• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • / ಕಿರುತೆರೆಗೆ ಮತ್ತೆ ಕಮ್‌ಬ್ಯಾಕ್‌ ಮಾಡಿ ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನಟಿ ಕವಿತಾ ಗೌಡ

ಕಿರುತೆರೆಗೆ ಮತ್ತೆ ಕಮ್‌ಬ್ಯಾಕ್‌ ಮಾಡಿ ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನಟಿ ಕವಿತಾ ಗೌಡ

‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದಿದ್ದ ನಟಿ ಕವಿತಾ ಗೌಡ ಇದೀಗ ಮತ್ತೊಂದು ವಿಭಿನ್ನ ಪಾತ್ರದೊಂದಿಗೆ ಕಿರುತೆರೆಗೆ ಕಮ್‌ಬ್ಯಾಕ್‌ ಆಗಿದ್ದಾರೆ.

Written ByRamya. R. Gowda
Published: Sep 28, 2026, 07:41 PM IST|Updated: Sep 28, 2026, 07:49 PM IST
joinshare
 ಕಿರುತೆರೆಗೆ ಮತ್ತೆ ಕಮ್‌ಬ್ಯಾಕ್‌ ಮಾಡಿ ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನಟಿ ಕವಿತಾ ಗೌಡ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದಿದ್ದ ನಟಿ ಕವಿತಾ ಗೌಡ( Kavitha gowda) ಇದೀಗ ಮತ್ತೊಂದು ವಿಭಿನ್ನ ಪಾತ್ರದೊಂದಿಗೆ ಕಿರುತೆರೆಗೆ ಕಮ್‌ಬ್ಯಾಕ್‌( Come back) ಆಗಿದ್ದಾರೆ.

‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದಿದ್ದ ನಟಿ ಕವಿತಾ ಗೌಡ ಇದೀಗ ಮತ್ತೊಂದು ವಿಭಿನ್ನ ಪಾತ್ರದೊಂದಿಗೆ ಕಿರುತೆರೆಗೆ ಕಮ್‌ಬ್ಯಾಕ್‌ ಆಗಿದ್ದಾರೆ. ‘ಜಗದ್ಧಾತ್ರಿ’ ಸೀರಿಯಲ್‌ನಲ್ಲಿ ಕೌಶಿಕಿ ಎಂಬ ದಿಟ್ಟ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 ಕೌಶಿಕಿಯ ಜೀವನದಲ್ಲಿ ಮಗಳು, ಅಪ್ಪನ ಚಾನೆಲ್ ಹಾಗೂ ಕುಟುಂಬವೇ ಪ್ರಮುಖವಾಗಿದ್ದರೂ, ಪತಿಯಿಂದ ದೂರ ಇರುವುದೇಕೆ ಎಂಬ ಪ್ರಶ್ನೆಯನ್ನು ಹೊಸ ಪ್ರೋಮೋ ಹುಟ್ಟುಹಾಕಿದೆ. ಹಾಗಾದ್ರೆ ಕವಿತಾ ಗೌಡ ಪಾತ್ರದ ವಿಶೇಷತೆ ಏನು?


‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಖ್ಯಾತಿಯ ಕವಿತಾ ಗೌಡ ಮತ್ತೆ ಕಿರುತೆರೆಗೆ ಬಂದಿದ್ದಾರೆ. ಜೀ ಕನ್ನಡದ ‘ಜಗದ್ಧಾತ್ರಿ’ ಸೀರಿಯಲ್‌ನಲ್ಲಿ ಕೌಶಿಕಿ ಎಂಬ ಪಾತ್ರದಲ್ಲಿ ಕವಿತಾ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಜೀ ಕನ್ನಡ ಬಿಡುಗಡೆ ಮಾಡಿರುವ ಪಾತ್ರ ಪರಿಚಯದ ಪ್ರೋಮೋ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಕೌಶಿಕಿ ಅಂದ್ರೆ ಸಾಮಾನ್ಯ ಹೆಸರಲ್ಲ. ಪೌರಾಣಿಕ ಹಿನ್ನೆಲೆಯಲ್ಲೂ ಈ ಹೆಸರು ವಿಶೇಷ ಸ್ಥಾನ ಹೊಂದಿದೆ. ಶುಂಭ-ನಿಶುಂಭ ಎಂಬ ರಾಕ್ಷಸರ ಸಂಹಾರಕ್ಕಾಗಿ ಪಾರ್ವತಿ ದೇವಿಯ ಶಕ್ತಿಯಿಂದ ಸೃಷ್ಟಿಯಾದ ದೇವಿಯ ಹೆಸರೇ ಕೌಶಿಕಿ. ಇದೇ ಶಕ್ತಿಶಾಲಿ ಹೆಸರನ್ನು ಕವಿತಾ ಗೌಡ ಅವರ ಪಾತ್ರಕ್ಕೂ ಇಡಲಾಗಿದೆ.


ಸೀರಿಯಲ್‌ನಲ್ಲಿ ಕೌಶಿಕಿ ದಿಟ್ಟ ಪತ್ರಕರ್ತೆ. ಅಪ್ಪನ ಚಾನೆಲ್ ನೋಡಿಕೊಳ್ಳುತ್ತಾ, ತನ್ನ ಕುಟುಂಬ ಹಾಗೂ ಮಗಳ ಜವಾಬ್ದಾರಿಯನ್ನೂ ನಿಭಾಯಿಸುತ್ತಿರುತ್ತಾರೆ. ಮಗಳಿಗೆ ಬೇಕಾದ ಎಲ್ಲವನ್ನೂ ಕೊಡಿಸುವ ಶಕ್ತಿ ತನ್ನಲ್ಲಿದೆ ಎಂದು ಕೌಶಿಕಿ ಹೇಳಿಕೊಳ್ಳುತ್ತಾರೆ. ಆದರೆ, ಮಗಳ ವಿಚಾರದಲ್ಲಿ ಅಪ್ಪನನ್ನು ದೂರ ಇಡುವ ಅನಿವಾರ್ಯತೆ ಎದುರಾಗಿದೆ. ಇದರ ಜೊತೆಗೆ ಕೌಶಿಕಿ ಪತಿಯಿಂದಲೂ ದೂರವಾಗಿದ್ದಾರೆ. ಅಷ್ಟಕ್ಕೂ ಪತಿಯಿಂದ ದೂರವಿರಲು ಕಾರಣವೇನು? ಮಗಳನ್ನ ಅಪ್ಪನಿಂದ ದೂರ ಇಟ್ಟಿರುವುದೇಕೆ? ಕೌಶಿಕಿಯ ಕುಟುಂಬದಲ್ಲಿ ಅಡಗಿರುವ ಆ ರಹಸ್ಯವೇನು? ಈ ಪ್ರಶ್ನೆಗಳಿಗೆ ಸದ್ಯ ಪ್ರೋಮೋ ಉತ್ತರ ನೀಡಿಲ್ಲ. ‘ಅದು ಮತ್ತೊಂದು ಕಥೆ’ ಎನ್ನುವ ಮೂಲಕ ಕುತೂಹಲವನ್ನು ಹಾಗೆಯೇ ಉಳಿಸಿದೆ.

ಇನ್ನು ‘ಜಗದ್ಧಾತ್ರಿ’ ಸೀರಿಯಲ್‌ನಲ್ಲಿ ಮೋಕ್ಷಿತಾ ಪೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಜಯ್ ಸೂರ್ಯ ನಾಯಕನಾಗಿ ನಟಿಸುತ್ತಿದ್ದಾರೆ. ಇದೀಗ ಕವಿತಾ ಗೌಡ ಅವರ ಎಂಟ್ರಿ ಸೀರಿಯಲ್‌ಗೆ ಮತ್ತಷ್ಟು ತಿರುವು ನೀಡುವ ನಿರೀಕ್ಷೆ ಮೂಡಿಸಿದೆ.

ದಿಟ್ಟ ಪತ್ರಕರ್ತೆಯಾಗಿ ಕವಿತಾ ಗೌಡ ಅವರ ಗೆಟಪ್‌, ಮಾತಿನ ಶೈಲಿ ಹಾಗೂ ಪಾತ್ರದ ಪ್ರೆಸೆನ್ಸ್ ಈಗಾಗಲೇ ಗಮನ ಸೆಳೆಯುತ್ತಿದೆ. ಹೀಗಾಗಿ ಕೌಶಿಕಿಯ ಎಂಟ್ರಿಯ ಬಳಿಕ ‘ಜಗದ್ಧಾತ್ರಿ’ ಕಥೆ ಯಾವ ತಿರುವು ಪಡೆಯಲಿದೆ ಅನ್ನೋದು ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಕವಿತಾ ಗೌಡ ಅವರ ಕಮ್‌ಬ್ಯಾಕ್‌ ವಿಭಿನ್ನ ಪಾತ್ರದ ಮೂಲಕ ಆಗಿದ್ದು, ಕೌಶಿಕಿಯ ಹಿಂದಿರುವ ಕೌಟುಂಬಿಕ ರಹಸ್ಯವೇನು ಅನ್ನೋದು ಸದ್ಯದ ದೊಡ್ಡ ಕುತೂಹಲ. ಮುಂದೆ ಈ ಕಥೆ ಯಾವ ತಿರುವು ಪಡೆಯಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

 

Add Zee News as a Preferred Source
TAGS:
TV