BBK13 ಫೇವರೆಟ್ ಯಾರು ಗೊತ್ತಾ? ಗಗನ್ ಅಲ್ಲ, ಸೌಂದರ್ಯ ಶೆಟ್ಟಿ, ಆಸಿಯಾ ಕೂಡ ಅಲ್ಲ.. ವೀಕ್ಷಕರ ಮನಗೆದ್ದ ಸ್ಪರ್ಧಿ ಇವರೇ!
BBK: ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಗಗನ್ ಅಲ್ಲ ಸೌಂದರ್ಯ ಶೆಟ್ಟಿ, ಆಸಿಯಾ ಕೂಡ ಅಲ್ಲ ಈ ಸ್ಫರ್ಧಿ ಅವರನ್ನು ಹಿಂದಿಕ್ಕಿ ವೀಕ್ಷಕರ ಮನಗೆದ್ದು, ಫೇವರೆಟ್ ಲಿಸ್ಟ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.. ಸ್ಪರ್ಧಿ ಯಾರು ಅಂತಾ ತಿಳಿಯಲು ಈ ಸ್ಟೋರಿ ಓದಿ.
BBK: ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಗಗನ್ ಅಲ್ಲ ಸೌಂದರ್ಯ ಶೆಟ್ಟಿ, ಆಸಿಯಾ ಕೂಡ ಅಲ್ಲ ಈ ಸ್ಫರ್ಧಿ ಅವರನ್ನು ಹಿಂದಿಕ್ಕಿ ವೀಕ್ಷಕರ ಮನಗೆದ್ದು, ಫೇವರೆಟ್ ಲಿಸ್ಟ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಅಂದ ಹಾಗೇ.. ಬಿಗ್‌ಬಾಸ್ ಕನ್ನಡ ಸೀಸನ್ 13 ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ತಿದೆ. ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದ್ದು, ಯಾರು ವಿನ್ನರ್ ಆಗ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲೂ ಫೇವರೆಟ್ ಸ್ಪರ್ಧಿಗಳ ಬಗ್ಗೆ ಚರ್ಚೆ ಜೋರಾಗಿದೆ. ಗಗನ್, ಸೌಂದರ್ಯ ಶೆಟ್ಟಿ, ಆಸಿಯಾ ಫಿರ್ದೋಸ್ ಹೆಸರುಗಳ ನಡುವೆ ವೀಕ್ಷಕರ ಮನಗೆದ್ದಿರುವ ಸ್ಪರ್ಧಿ ಬೇರೆಯೇ ಇದ್ದಾರೆ. ಹಾಗಾದ್ರೆ ಆ ಸ್ಪರ್ಧಿ ಯಾರು? ಅವರಿಗಿರುವ ಜನಪ್ರಿಯತೆ ಎಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಬಿಗ್‌ಬಾಸ್ ಮನೆಯಲ್ಲಿ ಪ್ರತಿದಿನ ಒಂದಲ್ಲ ಒಂದು ಹೊಸ ಆಟ, ಜಗಳ, ಟಾಸ್ಕ್ ನಡೆಯುತ್ತಲೇ ಇದೆ. ಕೆಲವರು ತಮ್ಮ ಆಟದ ಮೂಲಕ ಗಮನ ಸೆಳೆದರೆ, ಇನ್ನು ಕೆಲವರು ಮಾತು, ವರ್ತನೆ ಮತ್ತು ತಂತ್ರಗಳಿಂದ ಸದ್ದು ಮಾಡ್ತಿದ್ದಾರೆ. ಈ ನಡುವೆ ಗಗನ್, ಸೌಂದರ್ಯ ಶೆಟ್ಟಿ ಮತ್ತು ಆಸಿಯಾ ಫಿರ್ದೋಸ್ ಪ್ರಮುಖ ಸ್ಪರ್ಧಿಗಳಾಗಿ ಗುರುತಿಸಿಕೊಂಡಿದ್ದಾರೆ.ಆದರೆ ವೀಕ್ಷಕರ ಫೇವರೆಟ್ ಯಾರು ಅನ್ನೋ ಪ್ರಶ್ನೆಗೆ ಉತ್ತರ ಹುಡುಕಿದಾಗ ಹೊಸ ಹೆಸರು ಮುನ್ನೆಲೆಗೆ ಬಂದಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 13 ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳ ಆಟ, ಮಾತು, ತಂತ್ರಗಾರಿಕೆ ನಡುವೆ ಯಾರು ವೀಕ್ಷಕರ ನೆಚ್ಚಿನ ಸ್ಪರ್ಧಿ ಎಂಬ ಚರ್ಚೆಯೂ ಜೋರಾಗಿದೆ. ಗಗನ್ ಹೆಸರು ಕೇಳಿಬರುತ್ತೆ, ಸೌಂದರ್ಯ ಶೆಟ್ಟಿ ಹಾಗೂ ಆಸಿಯಾ ಫಿರ್ದೋಸ್ ಕೂಡ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಆದರೆ ಈಗ ವೀಕ್ಷಕರ ಆಯ್ಕೆ ಬೇರೆಯೇ ಇದೆ. ಹಾಗಾದ್ರೆ BBK13 ಫೇವರೆಟ್ ಸ್ಪರ್ಧಿ ಅವರೇ ತಾಂಡವ್ ರಾಮ್ ಹೌದು ಸೋಶಿಯಲ್ ಮೀಡಿಯಾದ ಸೇರಿದಂತರ ಎಲ್ಲೆಡೆ ತಾಂಡವ್ ರಾಮ್ ವ್ಯಕ್ತಿತ್ವ ಹಾಗೂ ಆಟದ ವೈಖರಿ ಬಗ್ಗೆ ಜನರು ಹಾಡಿಹೊಗಳುತ್ತಿದ್ದಾರೆ.
ವೀಕ್ಷಕರ ಮನಗೆದ್ದ ಸ್ಪರ್ಧಿ ತಾಂಡವ್ ರಾಮ್!
ಬಿಗ್‌ಬಾಸ್ ಮನೆಯಲ್ಲಿ ಪ್ರತಿದಿನ ಒಂದಲ್ಲ ಒಂದು ಕಿತ್ತಾಟ, ವಾದ-ವಿವಾದ, ಟಾಸ್ಕ್‌ಗಳ ಅಬ್ಬರ ನಡೆಯುತ್ತಲೇ ಇದೆ. ಈ ನಡುವೆ ಸ್ಪರ್ಧಿಗಳ ಜನಪ್ರಿಯತೆ ಕೂಡ ಹೆಚ್ಚಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ವೀಕ್ಷಕರ ಒಲವು ತಾಂಡವ್ ರಾಮ್ ಕಡೆಗೆ ವಾಲುತ್ತಿದೆ ಎಂಬ ಚರ್ಚೆ ಶುರುವಾಗಿದೆ.ಗಗನ್ ತಮ್ಮ ಆಟದ ಮೂಲಕ ಗಮನ ಸೆಳೆಯುತ್ತಿದ್ದರೆ, ಸೌಂದರ್ಯ ಶೆಟ್ಟಿ ಮತ್ತು ಆಸಿಯಾ ಫಿರ್ದೋಸ್ ಕೂಡ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದ್ರೆ ಇವರನ್ನೆಲ್ಲ ಮೀರಿ ತಾಂಡವ್ ರಾಮ್ ವೀಕ್ಷಕರ ಮೆಚ್ಚಿನ ಸ್ಪರ್ಧಿಯಾಗಿ ಗುರುತಿಸಿಕೊಳ್ಳುತ್ತಿದ್ದಾರಾ ಎಂಬ ಕುತೂಹಲ ಮೂಡಿದೆ.
ತಾಂಡವ್ ರಾಮ್ ಅವರ ಆಟದ ಶೈಲಿ, ಹಾಗೂ ತಮ್ಮದೇ ಶೃಲಿಯಲ್ಲಿ ಸೆನ್ಸ್ ಆಫ್ ಹ್ಯೂಮರ್‌ನಿಂದ ಜನರು ಮನ ಗೆದ್ದಿದ್ದಾರೆ.. ಮನೆಯೊಳಗಿನ ನಡೆ-ನುಡಿ ಹಾಗೂ ಟಾಸ್ಕ್‌ಗಳಲ್ಲಿ ತೋರುವ ಪ್ರದರ್ಶನದ ಬಗ್ಗೆ ವೀಕ್ಷಕರು ಚರ್ಚಿಸುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಬಿಗ್‌ಬಾಸ್ ಮನೆಯ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕಳೆದವಾರದಿಂದ ತಾಂಡವ್ ರಾಮ್ ಆಟದ ಶೈಲಿ ಬೇರೆಯಾಗಿದ್ದು, ತಮ್ಮ ಕಾಮಿಡಿ ಹಾಗೂ ಡ್ಯಾನ್ಸ್ ಮೂಲಕ ಜನರ ಫೇವರಿಟ್ ಆಗಿದ್ದಾರೆ.
ಕಳೆದ ಎರಡು ವಾರದಿಂದ ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಫೇವರೆಟ್ ಪಟ್ಟ ತಾಂಡವ್ ರಾಮ್ ಧಕ್ಕಿಸಿಕೊಂಡಿದ್ದಾರೆ. ತಾಂಡವ್ ರಾಮ್ ಅವರು ಇದೇ ಜನಪ್ರಿಯತೆಯನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತಾರಾ? ಅಥವಾ ಗಗನ್, ಸೌಂದರ್ಯ, ಆಸಿಯಾ ಹಾಗೂ ಇನ್ನುಳಿದ ಸಹ ಸ್ಪರ್ಧಿಗಳು ಮತ್ತೆ ಮುನ್ನೆಲೆಗೆ ಬರ್ತಾರಾ ಅನ್ನೋದ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಈ ವಾರ ಸೌಂದರ್ಯ ಶೆಟ್ಟಿ ನಾಯಕತ್ವದಲ್ಲಿ ಮೂಡಿಬಂದ ಟಾಸ್ಕ್‌ನಲ್ಲಿ ತಾಂಡವ್ ರಾವ್ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲೀ ಪಾಸ್ ಆಗಿದ್ದಾರೆ. ತಾಂಡವ್ ರಾಮ್‌ಗೆ ಪ್ರಶಾಂತ್‌ಗೌಡ ಕೂಡ ಸಾಥ್ ಕೊಟ್ಟಿದ್ದು, ಈ ವಾರ ಇಬ್ಬರಲ್ಲಿ ಒಬ್ಬರಿಗೆ ಕಿಚ್ಚನ ಚಪ್ಪಾಳೆ ಸಿಗಲೇಬೇಕು ಎಂದು ಪ್ರೇಕ್ಷಕರ ಒತ್ತಾಯ ಆಗಿದೆ.