• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ರಾಮ ಜಯಶಾಲಿ ಆಗಲಿ ಅಂತ ಕಂಕಣ ಕಟ್ಟಿದ್ದೇ ರಾವಣ..! ಅದೇಷ್ಟೋ ಜನಕ್ಕೆ ಈ ರೋಚಕ ಕಥೆಯೇ ಗೊತ್ತಿಲ್ಲ

ರಾಮ ಜಯಶಾಲಿ ಆಗಲಿ ಅಂತ ಕಂಕಣ ಕಟ್ಟಿದ್ದೇ ರಾವಣ..! ಅದೇಷ್ಟೋ ಜನಕ್ಕೆ ಈ ರೋಚಕ ಕಥೆಯೇ ಗೊತ್ತಿಲ್ಲ

ಶ್ರೀರಾಮ-ರಾವಣ ಯುದ್ಧಕ್ಕೂ ಮುನ್ನ ನಡೆದ ಅಚ್ಚರಿಯ ಸಂಗತಿಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶತ್ರುವಾಗಿದ್ದರೂ, ಶ್ರೀರಾಮನು ಶಿವಪೂಜೆಗೆ ಲಂಕಾಧಿಪತಿ ರಾವಣನನ್ನೇ ಪುರೋಹಿತಕ್ಕೆ ಆಹ್ವಾನಿಸಿದ್ದನಂತೆ. ಅಷ್ಟೇ ಅಲ್ಲದೆ, ರಾವಣನೇ ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಕರೆತಂದು ಪೂಜೆ ಪೂರೈಸಿ, ರಾಘವನಿಗೆ ಜಯವಾಗಲಿ ಎಂದು ಹರಸಿದ್ದ ಎಂಬ ರೋಚಕ, ಅಪರೂಪದ ಕಥೆಯ ಸಂಪೂರ್ಣ ವಿವರ ಇಲ್ಲಿದೆ ನೋಡಿ..

Written ByKrishna NK
Published: Oct 21, 2026, 05:14 PM IST|Updated: Oct 21, 2026, 05:17 PM IST
joinshare
ರಾಮ ಜಯಶಾಲಿ ಆಗಲಿ ಅಂತ ಕಂಕಣ ಕಟ್ಟಿದ್ದೇ ರಾವಣ..! ಅದೇಷ್ಟೋ ಜನಕ್ಕೆ ಈ ರೋಚಕ ಕಥೆಯೇ ಗೊತ್ತಿಲ್ಲ
Image Credit: Ramayayana facts

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬೆಂಗಳೂರಿನ ಫ್ರೇಜರ್ ಟೌನ್ ನಲ್ಲಿ ಅನುಮಾನಾಸ್ಪದ ಸ್ಪೋಟ: ಸುಧಾರಿತ ಸ್ಪೋಟಕ ಸಾಧನಗಳ‌ನ್ನ ಬಳಸಿರುವ ಶಂಕೆ..!

ಬೆಂಗಳೂರಿನ ಫ್ರೇಜರ್ ಟೌನ್ ನಲ್ಲಿ ಅನುಮಾನಾಸ್ಪದ ಸ್ಪೋಟ: ಸುಧಾರಿತ ಸ್ಪೋಟಕ ಸಾಧನಗಳ‌ನ್ನ ಬಳಸಿರುವ ಶಂಕೆ..!

2

ಬೀರೂರು ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ನುಡಿ.. ‘ಸರ್ವರು ಎಚ್ಚರದಿಂದರಬೇಕು’ ಎಂದಿದ್ಯಾಕೆ ಸ್ವಾಮಿ?

3

ರಾಮ ಜಯಶಾಲಿ ಆಗಲಿ ಅಂತ ಕಂಕಣ ಕಟ್ಟಿದ್ದೇ ರಾವಣ..! ಅದೇಷ್ಟೋ ಜನಕ್ಕೆ ಈ ರೋಚಕ ಕಥೆಯೇ ಗೊತ್ತಿಲ್ಲ

4

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 45 ಹುದ್ದೆಗಳಿಗೆ ನೇಮಕಾತಿ.. ತಿಂಗಳಿಗೆ ₹46,675 ಸಂಬಳ, ಅರ್ಜಿ ಸಲ್ಲಿಕೆಗೆ ನ. 9 ಕೊನೆಯ ದಿನ!

5

ಡೈರಿ ಮಾರುಕಟ್ಟೆಗೆ ರಿಲಯನ್ಸ್‌ ಎಂಟ್ರಿ: ಕೇವಲ 20 ರೂಪಾಯಿ ಕೊಟ್ಟರೆ ಸಿಗುತ್ತೆ ರುಚಿಯಾದ ಫ್ಲೇವರ್ಡ್ ಮಿಲ್ಕ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Unknown facts about Ravana : ಪ್ರಸ್ತುತ ದೇಶದಲ್ಲಿ ನಿತೇಶ್ ತಿವಾರಿ ನಿರ್ದೇಶನದ ರಣಬೀರ್‌ ಕಪೂರ್‌, ಸಾಯಿ ಪಲ್ಲವಿ, ಯಶ್‌ ಅಭಿನಯದ ರಾಮಾಯಣ ಸಿನಿಮಾದ ಸದ್ದು ಜೋರಾಗಿದೆ. ಸಿನಿತಂಡ ಬಿಡುಗಡೆ ಮಾಡುತ್ತಿರುವ ಒಂದೊಂದು ಪೋಸ್ಟ್‌, ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿವೆ. ಇದರ ನಡುವೆ ಇಂದಿನ ಯುವ ಪೀಳಿಗೆಗೆ ತಿಳಿಯದ ಅದೆಷ್ಟೋ ವಿಷಯಗಳು ಮುನ್ನೆಲೆಗೆ ಬರುತ್ತಿವೆ.. ಈ ಪೈಕಿ ರಾವಣ - ಶ್ರೀರಾಮನ ಕೈಗೆ ವಿಜಯ ಕಂಕಣ ಕಟ್ಟಿದ ರೋಚಕ ಕತೆಯೊಂದು ಸಂಚಲನ ಸೃಷ್ಟಿಸಿದೆ.. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..

ಹೌದು.. ಶ್ರೀರಾಮ ಮತ್ತು ರಾವಣ ಅಂದ ತಕ್ಷಣ ನಮಗೆ ಇಬ್ಬರೂ ಬದ್ಧ ವೈರಿಗಳು ಎನ್ನುವ ಕಲ್ಪನೆ ಬರುತ್ತದೆ. ಅಲ್ಲದೆ, ಸೀತೆಯನ್ನು ಅಪಹರಿಸಿದ ಲಂಕಾಧಿಪತಿಯನ್ನು ಸಂಹರಿಸಿ ಪತ್ನಿಯನ್ನು ರಕ್ಷಿಸುವ ರಾಮನ ಮಹತ್ತರ ಕಾರ್ಯಕ್ಕೆ ವಾನರ ಸೇನೆಯೂ ಸಹಾಯ ಮಾಡಿತ್ತು ಎನ್ನುವುದು ಎಲ್ಲರಿಗೂ ಗೊತ್ತು.

ಆದರೆ, ಶ್ರೀ ರಾಮ ರಾವಣ ವಿರುದ್ಧ ಕೈಗೊಂಡ ಈ ಯುದ್ಧಕ್ಕೆ ಸ್ವತಃ ಲಂಕಾಸುರನೇ ಜಯಶಾಲಿಯಾಗು ಎಂದು ರಾಘವನಿಗೆ ಕಂಕಣ ಕಟ್ಟಿದ ವಿಚಾರ ಇಂದಿಗೂ ಅದೆಷ್ಟೋ ಜನರಿಗೆ ಗೊತ್ತಿಲ್ಲ. ಅಷ್ಟೇ ಅಲ್ಲದೆ, ತನ್ನ ಅಧಿನದಲ್ಲಿದ್ದ ಸೀತೆಯನ್ನು ಕರೆತಂದು ಕೌಸಲ್ಯನಂದನನ ಪಕ್ಕ ಕೂರಿಸಿ ಪೂಜೆ ಮಾಡಿಸಿದ್ದು ಇತಿಹಾಸದಲ್ಲಿ ಹಾಗೆಯೇ ಉಳಿದಿದೆ..

ಹೌದು.. ಲಂಕಾ ಯುದ್ಧಕ್ಕೂ ಮುನ್ನ ಶ್ರೀರಾಮನು ರಾಮೇಶ್ವರದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಲು ನಿರ್ಧರಿಸಿದ್ದ ಕ್ಷಣವದು. ಯುದ್ಧದಲ್ಲಿ ಜಯ ಸಿಗಬೇಕಾದರೆ ಪರಮಶಿವನ ಅನುಗ್ರಹ ಬೇಕಿತ್ತು. ಹೀಗಾಗಿ, ಆ ಮಹಾಪೂಜೆಯನ್ನು ಅತ್ಯಂತ ನಿಷ್ಠೆಯಿಂದ ನಡೆಸಿಕೊಡಲು ಒಬ್ಬ ಪರಮ ಜ್ಞಾನಿ ಮತ್ತು ಶ್ರೇಷ್ಠ ಬ್ರಾಹ್ಮಣನ ಅವಶ್ಯಕತೆವಿತ್ತು.

ಆ ಕಾಲದಲ್ಲಿ ತ್ರಿಲೋಕಗಳಲ್ಲಿ ರಾವಣನಿಗಿಂತ ದೊಡ್ಡ ಶಿವಭಕ್ತ ಹಾಗೂ ವೇದ ಪಂಡಿತ ಬೇರೆ ಯಾರೂ ಇರಲಿಲ್ಲ. ಈ ಕಾರಣಕ್ಕಾಗಿಯೇ ಶ್ರೀರಾಮನು ವೈರತ್ವವನ್ನು ಬದಿಗಿಟ್ಟು, ಪೂಜೆಯನ್ನು ನಡೆಸಿಕೊಡುವಂತೆ ಲಂಕಾಧಿಪತಿ ರಾವಣನಿಗೇ ಖುದ್ದು ಆಮಂತ್ರಣ ಕಳುಹಿಸಿದ್ದನಂತೆ.

ಧರ್ಮಕ್ಕೆ ತಲೆಬಾಗಿದ ರಾವಣ
ಶತ್ರುವಿನಿಂದ ಆಹ್ವಾನ ಬಂದರೂ, ಒಬ್ಬ ಬ್ರಾಹ್ಮಣನಾಗಿ ತನ್ನ ಧರ್ಮ ಕರ್ತವ್ಯಕ್ಕೆ ಬದ್ಧನಾಗಿದ್ದ ರಾವಣ ಅದನ್ನು ತಿರಸ್ಕರಿಸಲಿಲ್ಲ. ಬದಲಿಗೆ, ಶತ್ರುವಿನ ಮನೆಗೆ ಹೋದರೂ ಪರವಾಗಿಲ್ಲ, ಧರ್ಮದ ಕೆಲಸಕ್ಕೆ ಅಡ್ಡಿಬರಬಾರದು ಎಂದುಕೊಂಡು ರಾಮೇಶ್ವರಕ್ಕೆ ಬಂದು ಶಾತ್ರೋತ್ಸವವಾಗಿ ಪೂಜೆ ನೆರವೇರಿಸಿದ್ದನು.

ಇನ್ನು ಹಿಂದೂ ಧರ್ಮದ ಸಂಪ್ರದಾಯದಂತೆ ಯಾವುದೇ ಯಜ್ಞ ಅಥವಾ ಪೂಜೆ ಪತ್ನಿ ಸಮೇತರಾಗಿ ನಡೆದರೆ ಮಾತ್ರ ಪರಿಪೂರ್ಣ. ಆದರೆ ಆ ಸಮಯದಲ್ಲಿ ಸೀತಾಮಾತೆ ರಾವಣನ ಸೆರೆಯಲ್ಲಿದ್ದಳು. ಪೂಜೆಯ ಪಾವಿತ್ರ್ಯತೆಗೆ ಯಾವುದೇ ಧಕ್ಕೆಯಾಗಬಾರದು ಎಂದುಕೊಂಡ ರಾವಣ, ಪುಷ್ಪಕ ವಿಮಾನದಲ್ಲೇ ಸೀತೆಯನ್ನು ಪೂಜಾ ಸ್ಥಳಕ್ಕೆ ಕರೆತಂದು ರಾಮನ ಪಕ್ಕದಲ್ಲಿ ಕೂರಿಸಿದನು.

ಸ್ವತಃ ಶತ್ರುವಿಗೇ "ವಿಜಯೀಭವ" ಎಂದ ಲಂಕಾಧಿಪತಿ
ಎಲ್ಲಾ ವಿಧಿವಿಧಾನಗಳೊಂದಿಗೆ ಪೂಜೆ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಬಳಿಕ ಶ್ರೀರಾಮ ಮತ್ತು ಸೀತಾಮಾತೆ ಇಬ್ಬರೂ ತಮ್ಮ ಪುರೋಹಿತರಾಗಿದ್ದ ರಾವಣನ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಒಬ್ಬ ಹಿರಿಯ ಅರ್ಚಕನ ಧರ್ಮದ ಕರ್ತವ್ಯವನ್ನು ಪಾಲಿಸಿದ ರಾವಣ, ಮನಸ್ಸಿನಲ್ಲಿ ಏನೇ ಇದ್ದರೂ ಶ್ರೀರಾಮನಿಗೆ "ವಿಜಯೀಭವ" ಎಂದು ಮನಃಪೂರ್ವಕವಾಗಿ ಆಶೀರ್ವದಿಸಿದನು. ಅಂದರೆ, ಆ ಕ್ಷಣದಲ್ಲಿ ರಾವಣನು ತಾನಾಗಿಯೇ ತನ್ನ ವಿನಾಶಕ್ಕೆ ತಾನೇ ಹರಸಿದಂತಾಯಿತು. ಪೂಜೆ ಮುಗಿದ ಕೂಡಲೇ ಸೀತೆಯನ್ನು ಮತ್ತೆ ಲಂಕೆಗೆ ಕರೆದುಕೊಂಡು ಹೋಗುತ್ತಾನೆ...

ಗಮನಿಸಿ : ಈ ಕಥೆಯು ಮೂಲ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿಲ್ಲವಾದರೂ, 'ಅಧ್ಯಾತ್ಮ ರಾಮಾಯಣ' ಹಾಗೂ ಭಾರತದ ಹಲವು ಪ್ರಾದೇಶಿಕ ಜನಪದ ಕಥೆಗಳಲ್ಲಿ ಇದು ಅತ್ಯಂತ ಜನಪ್ರಿಯವಾಗಿದೆ. ರಾವಣನಲ್ಲಿದ್ದ ಮಹಾನ್ ಪಾಂಡಿತ್ಯ, ಧಾರ್ಮಿಕ ನಿಷ್ಠೆ ಮತ್ತು ವೈದಿಕ ಶಿಷ್ಟಾಚಾರದ ಮೌಲ್ಯವನ್ನು ಈ ಘಟನೆಯು ಎತ್ತಿ ತೋರಿಸುತ್ತದೆ..

Add Zee News as a Preferred Source
TAGS:
Cinema