• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಅನಿರುದ್ಧ್-ಕಾವ್ಯಾ ಮಾರನ್ ಆರತಕ್ಷತೆಗೆ ಎಷ್ಟು ಖರ್ಚಾಗಿದೆ ಗೊತ್ತಾ?

ಅನಿರುದ್ಧ್-ಕಾವ್ಯಾ ಮಾರನ್ ಆರತಕ್ಷತೆಗೆ ಎಷ್ಟು ಖರ್ಚಾಗಿದೆ ಗೊತ್ತಾ?

ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸಹ-ಮಾಲೀಕಿ ಕಾವ್ಯಾ ಮಾರನ್ ಇತ್ತೀಚೆಗೆ ವಿವಾಹವಾದರು ಎಂದು ತಿಳಿದಿದೆ. ಅವರ ವಿವಾಹವು ಗ್ರೀಸ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಮತ್ತು ಇತ್ತೀಚೆಗೆ, ಚೆನ್ನೈನಲ್ಲಿ ನಡೆದ ಅವರ ವಿವಾಹ ಆರತಕ್ಷತೆಗಾಗಿ ಹೆಚ್ಚಿನ ಸಂಖ್ಯೆಯ ಮಹಾರಥರು ಜಮಾಯಿಸಿದರು.

Written ByRamya. R. Gowda
Published: Nov 23, 2026, 15:53 IST|Updated: Nov 23, 2026, 15:58 IST
joinshare
ಅನಿರುದ್ಧ್-ಕಾವ್ಯಾ ಮಾರನ್ ಆರತಕ್ಷತೆಗೆ ಎಷ್ಟು ಖರ್ಚಾಗಿದೆ ಗೊತ್ತಾ?

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಡಾಲರ್ ಎದುರು ಭರ್ಜರಿ ಚೇತರಿಕೆ ಕಂಡ ರೂಪಾಯಿ; 8 ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ ಭಾರತೀಯ ಕರೆನ್ಸಿ!

ಡಾಲರ್ ಎದುರು ಭರ್ಜರಿ ಚೇತರಿಕೆ ಕಂಡ ರೂಪಾಯಿ; 8 ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ ಭಾರತೀಯ ಕರೆನ್ಸಿ!

2

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ತಾಯಿ-ಮಕ್ಕಳ ಆಸ್ಪತ್ರೆಗಿಲ್ಲ ಉದ್ಘಾಟನಾ ಭಾಗ್ಯ..!

3

ಅನಿರುದ್ಧ್-ಕಾವ್ಯಾ ಮಾರನ್ ಆರತಕ್ಷತೆಗೆ ಎಷ್ಟು ಖರ್ಚಾಗಿದೆ ಗೊತ್ತಾ?

4

ಗೋಧ್ರಾ ರೈಲು ಹ*ತ್ಯಾಕಾಂಡ: 17 ವರ್ಷಕ್ಕೂ ಹೆಚ್ಚು ಜೈಲುವಾಸ, ಅಪರಾಧಿಗೆ ಜಾಮೀನು ಮಂಜೂರು!

5

ದರ್ಶನ್ ಪತ್ನಿ ವಿಜಯಲಕ್ಷ್ಮಿ ಎಷ್ಟು ಕೋಟಿ ಆಸ್ತಿಯ ಒಡತಿ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸಹ-ಮಾಲೀಕಿ ಕಾವ್ಯಾ ಮಾರನ್ ಇತ್ತೀಚೆಗೆ ವಿವಾಹವಾದರು ಎಂದು ತಿಳಿದಿದೆ. ಅವರ ವಿವಾಹವು ಗ್ರೀಸ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಮತ್ತು ಇತ್ತೀಚೆಗೆ, ಚೆನ್ನೈನಲ್ಲಿ ನಡೆದ ಅವರ ವಿವಾಹ ಆರತಕ್ಷತೆಗಾಗಿ ಹೆಚ್ಚಿನ ಸಂಖ್ಯೆಯ ಮಹಾರಥರು ಜಮಾಯಿಸಿದರು.


ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ-ಮಾಲೀಕಿ ಕಾವ್ಯಾ ಮಾರನ್ ಅವರ ವಿವಾಹದ ಸುದ್ದಿ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಗ್ರೀಸ್‌ನಲ್ಲಿ ಅದ್ಧೂರಿಯಾಗಿ ನಡೆದ ವಿವಾಹ ಸಮಾರಂಭ ಹಾಗೂ ಚೆನ್ನೈನಲ್ಲಿ ನಡೆದ ಆರತಕ್ಷತೆಗೆ ಕೋಟ್ಯಂತರ ರೂಪಾಯಿ ಖರ್ಚಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಮಿಳು
ಚಿತ್ರರಂಗದ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ತಮ್ಮ ಸಂಗೀತದ ಮೂಲಕವೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಮತ್ತೊಂದೆಡೆ, ಸನ್ ಟಿವಿ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಉದ್ಯಮ ಮತ್ತು ಕ್ರಿಕೆಟ್ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಇಬ್ಬರ ವಿವಾಹದ ಕುರಿತು ಇದೀಗ ಹಲವು ಸುದ್ದಿಗಳು ವೈರಲ್ ಆಗಿವೆ.

ಗ್ರೀಸ್‌ನಲ್ಲಿ ಅದ್ಧೂರಿ ವಿವಾಹ!

ನವೆಂಬರ್ 10 ಮತ್ತು 11ರಂದು ಗ್ರೀಸ್‌ನಲ್ಲಿ ಅನಿರುದ್ಧ್ ಮತ್ತು ಕಾವ್ಯಾ ಅವರ ವಿವಾಹ ಅದ್ಧೂರಿಯಾಗಿ ನಡೆದಿದೆ ಎನ್ನಲಾಗಿದೆ. ಕುಟುಂಬದ ಸದಸ್ಯರು, ಆಪ್ತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆದಿದ್ದು, ನವಜೋಡಿಗೆ ಗಣ್ಯರು ಶುಭ ಹಾರೈಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಆರತಕ್ಷತೆಗೆ ಗಣ್ಯರ ದಂಡು!

ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ರಾಜಕೀಯ, ಸಿನಿಮಾ ಮತ್ತು ಕ್ರೀಡಾ ಕ್ಷೇತ್ರದ ದಿಗ್ಗಜರು ಭಾಗವಹಿಸಿದ್ದಾರೆ ಎನ್ನಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ತಮಿಳುನಾಡಿನ ಮುಖ್ಯಮಂತ್ರಿ ವಿಜಯ್, ಮಾಜಿ ಮುಖ್ಯಮಂತ್ರಿಗಳಾದ ಎಂ.ಕೆ. ಸ್ಟಾಲಿನ್ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಸೇರಿದಂತೆ ಹಲವು ರಾಜಕೀಯ ನಾಯಕರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ವರದಿಗಳಿವೆ.ಇನ್ನು ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಮಹೇಶ್ ಬಾಬು, ಕಾರ್ತಿ, ಸಿದ್ಧಾರ್ಥ್, ರಾಧಿಕಾ ಶರತ್ ಕುಮಾರ್, ಅದಿತಿ ರಾವ್ ಹೈದರಿ, ನಿರ್ದೇಶಕ ಅಟ್ಲೀ ಸೇರಿದಂತೆ ಚಿತ್ರರಂಗದ ಗಣ್ಯರು ಭಾಗವಹಿಸಿದ್ದಾರೆ ಎನ್ನಲಾಗಿದೆ. ಕ್ರಿಕೆಟ್ ದಿಗ್ಗಜರಾದ ಮಹೇಂದ್ರ ಸಿಂಗ್ ಧೋನಿ ಮತ್ತು ಭುವನೇಶ್ವರ್ ಕುಮಾರ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.

ಮದುವೆಗೆ ₹150 ಕೋಟಿ ಖರ್ಚು?
ಇನ್ನು ಈ ವಿವಾಹದ ಖರ್ಚಿನ ವಿಚಾರವೇ ಸದ್ಯದ ಹಾಟ್ ಟಾಪಿಕ್. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಗ್ರೀಸ್‌ನಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಬರೋಬ್ಬರಿ ₹100 ಕೋಟಿ ಖರ್ಚಾಗಿದೆ ಎನ್ನಲಾಗಿದೆ. ಇನ್ನು ಚೆನ್ನೈನಲ್ಲಿ ನಡೆದ ಆರತಕ್ಷತೆಗೆ ಸುಮಾರು ₹50 ಕೋಟಿ ವೆಚ್ಚವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಟ್ಟಾರೆಯಾಗಿ ಅನಿರುದ್ಧ್ ಮತ್ತು ಕಾವ್ಯಾ ಅವರ ವಿವಾಹ ಸಂಭ್ರಮಕ್ಕೆ ಸುಮಾರು ₹150 ಕೋಟಿ ಖರ್ಚಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಈ ವೆಚ್ಚದ ಕುರಿತು ಅಧಿಕೃತವಾಗಿ ಯಾವುದೇ ದೃಢೀಕರಣ ಲಭ್ಯವಾಗಿಲ್ಲ. ಹೀಗಾಗಿ ಈ ಮೊತ್ತವನ್ನು ಸದ್ಯಕ್ಕೆ ಹರಿದಾಡುತ್ತಿರುವ ವರದಿಗಳೆಂದೇ ಪರಿಗಣಿಸಬೇಕಿದೆ.

ಸೋನಿಯಾ ಗಾಂಧಿ ಶುಭಾಶಯ!
ಇನ್ನೊಂದೆಡೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ವಿವಾಹಕ್ಕೆ ಆಹ್ವಾನಿಸಿದ್ದಕ್ಕಾಗಿ ಧನ್ಯವಾದ ತಿಳಿಸಿ, ಕಲಾನಿಧಿ ಮಾರನ್ ಮತ್ತು ಅವರ ಕುಟುಂಬಕ್ಕೆ ಶುಭಾಶಯ ಕೋರಿದ್ದಾರೆ ಎನ್ನಲಾಗಿದೆ.ಸದ್ಯ ಅನಿರುದ್ಧ್ ಮತ್ತು ಕಾವ್ಯಾ ಅವರ ವಿವಾಹ ಹಾಗೂ ಆರತಕ್ಷತೆಗೆ ಸಂಬಂಧಿಸಿದ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಅದ್ಧೂರಿ ಸಮಾರಂಭದ ಬಗ್ಗೆ ಕಾಲಿವುಡ್ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
 

Add Zee News as a Preferred Source
TAGS:
Cinema