ಗಾನವಿ ಮೇಲೆ ಪ್ರಶಾಂತ್ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿದ್ರಾ? ಸುದೀಪ್ ಕೊಟ್ರು ಕ್ಲಾರಿಟಿ!
Bigg boss: ಬಿಗ್‌ಬಾಸ್ ಮನೆಯಲ್ಲಿ ಗಾನವಿ ಮತ್ತು ಪ್ರಶಾಂತ್ ನಡುವಿನ ಕಿತ್ತಾಟಕ್ಕೆ ಕೊನೆಗೂ ಕಿಚ್ಚನ ಪಂಚಾಯಿತಿ ನಡೆದಿದೆ. ಟಾಸ್ಕ್ ವೇಳೆ ಗಾನವಿ ಕೊರಳ ಮೇಲೆ ಪ್ರಶಾಂತ್ ಮೊಣಕಾಲಿಟ್ಟಿದ್ದು ಉದ್ದೇಶಪೂರ್ವಕವೇ? ಅಥವಾ ಆಕಸ್ಮಿಕವೇ? ಎಂಬ ಪ್ರಶ್ನೆಗೆ ಉತ್ತರ ಹುಡುಕಿದ್ದಾರೆ ಸುದೀಪ್. ಸ್ಲೋ ಮೋಷನ್‌ನಲ್ಲಿ ವಿಡಿಯೋ ಪ್ಲೇ ಮಾಡಿ ಅಸಲಿ ಘಟನೆ ಬಯಲು ಮಾಡಿದ್ದಾರೆ. ಕೊನೆಗೆ ಪ್ರಶಾಂತ್ ಕೂಡ ಗಾನವಿ ಬಳಿ ಕ್ಷಮೆ ಕೇಳಿದ್ದಾರೆ. ಹಾಗಾದ್ರೆ ಕಿಚ್ಚನ ಪಂಚಾಯಿತಿಯಲ್ಲಿ ನಡೆದಿದ್ದೇನು? ಈ ಸ್ಟೋರಿ ನೋಡಿ..
ಬಿಗ್‌ಬಾಸ್ ಮನೆಯಲ್ಲಿ ಗಾನವಿ ಮತ್ತು ಪ್ರಶಾಂತ್ ನಡುವಿನ ಕಿತ್ತಾಟಕ್ಕೆ ಕೊನೆಗೂ ಕಿಚ್ಚನ ಪಂಚಾಯಿತಿ ನಡೆದಿದೆ. ಟಾಸ್ಕ್ ವೇಳೆ ಗಾನವಿ ಕೊರಳ ಮೇಲೆ ಪ್ರಶಾಂತ್ ಮೊಣಕಾಲಿಟ್ಟಿದ್ದು ಉದ್ದೇಶಪೂರ್ವಕವೇ? ಅಥವಾ ಆಕಸ್ಮಿಕವೇ? ಎಂಬ ಪ್ರಶ್ನೆಗೆ ಉತ್ತರ ಹುಡುಕಿದ್ದಾರೆ ಸುದೀಪ್. ಸ್ಲೋ ಮೋಷನ್‌ನಲ್ಲಿ ವಿಡಿಯೋ ಪ್ಲೇ ಮಾಡಿ ಅಸಲಿ ಘಟನೆ ಬಯಲು ಮಾಡಿದ್ದಾರೆ. ಕೊನೆಗೆ ಪ್ರಶಾಂತ್ ಕೂಡ ಗಾನವಿ ಬಳಿ ಕ್ಷಮೆ ಕೇಳಿದ್ದಾರೆ. ಹಾಗಾದ್ರೆ ಕಿಚ್ಚನ ಪಂಚಾಯಿತಿಯಲ್ಲಿ ನಡೆದಿದ್ದೇನು? ಈ ಸ್ಟೋರಿ ನೋಡಿ..
ಬಿಗ್‌ಬಾಸ್ ಮನೆಯಲ್ಲಿ ನಡೆದ ಗಾನವಿ ಮತ್ತು ಪ್ರಶಾಂತ್ ನಡುವಿನ ಜಗಳಕ್ಕೆ ಕೊನೆಗೂ ಕಿಚ್ಚ ಸುದೀಪ್ ಪಂಚಾಯಿತಿ ನಡೆಸಿದ್ದಾರೆ. ಟಾಸ್ಕ್ ವೇಳೆ ಗಾನವಿ ಕತ್ತಿನ ಮೇಲೆ ಪ್ರಶಾಂತ್ ಮೊಣಕಾಲೂರಿದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಉದ್ದೇಶಪೂರ್ವಕವಾಗಿಯೇ ಪ್ರಶಾಂತ್ ಹೀಗೆ ಮಾಡಿದ್ರಾ? ಅಥವಾ ಅಚಾನಕ್ಕಾಗಿ ನಡೆದ ಘಟನೆಯಾ? ಸ್ಲೋ ಮೋಷನ್ ವಿಡಿಯೋ ಪ್ಲೇ ಮಾಡಿ ಸುದೀಪ್ ಅಸಲಿ ವಿಚಾರವನ್ನು ಬಯಲು ಮಾಡಿದ್ದಾರೆ.
ಕಳೆದ ವಾರ ಬಿಗ್‌ಬಾಸ್ ಮನೆಯಲ್ಲಿ ನಡೆದ ರಾಜಕೀಯದ ಟಾಸ್ಕ್.. ಯಶಸ್ ಮತ್ತು ಮಂಜ ತಂಡಗಳ ನಡುವೆ ಭರ್ಜರಿ ಪೈಪೋಟಿ.. ಈ ಟಾಸ್ಕ್‌ನಲ್ಲೇ ನಡೆದ ಒಂದು ಘಟನೆ ಮಾತ್ರ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಟಾಸ್ಕ್‌ನ ಭಾಗವಾಗಿ ಎದುರಾಳಿ ತಂಡದ ನಾಯಕನ ಪೋಸ್ಟರ್‌ಗೆ ಕೆಂಪು ಬಣ್ಣ ಬಳಿಯಬೇಕಿತ್ತು. ಈ ವೇಳೆ ಯಶಸ್ ಪೋಸ್ಟರ್‌ಗೆ ಬಣ್ಣ ಬಳಿಯಲು ಗಾನವಿ ಮುಂದಾಗಿದ್ರು. ಆಗ ತಾಂಡವ್ ಮತ್ತು ಪ್ರಶಾಂತ್ ಗಾನವಿಯನ್ನು ತಡೆಯಲು ಮುಂದಾಗಿದ್ರು. ಈ ಗಲಾಟೆಯಲ್ಲಿ ಪ್ರಶಾಂತ್ ಮೊಣಕಾಲು ಗಾನವಿ ಕತ್ತಿನ ಮೇಲೆ ಬಿದ್ದಿತ್ತು. ಇದರಿಂದ ಗಾನವಿ ನೋವು ಅನುಭವಿಸಿದ್ರು. ಮನೆಯಲ್ಲಿ ದೊಡ್ಡ ರಂಪಾಟವೇ ನಡೆದಿತ್ತು.
ಇನ್ನು ಈ ಘಟನೆ ಉದ್ದೇಶಪೂರ್ವಕವಾಗಿ ನಡೆದಿದೆ ಅನ್ನೋ ಆರೋಪವೂ ಕೇಳಿಬಂದಿತ್ತು. ಪ್ರಶಾಂತ್ ಬೇಕಂತಲೇ ಗಾನವಿ ಕತ್ತಿನ ಮೇಲೆ ಮೊಣಕಾಲಿಟ್ಟು ಒತ್ತಡ ಹಾಕಿದ್ದಾರೆ ಅಂತ ಯಶಸ್, ಗಗನ್ ಸೇರಿದಂತೆ ಕೆಲವರು ಆರೋಪಿಸಿದ್ರು. ಆದ್ರೆ ಪ್ರಶಾಂತ್ ಮಾತ್ರ ತಾವು ಉದ್ದೇಶಪೂರ್ವಕವಾಗಿ ಮಾಡಿಲ್ಲ ಅಂತ ಸಮರ್ಥಿಸಿಕೊಂಡಿದ್ರು.
ಇನ್ನು ಶನಿವಾರದ ಪಂಚಾಯಿತಿಯಲ್ಲಿ ಸುದೀಪ್ ಈ ಘಟನೆಯ ವಿಡಿಯೋವನ್ನೇ ಹಲವು ಬಾರಿ ಪ್ಲೇ ಮಾಡಿದ್ರು. ಅಷ್ಟೇ ಅಲ್ಲ, ಸ್ಲೋ ಮೋಷನ್‌ನಲ್ಲೂ ತೋರಿಸಿದ್ರು. ಮೊದಲಿಗೆ ನೋಡಿದಾಗ ಪ್ರಶಾಂತ್ ಬೇಕಂತಲೇ ಗಾನವಿ ಕತ್ತಿನ ಮೇಲೆ ಒತ್ತಡ ಹಾಕಿದ್ರಾ ಅನ್ನೋ ಅನುಮಾನ ಮೂಡಿತ್ತು. ಆದ್ರೆ ಮತ್ತೊಮ್ಮೆ ವಿಡಿಯೋ ಪರಿಶೀಲಿಸಿದಾಗ, ಗಾನವಿ ಪ್ರಶಾಂತ್ ಕಾಲು ಹಿಡಿದು ಎಳೆದಿದ್ದರಿಂದ ಅವರು ಮುಂದೆ ಬಿದ್ದಿರಬಹುದು. ಬಿದ್ದ ಮೇಲೂ ಕಾಲು ಬಿಡದ ಕಾರಣ ತಕ್ಷಣ ಎದ್ದೇಳಲು ಸಾಧ್ಯವಾಗಿರಲಿಲ್ಲ ಅನ್ನೋ ಅಂಶವೂ ಸ್ಪಷ್ಟವಾಯ್ತು.
ಇದನ್ನೇ ಆಧರಿಸಿ ಸುದೀಪ್ ಕೂಡ ಪ್ರಶಾಂತ್ ಉದ್ದೇಶಪೂರ್ವಕವಾಗಿ ಬಿದ್ದಿಲ್ಲ ಅಂತ ಅಭಿಪ್ರಾಯಪಟ್ಟರು. ಧನುಶ್ ಮತ್ತು ಪ್ರಶಾಂತ್ ಇಬ್ಬರನ್ನೂ ಮೊಣಕಾಲ ಮೇಲೆ ಕೂರಿಸಿ, ದೇಹದ ತೂಕದ ಕಾರಣದಿಂದ ಪ್ರಶಾಂತ್ ನಿಧಾನವಾಗಿ ಎದ್ದೇಳುವ ಸಾಧ್ಯತೆಯನ್ನೂ ವಿವರಿಸಿದ್ರು. ಗಾನವಿ ಕತ್ತಿನ ಮೇಲೆ ಬೇಕಂತಲೇ ಭಾರ ಹಾಕಿಲ್ಲ ಅಂತ ಪ್ರಶಾಂತ್ ಪರವಾಗಿ ಸ್ಪಷ್ಟನೆ ನೀಡಿದ್ರು.
ಕೊನೆಗೂ ನಡೆದಿದ್ದೇನು ಅನ್ನೋ ಗೊಂದಲಕ್ಕೆ ಸುದೀಪ್ ತೆರೆ ಎಳೆದಿದ್ದಾರೆ. ತಮ್ಮಿಂದ ಗಾನವಿಗೆ ನೋವಾಗಿದ್ದಕ್ಕೆ ಪ್ರಶಾಂತ್ ಕೂಡ ಅಲ್ಲಿಯೇ ಕ್ಷಮೆ ಕೇಳಿದ್ದಾರೆ. ಹೀಗೆ ಬಿಗ್‌ಬಾಸ್ ಮನೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಗಾನವಿ–ಪ್ರಶಾಂತ್ ಜಗಳಕ್ಕೆ ಸುದೀಪ್ ಪಂಚಾಯಿತಿಯಲ್ಲಿ ಸ್ಪಷ್ಟನೆ ಸಿಕ್ಕಿದೆ.
ಒಟ್ಟಿನಲ್ಲಿ ಗಾನವಿ ಮತ್ತು ಪ್ರಶಾಂತ್ ನಡುವಿನ ಜಗಳಕ್ಕೆ ಕಿಚ್ಚನ ಪಂಚಾಯಿತಿಯಲ್ಲಿ ತೆರೆ ಬಿದ್ದಿದೆ. ವಿಡಿಯೋ ಸಾಕ್ಷ್ಯಗಳ ಮೂಲಕ ಘಟನೆಯ ಹಿಂದಿನ ಸತ್ಯವನ್ನು ವಿವರಿಸಿದ ಸುದೀಪ್, ಪ್ರಶಾಂತ್ ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.