು ಮಂಜು?
ನಿಮಗೆ ಮಾತಾಡೋಕೆ ಬರಲ್ಲ...
ಮಿಸ್ಟರ್ ಸೌಂಡ್ ಮಂಜು, ಗಾಂಜಾಲಿ ಜಾಸ್ತಿ ಆಯ್ತು...”

ಇದು ಕೇವಲ ಮಂಜನಿಗೆ ಕೊಟ್ಟ ಕ್ಲಾಸ್ ಅಲ್ಲ...ಸಾಮಾನ್ಯ ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಮನೆಗೆ ಅವಕಾಶ ನೀಡುವ ‘ಅಗ್ನಿಪರೀಕ್ಷೆ’ ಕಾನ್ಸೆಪ್ಟ್‌ ಬಗ್ಗೆಯೂ ಚರ್ಚೆ ಶುರುವಾಗಿದೆ.ಹಿಂದೆ ಬಿಗ್‌ ಬಾಸ್‌ ಕನ್ನಡ ಸೀಸನ್‌-6ರಲ್ಲಿ ಕಾಮನರ್ಸ್‌ ಮತ್ತು ಸೆಲೆಬ್ರಿಟಿಗಳನ್ನು ಒಟ್ಟಿಗೆ ಕಣಕ್ಕಿಳಿಸಲಾಗಿತ್ತು. ಸೀಸನ್‌ ಬಗ್ಗೆ ಕಿಚ್ಚ ಸುದೀಪ್‌ ಹಲವು ಬಾರಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬ ಮಾತುಗಳೂ ಕೇಳಿಬಂದಿದ್ದವು.
ಇದೀಗ ಸೀಸನ್‌-13ರಲ್ಲೂ ಇದೇ ರೀತಿಯ ಚರ್ಚೆ ಮುನ್ನೆಲೆಗೆ ಬಂದಿದೆ.


ಕಾಮನರ್ಸ್‌ಗೆ ಚಾನ್ಸ್ ಕೊಡಬಾರದಾ?ಬಿಗ್ ಬಾಸ್ ಅಗ್ನಿಪರೀಕ್ಷೆಗೆ ಜನರ ಅಸಮಾಧಾನ?

ಅಗ್ನಿಪರೀಕ್ಷೆ ಸ್ಪರ್ಧಿಗಳ ಕೆಲವರ ವರ್ತನೆಯಿಂದಾಗಿ ಮುಂದಿನ ಸೀಸನ್‌ನಲ್ಲಿ ಸಾಮಾನ್ಯ ಸ್ಪರ್ಧಿಗಳಿಗೆ ಅವಕಾಶ ನೀಡುವ ಬಗ್ಗೆ ಮರುಚಿಂತನೆ ಮಾಡಬೇಕು ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಆದ್ರೆ, ಬಿಗ್‌ ಬಾಸ್‌ ಮನೆಗೆ ಬಂದಿರುವ ಪ್ರತಿಯೊಬ್ಬ ಕಾಮನ್ ಸ್ಪರ್ಧಿಯ ವರ್ತನೆಯನ್ನು ಒಂದೇ ತಕ್ಕಡಿಯಲ್ಲಿ ಅಳೆಯಲು ಸಾಧ್ಯವಿಲ್ಲ. ಈ ನಡುವೆ ಮಂಜನಿಗೆ ಕಿಚ್ಚ ನೀಡಿದ ಕ್ಲಾಸ್ ಮಾತ್ರ ಸದ್ಯದ ಹಾಟ್ ಟಾಪಿಕ್ ಆಗಿದೆ.

ಒಟ್ನಲ್ಲಿ... ಕಾಮನರ್ಸ್‌ಗೆ ಬಿಗ್‌ ಬಾಸ್‌ ವೇದಿಕೆಯಲ್ಲಿ ಅವಕಾಶ ಬೇಕು ಅನ್ನೋ ಬೇಡಿಕೆ ಒಂದ್ಕಡೆಯಾದ್ರೆ.. ಅವಕಾಶ ಸಿಕ್ಕ ಮೇಲೆ ಸ್ಪರ್ಧಿಗಳ ವರ್ತನೆ ಹೇಗಿರಬೇಕು ಅನ್ನೋ ಪ್ರಶ್ನೆ ಮತ್ತೊಂದ್ಕಡೆ.
ಮಂಜನಿಗೆ ಕಿಚ್ಚ ಕೊಟ್ಟ ಈ ಕ್ಲಾಸ್‌ ಮುಂದಿನ ದಿನಗಳಲ್ಲಿ ಬಿಗ್‌ ಬಾಸ್‌ ಮನೆಯಲ್ಲಿ ಯಾವ ಬದಲಾವಣೆ ತರಲಿದೆ ಅನ್ನೋದು ಸದ್ಯದ ಕುತೂಹಲ.

 ಇದನ್ನೂ ಓದಿ:ಎರಡನೇ ಬಾರಿ ತಾಯಿಯಾದ ದೀಪಿಕಾ ಪಡುಕೋಣೆ ರಿಯಲ್ ವಯಸ್ಸು ಎಷ್ಟು ಗೊತ್ತಾ?

 

Add Zee News as a Preferred Source
TAGS:
Bigg Boss Kannada Season 13