ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ : ಮೂವರಿಗೆ ಗಾಯ
Firing on Actor Tiger Shroff : ಬಾಲಿವುಡ್ ಯುವ ನಟ ಟೈಗರ್ ಶ್ರಾಫ್ ಪ್ರಯಾಣಿಸುತ್ತಿದ್ದ ಮೇಲೆ ಮುಂಬೈನ ಜುಹು ಪ್ರದೇಶದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಕಾರು ಚಾಲಕ ಸೇರಿದಂತೆ ಮೂವರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
Tiger Shroff firing incident : ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಮುಂಬೈನ ಜುಹು ಪ್ರದೇಶದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಫುಟ್ಬಾಲ್ ಆಡಿ ಬಿಎಂಡಬ್ಲ್ಯು ಕಾರಿನಲ್ಲಿ ಮನೆಗೆ ವಾಪಸ್ ಬರುವಾಗಿ ಈ ಘಟನೆ ನಡೆದಿದೆ.
ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಸುಮಾರು 11 ಸುತ್ತು ಗುಂಡು ಹಾರಿಸಿದ್ದಾರೆ. ಈ ದಾಳಿಯಿಂದ ಟೈಗರ್ ಶ್ರಾಫ್ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಆದರೆ, ಅವರ ಕಾರಿನ ಚಾಲಕ, ಮತ್ತೊಬ್ಬ ಸಿಬ್ಬಂದಿ ಹಾಗೂ ಓರ್ವ ಆಟೋ ಚಾಲಕನಿಗೆ ಗಾಯಗಳಾಗಿವೆ. ಘಟನೆ ಕುರಿತು ಮಾತನಾಡಿರುವ ಡಿಸಿಪಿ ಮೋಹಿತ್ ಕುಮಾರ್, ನಟ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದು, ಆರೋಪಿಗಳನ್ನು ಹಿಡಿಯಲು 12 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದಿದ್ದಾರೆ.
ಮತ್ತೊಂದೆಡೆ, ಅನಿಲ್ ಪಂಡಿತ್ ಮತ್ತು ಅನ್ಮೋಲ್ ಬಿಷ್ಣೋಯಿ ಹೆಸರಿನ ಎಕ್ಸ್ (ಟ್ವಿಟರ್) ಖಾತೆಯಿಂದ ಈ ದಾಳಿಯ ಹೊಣೆಯನ್ನು ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿದೆ. ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುವವರು ಹಾಗೂ ತಮ್ಮ ಮಾತು ಕೇಳದವರೇ ಮುಂದಿನ ಗುರಿ ಎಂದು ಆ ಪೋಸ್ಟ್ನಲ್ಲಿ ಬೆದರಿಕೆ ಹಾಕಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ಸಲ್ಮಾನ್ ಮನೆ ಮೇಲಿನ ಗುಂಡಿನ ದಾಳಿ ಘಟನೆ
ಇತ್ತೀಚಿಗೆ ನಟ ಸಲ್ಮಾನ್ ಖಾನ್ ಅವರ ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇದರ ಹಿಂದಿತ್ತು ಅಂತ ವರದಿಯಾಗಿತ್ತು. ಅದಕ್ಕೆ ಕಾರಣ, 1998ರಲ್ಲಿ ರಾಜಸ್ಥಾನದಲ್ಲಿ ನಡೆದ ಕೃಷ್ಣಮೃಗ (Blackbuck) ಬೇಟೆ ಪ್ರಕರಣ.
ಹೌದು.. ಬಿಷ್ಣೋಯ್ ಸಮುದಾಯವು ಕೃಷ್ಣಮೃಗವನ್ನು ಅತ್ಯಂತ ಪವಿತ್ರವೆಂದು ಪೂಜಿಸುತ್ತದೆ. ಸಲ್ಮಾನ್ ಖಾನ್ ಈ ಪ್ರಾಣಿಯನ್ನು ಬೇಟೆಯಾಡಿದ್ದಾರೆ ಎಂಬ ಕೋಪದಿಂದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಟನನ್ನು ಗುರಿಯಾಗಿಸಿಕೊಂಡಿದೆ. ಈ ಹಿಂದೆ ಕೂಡ ಗ್ಯಾಂಗ್ನಿಂದ ಹಲವು ಬಾರಿ ಜೀವ ಬೆದರಿಕೆಗಳು ಬಂದಿದ್ದವು.
ದಿನಾಂಕ: 2024ರ ಏಪ್ರಿಲ್ 14ರಂದು ಮುಂಜಾನೆ. ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ನಿವಾಸದ (ಗ್ಯಾಲಕ್ಸಿ ಅಪಾರ್ಟ್ಮೆಂಟ್) ಮೇಲೆ ಗುಂಡ ಹಾರಿಸಿ ಪರಾರಿಯಾಗಿದ್ದರು. ದಾಳಿ ನಡೆದಾಗ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದವರು ಮನೆಯಲ್ಲಿದ್ದರು ಎನ್ನಲಾಗಿದೆ.. ತನಿಖೆ ಮತ್ತು ಆರೋಪಿಗಳ ಬಂಧನಜವಾಬ್ದಾರಿ: ದಾಳಿಯ ನಂತರ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ಸಾಮಾಜಿಕ ಜಾಲತಾಣ ಹಾಗೂ ಆಡಿಯೋ ಮೂಲಕ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದನು.